Authors
Claim
ಚಪ್ಪಲಿಯಲ್ಲಿ ಹೊಡೆದಾಡಿದ ಮಧ್ಯಪ್ರದೇಶ ಕಾಂಗ್ರೆಸ್ ನಾಯಕರು
Fact
ವೈರಲ್ ವೀಡಿಯೋ ಮಧ್ಯಪ್ರದೇಶ ಕಾಂಗ್ರೆಸ್ ಸಭೆಯಲ್ಲಿ ನಡೆದ ಹೊಡೆದಾಟವಲ್ಲ, ಇದು 2019 ರಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ನಾಯಕರು ಹೊಡೆದಾಡಿಕೊಂಡ ಹಳೆಯ ವೀಡಿಯೋವಾಗಿದೆ.
ಮಧ್ಯಪ್ರದೇಶ ಕಾಂಗ್ರೆಸ್ ಸಭೆಯಲ್ಲಿ ಪಕ್ಷದ ನಾಯಕರ ಮಧ್ಯೆ ಹೊಡೆದಾಟ ನಡೆದಿದೆ ಎಂಬಂತೆ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಫೇಸ್‌ಬುಕ್‌ನಲ್ಲಿ ಕಂಡುಬಂದಿರುವ ಈ ಕ್ಲೇಮಿನಲ್ಲಿ, “ಮದ್ಯಪ್ರದೇಶದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿದ ಮೇಲೆ ರಾಹುಲ್ ಗಾಂಧಿಯ ಪ್ಯಾರ್ ಕೇ ದುಕಾನ್ ನಲ್ಲಿ ಪ್ರೀತಿ ಉಕ್ಕಿ ಹರಿದು…… ಕಾಲಲ್ಲಿದ್ದ ಚಪ್ಪಲಿ ತೆಗೆದುಕೊಂಡು ಪ್ರೀತಿ ಹಂಚಿಕೊಂಡ ಕಾಂಗ್ರೆಸ್ ನಾಯಕರುಗಳು” ಎಂದಿದೆ.
Also Read: ಇಸ್ರೇಲ್ ಸ್ನಿಪರ್ ಗಳು ಶೂಟ್ ಮಾಡುತ್ತಿರುವ ದೃಶ್ಯ ಎನ್ನುವುದು ನಿಜವಾದ್ದೇ?
ಇದೇ ವಿಚಾರದ ಬಗ್ಗೆ ಸತ್ಯಶೋಧನೆ ನಡೆಸುವಂತೆ ಬಳಕೆದಾರರೊಬ್ಬರು ನ್ಯೂಸ್‌ಚೆಕರ್ ವಾಟ್ಸಾಪ್ ಟಿಪ್ ಲೈನ್ ಮೂಲಕ ಮನವಿ ಮಾಡಿದ್ದು, ಅದನ್ನು ಸತ್ಯಶೋಧನೆಗೆ ಅಂಗೀಕರಿಸಲಾಗಿದೆ.
ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ.
Fact Check/Verification
ಸತ್ಯಶೋಧನೆ ನಡೆಸುವ ವೇಳೆ ಮೊದಲು ನಾವು ರಾಜಸ್ಥಾನ ಕಾಂಗ್ರೆಸ್ ನಾಯಕ ಹೊಡೆದಾಟ ಎಂದು ಕೀವರ್ಡ್ ಸರ್ಚ್ ನಡೆಸಿದ್ದೇವೆ. ಆದರೆ ಯಾವುದೇ ನಿರ್ದಿಷ್ಟ ವರದಿಗಳು ಲಭ್ಯವಾಗಿಲ್ಲ.
ಅನಂತರ ನಾವು ವೀಡಿಯೋ ಕೀಫ್ರೇಮ್ ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದು, ಇದು ಮಾರ್ಚ್ 6, 2019 ರ ಪತ್ರಿಕಾ ನ್ಯೂಸ್ನ ಈ ಹಿಂದಿ ಸುದ್ದಿ ವರದಿಗೆ ನಮ್ಮನ್ನು ಕರೆದೊಯ್ದಿದೆ., ಉತ್ತರ ಪ್ರದೇಶದ ಸಂತ ಕಬೀರ್ ನಗರ ಜಿಲ್ಲೆಯಲ್ಲಿ ಬಿಜೆಪಿ ಸಂಸದ ಶರದ್ ತ್ರಿಪಾಠಿ ಮತ್ತು ಶಾಸಕ ರಾಕೇಶ್ ಬಘೇಲ್ ನಡುವೆ ಹೊಡೆದಾಟ ನಡೆಯಿತು, ನಂತರ ಆಗಿನ ಪಕ್ಷದ ರಾಜ್ಯ ಅಧ್ಯಕ್ಷ ಡಾ.ಮಹೇಂದ್ರನಾಥ್ ಪಾಂಡೆ ಇಬ್ಬರೂ ನಾಯಕರಿಗೆ ಸಮನ್ಸ್ ನೀಡಿದ್ದಾಗಿ ಹೇಳಿದೆ.
ಇದನ್ನು ಪರಿಗಣಿಸಿ ನಾವು ಇನ್ನಷ್ಟು ಕೀವರ್ಡ್ ಸರ್ಚ್ ನಡೆಸಿದ್ದು, ಇಬ್ಬರ ಹೊಡೆದಾಟದ ಬಗ್ಗೆ ಅನೇಕ ವರದಿಗಳು ಲಭ್ಯವಾಗಿವೆ. ಜೊತೆಗೆ ಹಲವು ವರದಿಗಳಲ್ಲಿ ವೀಡಿಯೋದ ಹಲವು ಕೋನಗಳ ದೃಶ್ಯಗಳನ್ನು ನಾವು ಗಮನಿಸಿದ್ದೇವೆ.
