Sunday, December 21, 2025

Fact Check

Fact Check: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಪುರಿ ಜಗನ್ನಾಥ ದೇಗುಲದ ಗರ್ಭಗೃಹಕ್ಕೆ ಪ್ರವೇಶಿಸಿದಂತೆ ತಡೆಯಲಾಯಿತೇ?

Written By Saurabh Pandey, Translated By Ishwarachandra B G, Edited By Chayan Kundu
Jun 27, 2023
banner_image

Claim
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಪುರಿ ಜಗನ್ನಾಥ ದೇಗುಲದ ಗರ್ಭಗೃಹಕ್ಕೆ ಪ್ರವೇಶಿಸಿದಂತೆ ತಡೆಯಲಾಯಿತು

Fact
ಗರ್ಭಗೃಹ ಪ್ರವೇಶಿಸದೆ ಹೊರಗಿನಿಂದಲೇ ದರ್ಶನ ಮಾಡುವುದು ರಾಷ್ಟ್ರಪತಿಯವರ ಆಯ್ಕೆಯಾಗಿತ್ತು ಎಂದು ರಾಷ್ಟ್ರಪತಿಯವರ ಕಚೇರಿ ನ್ಯೂಸ್‌ಚೆಕರ್‌ಗೆ ತಿಳಿಸಿದೆ. ರಾಷ್ಟ್ರಪತಿಯವರು ಬಾಲ್ಯದಿಂದಲೂ ಜಗನ್ನಾಥನ ಮೇಲೆ ಅಪಾರ ನಂಬಿಕೆ ಹೊಂದಿದ್ದು, ಸಾಲಿಗ್ರಾಮ ಶಿಲೆಯಲ್ಲಿ ಆಳವಾದ ನಂಬಿಕೆ ಹೊಂದಿದ್ದಾರೆ. ದ್ರೌಪದಿ ಮುರ್ಮು ಅವರನ್ನು ಯಾರೂ ತಡೆದಿರಲಿಲ್ಲ. ಅವರು ಸ್ವತಃ ಹೊರಗಿನಿಂದಲೇ ದರ್ಶಿಸುವ ನಿರ್ಧಾರ ತಳೆದಿದ್ದಾರೆ ಎಂದು ದೇವಾಲಯದ ಟ್ರಸ್ಟ್‌ ಕೂಡ ನಮಗೆ ತಿಳಿಸಿದೆ.

ದೇಶದ ಪರಮೋಚ್ಛ ಹುದ್ದೆಗೆ ಆದಿವಾಸಿ ಮಹಿಳೆ ಏರಿದ್ದರೂ, ಇನ್ನೂ ದಲಿತರೆಂಬ ಕಾರಣಕ್ಕೆ ಅವರನ್ನು ಅಸ್ಪೃಶ್ಯತೆ ಆಚರಣೆಯೊಂದಿಗೆ ದೂರವಿಡಲಾಗುತ್ತಿದೆ ಎಂಬ ಆರೋಪ ಈಗ ಕೇಳಿಬಂದಿದೆ. ಪುರಿ ಜಗನ್ನಾಥ ದೇಗುಲದ ಗರ್ಭಗುಡಿ ಪ್ರವೇಶಕ್ಕೆ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ ಅವರನ್ನು ಹೋಗಲು ಬಿಡಲಾಗಿದೆ. ಆದರೆ ದಲಿತರೆಂಬ ಕಾರಣಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಬಿಟ್ಟಿಲ್ಲ ಎಂದು ಕ್ಲೇಮ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಟ್ವಿಟರ್ನಲ್ಲಿ ಕಂಡುಬಂದ ಈ ಕ್ಲೇಮಿನಲ್ಲಿ, “21 ನೇ ಶತಮಾನದಲ್ಲಿದ್ದರೂ ಕೂಡ ಜಾತಿಯ ಕೀಳು ಮನೋಭಾವನೆ ಇನ್ನೂ ಸಹ ಎಷ್ಟೊಂದು ಆಳವಾಗಿ ಬೇರೂರಿದೆ ನೋಡಿ. ರಾಷ್ಟ್ರದ ಪ್ರಥಮ ಪ್ರಜೆಗೆ ದೇವಸ್ಥಾನದ ಗರ್ಭಗುಡಿಗೆ ಜಾತಿಯ ಕಾರಣಕ್ಕಾಗಿ ಪ್ರವೇಶವಿಲ್ಲ.” ಎಂದು ಹೇಳಿದೆ. ಇದನ್ನು ಇಲ್ಲಿ ನೋಡಬಹುದು

Also Read: ಕೆಎಸ್ಆರ್ಟಿಸಿ ಬಸ್‌ ಗೆ ಕಿಟಕಿ ಮೂಲಕ ಹತ್ತುವ ವೇಳೆ ಮಹಿಳೆಯ ಕೈ ತುಂಡಾಗಿದೆಯೇ, ಸತ್ಯ ಏನು?

