Authors
Claim
ಡೆಹ್ರಾಡೂನ್ ನಲ್ಲಿ ಹಿಂದೂಗಳು ಅಂಗಡಿ ಬೋರ್ಡ್ ಗಳನ್ನು ಕೇಸರಿ ಮಾಡಿದ್ದಾರೆ
Fact
ಅಂಗಡಿ ಬೋರ್ಡ್ ಗಳನ್ನು ಕೇಸರಿ ಮಾಡಿದ ನಿರ್ಧಾರ ಡೆಹ್ರಾಡೂನ್ ಸ್ಮಾರ್ಟ್ ಸಿಟಿ ಪ್ರಾಧಿಕಾರದ್ದಾಗಿದ್ದು, ಇದಕ್ಕೆ ಕಾಂಗ್ರೆಸ್ ತೀವ್ರ ವಿರೋಧವನ್ನು ವ್ಯಕ್ತಪಡಿಸಿತ್ತು.
ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ಹಿಂದೂಗಳು ತಮ್ಮ ಅಂಗಡಿಯ ಬೋರ್ಡ್ ಗಳನ್ನು ಕೇಸರಿ ಮಾಡಿದ್ದಾರೆ ಎಂಬಂತೆ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ಉತ್ತರಾಖಂಡದ ಡೆಹ್ರಾಡೂನ್ ನಲ್ಲಿರುವ ದೃಶ್ಯ. ಸನಾತನಿ ಹಿಂದೂಗಳು ತಮ್ಮ ಅಂಗಡಿಯ ಎಲ್ಲಾ ಬೋರ್ಡ್ ಗಳನ್ನು ಕೇಸರಿಕರಣ ಮಾಡಿದ ದೃಶ್ಯ.!! ಹಿಮಾಲಯದಿಂದ ಶುರುವಾಗಿದ್ದು, ಇನ್ನು ಈ ಕ್ರಾಂತಿ ಕನ್ಯಾಕುಮಾರಿ ತಲುಪಲಿದೆ.” ಎಂದಿದೆ.
Also Read: ಅಸ್ಸಾಂನಲ್ಲಿ ಮತ್ತೊಂದು ಶ್ರದ್ಧಾ ಪ್ರಕರಣ ಎಂದ ವೈರಲ್ ಫೋಟೋ ಹಿನ್ನೆಲೆ ಏನು?
ಸತ್ಯಶೋಧನೆಗಾಗಿ ನಾವು ಇದನ್ನು ಪರಿಶೀಲಿಸಿದ್ದು, ಈ ಹೇಳಿಕೆ ಭಾಗಶಃ ತಪ್ಪು ಎಂದು ಕಂಡುಬಂದಿದೆ.
ತನಿಖೆಗಾಗಿ ನಾವು ಹೇಳಿಕೆಯೊಂದಿಗೆ ಹಾಕಲಾದ ಕೇಸರಿ ಬೋರ್ಡ್ ಇರುವ ಅಂಗಡಿಗಳ ಬಗ್ಗೆ ಗೂಗಲ್ ಸರ್ಚ್ ನಲ್ಲಿ ನೋಡಿದ್ದೇವೆ ಈ ವೇಳೆ ವರದಿಗಳು ಲಭ್ಯವಾಗಿವೆ.