Also Read: ಹಮಾಸ್ ದಾಳಿಕೋರರು ಇಸ್ರೇಲ್ ವ್ಯಕ್ತಿಯ ಎದೆ ಸೀಳಿ ಹೃದಯ ಹೊರ ತೆಗೆದಿದ್ದಾರೆಯೇ?
“ಸಂತ ಕಬೀರ್ ನಗರದ ಬಿಜೆಪಿ ಸಂಸದ ಶರದ್ ತ್ರಿಪಾಠಿ ಮತ್ತು ಮೆಹ್ದವಾಲ್ ಶಾಸಕ ರಾಕೇಶ್ ಸಿಂಗ್ ಬಘೇಲ್ ಅವರು ಬುಧವಾರ ಉತ್ತರ ಪ್ರದೇಶದಲ್ಲಿ ನಡೆದ ಅಧಿಕೃತ ಸಭೆಯಲ್ಲಿ ಜಗಳವಾಡಿದ್ದಾರೆ. ತ್ರಿಪಾಠಿ ತನ್ನ ಶೂನಿಂದ ಬಾಘೇಲ್ ಗೆ ಹೊಡೆಯುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಯೋಜನೆಯೊಂದರ ಶಿಲಾನ್ಯಾಸ ವಿಚಾರದಲ್ಲಿ ಹೆಸರು ಹಾಕುವ ವಿಚಾರದಲ್ಲಿ ವಾಗ್ವಾದ ಆರಂಭವಾಗಿದ್ದು, ಹೊಡೆದಾಟಕ್ಕೆ ತಿರುಗಿದೆ. ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಇಬ್ಬರನ್ನು ಬಿಡಿಸುವುದಕ್ಕೂ ಮೊದಲು ಬಾಘೇಲ್ ಲೋಕಸಭಾ ಸಂಸದರು ಕೆಲವು ಏಟುಗಳನ್ನು ತಿಂದರು” ಎಂದು ಮಾರ್ಚ್ 6, 2019 ರ ಹಿಂದೂಸ್ತಾನ್ ಟೈಮ್ಸ್ ವರದಿಯಲ್ಲಿ ತಿಳಿಸಲಾಗಿದೆ.
“ಜಿಲ್ಲೆಯನ್ನು ಪ್ರತಿನಿಧಿಸುವ ಬಿಜೆಪಿ ಸಂಸದ ಶರದ್ ತ್ರಿಪಾಠಿ ಅವರು ಸ್ಥಳೀಯ ರಸ್ತೆಯ ಶಿಲಾನ್ಯಾಸದ ಶಿಲೆಯಲ್ಲಿ ತಮ್ಮ ಹೆಸರು ಯಾಕೆ ಸೇರಿಸಲಿಲ್ಲ ಎಂದು ಕೇಳಿದ ನಂತರ ಜಗಳ ಪ್ರಾರಂಭವಾಯಿತು. ಜಿಲ್ಲೆಯ ಶಾಸಕರಲ್ಲಿ ಒಬ್ಬರಾದ ರಾಕೇಶ್ ಬಘೇಲ್ ಅವರು ಇದು ಅವರ ನಿರ್ಧಾರ ಎಂದು ಹೇಳಿದರು” ಎಂದು ಮಾರ್ಚ್ 6, 2019 ರ ಘಟನೆಯ ಬಗ್ಗೆ ಎನ್‌ಡಿಟಿವಿ ವರದಿಯಲ್ಲಿ ತಿಳಿಸಲಾಗಿದೆ, ಈ ಸಭೆ ಜಿಲ್ಲಾ ಸಮನ್ವಯ ಸಭೆಯಾಗಿದ್ದು, ಈ ಪ್ರದೇಶದ ಅಭಿವೃದ್ಧಿ ಯೋಜನೆಗಳು ಮತ್ತು ಇತರ ಕಾರ್ಯಗಳನ್ನು ಪರಿಶೀಲಿಸಲು ಉನ್ನತ ಸಾರ್ವಜನಿಕ ಅಧಿಕಾರಿಗಳು ಸಭೆ ಸೇರಿದ್ದರು. ಈ ಘಟನೆ ಬಗ್ಗೆ ಇದೇ ರೀತಿಯ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು, ಇವುಗಳು ವೈರಲ್ ವೀಡಿಯೋ 2019 ರ ಘಟನೆಯದ್ದು ಎಂದು ದೃಢಪಡಿಸಿದೆ.
Also Read: 26 ಮಂದಿ ಹಮಾಸ್ ದಾಳಿಕೋರರನ್ನು ಕೊಂದ ಇಸ್ರೇಲಿ ಮಹಿಳೆ, ವೈರಲ್ ಫೋಟೋ ನಿಜವಾದ್ದೇ?
Conclusion
ಸತ್ಯಶೋಧನೆಯ ಪ್ರಕಾರ, ಮಾರ್ಚ್ 2019 ರಲ್ಲಿ ಉತ್ತರ ಪ್ರದೇಶದಲ್ಲಿಬಿಜೆಪಿ ನಾಯಕರು ಪರಸ್ಪರ ಹೊಡೆಯುವ ಹಳೆಯ ವೀಡಿಯೋವನ್ನು ಮಧ್ಯಪ್ರದೇಶದ ಕಾಂಗ್ರೆಸ್ ಸಭೆಯಲ್ಲಿ ನಡೆದ ಘಟನೆ ಎಂದು ತಪ್ಪಾಗಿ ಹೇಳಲಾಗಿದೆ.
Result: False
Our Sources
Report By Patrika, Dated: March 6, 2019
Report By Hindustan Times Dated: March 6, 2019
Report By NDTV, Dated: March 6, 2019
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.