Authors
Claim
ತುಮಕೂರು ಗುಬ್ಬಿ ತಾಲೂಕಿನಲ್ಲಿ ವಿಚಿತ್ರ ಪ್ರಾಣಿಯೊಂದು ಕಾಣಿಸಿಕೊಂಡಿದೆ
Fact
ತುಮಕೂರು ಗುಬ್ಬಿ ತಾಲೂಕು ದೊಡ್ಡಗುಣಿ ಬಳಿ ಇರುವ ತಗ್ಗಿ ಹಳ್ಳಿ ಅರಣ್ಯ ಭಾಗದಲ್ಲಿ ವಿಚಿತ್ರ ಪ್ರಾಣಿ ಕಾಣಿಸಿಕೊಂಡಿದೆ ಎನ್ನುವುದು ಸುಳ್ಳಾಗಿದೆ
ತುಮಕೂರು ಗುಬ್ಬಿ ತಾಲೂಕಿನಲ್ಲಿ ವಿಚಿತ್ರ ಪ್ರಾಣಿಯೊಂದು ಕಾಣಿಸಿಕೊಂಡಿದೆ ಎಂದು ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಓಡಾಡುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ಈ ಹೇಳಿಕೆಯಲ್ಲಿ, “ಗುಬ್ಬಿ ತಾಲೋಕು ದೊಡ್ಡಗುಣಿ ಬಳಿ ಇರುವ ತಗ್ಗಿಹಳ್ಳಿ ಅರಣ್ಯ ಭಾಗದಲ್ಲಿ ಕಾಣಿಸಿಕೊಂಡ ವಿಚಿತ್ರ ಪ್ರಾಣಿ, ಈ ಸೃಷ್ಟಿಯಲ್ಲಿ ಇನ್ನೂ ಏನೇನಿದೆಯೋ ಬಲ್ಲವರಾರು?” ಎಂದಿದೆ.
Also Read: ಬಾಂಗ್ಲಾ ವಲಸಿಗ ಮುಸ್ಲಿಮರಿಗೆ ತಲಾ 5 ಎಕರೆ ಭೂಮಿ ನೀಡಲು ಸರ್ಕಾರ ನಿರ್ಧರಿಸಿದೆ ಎನ್ನುವುದು ನಿಜವೇ?
ಇದೇ ರೀತಿಯ ಕ್ಲೇಮ್ ಗಳನ್ನು ಇಲ್ಲಿ, ಇಲ್ಲಿ ಹಂಚಿಕೊಂಡಿರುವುದನ್ನು ಗಮನಿಸಿದ್ದೇವೆ.
ವೈರಲ್ ವೀಡಿಯೋ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು ಇದು ಸುಳ್ಳು ಎಂದು ಕಂಡುಬಂದಿದೆ.
Fact Check/ Verification
ಸತ್ಯಶೋಧನೆಗಾಗಿ ನಾವು ವೀಡಿಯೋದ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಅಂತರ್ಜಾಲದಲ್ಲಿ ಹಲವೆಡೆ ಇದೇ ರೀತಿಯ ವೀಡಿಯೋವನ್ನು ಹಂಚಿಕೊಂಡಿರುವುದನ್ನು ಗಮನಿಸಿದ್ದೇವೆ.
