Authors
Claim
ಮ್ಯಾನ್ಮಾರ್ ನಿಂದ ಮಣಿಪುರಕ್ಕೆ ಕಳ್ಳದಾರಿಯಲ್ಲಿ ರೊಹಿಂಗ್ಯಾಗಳು ಬರುತ್ತಿದ್ದಾರೆ
Fact
ವೈರಲ್ ಆಗಿರುವ ವೀಡಿಯೋ ರೊಹಿಂಗ್ಯಾಗಳದ್ದಲ್ಲ, ಅದು ಇರಾನಿನ ಅಲೆಮಾರಿಗಳ ಕುರಿತ ವೀಡಿಯೋ ಆಗಿದೆ
ಮ್ಯಾನ್ಮಾರ್ ನಿಂದ ಮಣಿಪುರಕ್ಕೆ ಕಳ್ಳದಾರಿಯಿದ್ದು, ಇದರಿಂದಲೇ ರೊಹಿಂಗ್ಯಾಗಳು ಭಾರತವನ್ನು ಪ್ರವೇಶಿಸುತ್ತಿದ್ದಾರೆ ಎಂಬರ್ಥದಲ್ಲಿ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ.
ಫೇಸ್ಬುಕ್ನಲ್ಲಿ ಕಂಡುಬಂದ ಕ್ಲೇಮಿನಲ್ಲಿ “ಮ್ಯಾನ್ಮಾರ್ನಿಂದ ಮಣಿಪುರಕ್ಕೆ ಕಳ್ಳದಾರಿ ಮಾಡಿಕೊಂಡಿರುವ ಈ ಜನರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಭಾರತಕ್ಕೆ ಹೇಗೆ ಬರುತ್ತಾರೆ ನೋಡಿ, ಮ್ಯಾನ್ಮಾರ್ನಿಂದ ಮಣಿಪುರಕ್ಕೆ ಬರುವ ಇವರು ಕಟ್ಟಾ ರೋಹಿಂಗ್ಯಾ ಮುಸ್ಲಿಮರು ಎಂಬುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ….” ಎಂದು ಹೇಳಲಾಗಿದೆ.
Also Read: ಮಹಾತ್ಮ ಗಾಂಧಿ ಖರ್ಚಿಗಾಗಿ ಬ್ರಿಟಿಷ್ ಸರ್ಕಾರದಿಂದ ₹100 ಪಡೆಯುತ್ತಿದ್ದರು ಎನ್ನುವುದು ನಿಜವೇ?
ಇದೇ ವೀಡಿಯೋದ ಸತ್ಯಪರಿಶೀಲನೆಗೆ ಬಳಕೆದಾರರೊಬ್ಬರು ನ್ಯೂಸ್ಚೆಕರ್ ವಾಟ್ಸಾಪ್ ಟಿಪ್ಲೈನ್ (+91-999499044) ಮೂಲಕ ವಿನಂತಿಸಿದ್ದು, ಅದನ್ನು ಸ್ವೀಕರಿಸಲಾಗಿದೆ.
ಈ ವೀಡಿಯೋದ ಸತ್ಯಶೋಧನೆ ನಡೆಸಿದ ವೇಳೆ ಇದು ಮಣಿಪುರದ ವೀಡಿಯೋವಲ್ಲ, ಬದಲಾಗಿ ಇರಾನ್ ನದ್ದಾಗಿದೆ ಎಂದು ತಿಳಿದುಬಂದಿದೆ.
Fact Check/Verification
ಸತ್ಯಶೋಧನೆಗೆ ನಾವು ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಯೂಟ್ಯೂಬ್ ವೀಡಿಯೋ ಒಂದು ಲಭ್ಯವಾಗಿದೆ.
