Fact Check: ಎಬಿಪಿ-ಸಿಓಟರ್ ಸಮೀಕ್ಷೆ ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತ ಎಂದು ಹೇಳಿದೆಯೇ, ಇಲ್ಲ ಇದೊಂದು ತಿರುಚಿದ ಚಿತ್ರ!

ಬಿಜೆಪಿಗೆ ಬಹುಮತ, ಎಬಿಪಿ ಸಿಓಟರ್‌ ಸಮೀಕ್ಷೆ, ತಿರುಚಿದ ಚಿತ್ರ,

Claim
ಎಬಿಪಿ-ಸಿಓಟರ್ ಸಮೀಕ್ಷೆ ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತ ಎಂದು ಹೇಳಿದೆ

Fact
ಎಬಿಪಿ-ಸಿ ಓಟರ್ ಸಮೀಕ್ಷೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಎಂದು ಹೇಳಿದೆ, ಹೊರತಾಗಿ ಬಿಜೆಪಿಗೆ ಬಹುಮತ ಎಂದು ಹೇಳಿಲ್ಲ

ಎಬಿಪಿ ಸಿ ಓಟರ್‌ ಸಮೀಕ್ಷೆಯಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತ ಬರಲಿದೆ ಎಂದು ಹೇಳಲಾಗಿದೆ ಎನ್ನುವ ಸುದ್ದಿಯೊಂದು ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಟ್ವಿಟರ್‌ ನಲ್ಲಿ ಕಂಡುಬಂದ ಈ ಕ್ಲೇಮ್‌ ಹೀಗಿದೆ “ದಕ್ಷ ನಾಯಕತ್ವ, ಗಟ್ಟಿ ಆಡಳಿತ, ನಿಷ್ಠಾವಂತ ಕಾರ್ಯಕರ್ತರು, ಹಿಂದುತ್ವದ ಬೆಂಬಲದಲ್ಲಿ ಮತ್ತೊಮ್ಮೆ ರಾಜ್ಯದಲ್ಲಿ ಕಮಲ ಅರಳಲಿದೆ.” ಎಂದು ಹೇಳಲಾಗಿದ್ದು, ಇದರೊಂದಿಗೆ ಲಗತ್ತಿಸಲಾದ ಚಿತ್ರದಲ್ಲಿ ಬಿಜೆಪಿಗೆ 115-127 ಸ್ಥಾನ, ಕಾಂಗ್ರೆಸ್ಗೆ 68-90 ಸ್ಥಾನ, ಜೆಡಿಎಸ್‌ಗೆ 23-25 ಸ್ಥಾನ, ಇತರರಿಗೆ 0-2 ಸ್ಥಾನ ಎಂದು ಹೇಳಲಾಗಿದೆ. ಈ ಟ್ವೀಟ್‌ ಅನ್ನು ಇಲ್ಲಿ ನೋಡಬಹುದು.

ಎಬಿಪಿ-ಸಿಓಟರ್ ಸಮೀಕ್ಷೆ ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತ ಎಂದು ಹೇಳಿದೆ

ಈ ಕುರಿತು ಸತ್ಯಶೋಧನೆಗೆ ನ್ಯೂಸ್‌ಚೆಕರ್‌ ಮುಂದಾಗಿದ್ದು, ಇದು ತಿರುಚಲಾದ ಚಿತ್ರ ಎಂದು ಕಂಡುಬಂದಿದೆ.

Fact Check/ Verification

ಸತ್ಯಶೋಧನೆಗಾಗಿ, ಗೂಗಲ್ ಕೀವರ್ಡ್ ಸರ್ಚ್ ನಡೆಸಲಾಗಿದ್ದು, ಈ ವೇಳೆ ಹಲವು ಫಲಿತಾಂಶಗಳು ಲಭ್ಯವಾಗಿವೆ.

ಮಾರ್ಚ್‌ 29, 2023ರಂದು ಎಬಿಪಿ ಲೈವ್‌ ವರದಿಯ ಪ್ರಕಾರ, “ಎಬಿಪಿ-ಸಿಓಟರ್ ಕರ್ನಾಟಕ ಸಮೀಕ್ಷೆ ಕಾಂಗ್ರೆಸ್‌ ಗೆಲುವು ಮತ್ತು ಸಿದ್ದರಾಮಯ್ಯ ಅವರನ್ನು ಜನ, ಸಿಎಂ ಸ್ಥಾನಕ್ಕೆ ಉನ್ನತ ಆಯ್ಕೆಯಾಗಿ ಪರಿಗಣಿಸುತ್ತಿರುವುದಾಗಿ ಹೇಳಿದೆ. ಈ ಸುದ್ದಿಯಲ್ಲಿ ಒಟ್ಟು 224 ವಿಧಾನಸಭೆ ಸ್ಥಾನಗಳ ಪೈಕೆ ಕಾಂಗ್ರೆಸ್‌ 115-127 ಸ್ಥಾನ, ಬಿಜೆಪಿ 68-80 ಸ್ಥಾನ, ಜೆಡಿಎಸ್‌ 23-35 ಸ್ಥಾನ, ಇತರರು 0-2 ಸ್ಥಾನ ಪಡೆಯುವುದಾಗಿ ಹೇಳಲಾಗಿದೆ.

