Fact Check: ಅಶೋಕವನದಲ್ಲಿ ಸೀತಾಮಾತೆ ಕುಳಿತಿದ್ದ ಕಲ್ಲು ಅಯೋಧ್ಯೆಗೆ ತರಲಾಗಿದೆ ಎಂದ ವೀಡಿಯೋ ನಿಜವೇ?

ಸೀತಾಮಾತೆ, ಅಶೋಕವನದ ಕಲ್ಲು, ಶ್ರೀಲಂಕಾ, ಬುದ್ಧನ ಅವಶೇಷ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಶ್ರೀಲಂಕಾದ ಅಶೋಕವನದಲ್ಲಿ ಸೀತಾಮಾತೆ ಕುಳಿತಿದ್ದ ಕಲ್ಲು ಅಯೋಧ್ಯೆಗೆ ತರಲಾಗಿದೆ ಎಂದು ವೈರಲ್‌ ವೀಡಿಯೋ

Fact
ವೈರಲ್ ವೀಡಿಯೋದಲ್ಲಿರುವುದು ಸೀತಾಮಾತೆ ಕುಳಿತಿದ್ದ ಕಲ್ಲು ತಂದ ದೃಶ್ಯವಲ್ಲ. ಇದು ಉತ್ತರ ಪ್ರದೇಶದ ಕುಶಿನಗರಕ್ಕೆ ಭಗವಾನ್‌ ಬುದ್ಧನ ಅವಶೇಷಗಳನ್ನು ತಂದ ದೃಶ್ಯವಾಗಿದೆ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿರುವಾಗಲೇ, ಶ್ರೀಲಂಕಾದ ಅಶೋಕವನದಲ್ಲಿ ಸೀತಾಮಾತೆ ಕುಳಿತಿದ್ದ ಕಲ್ಲನ್ನು ಅಯೋಧ್ಯೆಗೆ ತರಲಾಗಿದೆ ಎಂದು ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಈ ಕುರಿತು ಫೇಸ್‌ಬುಕ್‌ನಲ್ಲಿ ಕಂಡುಬಂದ ಕ್ಲೇಮ್‌ ನಲ್ಲಿ, “ಶ್ರೀಲಂಕಾದ ಅಶೋಕ ವನದಲ್ಲಿ ಸೀತಾ ಮಾತೆ ಕುಳಿತಿದ್ದ ಕಲ್ಲನ್ನು ಶ್ರೀಲಂಕಾದ ಏರ್‌ಲೈನ್ಸ್ ನಲ್ಲಿ ಅಯೋಧ್ಯೆಗೆ ತರಲಾಗಿದೆ” ಎಂದು ಹೇಳಲಾಗಿದೆ.

Also Read: ಭಾರತ ಮಾತೆ ಯಾರು ಎಂದು ಕೇಳಿ ರಾಹುಲ್‌ ಗಾಂಧಿ ಅವಮಾನಿಸಿದರೇ, ಸತ್ಯ ಏನು?

Fact Check: ಅಶೋಕವನದಲ್ಲಿ ಸೀತಾಮಾತೆ ಕುಳಿತಿದ್ದ ಕಲ್ಲು ಅಯೋಧ್ಯೆಗೆ ತರಲಾಗಿದೆ ಎಂದ ವೀಡಿಯೋ ನಿಜವೇ?
ಫೇಸ್‌ಬುಕ್‌ನಲ್ಲಿ ಕಂಡುಬಂದ ಕ್ಲೇಮ್

ಇದೇ ರೀತಿಯ ಕ್ಲೇಮ್ ಗಳನ್ನು ನಾವು ಇಲ್ಲಿ, ಇಲ್ಲಿ, ಇಲ್ಲಿ ಕಂಡುಕೊಂಡಿದ್ದೇವೆ.

ಈ ಕುರಿತು ನ್ಯೂಸ್‌ಚೆಕರ್‌ ಸತ್ಯಶೋಧನೆ ನಡೆಸಿದ್ದು, ವೀಡಿಯೋ ಬೇರೆ ಸಂದರ್ಭದ್ದು ಎಂದು ತಿಳಿದುಬಂದಿದೆ.

Fact Check/Verification

ನ್ಯೂಸ್‌ಚೆಕರ್‌ ಸತ್ಯಶೋಧನೆ ವೇಳೆ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್‌ ಸರ್ಚ್ ನಡೆಸಿದೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.

ಅಕ್ಟೋಬರ್ 20, 2021ರ ಟೈಮ್ಸ್ ಆಫ್‌ ಇಂಡಿಯಾ ವೀಡಿಯೋ ವರದಿ ಪ್ರಕಾರ, “ಉತ್ತರಪ್ರದೇಶದ ಕುಶಿನಗರ ಅಂ.ರಾ. ವಿಮಾನ ನಿಲ್ದಾಣದಲ್ಲಿ ಶ್ರೀಲಂಕಾ ವಿಮಾನವನ್ನು ಸ್ವಾಗತಿಸಲಾಯಿತು. ಯೋಗಿ ಆದಿತ್ಯನಾಥ್ ಅವರು ವಿಮಾನ ನಿಲ್ದಾಣದಲ್ಲಿ ಭಗವಾನ್‌ ಬುದ್ಧನ ಅವಶೇಷಗಳನ್ನು ಸ್ವಾಗತಿಸಿದರು. ಇದರೊಂದಿಗೆ ಶ್ರೀಲಂಕಾದಿಂದ 123 ಮಂದಿಯ ತಂಡ ಆಗಮಿಸಿತ್ತು” ಎಂದಿದೆ.

