Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ರೈಲಿನ ಶಿಳ್ಳೆಯಿಂದ ನಮಾಜ್‌ಗೆ ಭಂಗ ಎಂಬ ಕಾರಣಕ್ಕೆ ಮುಸ್ಲಿಮರು ರೈಲು ನಿಲ್ದಾಣ ಪುಡಿಗಟ್ಟಿದರು, ಪಂಢರಪುರ ವಾರ್ಕರಿಗಳು ಭಜನೆ ಹೇಳಿದ್ದಕ್ಕೆ ಮುಸ್ಲಿಮರಿಂದ ಹಲ್ಲೆ ಎಂಬ ಎರಡು ಕೋಮು ಪ್ರಚೋದಿತ ಹೇಳಿಕೆಗಳು ಈವಾರ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಮುಖವಾಗಿದ್ದವು. ಅವುಗಳ ಬಗ್ಗೆ ನ್ಯೂಸ್ ಚೆಕರ್ ಶೋಧ ನಡೆಸಿದ್ದು, ತಪ್ಪಾದ ಹೇಳಿಕೆಗಳು ಎಂದು ಕಂಡು ಬಂದಿವೆ. ಇದರೊಂದಿಗೆ ಸ್ವೀಡನ್ ನಲ್ಲಿ ರಸ್ತೆಯಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಅಳವಡಿಸಲಾಗಿದೆ, ಏಲಕ್ಕಿ ತಿಂದರೆ ವಿಷ ಪ್ರಭಾವ ಬೀರುವುದಿಲ್ಲ ಎಂಬ ಹೇಳಿಕೆಗಳು ಇದ್ದವು. ಇವುಗಳ ಬಗ್ಗೆಯೂ ಶೋಧ ನಡೆಸಲಾಗಿದ್ದು, ತಪ್ಪಾದ ಹೇಳಿಕೆಗಳು ಎಂದು ಕಂಡುಬಂದಿವೆ.

ರೈಲಿನ ಶಿಳ್ಳೆಯಿಂದ ನಮಾಜ್‌ಗೆ ಭಂಗ ಎಂಬ ಕಾರಣಕ್ಕೆ ಮುಸ್ಲಿಮರು ರೈಲು ನಿಲ್ದಾಣ ಪುಡಿಗಟ್ಟಿದರು ಎಂಬ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಸತ್ಯಶೋಧನೆಯಲ್ಲಿ ಕಂಡುಬಂದ ಪ್ರಕಾರ 2019ರಲ್ಲಿ ಸಿಎಎ ವಿರುದ್ಧದ ಪ್ರತಿಭಟನೆ ವೇಳೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ರೈಲ್ವೇ ನಿಲ್ದಾಣವನ್ನು ಧ್ವಂಸ ಮಾಡಿದ ಪ್ರಕರಣ ಇದಾಗಿದೆ ವಿವಿರಗಳಿಗೆ ಇಲ್ಲಿ ಓದಿ

ಪಂಢರಪುರಕ್ಕೆ ತೀರ್ಥಯಾತ್ರೆಗೆ ತೆರಳುತ್ತಿದ್ದ ವಾರ್ಕರಿಗಳು (ಭಜಕರು) ಭಜನೆಗಳನ್ನು ಹೇಳಿದ್ದಕ್ಕಾಗಿ ನಾಗ್ಪುರದ ಬಳಿ ಮುಸ್ಲಿಮರು ಹಲ್ಲೆ ನಡೆಸಿದ್ದಾರೆ ಎಂದು ವೀಡಿಯೋ ಒಂದು ವೈರಲ್ ಆಗಿದೆ. 2023ರ ನವೆಂಬರ್ ನಲ್ಲಿ ಅಹ್ಮದ್ ನಗರ ಜಿಲ್ಲೆಯ ರಾಹುರಿ ತಾಲ್ಲೂಕಿನ ಗುಹಾದಲ್ಲಿರುವ ಕಾನಿಫ್ನಾಥ್ ದೇವಸ್ಥಾನದಲ್ಲಿ ನಡೆದ ಘಟನೆಯ ವೀಡಿಯೋವನ್ನು ವಾರ್ಕರಿಗಳ ಮೇಲೆ ಮುಸ್ಲಿಮರು ಹಲ್ಲೆ ನಡೆಸಿದ್ದಾರೆ ಎಂದು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ವಿವರಗಳಿಗೆ ಇಲ್ಲಿ ಓದಿ

ಸ್ವೀಡನ್‌ನಲ್ಲಿ ರಸ್ತೆ ಮೇಲೆ ಎಲೆಕ್ಟ್ರಿಕ್ ಚಾರ್ಜಿಂಗ್ ಅಳವಡಿಸಲಾಗಿದೆ ಎಂದು ಫೇಸ್‌ಬುಕ್ ನಲ್ಲಿ ಹೇಳಿಕೆಯೊಂದು ಹರಿದಾಡಿದೆ. ಸತ್ಯಶೋಧನೆಯಲ್ಲಿ ಕಂಡುಬಂದ ಪ್ರಕಾರ ಸ್ವೀಡನ್ ನಲ್ಲಿ ವಿಶ್ವದ ಮೊದಲ ಚಾರ್ಜಿಂಗ್ ರಸ್ತೆಗೆ ಸಿದ್ಧತೆಗಳು, ನಿರ್ಮಾಣ ಕಾರ್ಯ ಆರಂಭವಾಗಿವೆ. ಆದರೆ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. 2025ರ ಹೊತ್ತಿಗೆ ಅದು ಲೋಕಾರ್ಪಣೆಯಾಗಲಿದೆ ಎಂದು ತಿಳಿದುಬಂದಿದೆ. ವಿವರಗಳಿಗೆ ಇಲ್ಲಿ ಓದಿ

ಊಟಕ್ಕೆ ವಿಷ ಬೆರೆಸಿದ್ದಾರೆ ಎಂಬ ಸಂಶಯವಿದ್ದರೆ, ಊಟಕ್ಕೆ ಮೊದಲು ಏಲಕ್ಕಿ ತಿಂದರೆ ವಿಷಯ ಪ್ರಭಾವ ಬೀರುವುದಿಲ್ಲ ಎಂದು ಹೇಳಿಕೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಸತ್ಯಶೋಧನೆಯಲ್ಲಿ ಕಂಡುಬಂದತೆ, ಊಟಕ್ಕೆ ವಿಷ ಹಾಕಿದ್ದಾರೆ ಎಂಬ ಸಂಶಯವಿದ್ದರೆ, ಆಹಾರ ಸೇವನೆ ಮೊದಲು ಏಲಕ್ಕಿ ತಿಂದರೆ ವಿಷಯ ಪ್ರಭಾವ ಆಗುವುದಿಲ್ಲ ಎನ್ನುವುದಕ್ಕೆ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ, ವಿಷ ಸೇವನೆಯಾಗಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ವಿವರಗಳಿಗೆ ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.