Fact Check: ತಿಂಗಳಿಗೆ ₹30 ಕೋಟಿ ಸಂಬಳ ಕೊಡ್ತೀವಿ ಅಂದರೂ ಲೈಟ್ ಹೌಸ್ ಕೀಪರ್ ಕೆಲಸಕ್ಕೆ ಜನರಿಲ್ಲ ಎನ್ನುವುದು ನಿಜವೇ?

₹30 ಕೋಟಿ ಸಂಬಳ, ಲೈಟ್ ಹೌಸ್

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ತಿಂಗಳಿಗೆ ₹30 ಕೋಟಿ ಸಂಬಳ ಕೊಡ್ತೀವಿ ಅಂದರೂ ಫ್ರಾನ್ಸ್ ನ ಜ್ಯೂಮೆಂಟ್ ಲೈಟ್ ಹೌಸ್ ಕೀಪರ್ ಕೆಲಸಕ್ಕೆ ಜನರಿಲ್ಲ

Fact
ತಿಂಗಳಿಗೆ ₹30 ಕೋಟಿ ಸಂಬಳ ಕೊಡ್ತೀವಿ ಅಂದರೂ ಫ್ರಾನ್ಸ್ ನ ಜ್ಯೂಮೆಂಟ್ ಲೈಟ್ ಹೌಸ್ ಕೀಪರ್ ಕೆಲಸಕ್ಕೆ ಜನರಿಲ್ಲ ಎನ್ನುವುದು ಸುಳ್ಳು ಹೇಳಿಕೆ. 1991ರಿಂದಲೇ ಈ ಲೈಟ್ ಹೌಸ್‌ ಸ್ವಯಂಚಾಲಿತವಾಗಿ ಕೆಲಸ ಮಾಡುತ್ತಿದೆ

ತಿಂಗಳಿಗೆ ₹30 ಕೋಟಿ ಸಂಬಳ ಕೊಡ್ತೀವಿ ಅಂದರೂ ಯಾರೂ ಕೆಲಸಕ್ಕೆ ಹೋಗುತ್ತಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಯೊಂದು ಹರಿದಾಡಿದೆ.

ಫೇಸ್‌ಬುಕ್‌ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ “ಈ ಕೆಲಸಕ್ಕೆ ತಿಂಗಳಿಗೆ 30 ಕೋಟಿ ಸಂಬಳ ಕೊಡ್ತೀವಿ ಅಂತ ಹೇಳಿದರೂ ಯಾರೂ ಕೂಡ ಹೋಗ್ತಾ ಇಲ್ಲ ಯಾಕೆ ಊಟ ವಸತಿ ಎಲ್ಲವೂ ಉಚಿತ ವಿದ್ಯಾಭ್ಯಾಸವೂ ಬೇಡ ಸರ್ಕಾರ ಕೈ ಮುಗಿದು ಬೇಡಿದರೂ ಯಾರೂ ಕೆಲಸಕ್ಕೆ ಬರ್ತಾ ಇಲ್ಲ” ಎಂದು ಹೇಳಿಕೆಯೊಂದಿಗೆ ಫ್ರಾನ್ಸ್ ನಲ್ಲಿರುವ ಜ್ಯೂಮೆಂಟ್ ಲೈಟ್ ಹೌಸ್ ಕುರಿತ ವೀಡಿಯೋ ಇದೆ.

Fact Check: ತಿಂಗಳಿಗೆ ₹30 ಕೋಟಿ ಸಂಬಳ ಕೊಡ್ತೀವಿ ಅಂದರೂ ಲೈಟ್ ಹೌಸ್ ಕೀಪರ್ ಕೆಲಸಕ್ಕೆ ಜನರಿಲ್ಲ ಎನ್ನುವುದು ನಿಜವೇ?

ಇದೇ ರೀತಿಯ ಪೋಸ್ಟ್ ಅನ್ನು ಇಲ್ಲಿ ನೋಡಬಹುದು.