ಇದನ್ನೇ ಎಬಿಪಿ ನ್ಯೂಸ್‌  ಮಾರ್ಚ್‌ 29, 2023ರಂದು ಟ್ವೀಟ್‌ ಮಾಡಿದ್ದು ಅದರ ವಿವರ ಇಲ್ಲಿದೆ.

29 ಮಾರ್ಚ್‌ 2023ರಂದು ದಿ ಕ್ವಿಂಟ್‌ ಕೂಡ ಈ ಸಮೀಕ್ಷೆ ಬಗ್ಗೆ ವರದಿ ಮಾಡಿದ್ದು, “ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತ ಹೊಂದುವುದಾಗಿ ಎಬಿಪಿ-ಸಿಓಟರ್‌ ಸಮೀಕ್ಷೆ ಹೇಳಿದೆ” ಎಂದಿದೆ. ಇದರೊಂದಿಗೆ ಸಮೀಕ್ಷೆಯ ಸಂಖ್ಯಾವಾರು ಲೆಕ್ಕಾಚಾರಗಳನ್ನು ಹಂಚಿಕೊಂಡಿದೆ.

29 ಮಾರ್ಚ್‌ 2023ರ ವಿಜಯ ಕರ್ನಾಟಕದ ವರದಿಯಲ್ಲೂ “ಕಾಂಗ್ರೆಸ್‌ಗೆ 115-127 ಸ್ಥಾನ, ಬಿಜೆಪಿ 68-80 ಸ್ಥಾನ, ಜೆಡಿಎಸ್‌ 23-35 ಸ್ಥಾನ ಪಡೆಯುವುದಾಗಿ ಮತ್ತು ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದಾಗಿ ಎಬಿಪಿ ಸಿಓಟರ್‌ ಸಮೀಕ್ಷೆ ಹೇಳಿದೆ” ಎಂದಿದೆ.

ಪಬ್ಲಿಕ್‌ ಟೀವಿ ಕೂಡ ಸಮೀಕ್ಷೆ ಬಗ್ಗೆ ಮಾರ್ಚ್ 29, 2023ರಂದು ವರದಿ ಮಾಡಿದ್ದು, ಈ ಕುರಿತ ಟ್ವೀಟ್‌ ಇಲ್ಲಿದೆ.

ಇನ್ನು ಕ್ಲೇಮಿನಲ್ಲಿ ಹಾಕಿರುವ ಚಿತ್ರವನ್ನು ಕೂಲಂಕುಷವಾಗಿ ಪರಿಶೀಲನೆ ನಡಸಿದಾಗ, ಬಿಜೆಪಿ, ಕಾಂಗ್ರೆಸ್‌ ಕೆಳಭಾಗದ ಬಾಕ್ಸ್‌ನಲ್ಲಿ ಸಂಖ್ಯೆಗಳನ್ನು ಬದಲಾಯಿಸಿರುವುದು ಕಂಡುಬಂದಿದೆ ಮತ್ತು ಎಬಿಪಿ ನ್ಯೂಸ್‌ ಲೋಗೋವನ್ನು ತಲೆಕೆಳಗಾಗಿ ಕೊಡಲಾಗಿದೆ. ಜೊತೆಗೆ ಡಿಜಿಟಲ್‌ ಆಗಿ ಚಿತ್ರವನ್ನು ತಿರುಚಲಾಗಿದೆ. ಇದನ್ನು ಇಲ್ಲಿ ನೋಡಬಹುದು.

ಸತ್ಯ ಪರಿಶೀಲನೆ ಭಾಗವಾಗಿ ಮಾಹಿತಿಗೆ ಎಬಿಪಿ ನ್ಯೂಸ್‌ ಸಂಪರ್ಕಿಸಲು ನ್ಯೂಸ್‌ಚೆಕರ್‌ ಪ್ರಯತ್ನಿಸಿದ್ದು, ಪ್ರತಿಕ್ರಿಯೆ ಲಭ್ಯವಾದ ನಂತರ ಇಲ್ಲಿ ಪ್ರಕಟಿಸಲಾಗುವುದು.

Conclusion

ಈ ಸತ್ಯಶೋಧನೆಯ ಪ್ರಕಾರ, ಎಬಿಪಿ-ಸಿ ಓಟರ್ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಎಂದು ಹೇಳಲಾಗಿದ್ದು, ಕ್ಲೇಮಿನಲ್ಲಿ ಹೇಳಿದರ ರೀತಿ ಬಿಜೆಪಿಗೆ ಬಹುಮತ ಎಂದು ಹೇಳಿಲ್ಲ. ಜೊತೆಗೆ ಕ್ಲೇಮಿನಲ್ಲಿ ಕಂಡುಬಂದ ಚಿತ್ರ ತಿರುಚಲಾದ ಚಿತ್ರ ಎಂದು ಕಂಡುಬಂದಿದೆ.

Results: Altered Photo/Video

Our Sources:

Report by ABP live, Dated: March 29, 2023

Report by The Quint, Dated: March 29, 2023

Report by Vijayakarnataka, Dated: March 29, 2023

Tweet By ABP Live, Dated: March 29, 2023

Tweet By Public Tv, Dated: March 29, 2023


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.