ಡಿಸೆಂಬರ್ 2, 2022ರ ಎಬಿಪಿ ಲೈವ್ ವರದಿ ಪ್ರಕಾರ, ಡೆಹ್ರಾಡೂನ್ ಪ್ರಸಿದ್ಧ ಪಲ್ಟಾನ್ ಮಾರುಕಟ್ಟೆಗೆ ಕೇಸರಿ ಬಣ್ಣ, ಕಾಂಗ್ರೆಸ್ ವಿರೋಧ ಎಂದಿದೆ. ಈ ಸುದ್ದಿಯಲ್ಲಿ ಡೆಹ್ರಾಡೂನ್ ಅತ್ಯಂತ ಹಳೆಯ ಮಾರುಕಟ್ಟೆ ಪಲ್ಟನ್ ಬಜಾರ್ ಅನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಕೇಸರಿ ಅಂದರೆ ಕಿತ್ತಳೆ ಬಣ್ಣ ಬಳಿಯಲಾಗುವುದು. ಮಾರುಕಟ್ಟೆ ಅಂಗಡಿಗಳ ಬೋರ್ಡ್ ಗಳು ಮತ್ತು ಅಂಗಡಿಗಳ ಮೇಲೆ ಅಳವಡಿಸಲಾದ ಶೆಡ್ ಗಳು ಕೇಸರಿ ಬಣ್ಣದಲ್ಲಿ ಕಾಣಲಿವೆ. ಇದನ್ನು ಕಾಂಗ್ರೆಸ್ ವಿರೋಧ ಮಾಡಿದ್ದು, ಬಿಜೆಪಿ ಒಂದು ಪಕ್ಷದ ಧ್ವಜವನ್ನು ಹಿಡಿದಿರುವುದು ದುರದೃಷ್ಟಕರ, ಮಾರುಕಟ್ಟೆಗೆ ಉತ್ತರಾಖಂಡದ ಆಚಾರ ಮತ್ತು ಸಂಪ್ರದಾಯಗಳಿಗೆ ಸಂಬಂಧಿಸಿದ ಬಣ್ಣವನ್ನು ನೀಡಬೇಕು ಎಂದು ಆಗ್ರಹಿಸಿದೆ ಎಂದಿದೆ. ಇದೇ ವರದಿಯಲ್ಲಿ ಮಾರುಕಟ್ಟೆಯ ಅಂಗಡಿಗಳ ಸೈನ್ ಬೋರ್ಡ್, ಅಂಗಡಿಗಳ ಮೇಲಿನ ಶೇಡ್ ಕಿತ್ತಳೆ ಬಣ್ಣದ್ದಾಗಿಸಲು ಸ್ಮಾರ್ಟ್ ಸಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ, ಸ್ಮಾರ್ಟ್ ಸಿಟಿ ಯೋಜನೆಯಡಿ ಸಭೆ ಕರೆಯಲಾಗಿದ್ದು, ಮೇಯರ್ ಸುನಿಲ್ ಉನಿಯಾಲ್ ಗಾಮಾ, ಉಪ ಮೇಯರ್, ಶಾಸಕರು ಮತ್ತು ಉದ್ಯಮಿಗಳು ಇದರಲ್ಲಿ ಉಪಸ್ಥಿತರಿದ್ದರು. ಡೆಹ್ರಾಡೂನ್ನ ಪಲ್ಟಾನ್ ಮಾರುಕಟ್ಟೆ ಮತ್ತು ಅದರೊಂದಿಗೆ ಇತರ ಸಣ್ಣ ಮಾರುಕಟ್ಟೆಗಳ ಬಣ್ಣ ಹೇಗಿರಬೇಕು ಎಂದು ಸಭೆಯಲ್ಲಿ ಚರ್ಚಿಸಲಾಯಿತು. ಕೊನೆಗೆ ಕೇಸರಿ ಬಣ್ಣ ಅಂದರೆ ಕಿತ್ತಳೆ ಬಣ್ಣಕ್ಕೆ ಒಪ್ಪಿಗೆ ಸಿಕ್ಕಿದ್ದು, ಸಲಹಾ ಸಮಿತಿ ಸಭೆಯಲ್ಲಿ ಸೈನ್ ಬೋರ್ಡ್ ಹಾಗೂ ಶೇಡ್ ಆರೆಂಜ್ ಬಣ್ಣ ಎಂದು ತೀರ್ಮಾನಿಸಲಾಯಿತು ಎಂದಿದೆ.
