Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಜಿಹಾದಿಗಳಿಂದ ಹಿಂದೂಗಳಿಗೆ ಏಡ್ಸ್ ಇಂಜೆಕ್ಷನ್
Fact
ಜಿಹಾದಿಗಳಿಂದ ಹಿಂದೂಗಳಿಗೆ ಏಡ್ಸ್ ಇಂಜೆಕ್ಷನ್ ಎನ್ನುವ ಸಂದೇಶ ಸುಳ್ಳು, ಗದಗ ಪೊಲೀಸರಿಂದ ಸ್ಪಷ್ಟನೆ
ಗದಗ ಜಿಲ್ಲಾ ಪೊಲೀಸ್ ಪ್ರಕಟಣೆ ಹೆಸರಲ್ಲಿ ಸಂದೇಶವೊಂದು ವಾಟ್ಸಾಪ್ ನಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.
ವಾಟ್ಸಾಪ್ ನಲ್ಲಿ ಕಂಡುಬಂದ ಈ ಸಂದೇಶದ ಪ್ರಕಾರ. “ಗದಗ ಜಿಲ್ಲಾ ಪೊಲೀಸ್ ಪ್ರಕಟಣೆ – ಯಾರಾದರೂ ಮನೆ ಹತ್ರ ಬಂದು ನಾವು ಸರ್ಕಾರಿ ಆಸ್ಪತ್ರೆಯಿಂದ ಬಂದಿದ್ದೇವೆ. ಇನ್ಸುಲಿನ್, ವಿಟಮಿನ್ ಇಂಜೆಕ್ಷನ್ ಮಾಡ್ತೀವಿ ಅಂತ ಹೇಳಿದ್ರೆ ನಂಬಬೇಡಿ. ನಂಬಿ ಆತುರಪಟ್ಟು ಇಂಜೆಕ್ಷನ್ ಮಾಡಿಸಿಕೊಳ್ಳದಿರಿ. ಜಿಹಾದಿ, ಟೆರರಿಸ್ಟುಗಳು ಈ ರೀತಿ ಯಾಮಾರಿಸಿ ಹಿಂದೂಗಳಿಗೆ ಏಡ್ಸ್ ಇಂಜೆಕ್ಷನ್ ಮಾಡುತ್ತಿದ್ದಾರಂತೆ. ಜಾಗ್ರತೆಯಿಂದಿರಿ. ನಿಮಗೆ ಸಂಬಂಧಿಸಿದ ಎಲ್ಲಾ ಗ್ರೂಪ್‌ಗಳಿಗೆ ಕಳಿಸಿ, ಅಮಾಯಕರ ಪ್ರಾಣ ಉಳಿಸಿ’. ಇಂತಿ ನಿಮ್ಮ ಸೋಮೇಶ್. ಗಜೆ.(SI) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಗದಗ” ಎಂದಿದೆ.
Also Read: ಹಮಾಸ್‌ನಿಂದ ಅಂತಿಮ ಯಾತ್ರೆಯ ನಾಟಕ ಎನ್ನುವ ವೀಡಿಯೋ ನಿಜವೇ?

ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಹೆಸರಲ್ಲಿ ಹಂಚಿಕೊಳ್ಳಲಾಗುತ್ತಿರುವ ಈ ಸಂದೇಶದ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ಮೊದಲು ಗೂಗಲ್‌ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ನಮಗೆ ವರದಿಗಳು ಲಭ್ಯವಾಗಿವೆ.
ಮೇ 26 2023ರ ಪ್ರಜಾವಾಣಿ ವರದಿ ಪ್ರಕಾರ, “ಇದು ಫೇಕ್ ಸಂದೇಶವಾಗಿದೆ. ಜನರು ಆತಂಕ ಪಡುವ ಅಗತ್ಯವಿಲ್ಲವೆಂದು ಜಿಲ್ಲಾ ಪೊಲೀಸರು ಹೇಳಿದ್ದಾರೆ” ಎಂದಿದೆ. “ವಾಟ್ಸಾಪ್ ಗ್ರೂಪ್‌ಗಳಲ್ಲಿ ಹರಿದಾಡಿದ ಸಂದೇಶದ ಬಗ್ಗೆ ಪ್ರತಿಕ್ರಿಯಿಸಿದ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಇದೊಂದು ಫೇಕ್ ಸಂದೇಶವಾಗಿದ್ದು ಜನರು ಭಯಪಡಬಾರದು. ಸಾರ್ವಜನಿಕರಲ್ಲಿ ಭೀತಿ ಮೂಡಿಸುವಂತಹ ಸಂದೇಶ ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ನಕಲಿ ಸಂದೇಶದ ಮೂಲ ಪತ್ತೆ ಹಚ್ಚಲು ಸೈಬರ್ ವಿಭಾಗದ ಪೊಲೀಸರಿಗೆ ಸೂಚಿಸಲಾಗುವುದು ಎಂದು ತಿಳಿಸಿದರು” ಎಂದಿದೆ.