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಪುರಿ ಜಗನ್ನಾಥ ದೇಗುಲದ ಗರ್ಭಗೃಹಕ್ಕೆ ಪ್ರವೇಶಿಸಿದಂತೆ ತಡೆಯಲಾಯಿತೇ?

ಇದೇ ರೀತಿಯ ಹಲವು ಕ್ಲೇಮುಗಳು ದ್ರೌಪದಿ ಮುರ್ಮು ಅವರನ್ನು ದೇಗುಲದ ಗರ್ಭಗುಡಿಯೊಳಕ್ಕೆ ಪ್ರವೇಶಿಸಲು ನಿರಾಕರಿಸಲಾಗಿದೆ ಎಂದು ಹೇಳಿವೆ.

ಇಂತಹ ಕ್ಲೇಮುಗಳನ್ನು ಇಲ್ಲಿ ಮತ್ತು ಇಲ್ಲಿ ಮತ್ತು ಇಲ್ಲಿ ನೋಡಬಹುದು.

Fact Chek/Verification

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ದೆಹಲಿಯ ಜಗನ್ನಾಥ ದೇವಾಲಯದ ಗರ್ಭಗುಡಿಗೆ ಪ್ರವೇಶಿಸದಂತೆ ತಡೆಯಲಾಗಿದೆ ಎಂಬರ್ಥದಲ್ಲಿ ಹಂಚಿಕೊಳ್ಳಲಾದ ಈ ಕ್ಲೇಮಿನ ಬಗ್ಗೆ ತನಿಖೆ ನಡೆಸಲು ನಾವು ಎರಡು ಚಿತ್ರಗಳಲ್ಲಿರುವ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ್ದೇವೆ. ಈ ಪ್ರಕ್ರಿಯೆಯಲ್ಲಿ, ಜೂನ್ 20, 2023 ರಂದು ಹಂಚಿಕೊಂಡ ಟ್ವೀಟ್‌ ನಲ್ಲಿ, ರಾಷ್ಟ್ರಪತಿಗಳು ದೇವಾಲಯಕ್ಕೆ ಭೇಟಿ ನೀಡುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ನಮಗೆ ತಿಳಿಯಿತು. ಇನ್ನು, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಜುಲೈ 12, 2021 ರಂದು ಹಂಚಿಕೊಂಡ ಟ್ವೀಟ್ ನಲ್ಲಿ ದೇವಾಲಯಕ್ಕೆ ಭೇಟಿ ನೀಡುವ ಬಗ್ಗೆ ಹೇಳಿದ್ದರು.

ವೈರಲ್ ಹೇಳಿಕೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ನ್ಯೂಸ್‌ಚೆಕರ್ ರಾಷ್ಟ್ರಪತಿಯವರ ಕಚೇರಿಯನ್ನು ಸಂಪರ್ಕಸಿದೆ. ಆ ಪ್ರಕಾರ, ಅದು ರಾಷ್ಟ್ರಪತಿಯವರ ನಿರ್ಧಾರವಾಗಿತ್ತು ಎಂದು ಹೇಳಿದ್ದಾರೆ. ರಾಷ್ಟ್ರಪತಿಯವರಿಗೆ ಬಾಲ್ಯದಿಂದಲೂ ಭಗವಾನ್‌ ಜಗನ್ನಾಥನ ಮೇಲೆ ಆಳವಾದ ನಂಬಿಕೆಯನ್ನು ಹೊಂದಿದ್ದಾರೆ. ಸಾಲಿಗ್ರಾಮ ಶಿಲೆಯಲ್ಲಿ ಅವರ ಆ ನಂಬಿಕೆಯಿಂದಾಗಿ ಅವರು ಸ್ವತಃ ಹೊರಗಿನಿಂದೇ ಇದ್ದು, ಒಳಗಡೆ ಹೋಗದೇ ಇರಲು ನಿರ್ಧರಿಸಿದ್ದಾರೆ ಎಂದು ಕಚೇರಿ ನಮಗೆ ತಿಳಿಸಿದೆ.