ಡಿಸೆಂಬರ್ 2, 2022ರ ಇಟಿವಿ ಭಾರತ್ ವರದಿಯಲ್ಲಿ, ಡೆಹ್ರಾಡೂನ್ ಪಲ್ಟಾನ್ ಬಜಾರ್ ಗೆ ಕೇಸರಿ ಬಣ್ಣ ಎಂದಿದೆ. ಡೆಹ್ರಾಡೂನ್ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ, ಪ್ರಾಧಿಕಾರವು ಅಂಗಡಿಗಳಿಗೆ, ಮಾರುಕಟ್ಟೆಗೆ ಕೇಸರಿ ಬಣ್ಣ ಕೊಡಲು ತೀರ್ಮಾನಿಸಿದೆ. ಡೆಹ್ರಾಡೂನ್ ಸ್ಮಾರ್ಟ್ ಸಿಟಿ ಯೋಜನೆಯಡಿ ಪಲ್ಟನ್ ಬಜಾರ್ನಲ್ಲಿರುವ ಅಂಗಡಿಗಳಿಗೆ ಕೇಸರಿ ಬಣ್ಣ ಬಳಿಯಲು ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆ ಈಗಾಗಲೇ ವಿವಾದಕ್ಕೆ ಸಿಲುಕಿದ್ದು, ಈ ನಿರ್ಧಾರವು ಸಂಚಲನವನ್ನು ಹೆಚ್ಚಿಸಿದೆ. ಬಿಜೆಪಿಯು ಮಾರುಕಟ್ಟೆಯನ್ನು ಕೇಸರಿಮಯಗೊಳಿಸಲು ಸಂಚು ನಡೆಸುತ್ತಿದೆ ಎಂದು ಕಾಂಗ್ರೆಸ್ ಮತ್ತೆ ವಾಗ್ದಾಳಿ ನಡೆಸಿದೆ ಎಂದಿದೆ.
ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ಆ ಬಳಿಕ ನಾವು ಕೇಸರಿ ಬಣ್ಣ/ಬೋರ್ಡ್ ಗಳನ್ನು ಕೇಸರಿ ಮಾಡುವ ಆದೇಶ ಜಾರಿಗೆ ಬಂದಿದೆಯೇ ಎಂಬುದನ್ನು ಪರಿಶೀಲಿಸಿದ್ದೇವೆ. ಈ ಸಂದರ್ಭದಲ್ಲಿ ಕೆಲವು ಯೂಟ್ಯೂಬರ್ ಗಳು ಮಾಡಿದ ವೀಡಿಯೋ ಯೂಟ್ಯೂಬ್ ನಲ್ಲಿ ಲಭ್ಯವಾಗಿದ್ದು ಪಲ್ಟಾನ್ ಬಜಾರ್ ಅಂಗಡಿಗಳ ಬೋರ್ಡ್ ಗಳು ಕೇಸರಿ ಬಣ್ಣಕ್ಕೆ ತಿರುಗಿರುವುದನ್ನು ಹೇಳಿವೆ. ಅವುಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
Conclusion
ಈ ಪುರಾವೆಗಳ ಪ್ರಕಾರ, ಡೆಹ್ರಾಡೂನ್ ಪಲ್ಟಾನ್ ಬಜಾರ್ ನಲ್ಲಿ ಕೇಸರಿ ಬೋರ್ಡ್ ಗಳನ್ನು ಅಂಗಡಿಗಳಿಗೆ ಅಳವಡಿಸುವ ತೀರ್ಮಾನ ಹಿಂದೂಗಳದ್ದಲ್ಲ, ಅದು ಸ್ಮಾರ್ಟ್ ಸಿಟಿ ಸಮಿತಿಯದ್ದಾಗಿತ್ತು. ಇದನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿತ್ತು ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಆದ್ದರಿಂದ ವೈರಲ್ ಹೇಳಿಕೆಯು ಭಾಗಶಃ ತಪ್ಪಾಗಿದೆ.
Also Read: ಸೋನಿಯಾ ಗಾಂಧಿ ಕೈಯಲ್ಲಿ ಸಿಗರೇಟ್ ಹಿಡಿದಿರುವ ಎಐ ಫೋಟೋ ವೈರಲ್
Result: Partly False
Our Sources
Report By ABP Live, Dated: December 2, 2022
Report By ETV Bharat, Dated: December 2, 2022
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.