Authors
Claim
ಮೀನುಗಳ ಹೊಟ್ಟೆಯಲ್ಲಿ ಕಿಡ್ನಿ ಫೇಲ್ ಆಗುವಂತಹ ಕೆಮಿಕಲ್‌ಗಳನ್ನು ತುಂಬಿಸಿ ಹಿಂದೂಗಳ ಏರಿಯಾದಲ್ಲಿ ಮಾರಾಟ ಮಾಡಲಾಗುತ್ತಿದೆ
Fact
ಕೊಚ್ಚಿಯಲ್ಲಿ ಆರೋಗ್ಯ ಅಧಿಕಾರಿಗಳು ದಾಳಿ ನಡೆಸಿದಾಗ ಮೀನು ಅಂಗಡಿಗಳಲ್ಲಿ ಕೊಳೆತ ಮೀನುಗಳು ಪತ್ತೆಯಾದ ವಿದ್ಯಮಾನ ಇದಾಗಿದೆ
ಮೀನುಗಳ ಹೊಟ್ಟೆಯಲ್ಲಿ ಕಿಡ್ನಿ ಫೇಲ್ ಆಗುವಂತಹ ಕೆಮಿಕಲ್‌ಗಳನ್ನು ತುಂಬಿಸಿ ಹಿಂದೂಗಳ ಏರಿಯಾದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ.
ಎಕ್ಸ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಮೀನುಗಳ ಹೊಟ್ಟೆಯೊಳಗೆ ಕಿಡ್ನಿ ಫೇಲ್ ಆಗುವಂತಹ ಕೆಮಿಕಲ್ ಮಾತ್ರೆಗಳನ್ನು ತುಂಬಿಸಿ ಹಿಂದೂಗಳ ಏರಿಯಾದಲ್ಲಿ ವ್ಯಾಪಾರ ಮಾಡುತ್ತಿದ್ದ ಮುಸ್ಲಿಂ ವ್ಯಾಪಾರಿಗಳ ಬಂಧನ” ಎಂದಿದೆ.
Also Read: ವಿಸರ್ಜನೆ ವೇಳೆ ಕರ್ನಾಟಕ ಪೊಲೀಸರು ಗಣೇಶ ಮೂರ್ತಿಯನ್ನು ಬಂಧಿಸಿದ್ದಾರೆಯೇ?
ಇದೇ ರೀತಿಯ ಹೇಳಿಕೆಗಳು ಇಲ್ಲಿ, ಇಲ್ಲಿ, ಇಲ್ಲಿ ಕಂಡುಬಂದಿದೆ.
ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ತಪ್ಪಾದ ಹೇಳಿಕೆ ಎಂದು ಕಂಡುಕೊಂಡಿದೆ.
Fact Check/Verification
ಸತ್ಯಶೋಧನೆಗಾಗಿ ನಾವು ವೈರಲ್ ಹೇಳಿಕೆಯೊಂದಿಗೆ ಇರುವ ವೀಡಿಯೋವನ್ನು ಪರಿಶೀಲಿಸಿದ್ದೇವೆ 0.59 ಸೆಕೆಂಡ್ ಗಳ ಈ ವೀಡಿಯೋದಲ್ಲಿ ಖಾಕಿಧಾರಿ ಅಧಿಕಾರಿಗಳು ಮೀನುಗಳನ್ನು ಪರಿಶೀಲಿಸುತ್ತಿರುವುದನ್ನು ಕಂಡಿದ್ದೇವೆ.
ಇದರೊಂದಿಗೆ “ಬ್ರೇವ್ ಇಂಡಿಯಾ” ಹೆಸರನ್ನು ಕಂಡಿದ್ದೇವೆ, ಇದರ ಆಧಾರದಲ್ಲಿ ನಾವು ಫೇಸ್ ಬುಕ್ ನಲ್ಲಿ ಹುಡುಕಾಟ ನಡೆಸಿದ್ದು, ವೀಡಿಯೋ ಒಂದನ್ನು ಕಂಡುಕೊಂಡಿದ್ದೇವೆ. ಇದು ವೈರಲ್ ವೀಡಿಯೋಗೆ ಸಾಮ್ಯತೆ ಇರುವುದನ್ನು ಗುರುತಿಸಿದ್ದೇವೆ.
ಈ ಆಧಾರದಲ್ಲಿ ನಾವು ಇನ್ನಷ್ಟು ಶೋಧ ನಡೆಸಿದಾಗ ಜುಲೈ 25, 2024 ಬ್ರೇವ್ ಇಂಡಿಯಾ ಯೂಟ್ಯೂಬ್ ಚಾನೆಲ್ ನಲ್ಲಿ ಇದೇ ವಿಚಾರಕ್ಕೆ ಸಂಬಂಧಿಸಿದ ವೀಡಿಯೋ ಕಂಡುಬಂದಿದೆ.
