Authors
ಯುವತಿಯೊಬ್ಬರು ಹಿಂದೂ ಭಜನೆ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೆಲವರು ಇವರನ್ನು ಗಾಯಕ ಮಹಮ್ಮದ್ ರಫಿ ಮೊಮ್ಮಗಳು ಎಂದು ಹೇಳಲಾಗಿದೆ.
“ಹರಿನಾಮ ಸಂಕೀರ್ತನೆ ಮಾಡುತ್ತಿರುವ ಈಕೆ ಹಣೆ ಮೇಲೆ ಬೊಟ್ಟು ಇಟ್ಟು, ಕೈಗೆ ಬಳೆ ಹಾಕಿ ಸಂಕೀರ್ತನೆ ಮಾಡುತ್ತಿದ್ದಾರೆ. ಇವರು ಹಿಂದೂ ಹೆಣ್ಣುಮಗಳು ಅಂದಕೊಂಡರೆ ತಪ್ಪು ಅವರು ಪ್ರಸಿದ್ಧ ಮುಸ್ಲಿಂ ಗಾಯಕ ಮಹಮ್ಮದ್ ರಫಿ ಮೊಮ್ಮಗಳು. ಇವರ ನಡೆ ಹಿಂದೂ ಸ್ತ್ರೀಯರೂ ನಾಚಿಕೆ ಪಡುವ ರೀತಿ ಇದೆ. ಫ್ಯಾಶನ್ ಹಿಂದೆ ಬಿದ್ದಿರುವ ಹಿಂದೂ ಹೆಣ್ಮಕ್ಕಳು ಇವರನ್ನು ನೋಡಿ ಕಲಿಯುವುದು ತುಂಬಾ ಮುಖ್ಯ” ಎಂದು ಫೇಸ್ಬುಕ್ ನಲ್ಲಿ ಹೇಳಲಾದ ಪೋಸ್ಟ್ ನಲ್ಲಿ ಬರೆಯಲಾಗಿದೆ.
Fact Check
ವೈರಲ್ ವೀಡಿಯೋ ಕುರಿತು ಸತ್ಯಶೋಧನೆ ನಡೆಸಿದ್ದು, ಇದಕ್ಕಾಗಿ ಗೂಗಲ್ನಲ್ಲಿ ಮಹಮ್ಮದ್ ರಫಿ, ಹಿಂದೂ, ಗ್ರಾಂಡ್ ಡಾಟರ್ ಎಂದು ಕೀವರ್ಡ್ ಸರ್ಚ್ ಮಾಡಲಾಗಿದೆ. ಈ ವೇಳೆ ಕೆಲವೊಂದು ಮಾಹಿತಿಗಳು ಲಭ್ಯವಾಗಿವೆ.
ಸರ್ಚ್ ವೇಳೆ ಗೀತಾಂಜಲಿ ರಾಯ್ ಅಫೀಶಿಯಲ್ ಎನ್ನುವ ಯೂಟ್ಯೂಬ್ ಚಾನೆಲ್ ಲಭ್ಯವಾಗಿದ್ದು, ಇದನ್ನು ಪರಿಶೀಲಿಸಿದಾಗ ಮೂಲ ವೀಡಿಯೋ ಪತ್ತೆಯಾಗಿದೆ. 2013 ಎಪ್ರಿಲ್ 14ರಂದು ಈ ವೀಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಜೊತೆಗೆ ಅದರ ಮಾಹಿತಿಯಲ್ಲಿ ಗೀತಾಂಜಲಿ ರಾಯ್ ಅವರ ಹಾಡಿನ ಪ್ರಸ್ತುತಿಯನ್ನು ಚಿನ್ಮಯ ಮಿಷನ್ ಆಯೋಜಿಸಿದೆ ಎಂದು ಬರೆಯಲಾಗಿದೆ.
ಜೊತೆಗೆ ಇದೇ ಸರ್ಚ್ ನಲ್ಲಿ ಗೀತಾಂಜಲಿ ರಾಯ್ ಅವರ ಯೂಟ್ಯೂಬ್ ಚಾನೆಲ್ನಲ್ಲಿ ರೇಡಿಯೋ ಎಫ್ ಎಂ ನಡೆಸಿದ ತಮ್ಮ ಸಂದರ್ಶನದ ವೀಡಿಯೋವನ್ನು ಹಾಕಿದ್ದಾರೆ. 2019 ಆಗಸ್ಟ್ 11 ರಂದು ಅಪ್ಲೋಡ್ ಮಾಡಲಾದ ಈ ವಿಡಿಯೋದಲ್ಲಿ ಅವರು ತಮ್ಮನ್ನು ಮಹಮ್ಮದ್ ರಫಿಯವರ ಮೊಮ್ಮಗಳು ಎಂದು ತಪ್ಪಾಗಿ ಪ್ರಚಾರ ಮಾಡುತ್ತಿರುವುದನ್ನು ಹೇಳಿದ್ದಾರೆ.
ಇನ್ನು ಗೀತಾಂಜಲಿ ರಾಯ್ ಅವರ ಬಗ್ಗೆ ಸರ್ಚ್ ಮಾಡಲಾಗಿದ್ದು, ಅವರ ವೆಬ್ಸೈಟ್ ಅನ್ನು ನೋಡಲಾಗಿದೆ. ಇದರಲ್ಲಿ ಅವರು ತಮ್ಮ ಸ್ವವಿರಗಳನ್ನು ಬರೆದುಕೊಂಡಿದ್ದಾರೆ. ಅವರು ಮಹಾರಾಷ್ಟ್ರ ಮೂಲದವರಾಗಿದ್ದು ಭಕ್ತಿಗೀತೆ, ಗಜಲ್ಗಳ ಗಾಯಕಿ ಎಂದು ಹೇಳಿಕೊಂಡಿದ್ದಾರೆ.
Also Read: ಹಿಂದೂಗಳಲ್ಲದವರನ್ನು ದೇಗುಲ ಆಡಳಿತಕ್ಕೆ ನೇಮಿಸುವಂತಿಲ್ಲ: ಸುಪ್ರೀಂ ತೀರ್ಪು?
Conclusion
ಸತ್ಯಶೋಧನೆಯಲ್ಲಿ ಕಂಡು ಬಂದಂತೆ ವೀಡಿಯೋದಲ್ಲಿ ಕಾಣಿಸಿರುವವರು ಮಹಮ್ಮದ್ ರಫಿ ಅವರ ಮಗಳಲ್ಲ ಅವರು ಗಾಯಕಿ ಗೀತಾಂಜಲಿ ರಾಯ್ ಎಂಬವರಾಗಿದ್ದಾರೆ.
Result: False
Our sources
Personal website of Devotional Singer Gitanjali Rai
A Video posted by Gitanjali Rai’s official YouTube page on April 14, 2013
A Video posted by Gitanjali Rai’s official YouTube page on August 11, 2019
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.