Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಡಿಎಂಕೆ ಶಾಸಕ ಮನ್ಸೂರ್ ಮೊಹಮ್ಮದ್ ದಿಮಿರ್ ಅವರಿಂದ ಪೊಲೀಸ್ ಮೇಲೆ ಹಲ್ಲೆ
Fact
ಹಲ್ಲೆ ನಡೆಸಿದಾತ ಮೇರಠ್ ಬಿಜೆಪಿಯ ಕೌನ್ಸಿಲರ್ ಮನೀಶ್ ಚೌಧರಿ ಎಂಬಾತನಾಗಿದ್ದು ಇದು 2018ರಲ್ಲಿ ನಡೆದ ಘಟನೆಯಾಗಿದೆ
ಡಿಎಂಕೆ ಶಾಸಕ ಮನ್ಸೂರ್ ಮೊಹಮ್ಮದ್ ದಿಮಿರ್ ಅವರಿಂದ ಪೊಲೀಸ್ ಮೇಲೆ ಹಲ್ಲೆ ಎಂಬ ಹೇಳಿಕೆಯೊಂದಿಗೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ವಾಟ್ಸಾಪ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಶಾಸಕ ಮನ್ಸೂರ್ ಮೊಹಮ್ಮದ್ ದಿಮಿರ್ ಅವರನ್ನು ನೋಡಿ. ಪೊಲೀಸರ ಪರಿಸ್ಥಿತಿಯೇ ಹೀಗಿರುವಾಗ ಸಾರ್ವಜನಿಕರ ಪಾಡು ಏನಾಗಿರುತ್ತೆ…” ಎಂದಿದೆ.
ಈ ವೈರಲ್ ವೀಡಿಯೋ ಬಗ್ಗೆ ಪರಿಶೀಲನೆ ಮಾಡುವಂತೆ ಬಳಕೆದಾರರೊಬ್ಬರು ನ್ಯೂಸ್‌ಚೆಕರ್ ವಾಟ್ಸಾಪ್ ಟಿಪ್ ಲೈನ್ ಮೂಲಕ ನಮಗೆ ದೂರು ನೀಡಿದ್ದು, ಅದನ್ನು ತನಿಖೆಗಾಗಿ ಅಂಗೀಕರಿಸಲಾಗಿದೆ.
Also Read: ರೈತರ ಪ್ರತಿಭಟನೆಗೆ ಮಾರ್ಪಡಿಸಲಾದ ಟ್ರಾಕ್ಟರ್ ತಯಾರಿಸಲಾಗಿದೆ ಎಂದ ವೀಡಿಯೋ ಟರ್ಕಿಯದ್ದು!
ಮೊದಲಾಗಿ ನಾವು ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಅಕ್ಟೋಬರ್ 20, 2018 ರ ಎಎನ್ಐ ಯುಪಿ / ಉತ್ತರಾಖಂಡ್ ಎಕ್ಸ್ ಪುಟದಲ್ಲಿ ವೈರಲ್ ವೀಡಿಯೋ ಕಾಣಿಸಿದೆ.
