Fact Check: ಗರ್ಭಿಣಿಯರಿಗೆ ಫೋಲಿಕ್ ಆಸಿಡ್ ಮಾತ್ರೆ ಬದಲಾಗಿ ಬೀಟ್ರೂಟ್, ಸಬ್ಬಸಿಗೆ ಸೊಪ್ಪು ಕೊಡಬಹುದೇ?

ಗರ್ಭಿಣಿಯರಿಗೆ ಫೋಲಿಕ್‌ ಆಸಿಡ್ ಮಾತ್ರೆ ಬದಲಾಗಿ ಬೀಟ್ರೂಟ್, ಸಬ್ಬಸಿಗೆ ಸೊಪ್ಪು

Claim

ಗರ್ಭಿಣಿಯರಿಗೆ ಫೋಲಿಕ್ ಆಸಿಡ್‌ ಮಾತ್ರೆ ಕೊಡುವುದರ ಬದಲಿಗೆ ಬೀಟ್ರೂಟ್, ಸಬ್ಬಸಿಗೆ ಸೊಪ್ಪು ಕೊಟ್ಟರೆ ಕಬ್ಬಿಣದ ಕೊರತೆ ನೀಗುತ್ತದೆ ಎಂದು ಕ್ಲೇಮ್‌ ಒಂದು ಹೇಳಿದೆ.

ಇನ್‌ಸ್ಟಾಗ್ರಾಂನಲ್ಲಿ ಈ ಕ್ಲೇಮ್‌ ಕಂಡುಬಂದಿದೆ. ಇದರ ಪ್ರಕಾರ “ವಾರಕ್ಕೊಮ್ಮೆ ಅರ್ಧ ಬೀಟ್ರೂಟ್, ಸಬ್ಬಸಿಗೆ ಕೊಟ್ಟರೆ ಸಹಜವಾಗಿ ಕಬ್ಬಿಣದ ಕೊರತೆ ನೀಗುತ್ತದೆ” ಎಂದಿದೆ.

Also Read: ಡಾರ್ಕ್ ಚಾಕೊಲೆಟ್ ನಿಂದ ದೇಹದಲ್ಲಿ ಮೆಲನಿನ್‌ ಉತ್ಪಾದನೆಯಾಗುತ್ತದೆ ಎನ್ನುವುದು ನಿಜವೇ?

Fact Check: ಗರ್ಭಿಣಿಯರಿಗೆ ಫೋಲಿಕ್ ಆಸಿಡ್ ಮಾತ್ರೆ ಬದಲಿಗೆ ಬೀಟ್ರೂಟ್, ಸಬ್ಬಸಿಗೆ ಸೊಪ್ಪು ಕೊಡಬಹುದೇ?

ಈ ಕ್ಲೇಮಿನ ಸತ್ಯಶೋಧನೆಯನ್ನು ನಾವು ಮಾಡಿದ್ದು, ಫೋಲಿಕ್‌ ಆಸಿಡ್ ಬದಲಾಗಿ ಬೀಟ್ ರೂಟ್, ಸಬ್ಬಸಿಗೆ ಸೊಪ್ಪು ಪರ್ಯಾಯವಾಗುತ್ತದೆಯೇ ಎಂದು ಪರಿಶೀಲಿಸಿದ್ದೇವೆ. ಈ ವೇಳೆ ಇದು ತಪ್ಪು ಎಂದು ಕಂಡುಬಂದಿದೆ.