Fact Check: ತಿಂಗಳಿಗೆ ₹30 ಕೋಟಿ ಸಂಬಳ ಕೊಡ್ತೀವಿ ಅಂದರೂ ಲೈಟ್ ಹೌಸ್ ಕೀಪರ್ ಕೆಲಸಕ್ಕೆ ಜನರಿಲ್ಲ ಎನ್ನುವುದು ನಿಜವೇ?

ಈ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು ಇದು ತಪ್ಪು ಹೇಳಿಕೆ ಮತ್ತು ಇಂತಹ ಯಾವುದೇ ಉದ್ಯೋಗ ಲಭ್ಯವಿಲ್ಲ ಎಂದು ಕಂಡುಕೊಂಡಿದೆ.

Fact Check/Verification

ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ವರದಿಗಳು ಲಭ್ಯವಾಗಿವೆ.

ಮೇ 3, 2024ರಂದು ದಿ ಫಾಕ್ಟೋ ಪ್ರಕಟಿಸಿದ ವರದಿಯಲ್ಲಿ, “ಟಿಕ್‌ ಟಾಕ್‌ ನಲ್ಲಿ ಕಂಡು ಬಂದ ಪೋಸ್ಟ್ ಒಂದರಲ್ಲಿ ವಾರ್ಷಿಕ 1.2 ಮಿಲಿಯನ್ ಯೂರೋ ಸಂಬಳದ ಉದ್ಯೋಗವೊಂದು ಲಭ್ಯವಿದೆ ಎಂದು ಹೇಳಲಾಗಿದೆ. ಈ ಪೋಸ್ಟ್ ನಲ್ಲಿ ಫ್ರಾನ್ಸ್ನ ಫಿನಿಸ್ಪೇರ್ ಕರಾವಳಿಯಲ್ಲಿರುವ ಜ್ಯೂಮೆಂಟ್ ಲೈಟ್ ಹೌಸ್‌ ಗೆ ಕೀಪರ್ ಗಳು ಬೇಕಾಗಿದ್ದು, ಇದು  “ಇದು ವಿಶ್ವದ ಅತ್ಯಂತ ಅಪಾಯಕಾರಿ ಕೆಲಸ” ವಾಗಿದೆ. ಆದರೆ ಇದಕ್ಕೆ ಯಾರೂ ಅರ್ಜಿ ಸಲ್ಲಿಸುವ ಧೈರ್ಯವಿಲ್ಲ ಎಂದು ಹೇಳುತ್ತದೆ” ಆದರೆ ಈ ಹೇಳಿಕೆ ಸಂಪೂರ್ಣ ಸುಳ್ಳಾಗಿದೆ ಎಂದಿದೆ.

