Fact Check: ಬುರ್ಖಾ ಧರಿಸದವರನ್ನು ಬಸ್ ಹತ್ತದಂತೆ ಕೇರಳದಲ್ಲಿ ತಡೆಯಲಾಗಿದೆಯೇ?

ಬುರ್ಖಾ, ಕೇರಳ, ಬಸ್‌, ಪ್ರತಿಭಟನೆ, ವಿದ್ಯಾರ್ಥಿನಿಯರು

Authors

Sabloo Thomas has worked as a special correspondent with the Deccan Chronicle from 2011 to December 2019. Post-Deccan Chronicle, he freelanced for various websites and worked in the capacity of a translator as well (English to Malayalam and Malayalam to English). He’s also worked with the New Indian Express as a reporter, senior reporter, and principal correspondent. He joined Express in 2001.

Claim
ಬುರ್ಖಾ ಧರಿಸದವರನ್ನು ಬಸ್‌ ಹತ್ತದಂತೆ ಕೇರಳದಲ್ಲಿ ತಡೆಯಲಾಗಿದೆ

Fact
ಕಾಲೇಜು ಎದುರು ಬದಿ ಬಸ್‌ ನಿಲ್ದಾಣದಲ್ಲಿ ಬಸ್‌ ನಿಲ್ಲಿಸಿಲ್ಲ ಎಂದು ಪ್ರತಿಭಟಿಸಿದ ವಿದ್ಯಾರ್ಥಿಗಳು ಮತ್ತು ಬಸ್ ಪ್ರಯಾಣಿಕರ ನಡುವಿನ ವಾಗ್ವಾದದ ವೀಡಿಯೋ ಇದಾಗಿದೆ.

ಬುರ್ಖಾ ಧರಿಸದವರನ್ನು ಬಸ್ ಹತ್ತದಂತೆ ಕೇರಳದಲ್ಲಿ ತಡೆಯಲಾಗಿದೆ ಎಂಬಂತೆ ಪೋಸ್ಟ್ ಗಳು ಫೇಸ್‌ಬುಕ್‌ನಲ್ಲಿ ವೈರಲ್‌ ಆಗಿದೆ.

ಈ ಕುರಿತ ಹೇಳಿಕೆಯಲ್ಲಿ “ಇದು ಕೇರಳ. ಮುಸ್ಲಿಂ ಮಹಿಳಾ ಪ್ರಯಾಣಿಕರು ಬುರ್ಖಾ ಇಲ್ಲದೆ ಮಹಿಳೆಯರನ್ನು ಬಸ್‌ನಲ್ಲಿ ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ. ಈಗ ಹಿಂದೂಗಳು ತಮ್ಮ ತಲೆ ಮುಚ್ಚಿಕೊಳ್ಳಬೇಕು ನಂತರ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಬಹುದು. ಈ ಘಟನೆಯನ್ನು ಯಾವುದೇ ಟಿವಿಚಾನೆಲ್ ಮತ್ತು ಪತ್ರಿಕೆಗಳು ವರದಿ ಮಾಡಿಲ್ಲ ಮಾಧ್ಯಮಗಳು ಯಾಕೆ ನಿಗೂಢವಾಗಿ ಮೌನವಾಗಿವೆ.” ಎಂದು ಬರೆಯಲಾಗಿದೆ.

Also Read:ಇಸ್ರೇಲ್‌ ಸ್ನಿಪರ್ ಗಳು ಶೂಟ್ ಮಾಡುತ್ತಿರುವ ದೃಶ್ಯ ಎನ್ನುವುದು ನಿಜವಾದ್ದೇ?

Fact Check: ಬುರ್ಖಾ ಧರಿಸದವರನ್ನು ಬಸ್ ಹತ್ತದಂತೆ ತಡೆಯಲಾಗಿದೆಯೇ?
ಫೇಸ್‌ಬುಕ್‌ ನಲ್ಲಿ ಕಂಡುಬಂದ ಕ್ಲೇಮ್

ಇದೇ ರೀತಿಯ ಪೋಸ್ಟ್ ಗಳನ್ನು ಇಲ್ಲಿಮತ್ತು ಇಲ್ಲಿ ನೋಡಬಹುದು.

