Fact Check: ಮಹಾತ್ಮ ಗಾಂಧಿ ಖರ್ಚಿಗಾಗಿ ಬ್ರಿಟಿಷ್ ಸರ್ಕಾರದಿಂದ ₹100 ಪಡೆಯುತ್ತಿದ್ದರು ಎನ್ನುವುದು ನಿಜವೇ?

ಗಾಂಧೀಜಿ, ₹100, ಬ್ರಿಟಿಷ್ ಸರ್ಕಾರ

Authors

With a penchant for reading, writing and asking questions, Paromita joined the fight to combat and spread awareness about fake news. Fact-checking is about research and asking questions, and that is what she loves to do.

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಮಹಾತ್ಮ ಗಾಂಧಿ ಖರ್ಚಿಗಾಗಿ ಬ್ರಿಟಿಷ್ ಸರ್ಕಾರದಿಂದ ತಿಂಗಳಿಗೆ ₹100 ಪಡೆಯುತ್ತಿದ್ದರು


Fact
1930ರ ಹೊತ್ತಿನಲ್ಲಿ ಗಾಂಧಿ ಜೈಲಿನಲ್ಲಿದ್ದ ವೇಳೆ ಖೈದಿಗಳ ಖರ್ಚಿಗಾಗಿ ಬ್ರಿಟಿಷ್ ಸರ್ಕಾರ ಹಣ ಕೊಡುತ್ತಿದ್ದು ಗಾಂಧಿ ಅವರಿಗೆ ₹100 ಕೊಡಲು ಉದ್ದೇಶಿಸಿತ್ತು. ಆದರೆ ಅವರು ಅದನ್ನು ನಿರಾಕರಿಸಿದ್ದರು

ಮೋಹನದಾಸ್ ಕರಮ್ ಚಂದ್ ಗಾಂಧಿಯವರು ವೈಯಕ್ತಿಕ ಖರ್ಚಿಗೆಂದು ಬ್ರಿಟಿಷರಿಂದ ತಿಂಗಳಿಗೆ ₹100 ಪಡೆಯುತ್ತಿದ್ದರು ಎಂದು ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಕುರಿತು ವಾಟ್ಸಾಪಿನಲ್ಲಿ ಕಂಡುಬಂದ ಕ್ಲೇಮಿನಲ್ಲಿ, “ ಕೊನೆಗೂ ಆ ಪತ್ರವು ರಾಷ್ಟ್ರೀಯ ದಾಖಲೆಗಳಲ್ಲಿ ಸಿಕ್ಕಿತು.1930ರಲ್ಲಿ ಗಾಂಧೀಜಿಯವರು ವೈಯಕ್ತಿಕ ಖರ್ಚಿಗೆಂದು ಬ್ರಿಟಿಷರಿಂದ ತಿಂಗಳಿಗೆ 100 ರೂಪಾಯಿ ಪಡೆಯುತ್ತಿದ್ದರು…..” ಎಂದಿದೆ.

ಈ ಕುರಿತು ಸತ್ಯಶೋಧನೆ ನಡೆಸುವಂತೆ ಬಳಕೆದಾರರೊಬ್ಬರು ನ್ಯೂಸ್ ಚೆಕರ್‌ ಅನ್ನು ವಾಟ್ಸಾಪ್‌ ಟಿಪ್‌ಲೈನ್‌ (+91-999499044) ಮೂಲಕ ವಿನಂತಿಸಿಕೊಂಡಿದ್ದು, ಅದನ್ನು ಅಂಗೀಕರಿಸಲಾಗಿದೆ.

Fact Check: ಮಹಾತ್ಮ ಗಾಂಧಿ ಖರ್ಚಿಗಾಗಿ ಬ್ರಿಟಿಷ್ ಸರ್ಕಾರದಿಂದ ₹100 ಪಡೆಯುತ್ತಿದ್ದರು ಎನ್ನುವುದು ನಿಜವೇ?

Fact Check/Verification

ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ಸರ್ಚ್ ನಡೆಸಿದ್ದು ಈ ವೇಳೆ  ಇತಿಹಾಸಕಾರ ಡಾ.ವಿಕ್ರಮ್ ಸಂಪದ ಅವರ ಟ್ವೀಟ್ ನಮಗೆ ಸಿಕ್ಕಿದೆ. ಅಕ್ಟೋಬರ್ 3, 2022 ರ ಈ ಟ್ವೀಟ್ ಮತ್ತೊಂದು ಟ್ವೀಟ್ಗೆ ಉತ್ತರವಾಗಿದೆ. 1930 ರಲ್ಲಿ ಮಹಾತ್ಮ ಗಾಂಧಿ ತಮ್ಮ ಸ್ವಂತ ಖರ್ಚಿಗಾಗಿ ತಿಂಗಳಿಗೆ 100 ರೂ.ಗಳನ್ನು ನೀಡಲಾಗುತ್ತಿತ್ತು ಎಂದು ಅವರು ಇಲ್ಲಿ ಬರೆಯುತ್ತಾರೆ. ಈ ಟ್ವೀಟ್ ನಲ್ಲಿ ನಾವು ರಾಷ್ಟ್ರೀಯ ಪತ್ರಾಗಾರಕ್ಕೆ ಇರುವ ಲಿಂಕ್ ಅನ್ನು ಇಲ್ಲಿ ಕಾಣಬಹುದು. 1931 ರಲ್ಲಿ, ಆಗಿನ ಈಸ್ಟ್ ಇಂಡಿಯಾ ಕಂಪನಿಯ ಅವಧಿಯಲ್ಲಿ, ಬಾಂಬೆ ರೆಗ್ಯುಲೇಷನ್ಸ್ 1827 ರ ಅಡಿಯಲ್ಲಿ, ಗಾಂಧೀಜಿಯವರು ಜೈಲಿನಲ್ಲಿದ್ದಾಗ ಮಾಸಿಕ ವೆಚ್ಚಗಳಿಗಾಗಿ ಕಂಪನಿಯಿಂದ ತಿಂಗಳಿಗೆ ₹100 ಪಡೆಯುತ್ತಿದ್ದರು ಎಂದಿದೆ.