Fact

ಗರ್ಭಿಣಿಯರಲ್ಲಿ ಕಬ್ಬಿಣದ ಕೊರತೆಯನ್ನು ಕಡಿಮೆ ಮಾಡಲು ಫೋಲಿಕ್‌ ಮಾತ್ರೆಗಳ ಬದಲಾಗಿ ವಾರಕ್ಕೊಮ್ಮೆ ಅರ್ಧ ಬೀಟ್ರೂಟ್ ಮತ್ತು ಸಬ್ಬಸಿಗೆ ಎಲೆಗಳನ್ನು ತಿನ್ನಬೇಕು ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳು ಅಥವಾ ವೈದ್ಯಕೀಯ ಶಿಫಾರಸುಗಳು ಕಂಡುಬಂದಿಲ್ಲ. ಗರ್ಭಾವಸ್ಥೆಯಲ್ಲಿ ಕಬ್ಬಿಣಾಂಶ ಮತ್ತು ಫೋಲಿಕ್ ಆಮ್ಲ ಎರಡೂ ಅಗತ್ಯ ಪೋಷಕಾಂಶಗಳಾಗಿವೆ, ಆದರೆ ಅವು ವಿಭಿನ್ನ ಉದ್ದೇಶಗಳನ್ನು ಪೂರೈಸುತ್ತವೆ.

ಕಬ್ಬಿಣಾಂಶ ಕಬ್ಬಿಣದ ಕೊರತೆಯ ರಕ್ತಹೀನತೆಯನ್ನು ತಡೆಗಟ್ಟಲು ಅಗತ್ಯ, ಇದು ಗರ್ಭಾವಸ್ಥೆಯಲ್ಲಿ ಇದು ಸಾಮಾನ್ಯವಾಗಿದೆ, ಏಕೆಂದರೆ ಬೆಳೆಯುತ್ತಿರುವ ಭ್ರೂಣ ಮತ್ತು ಪ್ಲಸಂಟಾಕ್ಕೆ ಕಬ್ಬಿಣಾಂಶ ಹೆಚ್ಚು ಅಗತ್ಯದ್ದಾಗಿದೆ. ಅಲ್ಲದೆ,ಫೋಲಿಕ್ ಆಮ್ಲ ಮಗುವಿನ ಆರೋಗ್ಯಕರ ನರಮಂಡಲದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದು ಸಹಾಯ ಕೆಂಪು ರಕ್ತ ಕಣಗಳ ಉತ್ಪಾದನೆ ಮತ್ತು DNA ಸಂಶ್ಲೇಷಣೆಗೆ ಸಹಾಯ ಮಾಡುತ್ತದೆ. ಇದಲ್ಲದೆ, ತಾಯಿ ಮತ್ತು ಭ್ರೂಣದಲ್ಲಿ ರಕ್ತಹೀನತೆಯನ್ನು ತಡೆಯುತ್ತದೆ.

ಅಧ್ಯಯನ ದ ಪ್ರಕಾರ ಫೋಲಿಕ್ ಆಸಿಡ್ ಪೂರಕವನ್ನು ತೆಗೆದುಕೊಂಡ ಗರ್ಭಿಣಿಯರು ಪೂರಕವನ್ನು ತೆಗೆದುಕೊಳ್ಳದವರಿಗಿಂತ ಗಮನಾರ್ಹವಾಗಿ ಹೆಚ್ಚಿನ ಕಬ್ಬಿಣಾಂಶದ ಮಟ್ಟವನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ.

ಇನ್ನೊಂದು ಅಧ್ಯಯನ ಫೋಲಿಕ್ ಆಸಿಡ್ ಪೂರಕವನ್ನು ತೆಗೆದುಕೊಂಡ ಗರ್ಭಿಣಿಯರು ಕಬ್ಬಿಣಾಂಶ ಕೊರತೆಯಿಂದಾಗುವ ರಕ್ತಹೀನತೆಯನ್ನು ಹೊಂದುವ ಸಾಧ್ಯತೆ ಕಡಿಮೆ ಎಂದು ಹೇಳಿದೆ.

Also Read: ಗರ್ಭಿಣಿಯರು ಪ್ರತಿ ದಿನ ಬಾದಾಮಿ ತಿಂದರೆ ಹುಟ್ಟುವ ಮಕ್ಕಳ ಬುದ್ಧಿ ಚುರುಕಾಗುತ್ತದೆ ಎಂಬುದು ನಿಜವೇ?

