Fact Check: ಪ್ರಧಾನಿ ನರೇಂದ್ರ ಮೋದಿ ಈಜಿಪ್ಟ್ ಭೇಟಿ ವೇಳೆ ಮುಸ್ಲಿಂ ಟೋಪಿ ಧರಿಸಿದ್ದರೇ, ಸತ್ಯ ಏನು?

ಪ್ರಧಾನಿ ನರೇಂದ್ರ ಮೋದಿ, ಮುಸ್ಲಿಂ ಟೋಪಿ, ಈಜಿಪ್ಟ್‌, ಬೊಹ್ರಾ ಮುಸ್ಲಿಂ ಸಮುದಾಯ

Claim

ಪ್ರಧಾನಿ ನರೇಂದ್ರ ಮೋದಿ ಇತ್ತೀಚಿನ ಈಜಿಪ್ಟ್‌ ಪ್ರವಾಸದ ವೇಳೆ ಮುಸ್ಲಿಂ ಟೋಪಿ ಹಾಕಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವಾಟ್ಸಾಪಿನಲ್ಲಿ ಕಂಡುಬಂದ ಮೆಸೇಜ್‌ನಲ್ಲಿ “ಇದು ಏನನ್ನು ತೋರಿಸುತ್ತದೆ ಮೋದಿ ಭಕ್ತರೇ.. ಹೊರ ದೇಶದಲ್ಲೊಂದು.. ಭಾರತದಲ್ಲಿ ಇನ್ನೊಂದು ನಾಟಕ ಇದು ಯಾರನ್ನು ಓಲೈಸುವುದು” ಎಂದಿದೆ.

ಪ್ರಧಾನಿ ಮೋದಿ ಈಜಿಪ್ಟ್ ಭೇಟಿ ವೇಳೆ ಮುಸ್ಲಿಂ ಟೋಪಿ ಧರಿಸಿದ್ದರೇ, ಸತ್ಯ ಏನು?
ವಾಟ್ಸಾಪ್‌ನಲ್ಲಿ ಕಂಡುಬಂದ ಮೆಸೇಜ್

ಇದೇ ರೀತಿಯ ಕ್ಲೇಮುಗಳು ಇಲ್ಲಿ ಮತ್ತು ಇಲ್ಲಿ ಕಂಡುಬಂದಿವೆ.

ಈ ಬಗ್ಗೆ ನ್ಯೂಸ್‌ಚೆಕರ್‌ ಸತ್ಯಶೋಧನೆ ನಡೆಸಿದ್ದು, ಇದೊಂದು ತಿರುಚಿದ ಚಿತ್ರ ಎಂದು ಕಂಡುಬಂದಿದೆ.

Fact

ನ್ಯೂಸ್‌ಚೆಕರ್‌ ಸತ್ಯಶೋಧನೆ ವೇಳೆ ರಿವರ್ಸ್ ಇಮೇಜ್‌ ಸರ್ಚ್ ನಡೆಸಿದೆ. ಈ ವೇಳೆ ಫಲಿತಾಂಶ ಲಭ್ಯವಾಗಿದೆ.

ಫೆಬ್ರವರಿ 10, 2023ರಂದು ಅಲ್ಜಾಮಿಯಾ ಟಸ್‌ ಸೈಫಿಯಾಹ್ (ದಾವೂದಿ ಬೊಹ್ರಾ ಸಮುದಾಯದ)ಅರೆಬಿಕ್‌ ಅಕಾಡೆಮಿ ಟ್ವೀಟ್ ಮಾಡಿದ್ದು, ಮುಂಬೈನಲ್ಲಿ ಹೊಸ ಕ್ಯಾಂಪಸ್ ಉದ್ಘಾಟನೆ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಸಮರ್ಪಿಸಿದೆ. ಈ ಕಾರ್ಯಕ್ರಮದ ಫೋಟೋಗಳನ್ನು ಟ್ವೀಟ್ ಒಳಗೊಂಡಿದೆ. ಇದು ಪ್ರಧಾನಿ ಮೋದಿ ಅವರ ಟ್ವೀಟ್ಗೆ ಪ್ರತಿಕ್ರಿಯೆಯಾಗಿದ್ದು ಈ ಟ್ವೀಟ್ ಇಲ್ಲಿದೆ.

Also Read: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಪುರಿ ಜಗನ್ನಾಥ ದೇಗುಲದ ಗರ್ಭಗೃಹಕ್ಕೆ ಪ್ರವೇಶಿಸಿದಂತೆ ತಡೆಯಲಾಯಿತೇ?