ಆ ಬಳಿಕ ನಾವು ಇನ್ನಷ್ಟು ಶೋಧ ನಡೆಸಿದ್ದು, ತುಮಕೂರಿನ ಸ್ಥಳೀಯ ಸುದ್ದಿಚಾನಲ್ ಅಮೋಘ್ ಟಿವಿ ತುಮಕೂರು ಫೆಬ್ರವರಿ 2, 2024ರಂದು ಹಂಚಿಕೊಂಡ ಪೋಸ್ಟ್ ಒಂದನ್ನು ಫೇಸ್ಬುಕ್ ನಲ್ಲಿ ಗಮನಿಸಿದ್ದೇವೆ. ಈ ಪೋಸ್ಟ್ ನಲ್ಲಿ ತುಮಕೂರಿನ ಜಿಲ್ಲಾ ಅರಣ್ಯಾಧಿಕಾರಿ ಅನುಪಮಾ ಅವರ ಪ್ರತಿಕ್ರಿಯೆಯಿದ್ದು, ಅವರು ಇದನ್ನು ಸುಳ್ಳು ಎಂದು ಹೇಳಿದ್ದಾರೆ. ಮತ್ತು ಇಂತಹ ಪ್ರಾಣಿ ಭಾರತದಲ್ಲಿಲ್ಲ. ಇದು ಅಮೆರಿಕ ಭಾಗದಲ್ಲಿರುವ ಪ್ರಾಣಿ ಎಂದು ಸ್ಪಷ್ಟನೆ ನೀಡಿದ್ದಾರೆ ಇದನ್ನು ಇಲ್ಲಿ ನೋಡಬಹುದು.
ವೈರಲ್ ವೀಡಿಯೋದ ಬಗ್ಗೆ ನಾವು ಕನ್ನಡ ಪ್ರಭ ಪತ್ರಿಕೆಯ ತುಮಕೂರಿನ ಜಿಲ್ಲಾ ವರದಿಗಾರ ಉಗಮ ಶ್ರೀನಿವಾಸ್ ಅವರನ್ನು ಸಂಪರ್ಕಿಸಿದ್ದೇವೆ. ಅವರು ಇದೊಂದು ಸುಳ್ಳು ಹೇಳಿಕೆಯಾಗಿದ್ದು ಅಂತಹ ಯಾವುದೇ ಪ್ರಾಣಿ ಕಂಡುಬಂದಿಲ್ಲ ಎಂದು ಹೇಳಿದ್ದಾರೆ.
ಜೈಂಟ್ ಆಂಟ್ ಈಟರ್ ಗಳೆಂಬ ಈ ಪ್ರಾಣಿಯ ಬಗ್ಗೆ ನಾವು ಶೋಧ ನಡೆಸಿದ್ದು, ಇವುಗಳು ದಕ್ಷಿಣ ಅಮೆರಿಕ ಭಾಗದಲ್ಲಿರುವ ಇರುವೆ ಇತ್ಯಾದಿಗಳನ್ನು ತಿನ್ನುವ ಪ್ರಾಣಿ ಎಂದು ಕಂಡುಕೊಂಡಿದ್ದೇವೆ. ಇವುಗಳು 2 ಅಡಿಉದ್ದದ ನಾಲಗೆ ಹೊಂದಿದ್ದುಒಂದು ನಿಮಿಷಕ್ಕೆ 150 ಬಾರಿ ನಾಲಗೆಯನ್ನು ಹೊರಗೆ-ಒಳಗೆ ಎಳೆದುಕೊಳ್ಳುವ ಸಾಮರ್ಥ್ಯ ಹೊಂದಿವೆ. ಈ ಕುರಿತ ಮಾಹಿತಿಯನ್ನು ಇಲ್ಲಿ ನೋಡಬಹುದು.
Conclusion
ಈ ಸತ್ಯಶೋಧನೆಯ ಪ್ರಕಾರ, ತುಮಕೂರು ಗುಬ್ಬಿ ತಾಲೂಕು ದೊಡ್ಡಗುಣಿ ಬಳಿ ಇರುವ ತಗ್ಗಿ ಹಳ್ಳಿ ಅರಣ್ಯ ಭಾಗದಲ್ಲಿ ವಿಚಿತ್ರ ಪ್ರಾಣಿ ಕಾಣಿಸಿಕೊಂಡಿದೆ ಎನ್ನುವುದು ಸುಳ್ಳಾಗಿದೆ. ದಕ್ಷಿಣ ಅಮೆರಿಕ ಭಾಗದಲ್ಲಿ ಕಂಡುಬರುವ ಪ್ರಾಣಿ ಇದಾಗಿದೆ.
Result: False
Our Sources:
Facebook Post By Amoggh tv Tumkur, Dated: February 3, 2023
Conversation with Ugama Srinivas, Kannadaprabha district reporter
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.