Authors
Claim
ಸಂಸದ ಡಿ.ಕೆ. ಸುರೇಶ್ ಅವರಿಂದ ಪೊಲೀಸರಿಗೆ ಆವಾಜ್
Fact
ಸಂಸದ ಡಿ.ಕೆ. ಸುರೇಶ್ ಅವರಿಂದ ಪೊಲೀಸರಿಗೆ ಆವಾಜ್ ಎಂದ ವೀಡಿಯೋ 2023ರ ವಿಧಾನಸಭೆ ಚುನಾವಣೆ ಸಮಯದ್ದಾಗಿದ್ದು, ಇತ್ತೀಚಿನದ್ದಲ್ಲ
ಸಂಸದ ಡಿ.ಕೆ.ಸುರೇಶ್ ಅವರು ದಾದಾಗಿರಿ ಮಾಡುತ್ತಿದ್ದಾರೆ ಎಂದು ವೀಡಿಯೋವೊಂದನ್ನು ವಿಧಾನಸಬೆ ವಿರೋಧಪಕ್ಷದ ನಾಯಕ ಆರ್ ಅಶೋಕ್ ಅವರು ಹಂಚಿಕೊಂಡಿದ್ದಾರೆ.
ಎಕ್ಸ್ ಖಾತೆಯಲ್ಲಿ ವೀಡಿಯೋವನ್ನು ಶೇರ್ ಮಾಡಿಕೊಂಡಿರುವ ಅಶೋಕ್ ಅವರು, ಹೇಳಿಕೆಯಲ್ಲಿ ಯತೀಂದ್ರ ಅವರೇ, ನಿನ್ನೆ ನಿಮ್ಮ ತಂದೆ ಸಿದ್ದರಾಮಯ್ಯನವರ ಗೂಂಡಾಗಿರಿಯ ಸ್ಯಾಂಪಲ್ ನೋಡಿದಿರಿ. ಇವತ್ತು ನಿಮ್ಮ ಕನಕಪುರ ಪಾಳೇಗಾರರ ದಾದಾಗಿರಿ ನೋಡಿ. ಕರ್ತವ್ಯ ಮಾಡುತ್ತಿರುವ ಪೊಲೀಸರಿಗೆ “ಏಯ್ ಎತ್ತಂಗಡಿ ಆಗ್ತೀಯ..” ಎಂದು ಧಮ್ಕಿ ಹಾಕುವುದು ನಿಮ್ಮ ಪ್ರಕಾರ ಗಾಂಧಿಗಿರಿನಾ ಅಥವಾ ಗೂಂಡಾಗಿರಿನಾ? ಎಂದು ಪ್ರಶ್ನಿಸಿದ್ದಾರೆ.
Also Read: ಫೋರ್ಬ್ಸ್ ನ ಅತ್ಯಂತ ವಿದ್ಯಾವಂತ ನಾಯಕರ ಪಟ್ಟಿಯಲ್ಲಿ ರಾಹುಲ್ ಗಾಂಧಿ 7ನೇ ಸ್ಥಾನದಲ್ಲಿದ್ದಾರೆಯೇ?
ಇದರ ಆರ್ಕೈವ್ ಆವೃತ್ತಿ ಇಲ್ಲಿದೆ
ಈ ವೀಡಿಯೋ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು, ಈ ವೀಡಿಯೋ ಇತ್ತೀಚಿನದ್ದಲ್ಲ, ಇದು ಒಂದು ವರ್ಷ ಹಿಂದಿನದ್ದು ಎಂದು ಕಂಡುಬಂದಿದೆ.
Fact Check/ Verification
ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.
