Fact Check: ಮಾರುಕಟ್ಟೆಗೆ ನಕಲಿ ಗೋಧಿ ಬಂದಿದೆ ಎನ್ನುವ ವೀಡಿಯೋ ಸತ್ಯವೇ?

ನಕಲಿ ಗೋಧಿ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim

ಮಾರುಕಟ್ಟೆಗೆ ನಕಲಿ ಗೋಧಿ ಬಂದಿದೆ ಎಂದು ಹೇಳುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಫೇಸ್‌ಬುಕ್‌ನಲ್ಲಿ ಕಂಡುಬಂದ ಕ್ಲೇಮಿನಲ್ಲಿ ನಕಲಿ ಗೋಧಿ ಉತ್ಪಾದನೆ ಎಂಬರ್ಥದಲ್ಲಿ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.

ಈ ವೀಡಿಯೋದಲ್ಲಿ ಪ್ಲಾಸ್ಟಿಕ್‌ ಅನ್ನು ಬಳಸಿ ಗೋಧಿ ರೂಪದ ವಸ್ತುವೊಂದನ್ನು ತಯಾರಿಸುವುದನ್ನು ತೋರಿಸಲಾಗಿದೆ.

Fact Check: ಮಾರುಕಟ್ಟೆಗೆ ನಕಲಿ ಗೋಧಿ ಬಂದಿದೆ ಎನ್ನುವ ವೀಡಿಯೋ ಸತ್ಯವೇ?

Fact

ಸತ್ಯಶೋಧನೆಗಾಗಿ ನಾವು ವೀಡಿಯೋದ ಕೀಫ್ರೇಮ್‌ಗಳನ್ನು ತೆಗೆದು ಗೂಗಲ್‌ನಲ್ಲಿ ರಿವರ್ಸ್ ಇಮೇಜ್‌ ಸರ್ಚ್ ನಡೆಸಿದ್ದೇವೆ ಈ ವೇಳೆ ಸ್ಮಾರ್ಟೆಸ್ಟ್‌ ವರ್ಕರ್ಸ್ ಎಂಬ ಇನ್‌ಸ್ಟಾಗ್ರಾಂ ಖಾತೆಯೊಂದು ಲಭ್ಯವಾಗಿದೆ.

ವನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ಈ ವೇಳೆ ಸ್ಮಾರ್ಟೆಸ್ಟ್‌ ವರ್ಕರ್ಸ್ ಎಂಬ ವಾಟರ್‌ ಮಾರ್ಕ್ ಅನ್ನು ವೀಡಿಯೋದಲ್ಲಿ ಗಮನಿಸಿದ್ದೇವೆ.

ಸೆಪ್ಟೆಂಬರ್ 24, 2023ರಂದು ಸ್ಮಾರ್ಟೆಸ್ಟ್ ವರ್ಕರ್ಸ್ ಹಂಚಿಕೊಂಡಿರುವ ವೀಡಿಯೋಕ್ಕೆ “Plastic’s New Purpose: Unveiling the Recycling Journey “ ಎಂಬ ಶೀರ್ಷಿಕೆಯನ್ನು ಕೊಡಲಾಗಿದೆ. ಅಂದರೆ ಇದು ಪ್ಲಾಸ್ಟಿಕ್‌ ಮರುಬಳಕೆಯ ಪ್ರಕ್ರಿಯೆಯನ್ನು ತೋರಿಸುವ ವೀಡಿಯೋ ಎಂದು ಅರ್ಥೈಸಿಕೊಳ್ಳಬಹುದು.

Fact Check: ಮಾರುಕಟ್ಟೆಗೆ ನಕಲಿ ಗೋಧಿ ಬಂದಿದೆ ಎನ್ನುವ ವೀಡಿಯೋ ಸತ್ಯವೇ?

ಇದರೊಂದಿಗೆ ನಾವು ಸ್ಮಾರ್ಟೆಸ್ಟ್ ವರ್ಕರ್ಸ್‌ ಇನ್‌ಸ್ಟಾಗ್ರಾಂ ಖಾತೆಯನ್ನು ಗಮನಿಸಿದ್ದು, ಹಲವು ವಸ್ತುಗಳ ಮರುಬಳಕೆ ಕುರಿತ ವೀಡಿಯೋಗಳನ್ನು ಇಲ್ಲಿ ಶೇರ್ ಮಾಡಿರುವುದನ್ನು ನೋಡಿದ್ದೇವೆ.