ಇದೇ ವರದಿಯಲ್ಲಿ, ಕೆಲವು ವಾರಗಳ ಹಿಂದೆ ಬಿಡುಗಡೆಯಾದ ಈ ವಿಡಿಯೋ ಟಿಕ್‌ಟಾಕ್‌ನಲ್ಲಿ ಪ್ರಸಾರವಾಗುತ್ತಲೇ ಇದೆ. ಇಲ್ಲಿಯವರೆಗೆ, ಇದನ್ನು ಚೀನೀ ಸಾಮಾಜಿಕ ನೆಟ್‌ವರ್ಕ್‌ನಲ್ಲಿ 177,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಆದಾಗ್ಯೂ, ಅದರ ವಿಷಯವು ಸುಳ್ಳನ್ನೇ ಹೊಂದಿದ್ದು ಅದು ಪ್ರೇಕ್ಷಕರನ್ನು ಗಳಿಸುವ ಉದ್ದೇಶವನ್ನು ಮಾತ್ರ ಹೊಂದಿದೆ. ಈ ಬಗ್ಗೆ ಲೈಟ್ ಹೌಸ್ ನಿರ್ವಾಹಕರಾದ ಬ್ರಿಟಾನಿ ಲೈಟ್‌ಹೌಸ್ ಮತ್ತು ಬೀಕನ್ ಸೇವೆಗೆ ಸಂಪರ್ಕಿಸಿದಾಗ, ಲೈಟ್‌ಹೌಸ್ ಕೀಪರ್‌ನ ಯಾವುದೇ ನೇಮಕಾತಿಯನ್ನು ಯೋಜಿಸಲಾಗಿಲ್ಲ ಎಂದು ಹೇಳಿದೆ. ಈ ಜ್ಯೂಮೆಂಟ್ ಲೈಟ್ ಹೌಸ್  1991 ರಿಂದ ಸ್ವಯಂಚಾಲಿತವಾಗಿ ಕೆಲಸ ಮಾಡುತ್ತಿದೆ. ಕಳೆದ 30 ವರ್ಷಗಳಿಂದಲೂ ಹೆಚ್ಚು ಕಾಲ ಅದಕ್ಕೆ ಕೀಪರ್ ಇಲ್ಲ ಮತ್ತು ಅಗತ್ಯವಿಲ್ಲ. ಆಂಡ್ರೆ ಫಾವೆನೆಕ್‌ ಎಂಬವರು ಇದನ್ನು ಯಾಂತ್ರೀಕರಣ ಗೊಳಿಸಿದ್ದು, ಕೆಲ ದಿನಗಳ ಹಿಂದೆ ತಮ್ಮ 77 ನೇ ವರ್ಷದಲ್ಲಿ ನಿಧನರಾದರು” ಎಂದಿದೆ. (ಅನುವಾದಿಸಲಾಗಿದೆ)

Fact Check: ತಿಂಗಳಿಗೆ ₹30 ಕೋಟಿ ಸಂಬಳ ಕೊಡ್ತೀವಿ ಅಂದರೂ ಲೈಟ್ ಹೌಸ್ ಕೀಪರ್ ಕೆಲಸಕ್ಕೆ ಜನರಿಲ್ಲ ಎನ್ನುವುದು ನಿಜವೇ?

ಏಪ್ರಿಲ್‌ 30, 2024ರಂದು ಫ್ರಾನ್ಸ್ಇನ್ಫೋ ಪ್ರಕಟಿಸಿದ ವರದಿಯಲ್ಲಿ, ಟಿಕ್‌ಟಾಕ್‌ನಲ್ಲಿ, ಫಿನಿಸ್ಟೆರ್‌ನಲ್ಲಿರುವ ಓಸೆಂಟ್‌ನ ಕರಾವಳಿಯ ಜ್ಯೂಮೆಂಟ್ ಲೈಟ್‌ಹೌಸ್‌ನ ಕೀಪರ್ ಆಗಲು ಅವಕಾಶ ವಿದೆ ಎಂಬಂತೆ ವೀಡಿಯೋ ಹರಿದಾಡುತ್ತಿದೆ. ಅತಿ ಕಷ್ಟದ ಕೆಲಸವಾದ್ದರಿಂದ ತಿಂಗಳಿಗೆ 50,000 ಯೂರೋ ಸಂಬಳ ನೀಡಲಾಗುತ್ತಿದೆ ಎನ್ನಲಾಗಿದೆ. ಆದರೆ ಈ ಹೇಳಿಕೆ ಸುಳ್ಳಾಗಿದ್ದು, ಲೈಟ್ ಹೌಸ್‌ ಅನ್ನು 1991 ರಿಂದ ಸ್ವಯಂಚಾಲಿತಗೊಳಿಸಲಾಗಿದೆ.” ಎಂದಿದೆ. (ಅನುವಾದಿಸಲಾಗಿದೆ)

Fact Check: ತಿಂಗಳಿಗೆ ₹30 ಕೋಟಿ ಸಂಬಳ ಕೊಡ್ತೀವಿ ಅಂದರೂ ಲೈಟ್ ಹೌಸ್ ಕೀಪರ್ ಕೆಲಸಕ್ಕೆ ಜನರಿಲ್ಲ ಎನ್ನುವುದು ನಿಜವೇ?

