Fact Check: 26 ಮಂದಿ ಹಮಾಸ್‌ ದಾಳಿಕೋರರನ್ನು ಕೊಂದ ಇಸ್ರೇಲಿ ಮಹಿಳೆ, ವೈರಲ್‌ ಫೋಟೋ ನಿಜವಾದ್ದೇ?

ಹಮಾಸ್‌-ಇಸ್ರೇಲ್‌ ಕದನ ಇಸ್ರೇಲ್‌ ಮಹಿಳೆ, 25 ಮಂದಿ ದಾಳಿಕೋರರ ಹತ್ಯೆ, ಮಾಡೆಲ್‌,

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
26 ಮಂದಿ ಹಮಾಸ್‌ ದಾಳಿಕೋರರನ್ನು ಕೊಂದ ಇಸ್ರೇಲಿ ಮಹಿಳೆ

Fact
ಕ್ಲೇಮಿನಲ್ಲಿ ಹೇಳಿರುವ ರೀತಿ ಮಹಿಳೆಯೊಬ್ಬರೇ 26 ಮಂದಿ ಉಗ್ರರನ್ನು ಕೊಂದಿಲ್ಲ. ತನ್ನ ಭದ್ರತಾ ಗುಂಪನ್ನು ಮುನ್ನಡೆಸಿ ಅವರು ಈ ಕೆಲಸ ಮಾಡಿದ್ದಾರೆ ಮತ್ತು ಕ್ಲೇಮಿನಲ್ಲಿ ಹಾಕಿರುವ ಫೊಟೋ ಕಾರ್ಯಾಚರಣೆಯಲ್ಲಿ ಭಾಗಿಯಾದ ಮಹಿಳೆಯಲ್ಲ

ಇಸ್ರೇಲ್‌ನಲ್ಲಿ ಮಹಿಳೆಯೊಬ್ಬಳು 26 ಮಂದಿ ಹಮಾಸ್‌ ಬಂಡುಕೋರರನ್ನು ಹೊಡೆದು ಕೊಂದಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿದಾಡುತ್ತಿದೆ.

ಈ ಕುರಿತು ಫೇಸ್‌ಬುಕ್‌ನಲ್ಲಿ ಕಂಡುಬಂದ ಹೇಳಿಕೆಯೊಂದರಲ್ಲಿ “ಚಿತ್ರದುರ್ಗದ ವೀರವನಿತೆ ಒನಕೆ ಓಬವ್ವನ ರಣೋತ್ಸಾಹ ಇಸ್ರೇಲ್ ಮಹಿಳೆಯಲ್ಲಿ ಮರುಕಳಿಸಿದೆ …ದೇಶ ರಕ್ಷಣೆಗೆ ನಿಂತಿದೆ !! ಕೈಗೆ ಸಿಕ್ಕಿದ ಒನಕೆ ಹಿಡಿದಳು, ಒನಕೆಯ ಬೀಸಿ ಕೊಂದಳು ನಾರಿ ದುರ್ಗವು ಮರೆಯದ ವೀರವನಿಗೆ ಓಬವ್ವ.. ಕೈಗೆ ಸಿಕ್ಕಿದ ಗನ್‌ ಹಿಡಿದಳು ಇಪ್ಪತ್ತಾರು ಉಗ್ರರನ್ನು ಕೊಂದಳು, ಇಸ್ರೇಲ್‌ ಮರೆಯದ ವೀರವನಿತೆ..” ಎಂದು ಹೇಳಲಾಗಿದೆ.

ಈ ಪೋಸ್ಟ್ ನಲ್ಲಿ ಒನಕೆ ಓಬವ್ವ ಮತ್ತು ಗನ್‌ ಹಿಡಿದ ಮಹಿಳೆಯೊಬ್ಬರನ್ನು ಸಮೀಕರಿಸಲಾಗಿದೆ.

Also Read: ಕೊಚ್ಚಿ ಲುಲು ಮಾಲ್‌ ನಲ್ಲಿ ಭಾರತದ್ದಕ್ಕಿಂತ ದೊಡ್ಡದಾದ ಪಾಕಿಸ್ಥಾನ ಧ್ವಜ ಹಾಕಲಾಗಿದೆ ಎನ್ನುವುದು ಸತ್ಯವೇ?

Fact Check: 26 ಮಂದಿ ಹಮಾಸ್‌ ದಾಳಿಕೋರರನ್ನು ಕೊಂದ ಇಸ್ರೇಲಿ ಮಹಿಳೆ, ವೈರಲ್‌ ಫೋಟೋ ನಿಜವಾದ್ದೇ?

ಸತ್ಯಶೋಧನೆಗಾಗಿ ನಾವು ಇದನ್ನು ಪರಿಶೀಲಿಸಿದ್ದು, ಇದು ಭಾಗಶಃ ತಪ್ಪು ಎಂದು ಕಂಡುಬಂದಿದೆ.

