Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದಿನಗಳು ಸಮೀಪಿಸುತ್ತಿರುವಂತೆ, ಉದ್ಘಾಟನೆಯ ಧಾರ್ಮಿಕ ಕಾರ್ಯಕ್ರಮದ ಭಾಗವಾಗಿ 25 ಸಾವಿರ ಹೋಮ ಕುಂಡಗಳು ತಯಾರಾಗಿವೆ, ಕೇಂದ್ರ ಸರ್ಕಾರ ರಕ್ತದ ಹೆಲ್ಪ್ ಲೈನ್ 104ನ್ನು ಪರಿಚಯಿಸಿದೆ ಎಂದು ಕ್ಲೇಮ್‌ಗಳು ಹರಿದಾಡಿದೆ. ಇದರೊಂದಿಗೆ ರಾಜ್ಯ ಸರ್ಕಾರ ಡ್ರೈವಿಂಗ್ ಲೈಸೆನ್ಸ್ ದರಗಳ ಏರಿಕೆ ಮಾಡಿದೆ, ಟೊಮೆಟೊ ಜ್ಯೂಸ್ ಕುಡಿಯುವುದರಿಂದ ಹೃದಯಾಘಾತ, ಪಾರ್ಶ್ವವಾಯು ಅಪಾಯ ಕಡಿಮೆ ಎಂಬ ಕ್ಲೇಮ್ ಗಳೂ ಈ ವಾರ ಹರಿದಾಡಿವೆ. ಇವುಗಳ ಬಗ್ಗೆ ನ್ಯೂಸ್‌ಚೆಕರ್ ತನಿಖೆ ನಡೆಸಿದ್ದು, ಇವುಗಳು ಸುಳ್ಳು ಎಂದು ನಿರೂಪಿಸಿದೆ.

ರಾಮ ಮಂದಿರ ಉದ್ಘಾಟನೆಯ ಸಂದರ್ಭಕ್ಕಾಗಿ ಅಯೋಧ್ಯೆಯಲ್ಲಿ 25 ಸಾವಿರ ಹೋಮ ಕುಂಡವನ್ನು ತಯಾರು ಮಾಡಲಾಗಿದೆ ಎಂದು ವೀಡಿಯೋ ಒಂದು ವೈರಲ್ ಆಗಿದೆ. ನ್ಯೂಸ್‌ಚೆಕರ್ ತನಿಖೆ ವೇಳೆ ಇದು ಅಯೋಧ್ಯೆಯಲ್ಲಿ ನಿರ್ಮಾಣ ಮಾಡಿದ ಹೋಮಕುಂಡಗಳಲ್ಲ, ವಾರಾಣಸಿಯಲ್ಲಿ ಸ್ವರವೇದ ಜ್ಞಾನ ಮಹಾಯಜ್ಞಕ್ಕಾಗಿ ನಿರ್ಮಿಸಿದ 25 ಸಾವಿರ ಹೋಮ ಕುಂಡಗಳಾಗಿವೆ ಎಂದು ಗೊತ್ತಾಗಿದೆ. ಈ ಕುರಿತ ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ

ರಕ್ತದ ಸಹಾಯವಾಣಿ 104 ನ್ನು ದೇಶಾದ್ಯಂತ ಪರಿಚಯಿಸಲಾಗಿದೆ ಎಂದು ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಕ್ತದ ಸಹಾಯವಾಣಿ ಮಹಾರಾಷ್ಟ್ರದಲ್ಲಿದ್ದು, ದೇಶದ ಬೇರೆ ಕಡೆಗಳಲ್ಲಿಲ್ಲ. ಕರ್ನಾಟಕದಲ್ಲಿ 104 ಸಹಾಯವಾಣಿ ಕೋವಿಡ್ ಕುರಿತಾಗಿ ಬಳಕೆಯಲ್ಲಿದೆ ಎಂದು ಸತ್ಯಶೋಧನೆಯಲ್ಲಿ ಗೊತ್ತಾಗಿದೆ. ಈ ಕುರಿತ ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ

ಗ್ಯಾರೆಂಟಿ ಯೋಜನೆಗಳನ್ನು ಪೂರೈಸಲು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಡ್ರೈವಿಂಗ್ ಲೈಸೆನ್ಸ್ ದರಗಳನ್ನು ಏರಿಸುತ್ತಿದೆ ಎಂದು ಹೇಳಿಕೆ ಹರಿದಾಡಿದೆ. ಆದರೆ ಸತ್ಯಶೋಧನೆಯಲ್ಲಿ ತಿಳಿದುಬಂದ ಅಂಶವೇನೆಂದರೆ, ರಾಜ್ಯ ಸರ್ಕಾರ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ದರಗಳನ್ನು ಏರಿಸುತ್ತಿಲ್ಲ, ಬದಲಾಗಿ ಮೋಟಾರು ವಾಹನ ತರಬೇತಿ ಶಾಲೆಗಳ ಶುಲ್ಕಗಳನ್ನು ಪರಿಷ್ಕರಿಸಿ ಆದೇಶಿಸಿದೆ ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ

ಟೊಮೆಟೋ ಜ್ಯೂಸ್ ಕುಡಿಯುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನವಿದ್ದು, ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯ ಕಡಿಮೆ ಮಾಡುತ್ತದೆ ಎಂದು ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆದರೆ ಶೋಧನೆ ವೇಳೆ ಟೊಮೆಟೊ ರಸದಿಂದ ಹೃದಯನಾಳದ ಆರೋಗ್ಯದ ಬಗ್ಗೆ ಸಂಭಾವ್ಯ ಪ್ರಯೋಜನಗಳನ್ನು ಹೇಳಿದರೂ ನಿರ್ಣಾಯಕವಾಗಿ ಅದರ ಪ್ರಯೋಜನದ ಬಗ್ಗೆ ಸಾಬೀತು ಪಡಿಸಿಲ್ಲ ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Saurabh Pandey
January 19, 2024
Ishwarachandra B G
January 5, 2024
Ishwarachandra B G
December 15, 2023