Fact Check: ಮಹಾತ್ಮ ಗಾಂಧಿ ಖರ್ಚಿಗಾಗಿ ಬ್ರಿಟಿಷ್ ಸರ್ಕಾರದಿಂದ ₹100 ಪಡೆಯುತ್ತಿದ್ದರು ಎನ್ನುವುದು ನಿಜವೇ?


ಕೆಲವು ತಿಂಗಳ ಹಿಂದೆ ನಿಖಿಲ್ ಚೌಧರಿ ಎಂಬವರು ಹಂಚಿಕೊಂಡ ಕೋರಾದಲ್ಲಿಯೂ ನಮಗೆ ಅದೇ ಪತ್ರ ಸಿಕ್ಕಿದೆ. ರಾಷ್ಟ್ರೀಯ ಪತ್ರಾಗಾರದ ಜೊತೆಗೆ, ಇತಿಹಾಸಕಾರ ಅಶೋಕ್ ಪಾಂಡೆ ಅವರ ವೀಡಿಯೋಗಳನ್ನು ನಾವು ನೋಡಿದ್ದೇವೆ. ಅಕ್ಟೋಬರ್ 6, 2022 ರಂದು, ಅವರು ತಮ್ಮ ಟ್ವಿಟ್ಟರ್ ಪ್ರೊಫೈಲ್ನಿಂದ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.


ಡಾ.ವಿಕ್ರಮ್ ಸಂಪದ ಅವರ ಟ್ವೀಟ್ ಅನ್ನು ಟೀಕಿಸಿದ ಅವರು, ಅನೇಕ ಜನರು ಗಾಂಧೀಜಿಯನ್ನು ಅಧ್ಯಯನ ಮಾಡಿದ್ದಾರೆ ಮತ್ತು ಫೆಲೋಶಿಪ್ ಮತ್ತು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ, ಆದರೆ ಡಾ.ವಿಕ್ರಮ್ ಅವರ ದಾಖಲೆಗಳ ಸತ್ಯಾಸತ್ಯತೆಯನ್ನು ಯಾರೂ ಪರಿಶೀಲಿಸಿಲ್ಲ ಎಂದು ಹೇಳಿದ್ದಾರೆ. 13 ನಿಮಿಷ 38 ಸೆಕೆಂಡುಗಳ ಯೂಟ್ಯೂಬ್ ವೀಡಿಯೋದಲ್ಲಿ, ಗಾಂಧಿ ಜಯಂತಿಯಂದು ಕೆಲವರು ಉದ್ದೇಶಪೂರ್ವಕವಾಗಿ ಗಾಂಧೀಜಿಯ ಬಗ್ಗೆ ಸುಳ್ಳು, ದಾರಿತಪ್ಪಿಸುವ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಪಾಂಡೆ ಹೇಳಿದ್ದಾರೆ. ವೀಡಿಯೋದ 3 ನಿಮಿಷ 58 ಸೆಕೆಂಡುಗಳ ಅವಧಿಯಲ್ಲಿ, ಆ ಇತಿಹಾಸಕಾರರು, ಆ ಸಮಯದಲ್ಲಿ ಕಂಪನಿ ಸರ್ಕಾರವು ಕಾನೂನನ್ನು ಅಂಗೀಕರಿಸಿದ್ದು, ಇದರಲ್ಲಿ ಜೈಲಿನ ಎಲ್ಲ ಕೈದಿಗಳು, ಕ್ರಾಂತಿಕಾರಿಗಳಿಗೆ ಅವರ ಪೂರಕ ವೆಚ್ಚಗಳಿಗಾಗಿ ಸ್ವಲ್ಪ ಹಣವನ್ನು ಕೊಡಲಾಗುತ್ತಿತ್ತು. ಅಸಹಕಾರ ಚಳವಳಿಯ ನಂತರ ಗಾಂಧೀಜಿಯನ್ನು ಯೆರವಾಡ ಜೈಲಿನಲ್ಲಿರಿಸಿದಾಗ, ಅವರಿಗೆ ಮತ್ತು ಅವರ ಸಹವರ್ತಿಗಳಿಗೆ ಒಂದು ಮೊತ್ತವನ್ನು ನೀಡಲು ಸಮ್ಮತಿಸಿದೆ ಎಂದಿದ್ದಾರೆ.