Fact Check/Verification

ಈ ಸಂಭಾಷಣೆ, ಕಾಸರಗೋಡು, ಮಲಯಾಳವಾಗಿದ್ದು, ಸಂಭಾಷಣೆಯಲ್ಲಿ ಎಲ್ಲಿಯೂ ಧಾರ್ಮಿಕ ವಿಚಾರದ ಉಲ್ಲೇಖಗಳು ಕಂಡುಬಂದಿಲ್ಲ. ಒಂದು ಸಂದರ್ಭದಲ್ಲಿ ಬುರ್ಖಾ ಧರಿಸಿದಾಕೆ, “ನೀವು ನನ್ನನ್ನು ನಾಯಿಯ ಮಗಳು ಎಂದು ಏಕೆ ಕರೆದಿದ್ದೀರಿ?” ಎಂದು ಕೂಗುವುದು ಗೊತ್ತಾಗುತ್ತದೆ. ಇದರ ಆಧಾರದಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದು ವೀಡಿಯೋದ ವಿಸ್ತೃತ ಆವೃತ್ತಿಯನ್ನು ನಾವು ಕಂಡುಕೊಂಡಿದ್ದೇವೆ. ಇದನ್ನು ಅಕ್ಟೋಬರ್ 21, 2023 ರಂದು ಫೇಸ್ಬುಕ್ ಪುಟ ಥರ್ಡ್ ಐ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ.

Fact Check: ಬುರ್ಖಾ ಧರಿಸದವರನ್ನು ಬಸ್ ಹತ್ತದಂತೆ ತಡೆಯಲಾಗಿದೆಯೇ?

“ನಿಲ್ದಾಣದಲ್ಲಿ ಬಸ್ ನಿಲ್ಲಲಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಬಸ್ ಅನ್ನು ರಸ್ತೆಯಲ್ಲಿ ನಿಲ್ಲಿಸಿದರು. ಬಸ್ ನಿಲ್ದಾಣವನ್ನು ಅನಧಿಕೃತ ಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದು ಬಸ್ ಸಿಬ್ಬಂದಿ ತಿಳಿಸಿದ್ದಾರೆ. ಕಾಸರಗೋಡು ಜಿಲ್ಲೆ ಕುಂಬಳೆಯ ಸೀತಾಂಗೋಳಿ ಎಂಬಲ್ಲಿ ಈ ಘಟನೆ ನಡೆದಿದೆ ಎಂದಿದೆ.

ಘಟನೆಯ ಬಗ್ಗೆ ಯಾವುದೇ ಸುದ್ದಿ ವರದಿಗಳು ಸಿಗಬಹುದೇ ಎಂದು ನಾನು ಪರಿಶೀಲಿಸಿದಾಗ, ವರದಿಗಾರ ಟಿವಿಯವೆಬ್ಸೈಟ್ನಲ್ಲಿ ಸುದ್ದಿ ಲಭ್ಯವಾಗಿದೆ. ಅಕ್ಟೋಬರ್ 23, 2023 ರಂದು ಪ್ರಕಟವಾದ ಸುದ್ದಿಯು ಹೀಗೆ ಹೇಳುತ್ತದೆ: “ಬಸ್ಸುಗಳು ನಿಲ್ದಾಣದಲ್ಲಿ ನಿಲ್ಲುದೇ ಇರುವುದು ಸಾಮಾನ್ಯವಾದಾಗ, ವಿದ್ಯಾರ್ಥಿಗಳು ಬಸ್ ಅನ್ನು ನಿಲ್ಲಿಸಿದರು. ಕುಂಬಳ-ಮುಳ್ಳೇರಿಯ ಕೆಎಸ್ ಟಿಪಿ ರಸ್ತೆಯ ಭಾಸ್ಕರ ನಗರದಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದೆ. ಕನ್ಸಾ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು.

Also Read: ಹಮಾಸ್‌ ದಾಳಿಕೋರರು ಇಸ್ರೇಲ್‌ ವ್ಯಕ್ತಿಯ ಎದೆ ಸೀಳಿ ಹೃದಯ ಹೊರ ತೆಗೆದಿದ್ದಾರೆಯೇ?