ಜನವರಿ 16, 2020ರ ಟಿವಿ 9 ಕನ್ನಡ ಯೂಟ್ಯೂಬ್ ಚಾನೆಲ್ “Fake News In The Name Of Gadag Police” ಶೀರ್ಷಿಕೆಯಡಿ ವೀಡಿಯೋ ಅಪ್‌ಲೋಡ್ ಮಾಡಿದೆ. ಇದರ ವಿವರಣೆಯಲ್ಲಿ “ಗದಗ ಜಿಲ್ಲಾ ಪೊಲೀಸ್ ಇಲಾಖೆ ಹೆಸರಿನಲ್ಲಿ ಸುಳ್ಳು ಸಂದೇಶ. ಪೊಲೀಸ್ ಇಲಾಖೆ ಹೆಸರಲ್ಲಿ ವಾಟ್ಸಾಪ್ಗಳಲ್ಲಿ ಸುಳ್ಳು ಸಂದೇಶ. ಗದಗ ಜಿಲ್ಲೆಯಲ್ಲಿ ಜಿಹಾದಿಗಳು, ಭಯೋತ್ಪಾದಕರು ಬರ್ತಾರೆ. ಭಯೋತ್ಪಾದಕರ ಸೋಗಿನಲ್ಲಿ ಬರ್ತಾರೆ ಎಚ್ಚರ ಎಂಬ ಸಂದೇಶ. ಹಿಂದೂಗಳಿಗೆ ಏಡ್ಸ್ ಸೋಂಕಿನ ಇಂಜೆಕ್ಷನ್ ನೀಡಲು ಬರ್ತಾರೆ.” ಎಂದಿದೆ.
Also Read: ವಿಧಾನಸೌಧದಿಂದ ಪರಪ್ಪನ ಅಗ್ರಹಾರಕ್ಕೆ 420 ಸಂಖ್ಯೆಯ ಬಸ್ ಇದೆ ಎನ್ನುವುದು ಸುಳ್ಳು!
ಈ ಎರಡೂ ವರದಿಗಳಲ್ಲಿ ನೀಡಿರುವ ಸಂದೇಶದ ಫೋಟೋ ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವ ಸಂದೇಶದ ಫೋಟೋ ಒಂದೇರೀತಿ ಇರುವುದನ್ನು ನಾವು ಗಮನಿಸಿದ್ದೇವೆ.
ಇದರನ್ವಯ ನಾವು ಗದಗ ಜಿಲ್ಲಾ ಪೊಲೀಸ್ ಸೈಬರ್ ವಿಭಾಗದ ಎಸ್.ಎನ್. ಶಿರಗುಪ್ಪಿ ಅವರನ್ನು ಸಂಪರ್ಕಿಸಿದ್ದು, “ಇದೊಂದು ಹಳೆಯ ಫೇಕ್ ಸಂದೇಶವಾಗಿದೆ ಎಂದು ತಿಳಿಸಿದ್ದಾರೆ. ಈ ಸಂದೇಶದ ಬಗ್ಗೆ ಜಿಲ್ಲಾ ಪೊಲೀಸ್ ಸುಳ್ಳು ಎಂದು ಸ್ಪಷ್ಟನೆ ನೀಡಿದೆ. ಜೊತೆಗೆ ಸಂದೇಶದಲ್ಲಿ ಹೇಳಿದ ರೀತಿ ಸೋಮೇಶ್ ಗೆಜ್ಜೆ ಎಂಬ ಅಧಿಕಾರಿಯೇ ಗದಗದಲ್ಲಿಲ್ಲ” ಎಂದು ತಿಳಿಸಿದ್ದಾರೆ.
ಸತ್ಯಶೋಧನೆಯ ಪ್ರಕಾರ ವಾಟ್ಸಾಪ್ ನಲ್ಲಿ ಹರಡಿದ ಸಂದೇಶ ಸುಳ್ಳಾಗಿದ್ದು, ಜನರು ಇಂತಹ ಸುಳ್ಳು ಸಂದೇಶವನ್ನು ನಂಬದಂತೆ ಪೊಲೀಸ್ ಇಲಾಖೆ ಈಗಾಗಲೇ ಕೇಳಿಕೊಂಡಿದೆ ಎಂದು ಗೊತ್ತಾಗಿದೆ.
Our Sources
Report By Prajavani, Dated: May 26, 2023
YouTube Video By Tv9 Kannada, Dated: January 16, 2020
Conversation with Gadag District Police Cyber Crime Wing, S.N.Shiraguppi
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.