Also Read: ಒಡಿಶಾ ರೈಲು ದುರಂತದ ಸ್ಟೇಷನ್ ಮಾಸ್ಟರ್ ಶರೀಫ್‌ಗೆ ‘ಹೊಡೆದು ವಿಚಾರಣೆ’ ಎನ್ನುವ ವೀಡಿಯೋಕ್ಕೂ, ಪ್ರಕರಣಕ್ಕೂ ಸಂಬಂಧವಿಲ್ಲ!

ಈ ಬಗ್ಗೆ ಪುರಿ ಜಗನ್ನಾಥ ದೇಗುಲ ಆಡಳಿತವನ್ನು ನ್ಯೂಸ್‌ಚೆಕರ್‌ ಕೇಳಿದ್ದು, ಈ ವೇಳೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಜನ್ಮದಿನ ನಿಮಿತ್ತ ಬೆಳಗ್ಗೆ ದೇವರ ದರ್ಶನಕ್ಕೆ ಬಂದಿದ್ದರು. ರಥಯಾತ್ರೆಯ ಸಮಯದಲ್ಲಿ ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಭದ್ರತಾ ಕಾರಣಗಳಿಂದಾಗಿ, ರಾಷ್ಟ್ರಪತಿಗಳು ಮುಂಜಾನೆ ದೇವಾಲಯಕ್ಕೆ ಭೇಟಿ ನೀಡಲು ನಿರ್ಧರಿಸಿದ್ದರು ಮತ್ತು ಅವರ ಕಾರ್ಯಕ್ರಮದ ವಿವರಗಳನ್ನು ಸಹ ಪ್ರಚಾರ ಮಾಡಲಿಲ್ಲ. ಸ್ವತಃ ರಾಷ್ಟ್ರಪತಿಯವರೇ ಹೊರಗಿನಿಂದ ಭೇಟಿ ನೀಡಲು ನಿರ್ಧರಿಸಿದ್ದರು. ಛೇರಪಣ ಆಚರಣೆಯ ಹೊರತಾಗಿ, ಎಲ್ಲಾ ಭಕ್ತರು ಹೊರಗಿನಿಂದ ಭೇಟಿ ನೀಡುತ್ತಾರೆ. ರಾಷ್ಟ್ರಪತಿಯವರನ್ನು ಹೊರಗಡೆ ನಿಲ್ಲಿಸುವ ಹೇಳಿಕೆ ಸಂಪೂರ್ಣವಾಗಿ ಸುಳ್ಳು ಎಂದು ಹೇಳಿದೆ.

ಇನ್ನು, ಅಶ್ವಿನಿ ವೈಷ್ಣವ್ ಅವರ ಫೋಟೋ ಬಗ್ಗೆ ನ್ಯೂಸ್ ಚೆಕ್ಕರ್ ಕೇಳಿದಾಗ, ಈ ಚಿತ್ರವು  ರಥಯಾತ್ರೆ ಮೊದಲಿನದ್ದು ಎಂದು ನಮಗೆ ತಿಳಿಸಿದ್ದಾರೆ. ಎರಡೂ ಚಿತ್ರಗಳನ್ನು ಜೊತೆಯಾಗಿ ಹಂಚಿಕೊಳ್ಳುವ ಮೂಲಕ ಜನರು ಗೊಂದಲ ಹರಡುತ್ತಿದ್ದಾರೆ. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ ಅವರ ಫೋಟೋವನ್ನು ಛೇಪರಣ ಆಚರಣೆ ವೇಳೆ ತೆಗೆಯಲಾಗಿದೆ. ಇದರಲ್ಲಿ ಮುಖ್ಯ ಅತಿಥಿಯನ್ನು ಕರೆದೊಯ್ಯುವ ಮೊದಲು ದೇವರ ರಥವನ್ನು ಗುಡಿಸುವುದನ್ನು ಕಾಣಬಹುದು. ರಾಷ್ಟ್ರಪತಿಗಳು ಛೇರಪಣ ಆಚರಣೆಗೆ ಬಂದಿರಲಿಲ್ಲ, ಆದರೆ ನಂಬಿಕೆಯಿಂದ ದರ್ಶನಕ್ಕಾಗಿ ಬಂದಿದ್ದರು. ಅವರನ್ನು ಒಳಗೆ ಹೋಗದಂತೆ ಯಾರೂ ತಡೆಯಲಿಲ್ಲ. ಅವರು ಹೊರಗಿನಿಂದಲೇ ದರ್ಶನ ಮಾಡಿದ್ದಾರೆ ಎಂದು ದೇಗುಲ ಆಡಳಿತ ಹೇಳಿದೆ.

