Weekly wrap: ಇಸ್ರೇಲ್‌ ಸ್ನಿಪರ್ ಗಳ ಶೂಟಿಂಗ್‌, ಕಾಂಗ್ರೆಸ್‌ ನಾಯಕರ ಚಪ್ಪಲಿ ಹೊಡೆದಾಟ ವಾರದ ಕ್ಲೇಮ್‌ ನೋಟ

weekly wrap

ಇಸ್ರೇಲ್‌ ಹಮಾಸ್ ಸಂಘರ್ಷದ ಹಿನ್ನೆಲೆಯಲ್ಲಿ ಈ ವಾರವೂ ಇಸ್ರೇಲ್‌ ಸ್ನಿಪರ್ ಗಳು ಶೂಟ್ ಮಾಡುತ್ತಿರುವ ದೃಶ್ಯ ಎಂದು ವೀಡಿಯೋ ಗೇಮ್‌ ದೃಶ್ಯಗಳು ವೈರಲ್‌ ಆಗಿದ್ದವು. ಬಿಜೆಪಿ ಸಂಸದ-ಶಾಸಕರ ನಡುವಿನ ಹೊಡೆದಾಟ, ಮಧ್ಯಪ್ರದೇಶದ ಕಾಂಗ್ರೆಸ್ ನಾಯಕರ ಚಪ್ಪಲಿ ಹೊಡೆದಾಟ ಎಂದು ಬಿಂಬಿತವಾಗಿತ್ತು. ಇದರೊಂದಿಗೆ ಆರೆಸ್ಸೆಸ್‌ ಶಾಖೆಯಲ್ಲಿ ಮಕ್ಕಳಿಗೆ ಹೊಡೆಯಲಾಗುತ್ತಿದೆ ಎಂದು ಶಾಲೆಯೊಂದರ ವೀಡಿಯೋ ವೈರಲ್‌ ಆಗಿತ್ತು. ಹಸಿ ಈರುಳ್ಳಿ ಮಜ್ಜಿಗೆ ಅನ್ನದೊಂದಿಗೆ ತಿಂದರೆ ಆರೋಗ್ಯವಂತರಾಗಬಹುದು ಎಂದೂ ಹೇಳಲಾಗಿತ್ತು. ಇವುಗಳನ್ನು ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಹೇಳಿಕೆಗಳು ತಪ್ಪು ಎಂದು ಸಾಬೀತು ಪಡಿಸಿದೆ.

ಇಸ್ರೇಲ್‌ ಸ್ನಿಪರ್ ಗಳು ಶೂಟ್ ಮಾಡುತ್ತಿರುವ ದೃಶ್ಯ ಎನ್ನುವುದು ನಿಜವಾದ್ದೇ?

ಇಸ್ರೇಲ್‌ ಸ್ನಿಪರ್ ಗಳು ಶಕ್ತಿಶಾಲಿ ರೈಫಲ್ ಗಳನ್ನು ಬಳಸಿ ಭಯೋತ್ಪಾದಕರನ್ನು ಶೂಟ್ ಮಾಡುತ್ತಿರುವ ನೈಜ ಮತ್ತು ಇತ್ತೀಚಿನ ದೃಶ್ಯ ಎಂದು ವೀಡಿಯೋವೊಂದು ಹರಿದಾಡಿದೆ. ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ, ವೈರಲ್‌ ವೀಡಿಯೋ ಆರ್ಮಾ 3 ಎಂಬ ವೀಡಿಯೋ ಗೇಮ್‌ ನೊಂದಿಗೆ ರಚಿಸಲಾದ ಸಿಮ್ಯುಲೇಶನ್‌ ಆಗಿದ್ದು, ಇದು ನಿಜವಾದ ವೀಡಿಯೋ ಅಲ್ಲ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ

 ಚಪ್ಪಲಿಯಲ್ಲಿ ಹೊಡೆದಾಡಿದ ಕಾಂಗ್ರೆಸ್ ನಾಯಕರು ಎಂಬ ವೀಡಿಯೋ ಹಿಂದಿನ ಸತ್ಯ ಏನು?

ಮಧ್ಯಪ್ರದೇಶ ಕಾಂಗ್ರೆಸ್‌ ಸಭೆಯಲ್ಲಿ ಪಕ್ಷದ ನಾಯಕರ ಮಧ್ಯೆ ಹೊಡೆದಾಟ ನಡೆದಿದೆ ಎಂಬಂತೆ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆದರೆ ವೈರಲ್‌ ವೀಡಿಯೋ ಮಧ್ಯಪ್ರದೇಶ ಕಾಂಗ್ರೆಸ್‌ ಸಭೆಯಲ್ಲಿ ನಡೆದ ಹೊಡೆದಾಟವಲ್ಲ, ಇದು 2019 ರಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ನಾಯಕರು ಹೊಡೆದಾಡಿಕೊಂಡ ಹಳೆಯ ವೀಡಿಯೋವಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ

ಬುರ್ಖಾ ಧರಿಸದವರನ್ನು ಬಸ್ ಹತ್ತದಂತೆ ಕೇರಳದಲ್ಲಿ ತಡೆಯಲಾಗಿದೆಯೇ?

ಬುರ್ಖಾ ಧರಿಸದವರನ್ನು ಬಸ್‌ ಹತ್ತದಂತೆ ಕೇರಳದಲ್ಲಿ ತಡೆಯಲಾಗಿದೆ ಎಂದು ವೀಡಿಯೋವೊಂದು ಫೇಸ್ಬುಕ್‌ ನಲ್ಲಿ ಹರಿದಾಡಿದೆ. ಆದರೆ ಸತ್ಯಶೋಧನೆಯಲ್ಲಿ ಕಂಡುಬಂದ ಪ್ರಕಾರ ಕಾಸರಗೋಡು, ಕುಂಬಳೆಯ ಈ ವಿದ್ಯಮಾನ ಕಾಲೇಜು ಎದುರು ಬದಿ ಬಸ್‌ ನಿಲ್ದಾಣದಲ್ಲಿ ಬಸ್‌ ನಿಲ್ಲಿಸಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿಭಟಿಸಿದ್ದಾಗಿದೆ. ಈ ವೇಳೆ ವಿದ್ಯಾರ್ಥಿಗಳು ಮತ್ತು ಬಸ್ ಪ್ರಯಾಣಿಕರ ನಡುವಿನ ವಾಗ್ವಾದದ ವೀಡಿಯೋ ಇದಾಗಿದೆ ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ

ಆರೆಸ್ಸೆಸ್‌ ಶಾಖೆಯಲ್ಲಿ ನೀಡುವ ಶಿಕ್ಷಣ ಎಂಬ ಈ ವೈರಲ್ ವೀಡಿಯೋ ಹಿಂದಿನ ಸತ್ಯ ಏನು?

ಆರೆಸ್ಸೆಸ್‌ ಶಾಖೆಯಲ್ಲಿ ನೀಡುವ ಶಿಕ್ಷಣ ಈ ರೀತಿ ಇದೆ ಎಂದು ಶಿಕ್ಷಕರಂತೆ ಕಾಣುವ ವ್ಯಕ್ತಿ ಮಕ್ಕಳಿಗೆ ಹೊಡೆಯುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಈ ಕುರಿತು ಪರಿಶೀಲನೆಯಲ್ಲಿ ಇದು ಉತ್ತರಪ್ರದೇಶ ಸೀತಾಪುರದ ಗುರುಕುಲ ಸಂಸ್ಕೃತ ಶಾಲೆಯಲ್ಲಿ ನಡೆದ ಘಟನೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ

ಹಸಿ ಈರುಳ್ಳಿ ಮಜ್ಜಿಗೆ ಅನ್ನದೊಂದಿಗೆ ತಿನ್ನುವುದರಿಂದ ಆರೋಗ್ಯವಂತರಾಗಬಹುದೇ?

ಹಸಿ ಈರುಳ್ಳಿ ಮಜ್ಜಿಗೆ ಅನ್ನದೊಂದಿಗೆ ತಿನ್ನುವುದರಿಂದ ಆರೋಗ್ಯವಂತರಾಗಬಹುದು ಎಂದು ಹೇಳಿಕೆಯೊಂದು ಹರಿದಾಡಿದೆ. ಸತ್ಯಶೋಧನೆಯಲ್ಲಿ ಈರುಳ್ಳಿ. ಮಜ್ಜಿಗೆ, ಅನ್ನ ಈ ಮೂರು ಉತ್ತಮ ಆಹಾರ ಪದ್ಧತಿಯ ಭಾಗವಾಗಬಹುದು. ಆದರೆ ಇವುಗಳ ಸಂಯೋಜನೆಯಿಂದ ಉತ್ತಮ ಆರೋಗ್ಯ, ವಿವಿಧ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಎನ್ನವುದಕ್ಕೆ ನಿರ್ದಿಷ್ಟ ಪುರಾವೆಗಳಿಲ್ಲ ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.