Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಅಯೋಧ್ಯೆ ರಾಮ ಮಂದಿರದ ಕೆಲಸಗಳು ಭರದಿಂದ ನಡೆಯುತ್ತಿರುವಂತೆಯೇ, ಆ ಕುರಿತ ಕ್ಲೇಮ್‌ಗಳು ಈ ವಾರ ಹರಿದಾಡಿವೆ. ರಾಮ ಮಂದಿರ ಕೆಲಸ ಪೂರ್ಣ, ರಾಮ ಮಂದಿರದ ಅರ್ಚಕರಾಗಿ ಮೋಹಿತ್ ಪಾಂಡೆ ನೇಮಕ ಮತ್ತು ಅರ್ಚಕರ ಅಶ್ಲೀಲ ವೀಡಿಯೋ, ಓಂ ನಮಃ ಶಿವಾಯ ಹೇಳುವುದು ತಮಿಳಿನಾಡಿನಲ್ಲಿ ಅಪರಾಧ, ಸಂಸತ್ ದಾಳಿ ಆರೋಪಿಗೆ ಎಸ್ಎಫ್ಐ ಲಿಂಕ್, ಬಾದಾಮಿ ತಿನ್ನುವುದರಿಂದ ಹೊಟ್ಟೆ ಕೊಬ್ಬು ಕಡಿಮೆಯಾಗುತ್ತದೆ ಎಂಬ ಕ್ಲೇಮ್ ಗಳು ಇದ್ದವು. ಇವುಗಳನ್ನು ನ್ಯೂಸ್‌ಚೆಕರ್ ಸತ್ಯಶೋಧನೆಗೊಳಪಡಿಸಿದ್ದು ಸುಳ್ಳು ಎಂದು ಸಾಬೀತು ಮಾಡಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿದೆ ಎಂದು ಕ್ಲೇಮ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇದರಲ್ಲಿ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವ ಮಂದಿರದ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ. ವೈರಲ್ ವೀಡಿಯೋ ಅಯೋಧ್ಯೆಯ ರಾಮ ಮಂದಿರವಲ್ಲ, ಇದು ನವರಾತ್ರಿ ಸಂದರ್ಭ ಕೋಲ್ಕತಾದಲ್ಲಿ ಹಾಕಲಾದ ದುರ್ಗಾ ಪೂಜೆಯ ಪೆಂಡಾಲ್ ಆಗಿದೆ ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಅಯೋಧ್ಯೆಯಲ್ಲಿ ಶ್ರೀರಾಮ ದೇಗುಲ ನಿರ್ಮಾಣ ಹಂತದಲ್ಲಿರುವಾಗಲೇ, ವಿವಿಧ ಮಾಧ್ಯಮಗಳು ಮೋಹಿತ್ ಪಾಂಡೆ ಎಂಬವರನ್ನು ದೇಗುಲದ ಮುಖ್ಯ ಅರ್ಚಕರನ್ನಾಗಿ ನೇಮಿಸಲಾಗಿದೆ ಎಂದು ಸುದ್ದಿ ಮಾಡಿದ್ದವು. ಇದಾದ ಬೆನ್ನಲ್ಲೇ ಮೋಹಿತ್ ಪಾಂಡೆಯವರು ಇದ್ದಾರೆ ಎನ್ನಲಾದ ಅಶ್ಲೀಲ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅಯೋಧ್ಯೆಯ ರಾಮ ಮಂದಿರದ ಮುಖ್ಯ ಅರ್ಚಕ ಅಥವಾ ಅರ್ಚಕರಾಗಿ ಯಾವುದೇ ವ್ಯಕ್ತಿಯನ್ನು ಆಯ್ಕೆ ಮಾಡಿಲ್ಲ ಮತ್ತು ಆಕ್ಷೇಪಾರ್ಹ ಚಿತ್ರದಲ್ಲಿ ಇರುವುದು ಮೋಹಿತ್ ಪಾಂಡೆ ಅವರಲ್ಲ ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಸಂಸತ್ತಿನಲ್ಲಿ ದಾಳಿ ನಡೆಸಲು ಉದ್ದೇಶಿಸಿದ ಯತ್ನದಲ್ಲಿ ಮೈಸೂರಿನ ಮನೋರಂಜನ್ ಎಂಬ ವ್ಯಕ್ತಿ ಬಂಧನಕ್ಕೊಳಗಾಗಿರುವಂತೆಯೇ, ಆ ವ್ಯಕ್ತಿ ಎಸ್ಎಫ್‌ಐ ಹಿನ್ನಲೆ ಹೊಂದಿದ್ದ ಎನ್ನುವ ಕುರಿತ ಫೋಟೋ ಒಂದು ವೈರಲ್ ಆಗಿದೆ. ಸತ್ಯಶೋಧನೆಯ ಪ್ರಕಾರ, ವೈರಲ್ ಆಗಿರುವ ಫೊಟೋ ಎಸ್ಎಫ್ಐ ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದ್ದಾಗಿದ್ದು ಅದರಲ್ಲಿರುವ ವ್ಯಕ್ತಿ ಮೈಸೂರು ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಅವರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಕಾಂಗ್ರೆಸ್ ಸಂಸದರೊಬ್ಬರು ಅಪಾರ ಪ್ರಮಾಣದ ಹಣ ಸಂಗ್ರಹಿಸಿದ್ದಾರೆ ಎಂದು ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಸತ್ಯಶೋಧನೆಯ ಪ್ರಕಾರ, ಇದು ಸಂಸದ ಧೀರಜ್ ಸಾಹು ಅವರ ಬಳಿ ಸಿಕ್ಕಿದ ಹಣದ ಕುರಿತಾದ್ದಲ್ಲ. ಕೋಲ್ಕತಾದಲ್ಲಿ ಗೇಮಿಂಗ್ ಆಪ್ ಪ್ರವರ್ತಕರೊಬ್ಬರ ವಿರುದ್ಧ ಜಾರಿ ನಿರ್ದೇಶನಾಲಯ ದಾಳಿ ಮಾಡಿ ₹17 ಕೋಟಿ ವಶಪಡಿಸಿದ ಸಂದರ್ಭದ್ದಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಓಂ ನಮಃ ಶಿವಾಯ ಎಂದು ಹೇಳುವುದು ತಮಿಳಿನಾಡಿನಲ್ಲಿ ಅಪರಾಧ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆಯ ಪ್ರಕಾರ, ತಮಿಳುನಾಡು ದೇಗುಲಗಳಲ್ಲಿ ಓಂ ನಮಃ ಶಿವಾಯ ಎಂದು ಹೇಳುವುದು ಅಪರಾಧ, ತಮಿಳುನಾಡು ಪೊಲೀಸರು ಶಿವ ದೇವಾಲಯದ ಒಳಗೆ “ಓಂ ನಮಃ ಶಿವಾಯ ಎಂದು ಪಠಿಸುವುದನ್ನು ನಿಲ್ಲಿಸಿದರು ಎನ್ನುವ ಹೇಳಿಕೆ ಭಾಗಶಃ ತಪ್ಪಾಗಿದ್ದು, ಈ ಪ್ರಕರಣ ಪೆರಿಯಾರ್ ವಿರುದ್ಧದ ಪ್ರತಿಭಟನೆಯೊಂದಕ್ಕೆ ಸಂಬಂಧಿಸಿದ್ದಾಗಿದೆ. ಪೊಲೀಸರೊಂದಿಗೆ ಪ್ರತಿಭಟನಕಾರರು ವಾಗ್ವಾದ ನಡೆಸಿದ ವೇಳೆ ಓಂ ನಮಃ ಶಿವಾಯ ಎಂದು ಹೇಳಿದ್ದು ಪೊಲೀಸರು ಪ್ರತಿಭಟನಕಾರರನ್ನು ತಡೆದಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಬಾದಾಮಿ ತಿನ್ನುವುದರಿಂದ ಹೊಟ್ಟೆಯ ಬೊಜ್ಜು ಬರುವುದಿಲ್ಲ ಎಂದು ಕ್ಲೇಮ್ ಒಂದು ಹರಿದಾಡಿದೆ. ಬಾದಾಮಿ ತಿನ್ನುವುದರಿಂದ ಹೊಟ್ಟೆ ಕೊಬ್ಬು ಕಡಿಮೆಯಾಗುತ್ತದೆ ಎನ್ನುವುದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ. ಆದರೆ ಬಾದಾಮಿ ಸಮತೋಲಿತ ಆಹಾರದ ಭಾಗವಾಗಿ ತಿನ್ನುವುದು ಉತ್ತಮ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.