Authors
ಜಿಹಾದಿಗಳಿಂದ ಏಡ್ಸ್ ಇಂಜೆಕ್ಷನ್, ಮುಸ್ಲಿಂ ಯುವಕನಿಂದ ಜೈನ ಹುಡುಗಿ ಅಪಹರಣ, ಕಣ್ಣಿನ ಶಕ್ತಿಗೆ ಬೆಂಡೆಕಾಯಿ ತಿನ್ನುವುದು ಉತ್ತಮ, ಸಾರ್ಬಿಟ್ರೇಟ್ 10 ಎಂಜಿ ಮಾತ್ರೆಯಿಂದ ಹೃದಯಾಘಾತಕ್ಕೆ ತಡೆ ಎನ್ನುವ ಕ್ಲೇಮ್ ಗಳು ಈ ವಾರ ಹರಿದಾಡಿದ್ದವು. ನ್ಯೂಸ್ಚೆಕರ್ ಈ ಬಗ್ಗೆ ಸತ್ಯಶೋಧನೆ ನಡೆಸಿದ್ದು, ಇದು ತಪ್ಪು ಎಂದು ಕಂಡುಕೊಂಡಿದೆ.
ಜಿಹಾದಿಗಳಿಂದ ಏಡ್ಸ್ ಇಂಜೆಕ್ಷನ್ ಎನ್ನುವ ಈ ವೈರಲ್ ಮೆಸೇಜ್ ಸತ್ಯವೇ?
ಜಿಹಾದಿಗಳಿಂದ ಹಿಂದೂಗಳಿಗೆ ಏಡ್ಸ್ ಇಂಜೆಕ್ಷನ್ ಕೊಡಲಾಗುತ್ತಿದೆ. ಮನೆಗೆ ಬರುವ ಇವರು ಇನ್ಸುಲಿನ್, ವಿಟಮಿನ್ ಇಂಜೆಕ್ಷನ್ ಕೊಡುವುದಾಗಿ ಹೇಳಿ ಏಡ್ಸ್ ಬರುವಂತೆ ಚುಚ್ಚುಮದ್ದು ನೀಡುತ್ತಾರೆ ಎಂದು ಹೇಳಲಾಗಿದೆ. ಗದಗ ಪೊಲೀಸ್ ವರಿಷ್ಠಾಧಿಕಾರಿ ಹೆಸರಲ್ಲಿ ಈ ಮೆಸೇಜ್ ಹರಿದಾಡಿದ್ದು, ಜಿಹಾದಿಗಳಿಂದ ಹಿಂದೂಗಳಿಗೆ ಏಡ್ಸ್ ಇಂಜೆಕ್ಷನ್ ಎನ್ನುವ ಸಂದೇಶ ಸುಳ್ಳು, ಗದಗ ಪೊಲೀಸರಿಂದ ಸ್ಪಷ್ಟನೆ ಬಂದಿರುವುದು ಸತ್ಯಶೋಧನೆಯಲ್ಲಿ ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಜೈನ ಸಮುದಾಯದ ಹುಡುಗಿ ಅಪಹರಿಸಿದ ಮುಸ್ಲಿಂ ಯುವಕ, ಆಂಧ್ರದ ನೆಲ್ಲೂರಿನ ಕಥೆ ನಿಜವೇ?
ಆಂಧ್ರಪ್ರದೇಶದ ನೆಲ್ಲೂರಿನ ಮಾರ್ವಾಡಿ ಜೈನ ಸಮುದಾಯದ ಹುಡುಗಿಯನ್ನು ಮುಸ್ಲಿಂ ಹುಡುಗನೊಬ್ಬ ಅಪಹರಿಸಿದ್ದು, ಬಳಿಕ ಆ ಸಮುದಾಯ ಮುಸ್ಲಿಂ ಸಮುದಾಯವನ್ನು ಬಹಿಷ್ಕರಿಸಿದ ಹಿನ್ನೆಲೆಯಲ್ಲಿ ಹುಡುಗಿ ವಾಪಾಸ್ ಕುಟುಂಬವನ್ನು ಸೇರಿಕೊಂಡಿದ್ದು, ಈ ಒಗ್ಗಟ್ಟು ಪ್ರಶಂಸನೀಯ ಎಂಬಂತೆ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಸತ್ಯಶೋಧನೆ ನಡೆಸಿದಾಗ, ಈ ಕಥೆ ಕಾಲ್ಪನಿಕ. ನೆಲ್ಲೂರಿನಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲ, ಇದು ಸುಳ್ಳು ಎಂದು ಪೊಲೀಸರು ಸ್ಪಷ್ಟನೆ ನೀಡಿರುವುದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಕಂಪ್ಯೂಟರ್ ಮುಂದೆ ಕೆಲಸ ಮಾಡುವವರು ಬೆಂಡೆಕಾಯಿ ತಿಂದರೆ ಕಣ್ಣಿನ ಶಕ್ತಿ ಹೆಚ್ಚುತ್ತದೆ ಎಂಬುದು ನಿಜವೇ?
ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರು, ಬೆಂಡೆಕಾಯಿ ತಿನ್ನುವವರ ಕಣ್ಣಿನ ಶಕ್ತಿ ಹೆಚ್ಚುತ್ತದೆ ಎಂದು ಕ್ಲೇಮ್ ಒಂದು ಹರಿದಾಡಿದೆ. ಬೆಂಡೆಕಾಯಿ ದೃಷ್ಟಿಯನ್ನು ಸುಧಾರಿಸುವ ಅಥವಾ ಕಣ್ಣಿನ ಶಕ್ತಿಯನ್ನು ಹೆಚ್ಚಿಸುವ ಪವಾಡ ಮಾಡುವ ಆಹಾರವಲ್ಲ. ಉತ್ತಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು, ವಿವಿಧ ಪೋಷಕಾಂಶಗಳನ್ನು ಒಳಗೊಂಡಿರುವ ಸಮತೋಲಿತ ಆಹಾರವನ್ನು ತಿನ್ನುವುದು ಮುಖ್ಯ ಎಂದು ಸತ್ಯಶೋಧನೆ ವೇಳೆ ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಸಾರ್ಬಿಟ್ರೇಟ್ ಮಾತ್ರೆ ನಾಲಿಗೆ ಅಡಿ ಇಟ್ಟುಕೊಂಡರೆ ಹೃದಯಾಘಾತ ತಡೆಯುತ್ತದೆ ಎನ್ನುವುದು ಸತ್ಯವೇ?
ಸಾರ್ಬಿಟ್ರೇಟ್ ಎಂಬ ಮಾತ್ರೆಯನ್ನು ನಾಲಗೆ ಅಡಿ ಇಟ್ಟುಕೊಂಡರೆ ಹೃದಯಾಘಾತ ತಡೆಯುತ್ತದೆ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಆದರೆ ಸತ್ಯಶೋಧನೆಯಲ್ಲಿ ಸಾರ್ಬಿಟ್ರೇಟ್ ಮಾತ್ರೆಯನ್ನು ಜನ ಸಾಮಾನ್ಯರು ಎದೆ ನೋವಿನ ಸಂದರ್ಭಗಳಲ್ಲಿ ವೈದ್ಯರ ಮೇಲ್ವಿಚಾರಣೆಯಿಲ್ಲದೆ ತೆಗೆದುಕೊಳ್ಳುವುದು ತಕ್ಕುದಲ್ಲ. ವೈದ್ಯರು ಸೂಚಿಸಿದ ರೋಗಿಯಷ್ಟೇ ಇದನ್ನು ಬಳಸಬಹುದು ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.