Fact Check/ Verification

ಸತ್ಯಶೋಧನೆಗಾಗಿ ನಾವು ಗೂಗಲ್‌ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ.

ಈ ವೇಳೆ ಅಕ್ಟೋಬರ್ 11, 2023ರ ಎಎನ್‌ಐ ನ್ಯೂಸ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ “How this Israeli Soldier killed 25 Hamas terrorists and saved women and children in Kibbutz” ಶೀರ್ಷಿಕೆಯ ವೀಡಿಯೋ ಲಭ್ಯವಾಗಿದೆ. ಈ ವೀಡಿಯೋದ ವಿವರಣೆಯಲ್ಲಿ ಇನ್ಬಲ್‌ ಲೈಬೆರ್ ಮನ್‌ ಎಂಬಾಕೆ ಹಮಾಸ್‌ನ 25 ಮಂದಿ ದಾಳಿಕೋರರನ್ನು ಕೊಂದಿರುವುದಾಗಿ ಹೇಳಲಾಗಿದೆ. ಈಕೆ ನಿರ್-ಅಮ್‌-ಕಿಬ್ಬುಟ್ಸ್ ಎಂಬ ಭದ್ರತಾ ಗುಂಪಿನ ಮುಖ್ಯಸ್ಥೆಯಾಗಿದ್ದು ಹಲವರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿದ್ದಾಳೆ ಎಂದು ಹೇಳಲಾಗಿದೆ.

ಈ ವೀಡಿಯೋವನ್ನು ಸಾಕ್ಷ್ಯವಾಗಿರಿಸಿ ನಾವು “Inbal Lieberman” ಹೆಸರಿನ ಬಗ್ಗೆ ಮತ್ತಷ್ಟು ಶೋಧ ನಡೆಸಿದ್ದೇವೆ.

ಈ ವೇಳೆ ಅಕ್ಟೋಬರ್ 10, 2023ರ ನ್ಯೂಯಾರ್ಕ್ ಪೋಸ್ಟ್ ನ ವರದಿ ಲಭ್ಯವಾಗಿದೆ. ಇದರಲ್ಲಿ “25 ವರ್ಷದ ಇಸ್ರೇಲಿ ಮಹಿಳೆ ಇನ್ಬಲ್‌ ಲೈಬೆರ್ಮನ್‌ ಎಂಬವರು ಕಿಬ್ಬುಟ್ಸ್ ಎಂಬಲ್ಲಿಯ ನಿವಾಸಿಗಳ ತಂಡವನ್ನು ಮುನ್ನಡೆಸಿ ಸ್ವತಃ 5 ಮಂದಿಯ ಹತ್ಯೆ ಮಾಡುವುದರೊಂದಿಗೆ ಒಟ್ಟು 25 ಮಂದಿ ಹಮಾಸ್‌ ದಾಳಿಕೋರರನ್ನು ಕೊಂದ ಬಗ್ಗೆ ಮತ್ತು ಇಡೀ ಕಿಬ್ಬುಟ್ಸ್ ನ ನಿವಾಸಿಗಳ ರಕ್ಷಣೆ ಮಾಡಿದ್ದಾರೆ” ಎಂದು ಹೇಳಿದೆ. ಈ ವರದಿಯಲ್ಲಿ ಆ ಮಹಿಳೆಯದ್ದು ಎನ್ನಲಾದ ಫೋಟೋವನ್ನು ಕೊಡಲಾಗಿದ್ದು, ಕ್ಲೇಮಿನಲ್ಲಿರುವ ಫೋಟೋಕ್ಕಿಂತ ಭಿನ್ನವಾಗಿ ಇರುವುದನ್ನು ನಾವು ಗಮನಿಸಿದ್ದೇವೆ.

ಅಕ್ಟೋಬರ್ 10, 2023ರ ಟೈಮ್ಸ್ ನೌ ವರದಿ ಪ್ರಕಾರ “ಕಿಬ್ಬುಟ್ಸ್ ನಿರ್ ಅಮ್‌ ಗ್ರಾಮವು ಗಾಝಾ ಗಡಿಗೆ ತಾಗಿಕೊಂಡಿದ್ದು ಹಮಾಸ್ ದಾಳಿಕೋರರು ಇಸ್ರೇಲ್‌ ಮೇಲೆ ಅಚ್ಚರಿಯ ದಾಳಿ ನಡೆಸಿದಾಗ ಇಲ್ಲಿಗೂ ದಾಳಿ ನಡೆಸಿದ್ದರು. ಈ ವೇಲೆ 25 ವರ್ಷದ ಇನ್ಬಲ್‌ ಲೈಬೆರ್ಮನ್‌ ಎಂಬ ಮಹಿಳೆ ಕಿಬ್ಬುಟ್ಸ್ ಭದ್ರತೆಯ ಸಂಯೋಜಕಿ 25 ಮಂದಿ ಉಗ್ರರನ್ನು ಹೊಡೆದು ಹಾಕುವಲ್ಲಿ ಯಶಸ್ವಿಯಾದ ಬಳಿಕ ದಾಳಿಕೋರರು ಅಲ್ಲಿಂದ ಕಾಲ್ಕಿತ್ತಿದ್ದಾರೆ.” ಎಂದಿದೆ.

