Fact check: ಮನೆಯಿಂದ 60 ಕಿ.ಮೀ. ದೂರದೊಳಗೆ ಟೋಲ್‌ ಬೂತ್ ಇದ್ದರೆ ಟೋಲ್‌ ಫೀ ಕಟ್ಟುವಂತಿಲ್ಲ ಎಂದು ಗಡ್ಕರಿ ಹೇಳಿದ್ದಾರಾ?

ಗಡ್ಕರಿ, ಟೋಲ್‌,

Claim
ಮನೆಯಿಂದ 60 ಕಿ.ಮೀ. ದೂರದೊಳಗೆ ಟೋಲ್‌ ಬೂತ್ ಇದ್ದರೆ ಟೋಲ್‌ ಫೀ ಕಟ್ಟುವಂತಿಲ್ಲ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ

Fact
ಸಚಿವ ನಿತಿನ್‌ ಗಡ್ಕರಿಯವರು ಟೋಲ್‌ ಬಳಿಯ ಸ್ಥಳೀಯರಿಗೆ ಆಧಾರ್ ಮೂಲಕ ಉಚಿತ ಪಾಸ್ ಮತ್ತು 60 ಕಿ.ಮೀ. ಅಂತರದಲ್ಲಿ ಒಂದಕ್ಕಿಂತ ಹೆಚ್ಚು ಟೋಲ್ ಗಳು ಇರುವಂತಿಲ್ಲ ಎಂದು ಹೇಳಿದ್ದಾರೆ, ಟೋಲ್‌ ಗಿಂತ 60 ಕಿ.ಮೀ. ದೂರದ ಒಳಗೆ ಮನೆ ಇದ್ದರೆ ಟೋಲ್‌ ಕಟ್ಟಬೇಕಿಲ್ಲ ಎಂದು ಹೇಳಿಲ್ಲ

ನಿಮ್ಮ ಮನೆಯಿಂದ 60 ಕಿ.ಮೀ. ದೂರದೊಳಗೆ ಯಾವುದೇ ಟೋಲ್‌ ಬೂತ್ ಇದ್ದರೂ ಟೋಲ್‌ ಫೀ ಕಟ್ಟುವಂತಿಲ್ಲ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ ಎಂಬಂತೆ ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ವಾಟ್ಸಾಪ್ ನಲ್ಲಿ ಕಂಡುಬಂದ ಮೆಸೇಜ್‌ ನಲ್ಲಿ “ನಿಮ್ಮ ಮನೆಯಿಂದ 60 ಕಿ.ಮೀ. ದೂರದೊಳಗೆ ಯಾವುದೇ ಟೋಲ್‌ ಬೂತ್ ಇದ್ದರೂ ಟೋಲ್‌ ಫೀ ಕಟ್ಟುವಂತಿಲ್ಲ. ಅದಕ್ಕೆ ನಿಮ್ಮ ಆಧಾರ್ ಕಾರ್ಡ್ ಮೂಲಕ ಪಾಸ್‌ ಮಾಡಿಸಿಕೊಳ್ಳತಕ್ಕದ್ದು…” ಎಂದಿದೆ.

Fact check: ಮನೆಯಿಂದ 60 ಕಿ.ಮೀ. ದೂರದಲ್ಲಿ ಯಾವುದೇ ಟೋಲ್‌ ಬೂತ್ ಇದ್ದರೆ ಟೋಲ್‌ ಫೀ ಕಟ್ಟುವಂತಿಲ್ಲ ಎಂದು ಗಡ್ಕರಿ ಹೇಳಿದ್ದಾರಾ?
ವಾಟ್ಸಾಪ್‌ ಹೇಳಿಕೆ

ಈ ಬಗ್ಗೆ ನ್ಯೂಸ್‌ಚೆಕರ್‍‌ ಸತ್ಯಶೋಧನೆ ನಡೆಸಿದ್ದು, ನಿತಿನ್ ಗಡ್ಕರಿ ಅವರ ಹೇಳಿಕೆಯನ್ನು ತಪ್ಪಾಗಿ ಹೇಳಲಾಗುತ್ತಿದೆ ಎಂದು ಕಂಡುಕೊಂಡಿದೆ.