ಹಾಗೆಯೇ ಬೀಟ್ರೂಟ್ ಮತ್ತುಸಬ್ಬಸಿಗೆ ಸೊಪ್ಪು ಒಂದಷ್ಟು ಕಬ್ಬಿಣಾಂಶವನ್ನು ಹೊಂದಿರಬಹುದು. ಆದರೆ ಇದು ವೈದ್ಯರು ಸೂಚಿಸುವ ಕಬ್ಬಿಣಾಂಶದ ಪೂರಕದಂತೆಯೇ ಅದೇ ಮಟ್ಟದ ಕಬ್ಬಿಣದ ಪೂರಕವನ್ನು ಗರ್ಭಿಣಿಯರಿಗೆ ಒದಗಿಸುವ ಸಾಧ್ಯತೆಯಿಲ್ಲ.

ಸಾಮಾನ್ಯವಾಗಿ ಸೇವನೆಯನ್ನು ಖಚಿತಪಡಿಸುವುದರೊಂದಿಗೆ ವೈದ್ಯರು ಫೋಲಿಕ್‌ ಆಮ್ಲದ ಪೂರಕಗಳನ್ನು ಸಾಮಾನ್ಯವಾಗಿ ಗರ್ಭಾವಸ್ಥೆಯ ಮೊದಲು ಮತ್ತು ಗರ್ಭಿಣಿಯಾದ ಬಳಿಕ ದಿನಕ್ಕೆ 400-800 ಎಂಜಿಯಷ್ಟು ಶಿಫಾರಸು ಮಾಡುತ್ತಾರೆ. ಇದರೊಂದಿಗೆ ಅಗತ್ಯವಿರುವ ಪೌಷ್ಟಿಕಾಂಶದ ಬೇಡಿಕೆಯನ್ನು ಪೂರೈಸಲು ಆಹಾರದ ಮೂಲಗಳಾದ ಎಲೆಗಳ ಸೊಪ್ಪುಗಳು ಮತ್ತು ಧಾನ್ಯಗಳನ್ನು ಸಹ ಆಹಾರದಲ್ಲಿ ಸೇರಿಸಬಹುದು.

ಆದ್ದರಿಂದ ಈ ಸತ್ಯಶೋಧನೆ ಪ್ರಕಾರ, ಗರ್ಭಿಣಿಯರಿಗೆ ಕಬ್ಬಿಣಾಂಶದ ಬದಲಿಗೆ ಬೀಟ್ರೂಟ್, ಸಬ್ಬಸಿಗೆ ಸೊಪ್ಪು ಕೊಡಬೇಕು ಎನ್ನುವುದು ತಪ್ಪಾಗಿದೆ. ಉತ್ತಮ ಆಹಾರದ ಭಾಗವಾಗಿ ಬೀಟ್ರೂಟ್‌, ಸಬ್ಬಸಿಗೆ ಸೊಪ್ಪುಗಳನ್ನು ಸೇವಿಸಬಹುದಾಗಿದೆ.

Result: False

Our Sources
Iron Deficiency Anemia in Pregnancy – PubMed (nih.gov)

Folic Acid Supplementation and Pregnancy: More Than Just Neural Tube Defect Prevention – PMC (nih.gov)

Folic Acid Supplementation and Pregnancy: More Than Just Neural Tube Defect Prevention – PMC (nih.gov)

Association between iron-folic acid supplementation and pregnancy-induced hypertension among pregnant women in public hospitals,

Wolaita Sodo, Ethiopia 2021: a case- control study | BMC Public Health | Full Text (biomedcentral.com)

Daily oral iron supplementation during pregnancy – PubMed (nih.gov)

Root Vegetables—Composition, Health Effects, and Contaminants – PMC (nih.gov)

Full article: Antioxidant Potential of Different Dill (Anethum Graveolens L.) Leaf Extracts (tandfonline.com)

Women Need 400 mcg of Folic Acid Every Day | CDC


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.