ಬ್ರಿಟಿಷ್ ಸರ್ಕಾರವು ಬರೆದ ಅಧಿಕೃತ ಪತ್ರವನ್ನೂ ನಾವು ಸರ್ಕಾರದ ಇಂಡಿಯನ್‌ ಕಲ್ಚರ್ ವೆಬ್‌ಸೈಟ್ ನಲ್ಲಿ ನೋಡಿದ್ದೇವೆ. ಅದರಂತೆ ಆ ಸಮಯದಲ್ಲಿ ಹಲವಾರು ರಾಜಕೀಯ ಕೈದಿಗಳು ಬ್ರಿಟಿಷ್ ಸರ್ಕಾರದಿಂದ ಮಸೊಹರಾವನ್ನು ಪಡೆದರು ಎಂದು ಸೂಚಿಸುವ ಹಲವಾರು ಪತ್ರಗಳು ಮತ್ತು ದಾಖಲೆಗಳನ್ನು ವೆಬ್ಸೈಟ್ ಒಳಗೊಂಡಿದೆ. ಈ ಹಣವನ್ನು ಮಹಾತ್ಮ ಗಾಂಧಿಗೆ ಮಾತ್ರವಲ್ಲ, ಆ ಸಮಯದಲ್ಲಿ ಜೈಲಿನಿಂದ ಇತರ ಕೈದಿಗಳಿಗೂ ನೀಡಲಾಯಿತು, ಅವರ ದೈನಂದಿನ ವೆಚ್ಚಗಳಿಗಾಗಿ ಈ ಹಣವನ್ನು ನೀಡಲಾಗುತ್ತಿತ್ತು.

ಮಹಾತ್ಮ ಗಾಂಧಿಯವರ ಆತ್ಮಚರಿತ್ರೆಯ ಲ್ಲಿರುವ ಮೇ 10, 1910ರ ಪತ್ರವೊಂದರ ಪ್ರಕಾರ, ಗೃಹಬಂಧನದಲ್ಲಿದ್ದಾಗ ಬ್ರಿಟಿಷ್ ಸರ್ಕಾರವು ಅವರಿಗೆ ₹100 ರೂ.ಗಳ ಆಫರ್ ನೀಡಿತ್ತು, ಆದರೆ ಗಾಂಧೀಜಿ ಹಣವನ್ನು ತೆಗೆದುಕೊಳ್ಳಲು ನಿರಾಕರಿಸಿದರು ಮತ್ತು ಹಣವನ್ನು ತಮ್ಮ ಆಹಾರ ವೆಚ್ಚಕ್ಕಾಗಿ ಮಾತ್ರ ತೆಗೆದುಕೊಳ್ಳಲು ಒಪ್ಪಿಕೊಂಡಿದ್ದಾರೆ.

Fact Check: ಮಹಾತ್ಮ ಗಾಂಧಿ ಖರ್ಚಿಗಾಗಿ ಬ್ರಿಟಿಷ್ ಸರ್ಕಾರದಿಂದ ₹100 ಪಡೆಯುತ್ತಿದ್ದರು ಎನ್ನುವುದು ನಿಜವೇ?

Conclusion

ಲಭ್ಯವಿರುವ ಮಾಹಿತಿ ಮತ್ತು ಸಂಶೋಧನೆಗಳಿಂದ, ಮಹಾತ್ಮ ಗಾಂಧಿಯವರು 1930 ರಲ್ಲಿ ಜೈಲಿನಲ್ಲಿದ್ದಾಗ ಬ್ರಿಟಿಷ್ ಸರ್ಕಾರದಿಂದ ₹100 ಪಡೆಯುತ್ತಿದ್ದರು ಎನ್ನುವುದು ಅರ್ಧ ಸತ್ಯವಾಗಿದೆ. ಆ ಕಾಲದ ಬ್ರಿಟಿಷ್ ಸರ್ಕಾರದ ನಿಯಮಗಳ ಪ್ರಕಾರ, ಎಲ್ಲಾ ಕೈದಿಗಳಿಗೆ ಸರ್ಕಾರದಿಂದ ಹಣವನ್ನು ನೀಡಲಾಗುತ್ತಿತ್ತು. ಆದರೆ ಗಾಂಧೀಜಿ ಹಣ ತೆಗೆದಕೊಳ್ಳಲು ನಿರಾಕರಿಸಿದ್ದರು ಎಂದು ತಿಳಿದುಬಂದಿದೆ.

Result: Partly False

Our Sources
Youtube Video By The credible history, Dated: October 6, 2022

Website of Indianculture

Website of Gandhisevashram

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್‌ ಬಂಗಾಳಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

With a penchant for reading, writing and asking questions, Paromita joined the fight to combat and spread awareness about fake news. Fact-checking is about research and asking questions, and that is what she loves to do.

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.