ಆ ಟ್ವೀಟ್ ಪ್ರಕಾರ, ವೈರಲ್ ವೀಡಿಯೊದಲ್ಲಿ ಕಂಡುಬರುವ ಪೊಲೀಸ್ ಅಧಿಕಾರಿ ತನ್ನ ವಕೀಲ ಸ್ನೇಹಿತನೊಂದಿಗೆ ರೆಸ್ಟೋರೆಂಟ್ ಗೆ ಹೋಗಿದ್ದಾರೆ. ಅಲ್ಲಿರುವ ಪರಿಚಾರಕರೊಂದಿಗೆ ವಾಗ್ವಾದ ಒಂದು ನಡೆದಿದ್ದು, ಅನಂತರ ರೆಸ್ಟೋರೆಂಟ್ ಮಾಲಕ ಮತ್ತು ಬಿಜೆಪಿ ಕೌನ್ಸಿಲರ್ ಆಗಿರುವ ಮನೀಶ್ ಅವರ ಹಲ್ಲೆ ನಡೆಸಿದ್ದಾನೆ. ಪ್ರಕರಣದಲ್ಲಿ ಬಿಜೆಪಿ ಕೌನ್ಸಿಲರ್ ನನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಹೆಚ್ಚಿನ ಹುಡುಕಾಟವನ್ನು ನಡೆಸಿದ ವೇಳೆ ಹಲವು ಮಾಧ್ಯಮಗಳೂ ಈ ಬಗ್ಗೆ ವರದಿ ಮಾಡಿರುವುದು ಗಮನಕ್ಕೆ ಬಂದಿದೆ. ನೀವು ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಪೊಲೀಸ್ ಮೇಲೆ ದಾಳಿ ನಡೆಸಿದ ವ್ಯಕ್ತಿ ಮನೀಶ್ ಚೌಧರಿ ಮತ್ತು ಆತ ಬಿಜೆಪಿ ಕೌನ್ಸಿಲರ್ ಎಂದು ಎಲ್ಲಾ ಸುದ್ದಿ ವರದಿಗಳಲ್ಲಿ ಉಲ್ಲೇಖವಾಗಿವೆ.
ಇನ್ನು ಏಪ್ರಿಲ್ 2021 ರ ವೇಳೆ ಮನೀಶ್ ಚೌಧರಿ ತಲೆಗೆ ಗುಂಡು ತಗುಲಿ ಸಾವನ್ನಪ್ಪಿದ್ದಾರೆ ಎಂದೂ ಮಾಧ್ಯಮ ವರದಿಗಳು ಹೇಳಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ತನಿಖೆಯಲ್ಲಿ ತಿಳಿದುಬಂದಂತೆ ಪೊಲೀಸ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಡಿಎಂಕೆ ಶಾಸಕ ಮನ್ಸೂರ್ ಮೊಹಮ್ಮದ್ ದಿಮಿರ್ ಎಂದು ಹೇಳಲಾಗಿದ್ದು, ಯಾವುದೇ ಪೂರಕ ಸಾಕ್ಷ್ಯಗಳು ಕಂಡುಬಂದಿಲ್ಲ.
ಆದ್ದರಿಂದ ಈ ತನಿಖೆಯ ಪ್ರಕಾರ, ಡಿಎಂಕೆ ಶಾಸಕ ಮನ್ಸೂರ್ ಮೊಹಮ್ಮದ್ ದಿಮಿರ್ ಅವರಿಂದ ಪೊಲೀಸರ ಮೇಲೆ ಹಲ್ಲೆ ನಡೆದಿದೆ ಎನ್ನುವುದು ತಪ್ಪಾಗಿದೆ. ಹಲ್ಲೆ ನಡೆಸಿದಾತ ಬಿಜೆಪಿಯ ಕೌನ್ಸಿಲರ್ ಮನೀಶ್ ಚೌಧರಿ ಎಂಬವರಾಗಿದ್ದಾರೆ. ಅವರು 2021ರಲ್ಲಿ ಸಾವನ್ನಪ್ಪಿದ್ದಾರೆ ಎಂದೂ ತಿಳಿದುಬಂದಿದೆ.
Also Read: ಬಿಗು ಬಂದೋಬಸ್ತ್ ಗೆ ಹಾಕಲಾದ ಈ ಬ್ಯಾರಿಕೇಡ್ ಚಿತ್ರ ಹಳೆಯದು!
Our Sources:
Report from ANI UP/Uttarakhand Dated: October 20, 2018
Report from India Today, Dated: October 20, 2018
Report from Times Now, Dated: October 20, 2018
Report from The Hindu, Dated: October 20, 2018
Report from Times of India, Dated: April 16, 2021
Report from Indian Express, Dated: April 16, 2021
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ತಮಿಳಿನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.