ಈ ವೀಡಿಯೋದ ಶೀರ್ಷಿಕೆಯಲ್ಲಿ “ಓ ದೇವರೇ ನಾವು ತಿನ್ನುತ್ತಿರುವುದು ಇದನ್ನೇ ಕೊಚ್ಚಿಯ ವಿವಿಧ ಮಾರುಕಟ್ಟೆಗಳಿಂದ ಸಿಕ್ಕಿದ ಹುಳುಗಳಿದ್ದ ಮೀನು” (ಮಲಯಾಳದಿಂದ ಅನುವಾದಿಸಲಾಗಿದೆ) ಎಂದಿದೆ.
ಇನ್ನಷ್ಟು ಶೋಧ ನಡೆಸಿದಾಗಿ ಕೆಲವೊಂದು ಮಾಧ್ಯಮ ವರದಿಗಳು ಲಭ್ಯವಾಗಿವೆ
ಜುಲೈ 24, 2024ರ ಕೈರಳಿ ವರದಿಯಲ್ಲಿ, ಕೊಚ್ಚಿಯ ಪಲ್ಲುರುತಿ ಮಾರುಕಟ್ಟೆಯಲ್ಲಿ 200 ಕೆಜಿ ಹಳಸಿದ ಮೀನುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೊಚ್ಚಿ ಪುರಸಭೆಯ ಆರೋಗ್ಯ ಇಲಾಖೆ ನಡೆಸಿದ ತಪಾಸಣೆಯಲ್ಲಿ ಹಳಸಿದ ಮೀನು ಪತ್ತೆಯಾಗಿದೆ. ಹಳಸಿದ ಮೀನುಗಳನ್ನು ಯೂಸುಫ್ ಎಂಬವರ ಅಂಗಡಿಯಲ್ಲಿ ಮಾರಾಟಕ್ಕೆ ಇಡಲಾಗಿತ್ತು ಎಂದು ತಿಳಿದುಬಂದಿದೆ. ಅಂಗಡಿಯನ್ನು ಮುಚ್ಚುವಂತೆ ಆರೋಗ್ಯ ಇಲಾಖೆ ನೋಟಿಸ್ ನೀಡಿದೆ ಎಂದಿದೆ. (ಅನುವಾದಿಸಲಾಗಿದೆ)
ಜುಲೈ 25, 2024ರ ಕೇರಳ ಕೌಮುದಿ ವರದಿಯಲ್ಲಿ, ಪಲ್ಲೂರುತಿಯ ಮಾರುಕಟ್ಟೆಯೊಂದರಲ್ಲಿ ಪುರಸಭೆಯ ಆರೋಗ್ಯ ಇಲಾಖೆ ನಡೆಸಿದ ಮಿಂಚಿನ ದಾಳಿಯಲ್ಲಿ ಸುಮಾರು 200 ಕೆಜಿ ಕೊಳೆತ ಮೀನುಗಳು ಹುಳು ಹಿಡಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದಿದೆ. (ಅನುವಾದಿಸಲಾಗಿದೆ)
25 ಜುಲೈ 2024 ರ ದಿ ನ್ಯೂಇಂಡಿಯನ್ ಎಕ್ಸ್ ಪ್ರೆಸ್ ವರದಿಯಲ್ಲಿ ಕೇರಳದ ಕೊಚ್ಚಿಯ ಪಲ್ಲುರುತ್ತಿಯಲ್ಲಿ 200 ಕೆಜಿ ಕೊಳೆತ ಮೀನುಗಳನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದಿದೆ.
Conclusion
ಈ ಶೋಧನೆಯ ಪ್ರಕಾರ, ಮೀನುಗಳ ಹೊಟ್ಟೆಯಲ್ಲಿ ಕಿಡ್ನಿ ಫೇಲ್ ಆಗುವಂತಹ ಕೆಮಿಕಲ್‌ಗಳನ್ನು ತುಂಬಿಸಿ ಹಿಂದೂಗಳ ಏರಿಯಾದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ವೀಡಿಯೋ ಜೊತೆಗಿನ ಹೇಳಿಕೆಗೂ, ಕೊಚ್ಚಿಯಲ್ಲಿ ಆರೋಗ್ಯ ಅಧಿಕಾರಿಗಳು ನಡೆಸಿದ ದಾಳಿ, ಕೊಳೆತ ಮೀನುಗಳು ಪತ್ತೆಯಾದ ವಿಚಾರಕ್ಕೆ ಸಾಮ್ಯತೆ ಇಲ್ಲ ಮತ್ತು ಇದು ತಪ್ಪಾದ ಹೇಳಿಕೆ ಎಂದು ಕಂಡುಬಂದಿದೆ.
Also Read: ವಂದೇ ಭಾರತ್ ರೈಲಿನ ಗಾಜು ಒಡೆಯುವ ವೀಡಿಯೋ ಹಿಂದಿನ ಸತ್ಯವೇನು?
Result: False
Our Sources
Facebook post By Brave India, Dated: July 24, 2024
Report By Karali, Dated: July 24, 2024
Report By Kerala Kaumudi, Dated: July 24, 2024
(Inputs By Sabloo Thomas, Newschecker Malayalam)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.