Authors
Claim
ಬಿಪರ್ ಜಾಯ್ ಚಂಡಮಾರುತದಿಂದಾಗಿ ತೆಂಗಿನ ಮರ ತೀವ್ರವಾಗಿ ತೂಗಾಡುತ್ತಿರುವ ದೃಶ್ಯ
ಈ ಟ್ವೀಟ್‌ನ ಆರ್ಕೈವ್ ಆವೃತ್ತಿ ಇಲ್ಲಿದೆ.
Fact
ಈ ಬಗ್ಗೆ ಸತ್ಯಶೋಧನೆಗೆ ನ್ಯೂಸ್‌ಚೆಕರ್ ಕೀಫ್ರೇಮ್‌ಗಳನ್ನು ತೆಗೆದು Google lens ಮೂಲಕ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದು, ಈ ವೇಳೆ @anish_kohli ಟ್ವೀಟ್ ಖಾತೆಯಲ್ಲಿ ಆಗಸ್ಟ್ 6, 2020ರಂದು ಮಾಡಿದ ಟ್ವೀಟ್ ಲಭ್ಯವಾಗಿದೆ. ಇದರಲ್ಲಿ ತೆಂಗಿನ ಮರ ತೂಗಾಡುತ್ತಿರುವ ದೀರ್ಘ ದೃಶ್ಯವಿದೆ. ಇದೇ ರೀತಿ ಆಗಸ್ಟ್ 2022ರಂದು ಹಂಚಿಕೊಂಡಿರುವ ಇದೇ ದೃಶ್ಯದ ಆವೃತ್ತಿಗಳು ಇಲ್ಲಿ ಮತ್ತು ಇಲ್ಲಿದೆ.
Also Read:ದಾಂಡೇಲಿಯ ಪ್ರವಾಹದಲ್ಲಿ ಕೊಚ್ಚಿ ಹೋದ ಕಾರು, ಈ ಘಟನೆ ನಿಜವೇ?
ಆಗಸ್ಟ್ 6, 2022ರಂದು ಮುಂಬೈ ಮಿರರ್ ಮಾಡಿದ ವರದಿ ಪ್ರಕಾರ, “ಮುಂಬೈನಲ್ಲಿ ಬಲವಾದ ಗಾಳಿಯ ಪ್ರಭಾವವನ್ನು ತೋರಿಸುವ ದೃಶ್ಯವೊಂದರಲ್ಲಿ, ತೆಂಗಿನ ಮರವೊಂದು ಬುಧವಾರ ಅಪಾಯಕಾರಿಯಾಗಿ ತೂಗಾಡುತ್ತಿರುವುದು ಕಂಡುಬಂದಿದೆ. ನಿರಂತರ ಮಳೆ ಮುಂಬೈನ ಎಲ್ಲ ಚಟುವಟಿಕೆಗಳನ್ನು ಕುಂಠಿತಗೊಳಿಸುವುದರೊಂದಿಗೆ, ನಗರವು ಬುಧವಾರದಂದು ಕೇವಲ 12 ಗಂಟೆಗಳಲ್ಲಿ ಈ ಋತುವಿನಲ್ಲೇ ಅತಿ ವೇಗವಾದ ಗಾಳಿಯೊಂದಿಗೆ, ಅತಿ ಹೆಚ್ಚು ಮಳೆಯನ್ನು ಪಡೆದಿದೆ.” ಎಂದಿದೆ. ಈ ವರದಿಯೊಂದಿಗೆ ತೆಂಗಿನ ಮರ ತೂಗಾಡುತ್ತಿರುವ ದೃಶ್ಯದ ದೀರ್ಘ ಆವೃತ್ತಿಯನ್ನೂ ಹಾಕಲಾಗಿದೆ.
ಈ ಪ್ರಕಾರ, ಇದು ಬಿಪರ್ ಜಾಯ್ ಚಂಡಮಾರುತಕ್ಕೆ ಸಂಬಂಧ ಪಟ್ಟಿಲ್ಲ. ಇದು ಆಗಸ್ಟ್ 2020ರದ್ದಾಗಿದೆ.ಆದರೆ ಅಂದು ಹೀಗೆ ಮರ ತೂಗಾಡಿದ್ದು ಆಗಿನ ಯಾವುದಾದರೂ
ಚಂಡಮಾರುತದ ಕಾರಣದಿಂದಲೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನಮಗೆ ಸ್ವತಂತ್ರ್ಯವಾಗಿ ಸಾಧ್ಯವಾಗಿಲ್ಲ.
Result: False
Our Sources
Tweet By @anish_kohli, Dated August 6, 2020
Report By Mumbai Mirror, Dated August 6, 2020
(ಈ ಮೂಲ ಲೇಖನವನ್ನು ನ್ಯೂಸ್‌ಚೆಕರ್ ಇಂಗ್ಲಿಷ್‌ನಲ್ಲಿ ಪ್ರಕಟಿಸಲಾಗಿದ್ದು, ಇದನ್ನು ಇಲ್ಲಿ ಓದಬಹುದು)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.