Fact Check: ಭಾರತದಲ್ಲಿ ರೆನಾಲ್ಡ್ ಪೆನ್‌ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆಯೇ, ಸತ್ಯ ಏನು?

ರೆನಾಲ್ಡ್, ನೀಲಿ ಟಾಪ್‌ ಪೆನ್‌, 045 ಪೆನ್‌

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಮಾರುಕಟ್ಟೆಯಲ್ಲೀಗ ಕಾಣಿಸುತ್ತಿಲ್ಲ ನೀಲಿ ಕ್ಯಾಪ್ ನ ರೆನಾಲ್ಡ್ ಪೆನ್

Fact
ರೆನಾಲ್ಡ್ ಪೆನ್‌ ಉತ್ಪನ್ನ ತಯಾರಿಕೆ ಸ್ಥಗಿತಗೊಂಡಿದೆ ಎಂದು ಹೇಳಿರುವುದು ದಾರಿತಪ್ಪಿಸುವಂಥ ಹೇಳಿಕೆ

ಮಾರುಕಟ್ಟೆಯಲ್ಲೀಗ ನೀಲಿ ಕ್ಯಾಪ್ ಇರುವ ರೆನಾಲ್ಡ್ ಪೆನ್‌ ಕಾಣುತ್ತಿಲ್ಲ ಎಂಬ ಸುದ್ದಿಯೊಂದು ವೈರಲ್‌ ಆಗಿದೆ. ಟ್ವಿಟರ್‌ ನಲ್ಲಿ ಕಂಡುಬಂದ ಕ್ಲೇಮಿನಲ್ಲಿ ಮಾರುಕಟ್ಟೆಯಲ್ಲಿ ರೆನಾಲ್ಡ್‌ ಪೆನ್‌ ಕಾಣುತ್ತಿಲ್ಲ ಎಂದು ಹೇಳಲಾಗಿದೆ.

Fact Check: ಭಾರತದಲ್ಲಿ ರೆನಾಲ್ಡ್ ಪೆನ್‌ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆಯೇ, ಸತ್ಯ ಏನು?

ಇದೇ ರೀತಿ ವಿವಿಧ ಕ್ಲೇಮುಗಳಲ್ಲಿ ರೆನಾಲ್ಡ್‌ನ ಪ್ರಖ್ಯಾತ 045 ಫೈನ್‌ ಕಾರ್ಬ್ಯೂರ್‌ ಪೆನ್‌ ಸ್ಥಗಿತಗೊಂಡಿದೆ ಎಂದು ಹೇಳಲಾಗಿದೆ. ವೆರಿಫೈಡ್ ಹ್ಯಾಂಡಲ್ಗಳು ಸೇರಿದಂತೆ ಹಲವಾರು ಎಕ್ಸ್ ಪ್ರೊಫೈಲ್ಗಳು ಇದೇ ರೀತಿಯ ಪೋಸ್ಟ್ಗಳನ್ನು ಪ್ರಸಾರ ಮಾಡುತ್ತಿವೆ.

ಇಂತಹ ಪೋಸ್ಟ್‌ ಗಳನ್ನು ಇಲ್ಲಿ ಇಲ್ಲಿ ಮತ್ತು ಇಲ್ಲಿ ನೋಡಬಹುದು.

Also Read: ಮ್ಯಾನ್ಮಾರ್ ನಿಂದ ಮಣಿಪುರಕ್ಕೆ ಕಳ್ಳದಾರಿಯಲ್ಲಿ ರೊಹಿಂಗ್ಯಾಗಳು ಬರುತ್ತಿದ್ದಾರೆಯೇ, ಸತ್ಯವೇನು?

Fact Check/ Verification

ನ್ಯೂಸ್ ಚೆಕ್ಕರ್ ಮೊದಲಿಗೆ ವೈರಲ್ ಸುದ್ದಿಗಾಗಿ ಅಧಿಕೃತ ಫೇಸ್ಬುಕ್ ಖಾತೆ, ಇನ್ಸ್ಟಾಗ್ರಾಮ್ ಖಾತೆ ಮತ್ತು ರೆನಾಲ್ಡ್ಸ್ ವೆಬ್ಸೈಟ್ ಅನ್ನು ಪರಿಶೀಲಿಸಿದೆ. ಈ ವೇಳೆ ಪಾಪ್‌ ಅಪ್‌ ಸಂದೇಶವೊಂದು ನಮ್ಮ ಗಮನಕ್ಕೆ ಬಂದಿದೆ. ಇದರಲ್ಲಿ, ಹೀಗೆ ಹೇಳಲಾಗಿದೆ.

