Authors
Claim
ಸರ್ಕಾರಿ ಬಸ್‌ಗಳು ಹೆಣ್ಣು ಮಕ್ಕಳಿಗೆ ಸುರಕ್ಷಿತವಾಗಿಲ್ಲ ಎಂದು ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಫೇಸ್‌ಬುಕ್‌ನಲ್ಲಿ ಕಂಡು ಬಂದ ಕ್ಲೇಮಿನಲ್ಲಿ “ಗವರ್ನ್ ಮೆಂಟ್ ಬಸ್ ಕೂಡ ಹೆಣ್ಣು ಮಕ್ಕಳಿಗೆ ಸೇಫ್ ಇಲ್ಲ” ಎಂದು ಹೇಳಲಾಗಿದೆ.
Also Read: ರಾಹುಲ್ ಗಾಂಧಿ ದೇಶಕ್ಕಾಗಿ ಪ್ರಾಣ ತ್ಯಜಿಸಿದರು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರಾ?
ಈ ವೈರಲ್ ವೀಡಿಯೋ ಕುರಿತಾಗಿ ನಾವು ಸತ್ಯಶೋಧನೆ ನಡೆಸಿದ್ದು, ಬಸ್ ನಲ್ಲಿ ನಡೆದ ಗಂಡ-ಹೆಂಡಿರ ಜಗಳವನ್ನು ತಪ್ಪಾಗಿ ಬಿಂಬಿಸಲಾಗಿದೆ
Fact
ಸತ್ಯಶೋಧನೆಗಾಗಿ ನಾವು ಮೊದಲು ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.
ಸೆಪ್ಟೆಂಬರ್ 28, 2023ರ ಆಜ್‌ತಕ್ ವರದಿಯ ಪ್ರಕಾರ, “ಪೊಲೀಸ್ ಸಮವಸ್ತ್ರದಲ್ಲಿರುವಂತೆ ಕಾಣುವ ವ್ಯಕ್ತಿಯೋರ್ವ ಡಿಟಿಸಿ ಬಸ್ ಒಳಗೆ ಮಹಿಳೆಯ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ಈ ಹೊತ್ತಿಗೆ ಅಲ್ಲೊಬ್ಬರು ವ್ಯಕ್ತಿ ಮಹಿಳೆಯನ್ನು ಕಾಪಾಡಿದ್ದಾರೆ.” ಈ ವೀಡಿಯೋದಲ್ಲಿ ಕಾಣುವಂತೆ, ವ್ಯಕ್ತಿ ಮಹಿಳೆಗೆ ಹೊಡೆಯುತ್ತಿದ್ದು, ಈ ವೇಳೆ ಆಕೆ ಸಹಾಯಕ್ಕಾಗಿ ಕಿರುಚುತ್ತಾರೆ. ಆದರೆ ಯಾರೂ ಸಹಾಯ ಮಾಡುವುದಿಲ್ಲ. ಸ್ವಲ್ಪ ಹೊತ್ತು ಕಳೆದ ಬಳಿಕ ವ್ಯಕ್ತಿಯೊಬ್ಬರು ಹೊಡೆಯುತ್ತಿದ್ದ ವ್ಯಕ್ತಿಯ ತಲೆಗೆ ಹಲವು ಬಾರಿ ಬಡಿದಿದ್ದು, ಆಕೆಯನ್ನು ಪಾರು ಮಾಡುತ್ತಾರೆ” ಎಂದಿದೆ. ಜೊತೆಗೆ ಈ ವರದಿಯಲ್ಲಿ “ಈ ಘಟನೆ ಎರಡು ದಿನಗಳ ಹಿಂದೆ ರಾಜ್ ಘಾಟ್ ಪ್ರದೇಶದಲ್ಲಿ ನಡೆದಿದ್ದು ಆರಂಭಿಕ ತನಿಖೆಯ ಪ್ರಕಾರ ಮಹಿಳೆ ಮತ್ತು ಹೊಡೆದ ವ್ಯಕ್ತಿ ಗಂಡ ಹೆಂಡತಿಯಾಗಿದ್ದಾರೆ. ಇಬ್ಬರ ಮಧ್ಯೆ ಕೌಟುಂಬಿಕ ಪ್ರಕರಣವಿದ್ದು, ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ಮಧ್ಯೆ ಜಗಳ ನಡೆದಿದೆ” ಎಂದಿದೆ.
Also Read: ವರ್ಲ್ಡ್ ಕಪ್ ಫೈನಲ್‌ನಲ್ಲಿ ಹನುಮಾನ್ ಚಾಲೀಸಾ ಪಠಣ, ವೈರಲ್ ವೀಡಿಯೋ ಅಸಲಿಯತ್ತೇನು?