ಇದಲ್ಲದೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಜೀವನ ಚರಿತ್ರೆ ಬರೆದಿರುವ ಸಂದೀಪ್ ಸಾಹು ಅವರು ಟ್ವೀಟ್‌ ಮಾಡಿರುವುದನ್ನು ನಾವು ಗುರುತಿಸಿದ್ದು, ಅವರು ಈ ಹೇಳಿಕೆಯನ್ನು ನಿರಾಕರಿಸಲು ದೇವಾಲಯದ ಕಾರ್ಯದರ್ಶಿಯೊಂದಿಗಿನ ಸಂಭಾಷಣೆಯನ್ನು ಉಲ್ಲೇಖಿಸಿದ್ದಾರೆ.

Conclusion

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ದೆಹಲಿಯ ಜಗನ್ನಾಥ ದೇವಾಲಯದ ಗರ್ಭಗುಡಿಗೆ ಪ್ರವೇಶಿಸದಂತೆ ತಡೆಯಲಾಗಿದೆ ಎಂದು ಹಂಚಿಕೊಳ್ಳಲಾಗುತ್ತಿರುವ ಈ ಹೇಳಿಕೆಯು ದಾರಿತಪ್ಪಿಸುವಂಥದ್ದು ಎಂದು ನಮ್ಮ ತನಿಖೆಯಿಂದ ಸ್ಪಷ್ಟವಾಗಿದೆ. ನ್ಯೂಸ್‌ಚೆಕರ್‌ಗೆ ರಾಷ್ಟ್ರಪತಿ ಕಚೇರಿ ನೀಡಿದ ಮಾಹಿತಿಯ ಪ್ರಕಾರ, ಹೊರಗಿನಿಂದ ಭೇಟಿ ನೀಡುವುದು ರಾಷ್ಟ್ರಪತಿಯವರ ನಿರ್ಧಾರವಾಗಿತ್ತು. ಅವರು ತುಂಬಾ ಧಾರ್ಮಿಕರು. ಬಾಲ್ಯದಿಂದಲೂ ಭಗವಾನ್ ಜಗನ್ನಾಥನಲ್ಲಿ ಆಳವಾದ ನಂಬಿಕೆಯನ್ನು ಹೊಂದಿದ್ದಾರೆ. ಸಾಲಿಗ್ರಾಮ ಶಿಲೆಯಲ್ಲಿ ಅವರ ನಂಬಿಕೆಯಿಂದಾಗಿ, ಅವರು ಹೊರಗಿನಿಂದ ದರ್ಶನ ಮಾಡಲು ನಿರ್ಧರಿಸಿದ್ದಾರೆ.

Also Read: ಶಿರಡಿ ಸಾಯಿ ಟ್ರಸ್ಟ್ ಹಜ್ ಸಮಿತಿಗೆ ₹35 ಕೋಟಿ ದೇಣಿಗೆ ನೀಡಿದೆಯೇ? ಇಲ್ಲ, ವೈರಲ್ ಹೇಳಿಕೆ ಸುಳ್ಳು

Result: Partly False

Our Sources

Newschecker’s telephonic conversation with President’s office

Newschecker’s telephonic conversation with Sree Neelachala Seva Sangha officials


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

image
ನೀವು ಯಾವುದೇ ದಾವೆಯ ಸತ್ಯಾಸತ್ಯತೆ ಪರಿಶೀಲಿಸ ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಲು ಅಥವಾ ದೂರು ಸಲ್ಲಿಸಲು ಬಯಸಿದರೆ, ನಮಗೆ ವಾಟ್ಸಾಪ್ ಮಾಡಿರಿ +91-9999499044 ಅಥವಾ ನಮಗೆ ಇಮೇಲ್ ಮಾಡಿರಿ checkthis@newschecker.in​. ನೀವು ನಮ್ಮನೊಂದಿಗೆ ಸಂಪರ್ಕ ಮಾಡಬಹುದು ಮತ್ತು ಫಾರ್ಮ್ ಅನ್ನು ನೀಡಬಹುದು.
No related articles found
Newchecker footer logo
ifcn
fcp
fcn
fl
About Us

Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check

Contact Us: checkthis@newschecker.in

20,641

Fact checks done

FOLLOW US
imageimageimageimageimageimageimage