Fact Check/Verification

ಸತ್ಯಶೋಧನೆಗಾಗಿ ನಾವು ವೈರಲ್‌ ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ಈ ವೇಳೆ 0.36 ಸೆಕೆಂಡಿನ ವೀಡಿಯೋದಲ್ಲಿ ಕೇಂದ್ರ ಸಚಿವ ನಿತಿನ್‌ ಗಡ್ಕರಿಯವರು ಲೋಕಸಭೆಯಲ್ಲಿ ಹೇಳಿದ್ದರ ವಿಚಾರ ಹೀಗಿದೆ “ಸ್ಥಳೀಯ ಜನರು ಅವರ ಆಧಾರ್ ಕಾರ್ಡ್ ತೋರಿಸಿದರೆ ಪಾಸ್ ನೀಡಲಾಗುವುದು. ಎರಡನೆಯ ವಿಷಯವೆಂದರೆ 60 ಕಿಮೀ ದೂರದಲ್ಲಿ ಒಂದಕ್ಕಿಂತ ಹೆಚ್ಚು ಟೋಲ್ ಪ್ಲಾಜಾಗಳು ಇರುವಂತಿಲ್ಲ, ಒಂದು ವೇಳೆ ಇದ್ದರೆ ಅದು ಕಾನೂನುಬಾಹಿರವಾಗಿದೆ ಮತ್ತು ಅದನ್ನು ಪರಿಶೀಲಿಸಿ ಮೂರು ತಿಂಗಳೊಳಗೆ ತೆಗೆದುಹಾಕಲಾಗುವುದು.” ಎಂದು ಹೇಳುತ್ತಾರೆ.

ಇದರ ಆಧಾರದಲ್ಲಿ ನಾವು ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಮಾರ್ಚ್ 22, 2022ರಂದು ಡೆಕ್ಕನ್ ಹೆರಾಲ್ಡ್ ಪ್ರಕಟಿಸಿದ ವರದಿಯಲ್ಲಿ,  “ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪರಸ್ಪರ 60 ಕಿಲೋಮೀಟರ್ ಅಂತರದಲ್ಲಿರುವ ಎಲ್ಲಾ ಟೋಲ್ ಪ್ಲಾಜಾಗಳನ್ನು ಮುಂದಿನ ಮೂರು ತಿಂಗಳಲ್ಲಿ ತೆಗೆದುಹಾಕಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಂಗಳವಾರ ಘೋಷಿಸಿದ್ದಾರೆ.” ಎಂದಿದೆ. ಇದೇ ವರದಿಯಲ್ಲಿ “ಹೆದ್ದಾರಿಗಳಲ್ಲಿ ಸುಗಮ ಸಂಚಾರಕ್ಕಾಗಿ ಟೋಲ್ ಪ್ಲಾಜಾಗಳ ಬಳಿ ಇರುವ ಸ್ಥಳೀಯ ನಿವಾಸಿಗಳಿಗೆ ಅವರ ಆಧಾರ್ ಕಾರ್ಡ್ ವಿಳಾಸವನ್ನು ಆಧರಿಸಿ ಸರ್ಕಾರ ಉಚಿತ ಪಾಸ್‌ಗಳನ್ನು ನೀಡುತ್ತದೆ ಎಂದು ಗಡ್ಕರಿ ಹೇಳಿದರು. ಲೋಕಸಭೆಯಲ್ಲಿ ಮುಂದಿನ ಹಣಕಾಸು ವರ್ಷಕ್ಕೆ ಬಜೆಟ್‌ನಲ್ಲಿ ರಸ್ತೆಗಳು ಮತ್ತು ಹೆದ್ದಾರಿಗಳ ಹಂಚಿಕೆ ಕುರಿತ ಚರ್ಚೆಗೆ ಉತ್ತರಿಸಿದರು” ಎಂದಿದೆ.

Also Read: ಅಂಕೋಲಾ ಗುಡ್ಡ ಕುಸಿತ ಪ್ರಕರಣದಲ್ಲಿ ಕೇರಳ ಲಾರಿ ಚಾಲಕ ಅರ್ಜುನ್ ಶವ ಸಿಕ್ಕಿದೆ ಎಂಬ ಸುಳ್ಳು ಹೇಳಿಕೆ ವೈರಲ್

Fact check: ಮನೆಯಿಂದ 60 ಕಿ.ಮೀ. ದೂರದಲ್ಲಿ ಯಾವುದೇ ಟೋಲ್‌ ಬೂತ್ ಇದ್ದರೆ ಟೋಲ್‌ ಫೀ ಕಟ್ಟುವಂತಿಲ್ಲ ಎಂದು ಗಡ್ಕರಿ ಹೇಳಿದ್ದಾರಾ?
ಡೆಕ್ಕನ್‌ ಹೆರಾಲ್ಡ್ ವರದಿ

ಮಾರ್ಚ್ 22, 2023ರ ದಿ ಹಿಂದೂ ವರದಿಯಲ್ಲಿ, “ರಾಷ್ಟ್ರೀಯ ಹೆದ್ದಾರಿಗಳಲ್ಲಿ 60 ಕಿ.ಮೀ ದೂರಕ್ಕೆ ಒಂದೇ ಟೋಲ್ ಪ್ಲಾಜಾ ಇರಲಿದ್ದು, ಒಂದಕ್ಕಿಂತ ಹೆಚ್ಚು ಟೋಲ್ ಪ್ಲಾಜಾಗಳಿದ್ದರೆ ಮುಂದಿನ ಮೂರು ತಿಂಗಳಲ್ಲಿ ಅಂತಹವುಗಳನ್ನು ಮುಚ್ಚಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಂಗಳವಾರ ಲೋಕಸಭೆಯಲ್ಲಿ ಘೋಷಿಸಿದ್ದಾರೆ.” ಎಂದಿದೆ.