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 10, 2023ರಂದು ಮಾಡಿದ ಟ್ವೀಟ್ ಲಭ್ಯವಾಗಿದ್ದು, “ಮುಂಬೈನಲ್ಲಿ @jamea_saifiyah ನ ಹೊಸ ಕ್ಯಾಂಪಸ್‌ನ ಉದ್ಘಾಟನೆಯ  ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಂತೋಷವಾಗಿದೆ. @Dawoodi_Bohras” ಎಂದು ಟ್ವೀಟ್‌ ಮಾಡಿದ್ದಾರೆ. ಪ್ರಧಾನಿ ಮೋದಿ ಮುಸ್ಲಿಂ ಧರ್ಮೀಯರು ಹಾಕುವ ಟೋಪಿಹಾಕಿದ್ದಾರೆ ಎನ್ನಲಾದ ವೈರಲ್ ಫೋಟೋ ಕೂಡ ಇದರಲ್ಲಿದೆ. ಈ ಟ್ವೀಟ್‌ ಇಲ್ಲಿದೆ.

ಈ ಸಾಕ್ಷ್ಯಗಳ ಅನ್ವಯ ನಾವು ಗೂಗಲ್‌ ಕೀವರ್ಡ್ ಸರ್ಚ್ ಮಾಡಿದ್ದು, ಈ ವೇಳೆ ಮಾಧ್ಯಮ ವರದಿಗಳು ಲಭ್ಯವಾಗಿವೆ.

ಫೆಬ್ರವರಿ 10, 2023ರಂದು ಎನ್‌ಡಿಟಿವಿ ವರದಿ ಪ್ರಕಾರ, “ಪ್ರಧಾನಿ ನರೇಂದ್ರ ಮೋದಿ ಅವರು ದಾವೂದಿ ಬೊಹ್ರಾ ಮುಸ್ಲಿಂ ಸಮುದಾಯದ ಶಿಕ್ಷಣ ಕ್ಯಾಂಪಸ್ಸನ್ನು ಮುಂಬೈಯಲ್ಲಿ ಉದ್ಘಾಟಿಸಿದರು” ಎಂದಿದೆ.

ಪ್ರಧಾನಿ ಮೋದಿ ಈಜಿಪ್ಟ್ ಭೇಟಿ ವೇಳೆ ಮುಸ್ಲಿಂ ಟೋಪಿ ಧರಿಸಿದ್ದರೇ, ಸತ್ಯ ಏನು?
ಎನ್ ಡಿಟಿವಿ ವರದಿ

ಫೆಬ್ರವರಿ 10, 2023ರಂದು ಇಂಡಿಯಾ ಟುಡೇ ವರದಿಯಲ್ಲೂ ಪ್ರಧಾನಿ ಅವರು ಶಿಕ್ಷಣ ಕ್ಯಾಂಪಸ್ಸನ್ನು ಉದ್ಘಾಟಿಸಿದ ಬಗ್ಗೆ ಹೇಳಿದೆ.

Also Read: ಕೆಎಸ್ಆರ್ಟಿಸಿ ಬಸ್‌ ಗೆ ಕಿಟಕಿ ಮೂಲಕ ಹತ್ತುವ ವೇಳೆ ಮಹಿಳೆಯ ಕೈ ತುಂಡಾಗಿದೆಯೇ, ಸತ್ಯ ಏನು?

ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಮುಸ್ಲಿಮರ ಟೋಪಿ ಧರಿಸಿದ್ದಾರೆ ಎನ್ನುವ ಫೋಟೋ ತಿರುಚಿದ್ದಾಗಿದೆ. ಮತ್ತು ಫೋಟೋದಲ್ಲಿ ಕಾಣಿಸುವ ಸಂದರ್ಭ ಈಜಿಪ್ಟಿನದ್ದಲ್ಲ ಬದಲಾಗಿ ಅದು ಬೊಹ್ರಾ ಸಮುದಾಯದ ಶಿಕ್ಷಣ ಕ್ಯಾಂಪಸ್ಸನ್ನು ಮುಂಬೈನಲ್ಲಿ ಉದ್ಘಾಟಿಸಿದ ಸಮಯದ್ದಾಗಿದೆ.

Result: Altered Media

Our Sources

Tweet By Aljamea-tus-Saifiyah, Dated: February 10, 2023

Tweet By Narendra Modi, Dated: February 10, 2023

Report By NDTV, Dated: February 10, 2023

Report By India Today Dated: February 10, 2023


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.