ದೆನಾ ಹೆಸರಿನ ಈ ಯೂಟ್ಯೂಬ್ ಚಾನೆಲ್ ವೀಡಿಯೋದಲ್ಲಿ “Risk for life. Iranian nomadic family” ಶೀರ್ಷಿಕೆಯಡಿ, ವೈರಲ್ ವೀಡಿಯೋವನ್ನೇ ಹೋಲುವ ವೀಡಿಯೋ ಕಂಡುಬಂದಿದೆ. ಇದರ ವಿವರಣೆಯಲ್ಲಿ “ಮೂರು ಚಿಕ್ಕ ಮಕ್ಕಳೊಂದಿಗೆ ಇರಾನಿನ ಅಲೆಮಾರಿ ಕುಟುಂಬವು ತಮ್ಮ ಗಮ್ಯಸ್ಥಾನವನ್ನು ತಲುಪಲು ಕಷ್ಟಕರವಾದ ಹಾದಿಯಲ್ಲಿ ಪ್ರಯಾಣಿಸುತ್ತಿರುವುದು” ಎಂದಿದೆ.
ಇದನ್ನು ಸಾಕ್ಷ್ಯವನ್ನಾಗಿಟ್ಟು ನಾವು ಇನ್ನಷ್ಟು ಶೋಧ ನಡೆಸಿದ್ದೇವೆ.
ಈ ವೇಳೆ ಯಾರನ್ ಎಂಬ ಫೇಸ್ಬುಕ್ ಪೇಜ್ನ ಫೇಸ್ಬುಕ್ನ ಫೋಸ್ಟ್ ಒಂದು ಲಭ್ಯವಾಗಿದೆ. ಇದರಲ್ಲಿ ಹಮ್ಮೊ ಕೊರ್ಡಾನ್ ಜನರ ದೈನದಿಂನ ಜೀವನ ಎಂಬ ಶೀರ್ಷಿಕೆಯಡಿ ವೈರಲ್ ವೀಡಿಯೋವನ್ನು ಹೋಲುವ ವೀಡಿಯೋ ಇದೆ ಲಭ್ಯವಾಗಿದೆ.
ಇದರನ್ವಯ ಇರಾನಿನ ಅಲೆಮಾರಿಗಳ ಕುರಿತಾಗಿ ನಾವು ಇನ್ನಷ್ಟು ಕೀವರ್ಡ್ ಸರ್ಚ್ ನಡೆಸಿದ್ದು, ಈ ವೇಳೆ ಕಷ್ಟಕರವಾದ ಬೆಟ್ಟಗುಡ್ಡ, ನದಿ ಬದಿಯನ್ನು ಹಾದು ಹೋಗುವ ಮಹಿಳೆ ಮತ್ತು ಮಕ್ಕಳ ವೀಡಿಯೋ ಇರುವ ಇನ್ನೊಂದು ವೀಡಿಯೋ ಲಭ್ಯವಾಗಿದೆ. ಈ ಮೂಲಕ ಇದು ಅಲೆಮಾರಿ ಇರಾನಿಗಳ ಕುರಿತ ವೀಡಿಯೋ ಎಂಬುದು ದೃಢವಾಗಿದೆ.
Also Read: ಮುಸ್ಲಿಮರ ಅಂಗಡಿಯಲ್ಲಿ ಬಿರಿಯಾನಿ ತಯಾರಿಸಲು ಚರಂಡಿ ನೀರು ಬಳಸಲಾಗಿತ್ತೇ ಸತ್ಯ ಏನು?
Conclusion
ಈ ಸತ್ಯಶೋಧನೆಯ ಪ್ರಕಾರ, ಇದು ಇರಾನಿನ ಅಲೆಮಾರಿಗಳ ಕುರಿತ ವೀಡಿಯೋವಾಗಿದೆ. ಈ ವೀಡಿಯೋ ಮ್ಯಾನ್ಮಾರ್ನಿಂದ ಮಣಿಪುರಕ್ಕೆ ಕಳ್ಳದಾರಿಯಲ್ಲಿ ಬರುತ್ತಿರುವ ರೊಹಿಂಗ್ಯಾಗಳದ್ದು ಎನ್ನುವುದು ತಪ್ಪಾಗಿದೆ.
Result: False
Our Sources
Youtube Video By Dena, Dated: March 12, 2023
Facebook Post By Yaran, Dated: April 1, 2023
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.