Fact Check: ಅಶೋಕವನದಲ್ಲಿ ಸೀತಾಮಾತೆ ಕುಳಿತಿದ್ದ ಕಲ್ಲು ಅಯೋಧ್ಯೆಗೆ ತರಲಾಗಿದೆ ಎಂದ ವೀಡಿಯೋ ನಿಜವೇ?
ಟೈಮ್ಸ್ ಆಫ್‌ ಇಂಡಿಯಾ ವರದಿ

ಈ ಕುರಿತು ನಾವು ಹೆಚ್ಚಿನ ಶೋಧ ನಡೆಸಿದ್ದು, ಈ ವೇಳೆ ಎಕ್ಸ್ ನಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ಅವರ ಟ್ವೀಟ್ ಕಂಡುಕೊಂಡಿದ್ದೇವೆ. ಅಕ್ಟೋಬರ್ 20, 2021ರ ಈ ಟ್ವೀಟ್ ನಲ್ಲಿ ಅವರು ಶ್ರೀಲಂಕಾದಿಂದ ಬುದ್ಧನ ಅವಶೇಷಗಳನ್ನು ಬರಮಾಡಿಕೊಂಡ ಬಗ್ಗೆ ಹೇಳಿಕೊಂಡಿದ್ದಾರೆ. ಈ ಟ್ವೀಟ್ ಅನ್ನು ಇಲ್ಲಿ ನೋಡಬಹುದು.

ವೈರಲ್ ಆಗಿರುವ ವೀಡಿಯೋ ಮತ್ತು ಟೈಮ್ಸ್ ಆಫ್‌ ಇಂಡಿಯಾ ಪ್ರಕಟಿಸಿದ ವಿಡಿಯೋ ಹಾಗೂ ಕಿರಣ್‌ ರಿಜಿಜು ಅವರು ಹಾಕಿರುವ ಫೋಟೋಗಳಿಗೆ ಸಾಮ್ಯತೆ ಇರುವುದು ಸತ್ಯಶೋಧನೆಯಲ್ಲಿ ಕಂಡುಬಂದಿದೆ.

ಇದರೊಂದಿಗೆ ಲಂಕಾದ ಅಶೋಕವನದಲ್ಲಿ ಸೀತಾಮಾತೆ ಕುಳಿತಿದ್ದ ಕಲ್ಲು ಅಯೋಧ್ಯೆಗೆ ತರಲಾಗಿದೆ ಎಂಬ ಬಗ್ಗೆಯೂ ನಾವು ಶೋಧ ನಡೆಸಿದ್ದು, ಸೀತಾ ವಾಟಿಕಾ ಎಂದು ಕರೆಯಲಾಗುವ ಈ ಕಲ್ಲನ್ನು ಅಕ್ಟೋಬರ್ 2021ರಲ್ಲಿ ಶ್ರೀಲಂಕಾ ಕೊಡುಗೆಯಾಗಿ ನೀಡಿದೆ ಎಂಬುದನ್ನು ಕಂಡುಕೊಂಡಿದ್ದೇವೆ. ಈ ಕುರಿತು ಮಾಧ್ಯಮ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು.

Conclusion

ಈ ಸತ್ಯಶೋಧನೆಯ ಪ್ರಕಾರ, ಇದು ಶ್ರೀಲಂಕಾದಿಂದ ಅಶೋಕವನದಲ್ಲಿ ಸೀತಾಮಾತೆ ಕುಳಿತಿದ್ದ ಕಲ್ಲು ತಂದ ದೃಶ್ಯವಲ್ಲ ಬದಲಾಗಿ 2021ರಲ್ಲಿ ನಡೆದ ಅಭಿದಮ್ಮ ದಿನ ನಿಮಿತ್ತ ಉತ್ತರ ಪ್ರದೇಶದ ಕುಶಿನಗರಕ್ಕೆ ಶ್ರೀಲಂಕಾದಿಂದ ಬಂದ ಭಗವಾನ್‌ ಬುದ್ಧನ ಅವಶೇಷಗಳಾಗಿವೆ.

Also Read: ಪ್ರಧಾನಿ ನರೇಂದ್ರ ಮೋದಿ ವಿಶ್ವಕಪ್‌ ವಿಜೇತ ಆಸ್ಟ್ರೇಲಿಯನ್ನರನ್ನು ಅಭಿನಂದಿಸದೆ ತೆರಳಿದರೇ?

Result: Missing Context

Our Sources

Video By Times of India, Dated, October 20, 2021

Tweet By Kiran Rijiju, Dated, October 20, 2021


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.