ಜ್ಯೂಮೆಂಟ್ ಲೈಟ್ ಹೌಸ್‌ ಕುರಿತಾದ ಇನ್ನೊಂದು ಲೇಖನವನ್ನು ಸೆಲ್ಟಿಕ್ ಲೈಫ್‌ ಫೆಬ್ರವರಿ 2, 2024ರಂದು ಪ್ರಕಟಿಸಿದ್ದು ಈ ಲೇಖನದಲ್ಲೂ “ಲಾ ಜ್ಯೂಮೆಂಟ್ ಉಶಾಂಟ್ ದ್ವೀಪದ ಕರಾವಳಿಯಿಂದ ಸುಮಾರು 300 ಮೀ ದೂರದಲ್ಲಿದೆ, ಇದನ್ನು ಫ್ರೆಂಚ್‌ನಲ್ಲಿ ಓಸೆಂಟ್ ಮತ್ತು ಬ್ರೆಟನ್ ಭಾಷೆಯಲ್ಲಿ ಎನೆಜ್ ಯುಸಾ ಎಂದೂ ಕರೆಯುತ್ತಾರೆ. ಯುರೋಪ್‌ನ ಅತ್ಯಂತ ಜನನಿಬಿಡ ಸಮುದ್ರಮಾರ್ಗದ ಕೆಳಗಿರುವ ಅಪಾಯಕಾರಿ ಬಂಡೆಯಲ್ಲಿ ಈ ಲೈಟ್ ಹೌಸ್‌ ಇದ್ದು, ಈ ಪ್ರದೇಶದಲ್ಲಿ ಶತಮಾನಗಳಿಂದ ಅನೇಕ ಹಡಗುಗಳು ಧ್ವಂಸವಾಗಿವೆ. 1888 ಮತ್ತು 1904 ರ ನಡುವೆ ಮೂವತ್ತೊಂದು ಹಡಗುಗಳು ಅಲ್ಲಿ ಧ್ವಂಸಗೊಂಡವು. ಅತ್ಯಂತ ಅಪಾಯಕಾರಿ ಸಮುದ್ರ, ಬೃಹತ್ ಲೆಗಳ ಪ್ರದೇಶವಾದ ಹಿನ್ನೆಲೆಯಲ್ಲಿ ಅಲ್ಲಿ ಲೈಟ್ ಹೌಸ್ ನಿರ್ಮಾಣವನ್ನು ಮಾಡಲಾಗಿದ್ದು 1911ರಂದು ಸಂಪೂರ್ಣಗೊಂಡಿದೆ. 1991ರಿಂದ ಇಲ್ಲಿ ಸ್ವಯಂಚಾಲಿತ ದೀಪ ವ್ಯವಸ್ಥೆ ಇದೆ” ಎಂದು ಲೇಖನದಲ್ಲಿದೆ.    

Conclusion

ಈ ಸಾಕ್ಷ್ಯಗಳ ಪ್ರಕಾರ, ಫ್ರಾನ್ಸ್ ನ ಸಮುದ್ರದಲ್ಲಿರುವ ಜ್ಯೂಮೆಂಟ್ ಲೈಟ್ ಹೌಸ್‌ ನಲ್ಲಿ ₹30 ಕೋಟಿ ಸಂಬಳ ಕೊಡ್ತೀವಿ ಅಂದರೂ ಯಾರೂ ಬರುತ್ತಿಲ್ಲ ಎನ್ನುವುದು ತಪ್ಪು ಹೇಳಿಕೆಯಾಗಿದೆ. 1991ರಿಂದಲೇ ಈ ಲೈಟ್ ಹೌಸ್‌ ಸ್ವಯಂಚಾಲಿತವಾಗಿ ಕೆಲಸ ಮಾಡುತ್ತಿದೆ.

Result: False

Our Sources
Report By Defacto, Dated: May 3, 2024

Report By Francetvinfo, Dated: April 30, 2024

Article By Celticlife, Dated: February 2, 2024


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.