“ಕಾನ್ಸಾ ಮಹಿಳಾ ಕಾಲೇಜಿನ ಮುಂಭಾಗದಲ್ಲಿ ಆರ್ ಟಿ ಒ ನಿಲ್ದಾಣವನ್ನು ಮಂಜೂರು ಮಾಡಿದೆ. ರಸ್ತೆ ನವೀಕರಣ ಕಾರ್ಯದ ಭಾಗವಾಗಿ ಕಾಯುವ ಶೆಡ್ ಅನ್ನು ಸಹ ಸ್ಥಾಪಿಸಲಾಗಿದೆ. ಆದರೆ ಬಸ್ಸುಗಳು ನಿಲ್ದಾಣದಲ್ಲಿ ನಿಲ್ಲದೆ ಹೋಗುವುದು ಸಾಮಾನ್ಯವಾಯಿತು. ಈ ವೇಳೆ ವಿದ್ಯಾರ್ಥಿಗಳು ಹಾಗೂ ಬಸ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ. ಶನಿವಾರ ಕುಂಬಳೆ ಪಟ್ಟಣದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ರಸ್ತೆಯುದ್ದಕ್ಕೂ ಕೆಲಕಾಲ ಬಸ್ ಗಳನ್ನು ತಡೆದರು. ಶನಿವಾರವೂ ವಿದ್ಯಾರ್ಥಿಗಳು ಮತ್ತು ಬಸ್ ಸಿಬ್ಬಂದಿ ನಡುವೆ ವಾಗ್ವಾದ ನಡೆಯಿತು. ಘಟನೆಯ ನಂತರ, ಪೊಲೀಸರು ಬಂದು ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಿದರು.” ಎಂದಿದೆ.

Fact Check: ಬುರ್ಖಾ ಧರಿಸದವರನ್ನು ಬಸ್ ಹತ್ತದಂತೆ ತಡೆಯಲಾಗಿದೆಯೇ?

ಈ ನಂತರ ನಾವು ಕುಂಬಳೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದೇವೆ. “ಈ ಘಟನೆ ಅವರ ಗಮನಕ್ಕೆ ಬಂದಿದೆ” ಎಂದು ಇನ್ಸ್‌ ಪೆಕ್ಟರ್ ಹೇಳಿದ್ದಾರೆ. ಇದರಲ್ಲಿ ಕೋಮು ವಿಚಾರ ಏನೂ ಇಲ್ಲ. ಆದರೆ ಯಾರೂ ದೂರು ದಾಖಲಿಸದ ಕಾರಣ ಯಾವುದೇ ಪ್ರಕರಣ ದಾಖಲಾಗಿಲ್ಲ” ಎಂದು ಅವರು ಹೇಳಿದರು.

Conclusion

ಕುಂಬಳೆ ಕನ್ಸಾ ಮಹಿಳಾ ಕಾಲೇಜಿನ ಮುಂಭಾಗದ ನಿಲ್ದಾಣದಲ್ಲಿ ಬಸ್ ನಿಲ್ಲಲಿಲ್ಲ ಎಂದು ಆರೋಪಿಸಿ ರಸ್ತೆಯಲ್ಲಿ ಬಸ್ ನಿಲ್ಲಿಸಿದ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರ ನಡುವಿನ ಮಾತುಕತೆಗಳ ಬಳಿಕ ವೀಡಿಯೋ ವೈರಲ್‌ ಆಗಿದ್ದು, ವಿವಿಧ ಹೇಳಿಕೆಗಳು ಕಂಡುಬಂದಿವೆ ಎಂದು ನಮ್ಮ ತನಿಖೆಯಿಂದ ತಿಳಿದುಬಂದಿದೆ. ಘಟನೆಯಲ್ಲಿ ಯಾವುದೇ ಕೋಮು ವಿಚಾರಗಳು ಕಂಡುಬಂದಿರುವುದಿಲ್ಲ.

Also Read: ಇಸ್ರೇಲ್‌ ದಾಳಿ ವೇಳೆ ಪ್ಯಾಲಸ್ತೀನೀಯರು ತ್ರಿವರ್ಣ ಧ್ವಜ ಹೊದ್ದು ದಾಳಿಯಿಂದ ಪಾರಾದರು ಎನ್ನುವುದು ನಿಜವೇ?

Result: False

Our Sources:

Facebook Post by Third Eye Media on October 21, 2023

News Report by Reporter TV on October 23, 2023

Telephone Conversation with Kumbla Station House Officer Anoob Kumar E

(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್‌ ಮಲಯಾಳದಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Sabloo Thomas has worked as a special correspondent with the Deccan Chronicle from 2011 to December 2019. Post-Deccan Chronicle, he freelanced for various websites and worked in the capacity of a translator as well (English to Malayalam and Malayalam to English). He’s also worked with the New Indian Express as a reporter, senior reporter, and principal correspondent. He joined Express in 2001.