Fact check: ಮನೆಯಿಂದ 60 ಕಿ.ಮೀ. ದೂರದಲ್ಲಿ ಯಾವುದೇ ಟೋಲ್‌ ಬೂತ್ ಇದ್ದರೆ ಟೋಲ್‌ ಫೀ ಕಟ್ಟುವಂತಿಲ್ಲ ಎಂದು ಗಡ್ಕರಿ ಹೇಳಿದ್ದಾರಾ?
ದಿ ಹಿಂದೂ ವರದಿ

ಇದೇ ರೀತಿಯ ಸುದ್ದಿಯನ್ನು ಮಾರ್ಚ್ 22, 2022ರಂದು ಎಎನ್‌ಐ ಟ್ವೀಟ್ ಮಾಡಿರುವುದನ್ನೂ ನಾವು ಕಂಡಿದ್ದೇವೆ. ಇದರಲ್ಲಿ “ಟೋಲ್ ಪ್ಲಾಜಾಗಳ ಬಳಿ ವಾಸಿಸುವ ಸ್ಥಳೀಯರಿಗೆ ನಾವು ಆಧಾರ್ ಕಾರ್ಡ್ ಮೂಲಕ ಪಾಸ್‌ಗಳನ್ನು ಒದಗಿಸುತ್ತೇವೆ. ಇದಲ್ಲದೆ, 60 ಕಿಮೀ ವ್ಯಾಪ್ತಿಯಲ್ಲಿ ಕೇವಲ ಒಂದೇ ಟೋಲ್ ಪ್ಲಾಜಾ ಇರುವುದನ್ನು ಖಚಿತಪಡಿಸಲಾಗುವುದು. ಅಲ್ಲಿ 2 ನೇ ಟೋಲ್ ಪ್ಲಾಜಾ ಇದ್ದರೆ, ಮುಂದಿನ 3 ತಿಂಗಳಲ್ಲಿ ಅದನ್ನು ಮುಚ್ಚಲಾಗುವುದು: ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಲೋಕಸಭೆಯಲ್ಲಿ” ಎಂದಿದೆ.

ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.

Conclusion

ಈ ಸಾಕ್ಷ್ಯಗಳ ಪ್ರಕಾರ, ಸಚಿವ ನಿತಿನ್‌ ಗಡ್ಕರಿಯವರು ಟೋಲ್‌ ಬಳಿಯ ಸ್ಥಳೀಯರಿಗೆ ಆಧಾರ್ ಮೂಲಕ ಉಚಿತ ಪಾಸ್ ಮತ್ತು 60 ಕಿ.ಮೀ. ಅಂತರದಲ್ಲಿ ಒಂದಕ್ಕಿಂತ ಹೆಚ್ಚು ಟೋಲ್ ಗಳು ಇರುವಂತಿಲ್ಲ ಎಂದು ಹೇಳಿದ್ದಾರೆ. ಇದು ವೈರಲ್‌ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾದ ವೀಡಿಯೋದಲ್ಲಿ ಸ್ಪಷ್ಟವಾಗಿದೆ. ಆದರೆ ವೀಡಿಯೋ ಜೊತೆಗೆ ಹಂಚಿಕೊಳ್ಳಲಾದ ಹೇಳಿಕೆಯಲ್ಲಿ ನಿಮ್ಮ ಮನೆಯಿಂದ 60 ಕಿ.ಮೀ. ದೂರದೊಳಗೆ ಯಾವುದೇ ಟೋಲ್‌ ಬೂತ್ ಇದ್ದರೂ ಟೋಲ್‌ ಫೀ ಕಟ್ಟುವಂತಿಲ್ಲ ಎಂದು ಹೇಳಿರುವುದು ತಪ್ಪಾದ ಸಂದರ್ಭವಾಗಿದೆ.  

Also Read: ಹೊಗೇನಕಲ್‌ ಜಲಪಾತದ ಪ್ರವಾಹದಲ್ಲಿ ಜನರು ಸಿಕ್ಕಿಬಿದ್ದ ದೃಶ್ಯವೆಂದು ಹಳೆಯ ವೀಡಿಯೋ ವೈರಲ್

Result: Missing Context

Our Sources
Report By Deccan Herald, Dated: March 22, 2022

Report By The Hindu, Dated: March 22, 2022

Tweet By ANI, Dated: March 22, 2022


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.