ವೀಡಿಯೋದಲ್ಲಿ ಹೇಳಲಾಗಿರುವ ವಿಚಾರ, ನಿಜಕ್ಕೂ ಪ್ಲಾಸ್ಟಿಕ್‌ ಮರುಬಳಕೆಯ ಪ್ರಕ್ರಿಯೆಯದ್ದೇ ಎಂದು ಖಚಿತಪಡಿಸಿಕೊಳ್ಳಲು ನಾವು ಪ್ಲಾಸ್ಟಿಕ್ ಮರುಬಳಕೆಯ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬ ಬಗ್ಗೆ ಬ್ರಿಟಿಷ್‌ ಪ್ಲಾಸ್ಟಿಕ್‌ ಫೆಡರೇಶನ್‌ನ ಲೇಖನವನ್ನು ಗಮನಿಸಿದ್ದೇವೆ.

ಈ ಲೇಖನದಲ್ಲಿ ಬಳಸಿದ ಪ್ಲಾಸ್ಟಿಕ್ ಸಂಗ್ರಹ, ಅವುಗಳನ್ನು ವಿಂಗಡಿಸುವುದು, ಪುಡಿ ಮಾಡುವುದು, ತೊಳೆಯುವುದು, ಕರಗಿಸುವುದು, ಗೋಲಿಗಳ ರೀತಿ ಮಾಡುವುದು ಎಂದು ಪ್ರಕ್ರಿಯೆಯನ್ನು ಹೇಳಲಾಗಿದೆ. ಇಲ್ಲಿ ಹೇಳಲಾದ ಪ್ರಕ್ರಿಯೆ ವೀಡಿಯೋದಲ್ಲಿ ಇರುವುದ್ನು ನಾವು ಗಮನಿಸಿದ್ದೇವೆ.

Fact Check: ಮಾರುಕಟ್ಟೆಗೆ ನಕಲಿ ಗೋಧಿ ಬಂದಿದೆ ಎನ್ನುವ ವೀಡಿಯೋ ಸತ್ಯವೇ?

ಹೆಚ್ಚಿನ ಮಾಹಿತಿಗೆ ನಾವು ಕಾಸರಗೋಡಿನ ಸ್ಕಂದ ಪ್ಲಾಸ್ಟಿಕ್‌ ಕಂಪೆನಿಯ ಶ್ಯಾಮ್‌ ಕೋಟೂರ್ ಅವರನ್ನು ಸಂಪರ್ಕಿಸಿದ್ದು, ಅವರು ಪ್ಲಾಸ್ಟಿಕ್‌ ಪುನರ್ಬಳಕೆ ಕುರಿತಾದ ಪ್ರಕ್ರಿಯೆ ಇದಾಗಿದೆ ಎಂದು ಖಚಿತಪಡಿಸಿದ್ದಾರೆ. ಈ ವೀಡಿಯೋದಲ್ಲಿ ಕಂಡುಬರುವ ಪ್ರಕ್ರಿಯೆ ಹೆಚ್ಚಾಗಿ ಭಾರತದಲ್ಲಿ ಅನುಸರಿಸುವ ಪ್ರಕ್ರಿಯೆಯಾಗಿದೆ. ಪ್ಲಾಸ್ಟಿಕ್‌ ಮರುಬಳಕೆಯಲ್ಲಿ ಕಾಣುವ ಪ್ರಕ್ರಿಯೆಯ ಕೊನೆಯಲ್ಲಿ ಕಾಳಿನಂತಹ ಉತ್ಪನ್ನ ಮಾಡಲಾಗುತ್ತದೆ. ಇದನ್ನೇ ತಪ್ಪಾಗಿ ಹೇಳಲಾಗಿದೆ ಎಂದಿದ್ದಾರೆ.

ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ಇದು ನಕಲಿ ಗೋಧಿ ಉತ್ಪಾದನೆಯ ವೀಡಿಯೋವಲ್ಲ, ಇದು ಪ್ಲಾಸ್ಟಿಕ್‌ ಪುನರ್ಬಳಕೆ ಕುರಿತ ವೀಡಿಯೋವಾಗಿದೆ.

Result: False

Our Sources:
Instagram Post By Smart Workers, Dated September 24, 2023

Article By British Plastic Federation

Conversation with Sham Kotoor, Skanda plastics Kasaragod


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.