ಮೇ 6, 2023ರ ನ್ಯೂಸ್ 18 ಕನ್ನಡ ವರದಿ ಪ್ರಕಾರ, “ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರು ಪೊಲೀಸರಿಗೆ ಧಮ್ಕಿ ಹಾಕಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಬೆಂಗಳೂರಿನ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಡಿ ಕೆ ಸುರೇಶ್ ಪೊಲೀಸರಿಗೆ ಆವಾಜ್ ಹಾಕಿದ್ದು, ಬೊಮ್ಮನಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಶ್ರೀನಿವಾಸ್ ಗೌಡ ಪರ ಪ್ರಚಾರದ ವೇಳೆ ಘಟನೆ ನಡೆದಿದೆ. ವಾಹನ ನಿಲ್ಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಏಕವಚನದಲ್ಲಿ ಆವಾಜ್ ಹಾಕಿದ್ದಾರೆ” ಎಂದಿದೆ.
Also Read: ಏಷ್ಯಾದ ಮೊದಲ ಮಸೀದಿ ಹಿಂದೆ ದೇಗುಲವಾಗಿತ್ತು ಎಂದ ವೈರಲ್ ವೀಡಿಯೋ ಹಿಂದಿನ ಸತ್ಯ ಇಲ್ಲಿದೆ
ಮೇ 7, 2023ರ ಒನ್ ಇಂಡಿಯಾ ಕನ್ನಡ ಯೂಟ್ಯೂಬ್ ವೀಡಿಯೋ ಪ್ರಕಾರ, “ಡಿಕೆ ಸುರೇಶ್ ಆವಾಜ್ ಗೆ ಪೊಲೀಸರು ತಬ್ಬಿಬ್ಬಾಗಿದ್ದು, ಸುರೇಶ್ ಆವಾಜ್ ಹಾಕುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರಿಂದ ಜೈಕಾರ ಹಾಕಿದ್ದಾರೆ. ನಿನ್ನೆ ಸಂಜೆ ಘಟನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.” ಎಂದಿದೆ.
ಈ ವೀಡಿಯೋದ ದೃಶ್ಯಕ್ಕೂ ಎಕ್ಸ್ ನಲ್ಲಿ ಅಶೋಕ್ ಅವರು ಪೋಸ್ಟ್ ಮಾಡಿದ ದೃಶ್ಯಕ್ಕೂ ಸಾಮ್ಯತೆಗಳನ್ನು ಕಂಡಿದ್ದೇವೆ ಅದೇ ರೀತಿ, ಸಂದೀಪ್ ಅಡ್ತಲೆ ಎನ್ನುವ ಯೂಟ್ಯೂಬ್ ಚಾನೆಲ್ ಮೇ 6, 2023ರಂದು ನಲ್ಲೂ ವೀಡಿಯೋ ಶೇರ್ ಮಾಡಲಾಗಿದ್ದು ವೈರಲ್ ವೀಡಿಯೋದೊಂದಿಗೆ ಸಾಮ್ಯತೆ ಹೊಂದಿದೆ.
Conclusion
ಈ ಸತ್ಯಶೋಧನೆಯ ಪ್ರಕಾರ, ಡಿ.ಕೆ.ಸುರೇಶ್ ಅವರು ಪೊಲೀಸರಿಗೆ ಆವಾಜ್ ಹಾಕುತ್ತಿರುವ ವೀಡಿಯೋ ಇತ್ತೀಚಿನದ್ದಲ್ಲ ಅದು ಹಳೆಯದು ಎಂದು ಕಂಡುಬಂದಿದೆ.
Also Read: ರಾಹುಲ್ ಗಾಂಧಿ ರಾಲಿಯಲ್ಲಿ ಮೋದಿ-ಮೋದಿ ಘೋಷಣೆ? ವೈರಲ್ ವೀಡಿಯೋದ ಸತ್ಯ ಇಲ್ಲಿದೆ
Result: Missing Context
Our Sources:
Report By News 18 Kannada, Dated: May 6, 2023
YouTube Video By One India Kannada, Dated May 7, 2023
YouTube Video By Sandeep Adthale, Dated May 6, 2023
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.