Also Read: ಸನ್ಮಾನ ತಿರಸ್ಕರಿಸಿ ಅಹಂಕಾರ ತೋರಿಸಿದ ಸಿಎಂ ಸಿದ್ದರಾಮಯ್ಯ ಎಂಬುದು ನಿಜವೇ?

ಈ ಬಳಿಕ ನಾವು ಎಕ್ಸ್ ನಲ್ಲಿ ಇಸ್ರೇಲ್‌ ಇನ್ ಇಂಡಿಯಾದ ಪೋಸ್ಟ್ ಅನ್ನು ಗಮನಿಸಿದ್ದೇವೆ. ಈ ಪೋಸ್ಟ್‌ ಪ್ರಕಾರ, “ಈ ಯುವತಿ ಇನ್ಬಾಲ್ ಲೈಬರ್ಮನ್ ನಿರ್-ಆಮ್ ಕಿಬ್ಬುಟ್ಜ್ ಭದ್ರತಾ ಮುಖ್ಯಸ್ಥೆ. ಹಮಾಸ್‌ನ ಭಯೋತ್ಪಾದಕ ದಾಳಿಯ ಸಮಯದಲ್ಲಿ, ಅವರು ಬುದ್ಧಿವಂತಿಕೆ ತೋರಿಸಿದ್ದು, ಎಲ್ಲ ಮಹಿಳೆಯರು ಮತ್ತು ಮಕ್ಕಳನ್ನು ಸುರಕ್ಷಿತ ಸ್ಥಳಗಳಿಗೆ ಸೇರಿಸಿದರು ಮತ್ತು ಧೈರ್ಯದಿಂದ ಹೋರಾಡಿದರು ಮತ್ತು 25 ಭಯೋತ್ಪಾದಕರನ್ನು ಕೊಂದರು. ಈ ಧೈರ್ಯಶಾಲಿ ಮಹಿಳೆಯಿಂದಾಗಿ, ಇಡೀ ಕಿಬ್ಬುಟ್ಜ್ ಅನ್ನು ಉಳಿಸಲಾಗಿದೆ. ಇನ್ಬಾಲ್‌ ಚೇತನ ಮತ್ತು ಶೌರ್ಯಕ್ಕೆ ನಾವು ವಂದಿಸುತ್ತೇವೆ” ಈ ಪೋಸ್ಟ್ ನಲ್ಲಿ ಮಹಿಳೆಯ ಫೋಟೋವನ್ನು ಲಗತ್ತಿಸಲಾಗಿದ್ದು, ಅದು ಕ್ಲೇಮಿನ ಫೋಟೋಕ್ಕಿಂತ ಭಿನ್ನವಾಗಿರುವುದನ್ನು ನಾವು ಗಮನಿಸಿದ್ದೇವೆ.

ಈ ವರದಿಗಳ ಪ್ರಕಾರ, ಇನ್ಬಾಲ್‌ ಲೈಬರ್ಮನ್‌ ತನ್ನ ಭದ್ರತಾ ತಂಡದೊಂದಿಗೆ 25 ಮಂದಿ ದಾಳಿಕೋರರನ್ನು ಹೊಡೆದು ಹಾಕುವಲ್ಲಿ ಯಶಸ್ವಿಯಾಗಿದ್ದಾಳೆ ಎಂದಿದೆ. ಇನ್ನು ಕ್ಲೇಮಿನಲ್ಲಿ ನೀಡಲಾದ ಬಂದೂಕು ಧಾರಿ ಮಹಿಳೆಯ ಬಗ್ಗೆ ಶೋಧನೆಗಾಗಿ ನಾವು ರಿವರ್ಸ್‌ ಇಮೇಜ್‌ ಸರ್ಚ್ ನಡೆಸಿದ್ದೇವೆ.

ಈ ಸಂದರ್ಭ ಒರಿನ್‌ ಜ್ಯೂಲಿ ಎಂಬ ಯೂಟ್ಯೂಬ್‌ ಚಾನೆಲ್ ಪತ್ತೆ ಹಚ್ಚಿದ್ದೇವೆ. ಈ ಚಾನೆಲ್‌ ನಲ್ಲಿರುವ ಮಹಿಳೆಯ ವೀಡಿಯೋ, ಫೋಟೋಗಳಿಗೆ, ಕ್ಲೇಮಿನಲ್ಲಿರುವ ಫೋಟೋಗಳಿಗೆ ಸಾಮ್ಯತೆ ಇರುವುದನ್ನು ಗುರುತಿಸಿದ್ದೇವೆ.