“ನಮ್ಮ ಗೌರವಾನ್ವಿತ ಗ್ರಾಹಕರು, ಪಾಲುದಾರರು ಮತ್ತು ಮಧ್ಯಸ್ಥಗಾರರಿಗೆ ವಿವಿಧ ಮಾಧ್ಯಮಗಳಲ್ಲಿ ರೆನಾಲ್ಡ್ಸ್ ಬಗ್ಗೆ ಇತ್ತೀಚಿನ ತಪ್ಪು ಮಾಹಿತಿಯು ದಾರಿತಪ್ಪಿಸುವಂಥಾದ್ದಾಗಿದೆ ಮತ್ತು ಸತ್ಯವಾದ್ದಲ್ಲ. ಭಾರತದಲ್ಲಿ ತನ್ನ 45 ವರ್ಷಗಳ ಪರಂಪರೆಯನ್ನು ಹೊಂದಿರುವ ರೆನಾಲ್ಡ್ಸ್, ಗುಣಮಟ್ಟ ಮತ್ತು ನಾವೀನ್ಯತೆಗೆ ನಿರಂತರವಾಗಿ ಆದ್ಯತೆ ನೀಡಿದೆ. ಭಾರತದಲ್ಲಿ ಬರವಣಿಗೆಯ ವ್ಯವಹಾರವನ್ನು ವಿಸ್ತರಿಸಲು ಮತ್ತು ಬೆಳೆಸಲು ನಾವು ಬಲವಾದ ಭವಿಷ್ಯದ ಯೋಜನೆಯನ್ನು ಹೊಂದಿದ್ದೇವೆ. ನಿಖರವಾದ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಮತ್ತು ಸಾಮಾಜಿಕ ಮಾಧ್ಯಮ ಚಾನೆಲ್ಗಳನ್ನು ಉಲ್ಲೇಖಿಸಲು ನಾವು ಪ್ರತಿಯೊಬ್ಬರನ್ನು ಪ್ರೋತ್ಸಾಹಿಸುತ್ತೇವೆ. ನೀವು ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಎತ್ತಿಹಿಡಿಯುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ನಿಮ್ಮ ಅಚಲವಾದ ಬೆಂಬಲಕ್ಕೆ ಧನ್ಯವಾದಗಳು. (ರೆನಾಲ್ಡ್ಸ್ ಇಂಡಿಯಾ ಮ್ಯಾನೇಜ್ಮೆಂಟ್).

Fact Check: ಭಾರತದಲ್ಲಿ ರೆನಾಲ್ಡ್ ಪೆನ್‌ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆಯೇ, ಸತ್ಯ ಏನು?


ರೆನಾಲ್ಡ್ ಅವರ ಇನ್ಸ್ಟಾಗ್ರಾಮ್ ಪ್ರೊಫೈಲ್ ಮತ್ತು ಫೇಸ್ಬುಕ್ ಪುಟದಲ್ಲಿ ಅದೇ ಸಂದೇಶದೊಂದಿಗೆ ಪೋಸ್ಟ್ಗಳನ್ನು ನಾವು ನೋಡಬಹುದು, ಅದನ್ನು ಇಲ್ಲಿ , ಇಲ್ಲಿ ನೋಡಬಹುದು.

Fact Check: ಭಾರತದಲ್ಲಿ ರೆನಾಲ್ಡ್ ಪೆನ್‌ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆಯೇ, ಸತ್ಯ ಏನು?
ಇನ್‌ಸ್ಟಾ ಗ್ರಾಂನಲ್ಲಿ ರೆನಾಲ್ಡ್ ಸ್ಪಷ್ಟೀಕರಣ
Fact Check: ಭಾರತದಲ್ಲಿ ರೆನಾಲ್ಡ್ ಪೆನ್‌ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆಯೇ, ಸತ್ಯ ಏನು?
ಫೇಸ್ಬುಕ್‌ನಲ್ಲಿ ರೆನಾಲ್ಡ್ ಸ್ಪಷ್ಟೀಕರಣ

