Authors
Claim
ಬಿಪರ್ ಜಾಯ್ ಚಂಡಮಾರುತದಿಂದಾಗಿ ಗುಜರಾತಲ್ಲಿ ಸೇತುವೆಯ ಮೇಲೆ ಭಾರೀ ತೆರೆ ಅಪ್ಪಳಿಸಿದೆ.
ಇಂತಹುದೇ ಹೇಳಿಕೆಯಿರುವ ಟ್ವೀಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ and ಇಲ್ಲಿ ನೋಡಬಹುದು.
Fact
ನ್ಯೂಸ್ಚೆಕರ್ ವೀಡಿಯೊದ ಕೀಫ್ರೇಮ್ಗಳ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದು, ಈ ವೇಳೆ ಆಗಸ್ಟ್ 26, 2017 ರಂದು ದ್ವೀಪಡೈರಿ ಲಕ್ಷದ್ವೀಪ ಅಪ್ಲೋಡ್ ಮಾಡಿದ ಈ ಯೂಟ್ಯೂಬ್ ವೀಡಿಯೊ ಲಭ್ಯವಾಗಿದೆ. ಆಗಸ್ಟ್ 23, 2017 ರಂದು ಮಿನಿಕೋಯ್ ದ್ವೀಪದ ಪೂರ್ವ ಜೆಟ್ಟಿಯ ಮೇಲೆ ಬೃಹತ್ ಅಲೆಗಳು ಬಡಿದಿವೆ ಎಂದು ಇದರಲ್ಲಿ ಹೇಳಲಾಗಿದೆ. ಇದೇ ರೀತಿಯ ಯೂಟ್ಯೂಬ್ ವೀಡಿಯೊವನ್ನು ಇಲ್ಲಿ ನೋಡಬಹುದು.
ಈ ಸ್ಕ್ರೀನ್ ಶಾಟ್ಗಳ ಹೋಲಿಕೆಯಿಂದ ವೈರಲ್ ವೀಡಿಯೊವು ಒಂದೇ ಹವಾಮಾನದ ಘಟನೆಯಾಗಿದೆ ಎಂಬುದನ್ನು ದೃಢಪಡಿಸುತ್ತದೆ.
Also read: ತೆಂಗಿನ ಮರ ತೂಗಾಡಿದ್ದು ಬಿಪರ್ ಜಾಯ್ ಚಂಡಮಾರುತ ಕಾರಣ ಅಲ್ಲ, ಇದು ಸುಳ್ಳು!
ಮಿನಿಕೋಯ್ ಲಕ್ಷದ್ವೀಪದ ದಕ್ಷಿಣದ ದ್ವೀಪ ಎಂಬುದನ್ನು ನಾವು ತಿಳಿದುಕೊಂಡಿದ್ದೇವೆ. ಗೂಗಲ್ ನಕ್ಷೆಗಳಲ್ಲಿ ಮಿನಿಕೋಯ್ ದ್ವೀಪದ ಪೂರ್ವ ಜೆಟ್ಟಿಯ ಸ್ಥಳಕ್ಕೆ ಲಗತ್ತಿಸಲಾದ ಚಿತ್ರಗಳನ್ನು ಕೆಲವು ಬಳಕೆದಾರರು ತೆಗೆದಿದ್ದು, ಇದು ವೀಡಿಯೋದಲ್ಲಿ ಕಾಣುವ ಅದೇ ಸ್ಥಳ ಎಂದು ಹೇಳುತ್ತದೆ. ವೈರಲ್ ಆಗಿರುವ ವೀಡಿಯೋವನ್ನು ತೌಕ್ತೆ ಚಂಡಮಾರುತ, ಓಚಿ ಚಂಡಮಾರುತ, ಯಾಸ್ ಚಂಡಮಾರುತ ಮತ್ತು ಮಲೇಷ್ಯಾದಲ್ಲಿ ಪ್ರತಿಕೂಲ ಹವಾಮಾನ ಘಟನೆಯೊಂದಿಗೆ ಸಂಪರ್ಕಿಸುವ ಇತರ ಸುಳ್ಳು ಹೇಳಿಕೆಗಳೊಂದಿಗೂ ಈ ಹಿಂದೆ ಹರಡಿಸಲಾಗಿದೆ ಎಂದು ತಿಳಿದುಬಂದಿದೆ.
Result: False
Our Sources
Youtube video, Dweepdiary Lakshadweep, August 26, 2017
Google Maps image
(ಈ ಮೂಲ ಲೇಖನವನ್ನು ನ್ಯೂಸ್ಚೆಕರ್ ಇಂಗ್ಲಿಷ್ನಲ್ಲಿ ಪ್ರಕಟಿಸಲಾಗಿದ್ದು, ಅದನ್ನು ಇಲ್ಲಿ ಓದಬಹುದು)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.