ಆ ಪ್ರಕಾರ ನಾವು ಗೂಗಲ್‌ ನಲ್ಲಿ Orin Julie ಎಂದು ಸರ್ಚ್ ಮಾಡಿದ್ದು ಈ ವೇಳೆ ಒರಿನ್‌ ಅವರ ಇನ್‌ಸ್ಟಾ ಗ್ರಾಂ ಖಾತೆ ಪತ್ತೆಯಾಗಿದೆ. ಈ ಖಾತೆಯಲ್ಲಿ ಅವರು ಕ್ವೀನ್ ಆಫ್‌ ಗನ್ಸ್ ಮತ್ತು ಮೆಂಟಲ್‌ ಹೆಲ್ತ್ ಆಂಡ್ ಫೈರ್‌ ಆರ್ಮ್ಸ್‌ ಎಂದು ಬರೆದುಕೊಂಡಿದ್ದಾರೆ.

ಈ ಇನ್‌ಸ್ಟಾಗ್ರಾಂ ಖಾತೆಯನ್ನು ಪರಿಶೀಲಿಸಿದಾಗ, ಕ್ಲೇಮಿನಲ್ಲಿರುವ ಫೋಟೋ ಇಲ್ಲೂ ಪತ್ತೆಯಾಗಿದೆ.

Also Read: ಅಮರ್ತ್ಯ ಸೇನ್ ಅವರು ನಿಧನರಾಗಿದ್ದಾರೆ ಎನ್ನುವ ಪೋಸ್ಟ್ ನಿಜವೇ?

Instagram will load in the frontend.

ಶೋಧನೆಗಳ ಪ್ರಕಾರ, ಒರಿನ್‌ ಜ್ಯೂಲಿ ಅವರು ಒಬ್ಬರು ರೂಪದರ್ಶಿ ಮತ್ತು ಬಂದೂಕು ತರಬೇತುದಾರರಾಗಿದ್ದು, ಇಸ್ರೇಲ್‌ ನವರು. ಇವರು ಮಾನಸಿಕ ಆರೋಗ್ಯದ ಕುರಿತ ಕಾರ್ಯಕ್ರಮಗಳನ್ನೂ ನಡೆಸಿಕೊಡುತ್ತಾರೆ. ಒರಿನ್‌ ಜ್ಯೂಲಿ ಅವರ ಬಗ್ಗೆ ಹೆಚ್ಚಿನ ವಿವರಗಳನ್ನು ನಾವು ವೈನೆಟ್ ನ್ಯೂಸ್‌.ಕಾಮ್‌ ನಲ್ಲಿ ಕಂಡುಕೊಂಡಿದ್ದೇವೆ.

Conclusion

ಈ ಸತ್ಯಶೋಧನೆ ಪ್ರಕಾರ ಕ್ಲೇಮಿನಲ್ಲಿ ಹೇಳಿರುವಂತೆ, ಇಸ್ರೇಲ್‌ ಮಹಿಳೆಯೊಬ್ಬರು ತಾನೇ 25 ಮಂದಿ ದಾಳಿಕೋರರನ್ನು ಹತ್ಯೆಗೈದಿದ್ದಲ್ಲ, ಬದಲಾಗಿ ತನ್ನ ಭದ್ರತಾ ತಂಡಕ್ಕೆ ಮಾರ್ಗದರ್ಶನ ಮಾಡಿ ತಾನೂ 5 ಮಂದಿಯನ್ನು ಹತ್ಯೆಗೈಯುವುದರೊಂದಿಗೆ ಈ ಕೆಲಸ ಮಾಡಿದ್ದಾರೆ. ಜೊತೆಗೆ ಫೊಟೋದಲ್ಲಿ ತೋರಿಸಿದ ವ್ಯಕ್ತಿ ಬೇರೆಯಾಗಿದ್ದು ಅವರು ಒರಿನ್ ಜ್ಯೂಲಿ ಎಂಬ ಕಂಟೆಂಟ್ ಕ್ರಿಯೇಟರ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಆದ್ದರಿಂದ ಈ ಕ್ಲೇಮ್ ಭಾಗಶಃ ತಪ್ಪಾಗಿದೆ.

Result: Partly False

Our Sources:

Report By Newyork Post, Dated: October 10, 2023

Report By Times Now, Dated: October 10, 2023

Tweet By Israel in India, Dated October 10, 2023

YouTube Video By ANI News, Dated: October 11, 2023

Instagram Account of Orin Juile


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.