ರೆನಾಲ್ಡ್ಸ್ ತಮ್ಮ ಉತ್ಪನ್ನಗಳ ಬಗ್ಗೆ ವಿಶೇಷ ಪೋಸ್ಟ್ಗಳನ್ನು ಸಹ ಹಾಕಿದೆ. “ರೆನಾಲ್ಡ್ಸ್ 045 ನ ಕ್ರಾಂತಿಕಾರಿ ಲೇಸರ್ ಟಿಪ್ ತಂತ್ರಜ್ಞಾನದೊಂದಿಗೆ ಉನ್ನತ ಬರವಣಿಗೆಯನ್ನು ಅನುಭವಿಸಿ, ಅದರ ಗಮನಾರ್ಹ ನಿಖರತೆ ಮತ್ತು ಸುಗಮ ಬರವಣಿಗೆಗಾಗಿ ಶ್ಲಾಘಿಸಲಾಗಿದೆ.”

Also Read: ಮಹಾತ್ಮ ಗಾಂಧಿ ಖರ್ಚಿಗಾಗಿ ಬ್ರಿಟಿಷ್ ಸರ್ಕಾರದಿಂದ ₹100 ಪಡೆಯುತ್ತಿದ್ದರು ಎನ್ನುವುದು ನಿಜವೇ?

ರೆನಾಲ್ಡ್ಸ್ ಇನ್ನೂ “045 ಫೈನ್ ಕಾರ್ಬ್ಯುರ್” ಪೆನ್ನುಗಳನ್ನು ಮಾರಾಟ ಮಾಡುತ್ತಿದೆ ಎಂದು ನಾವು ಕಂಡುಕೊಂಡಿದ್ದೇವೆ, ಇದು ಅವರ ವೆಬ್ಸೈಟ್ನಲ್ಲಿ ಲಭ್ಯವಿದೆ.

ಜುಲೈ 17 ರಂದು ರೆನಾಲ್ಡ್ಸ್ ಅವರ ಈ ಪ್ರಸಿದ್ಧ ಪೆನ್ನಿನ ಬಗ್ಗೆ ಮತ್ತೊಂದು ಪೋಸ್ಟ್ ಮಾಡಿದ್ದು, ಅದನ್ನು ಇಲ್ಲಿ ನೋಡಬಹುದು.

ಇದಲ್ಲದೆ, ನಾವು ಈ ಬಗ್ಗೆ ಸ್ಪಷ್ಟನೆಗೆ ರೆನಾಲ್ಡ್ ಗೆ ಇ ಮೇಲ್‌ ಕಳಿಸಿದ್ದು, ವೈರಲ್ ಸಂದೇಶದ ಬಗ್ಗೆ ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ. ನಾವು ಅವರ ಪ್ರತಿಕ್ರಿಯೆಯನ್ನು ಸ್ವೀಕರಿಸಿದ ನಂತರ ಈ ಲೇಖನವನ್ನು ನವೀಕರಿಸಲಾಗುವುದು.

Also Read: ಮುಸ್ಲಿಮರ ಅಂಗಡಿಯಲ್ಲಿ ಬಿರಿಯಾನಿ ತಯಾರಿಸಲು ಚರಂಡಿ ನೀರು ಬಳಸಲಾಗಿತ್ತೇ ಸತ್ಯ ಏನು?

Conclusion

ರೆನಾಲ್ಡ್ಸ್ “045 ಫೈನ್ ಕಾರ್ಬ್ಯುರ್” ಪೆನ್ ಅನ್ನು ಸ್ಥಗಿತಗೊಳಿಸಲಾಗುತ್ತದೆ ಎಂದಿರುವುದು ಅಥವಾ ನೀಲಿ ಟಾಪ್‌ ನ ರೆನಾಲ್ಡ್‌ ಪೆನ್‌ ಉತ್ಪಾದನೆ ಸ್ಥಗಿತಗೊಂಡಿದೆ ಎಂಬ ವೈರಲ್ ಸಂದೇಶವು ನಿಜವಲ್ಲ. ರೆನಾಲ್ಡ್ಸ್ ಈ ವೈರಲ್ ಸಂದೇಶವನ್ನು “ತಪ್ಪು ಮಾಹಿತಿ” ಎಂದು ಕರೆದಿದೆ.

Result: False

Our Sourses
Facebook Page, Instagram Handle & Website of Reynolds

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್‌ ಇಂಗ್ಲಿಷ್‌ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ.)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.