ಈ ಫಲಿತಾಂಶದ ಅನ್ವಯ ನಾವು ಕೀವರ್ಡ್ ಸರ್ಚ್ ನಡೆಸಿದ್ದು ವರದಿಗಳು ಲಭ್ಯವಾಗಿವೆ.
ಸೆಪ್ಟೆಂಬರ್ 28, 2023ರ ತೇಜ್ ತರಾರ್ ವರದಿ ಪ್ರಕಾರ, “ಪೊಲೀಸರು ಹೇಳಿರುವಂತೆ ಡಿಟಿಸಿ ಬಸ್ ಹೊಡೆದಾಟ ಪ್ರಕರಣದಲ್ಲಿ ಭಾಗಿಯಾದವರು ಗಂಡ-ಹೆಂಡತಿಯಾಗಿದ್ದಾರೆ. ರಾಜ್ ಘಾಟ್ ಸನಿಹ ಘಟನೆ ನಡೆದಿದ್ದು, ಇಬ್ಬರ ಮಧ್ಯೆ ಕೌಂಟುಬಿಕ ವೈಮನಸ್ಸಿನಿಂದ ಈ ಘಟನೆ ನಡೆದಿದೆ” ಎಂದಿದೆ.
ಅದರಂತೆ 28 ಸೆಪ್ಟಂಬರ್ 2023ರ ನವಭಾರತ್ ಟೈಮ್ಸ್ ಪ್ರಕಾರ “ಪೊಲೀಸ್ ಓರ್ವ ಮಹಿಳೆಗೆ ದಿಲ್ಲಿಯ ಡಿಟಿಸಿ ಬಸ್ ನಲ್ಲಿ ಹೊಡೆಯುತ್ತಿರುವ ದೃಶ್ಯ ವೈರಲ್ ಆಗಿದೆ. ಈ ಪ್ರಕರಣದ ಬಗ್ಗೆ ಪೊಲೀಸರು ತಿಳಿಸಿದ್ದು, ಇಬ್ಬರು ದಂಪತಿಯಾಗಿದ್ದು, ಅವರ ಮಧ್ಯೆ ಇರುವ ವೈಮನಸ್ಸಿನಿಂದ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ” ಎಂದಿದೆ. “ಪೊಲೀಸರ ಪ್ರಕಾರ ವ್ಯಕ್ತಿ ಪತ್ನಿಗೆ ಮೋಸ ಮಾಡಿ ಬೇರೊಬ್ಬ ಹುಡುಗಿಯನ್ನು ಮದುವೆಯಾಗಿದ್ದಾನೆ ಎಂಬ ಆರೋಪವಿದೆ. ಈ ಕುರಿತು ನ್ಯಾಯಾಲಯದಲ್ಲಿ ಕೇಸು ನಡೆಯುತ್ತಿದೆ. ಮೂರನೇ ಮಹಿಳೆ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಈ ವೀಡಿಯೋ ರಾಜ್ ಘಾಟ್ ಬಳಿಯದ್ದು ಎಂದು ಪೊಲೀಸರು ತಿಳಿಸಿದ್ದಾರೆ” ಎಂದಿದೆ.
ಈ ಸತ್ಯಶೋಧನೆಯ ಪ್ರಕಾರ, ಮಹಿಳೆಯರಿಗೆ ಸರ್ಕಾರಿ ಬಸ್ ಗಳು ಸುರಕ್ಷಿತವಲ್ಲ ಎನ್ನುವುದು ತಪ್ಪಾದ ಸಂದರ್ಭವಾಗಿದೆ. ಖಾಕಿ ದಿರಿಸಿನಲ್ಲಿದ್ದ ವ್ಯಕ್ತಿಯೊಬ್ಬ ಕೌಟುಂಬಿಕ ಕಾರಣಕ್ಕೆ ಪತ್ನಿಗೆ ಹೊಡೆದ ಪ್ರಕರಣ ಇದಾಗಿದೆ ಎಂದು ತಿಳಿದುಬಂದಿದೆ.
Also Read: ಅಶೋಕವನದಲ್ಲಿ ಸೀತಾಮಾತೆ ಕುಳಿತಿದ್ದ ಕಲ್ಲು ಅಯೋಧ್ಯೆಗೆ ತರಲಾಗಿದೆ ಎಂದ ವೀಡಿಯೋ ನಿಜವೇ?
Result: Missing Context
Our Sources
Report By Aajtak, Dated: 28 September, 2023
Report By Navabharat times, Dated: 28, September, 2023
Report By Tej Tarrar, Dated: 28 September, 2023
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.