Fact Check: ಸಂವಿಧಾನ ಬದಲಾವಣೆ ಮೌನವಾಗೇ ಮಾಡೋಣ ಎಂದು ಸರಸಂಘ ಚಾಲಕ ಮೋಹನ್‌ ಭಾಗವತ್ ಹೇಳಿದ್ದಾರೆಯೇ?

ಮೋಹನ್‌ ಭಾಗವತ್‌ ಹೊಸದಿಗಂತ ಸಂವಿಧಾನ ಬದಲಾವಣೆ

Claim
ಸಂವಿಧಾನ ಬದಲಾವಣೆ ಮೌನವಾಗೇ ಮಾಡೋಣ ಎಂದು ಸರಸಂಘ ಚಾಲಕ ಮೋಹನ್‌ ಭಾಗವತ್ ಹೇಳಿದ್ದಾರೆ

Fact
ಸಂವಿಧಾನ ಬದಲಾವಣೆ ಮೌನವಾಗೇ ಮಾಡೋಣ ಎಂದು ಸರಸಂಘ ಚಾಲಕ ಮೋಹನ್‌ ಭಾಗವತ್ ಹೇಳಿದ್ದಾರೆ ಎಂದು ಹೊಸದಿಗಂತ ಪತ್ರಿಕೆ ಹೆಸರಲ್ಲಿ ವರದಿ ಬಂದಿಲ್ಲ, ಆ ವರದಿ ನಕಲಿಯಾಗಿದೆ.

ಸಂವಿಧಾನ ಬದಲಾವಣೆ ಮೌನವಾಗೇ ಮಾಡೋಣ ಎಂದು ಸರಸಂಘ ಚಾಲಕ ಮೋಹನ್‌ ಭಾಗವತ್ ಹೇಳಿದ್ದಾರೆ ಎಂದು ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. 

ವಾಟ್ಸಪ್‌ ನಲ್ಲಿ ಹರಿದಾಡಿದೆ ಈ ಸುದ್ದಿಯಲ್ಲಿ ಮೋಹನ್‌ ಭಾಗವತ್‌ ಅವರು ವಡೋದರಲ್ಲಿ ಮಾತನಾಡಿದ ಸುದ್ದಿಯನ್ನು ಹೊಸದಿಗಂತ ದಿನ ಪತ್ರಿಕೆ ವರದಿ ಮಾಡಿರುವ ರೀತಿ ಇದೆ. ಈ ಬಗ್ಗೆ ಸತ್ಯಶೋಧನೆ ನಡೆಸುವಂತೆ ಬಳಕೆದಾರರು ನ್ಯೂಸ್‌ಚೆಕರ್‌ ವಾಟ್ಸಪ್‌ ಟಿಪ್ ಲೈನ್‌ ಮೂಲಕ ವಿನಂತಿಸಿದ್ದು, ಅದನ್ನು ತನಿಖೆಗಾಗಿ ಅಂಗೀಕರಿಸಲಾಗಿದೆ.

ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ ಎನ್ನಲಾದ ಈ ಸುದ್ದಿಯಲ್ಲಿ ವಡೋದರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ “ಲೋಕಸಭೆ ಚುನಾವಣೆಯು ನಡೆಯುತ್ತಿರುವ ಸಂದರ್ಭದಲ್ಲಿ ಸಂವಿಧಾನ ಬದಲಾವಣೆಯ ಮಾತುಗಳನ್ನು ಆಡಿದರೆ ಅದು ಬಿಜೆಪಿಗೆ ನಷ್ಟವನ್ನು ಮಾಡುತ್ತದೆ. ಹೀಗಾಗಿ ಅದನ್ನು ಮೌನವಾಗೇ ಸಾಧಿಸಬೇಕಾಗಿದ್ದು, ಈಗ ನಮ್ಮಲ್ಲಿ ಸ್ವಲ್ಪ ತಾಳ್ಮೆ ಉಂಟು ಇರಲಿ ಎಂದು ಆರ್ ಎಸ್ ಎಸ್ ನ ಹಾಲಿ ಸರ ಸಂಚಾಲಕರಾದ ಮೋಹನ್ ಭಾಗವತ್ ಅವರು ತಿಳಿಸಿದರು.” ಎಂದಿದೆ. 

Also Read: ಬಿಜೆಪಿಯವರು ಎಸ್‌ಸಿ ಎಸ್ಟಿ ಸಮುದಾಯದ ವಿರುದ್ಧ ಮುರ್ದಾಬಾದ್‌ ಎಂದು ಕೂಗಿದ ವೀಡಿಯೋ ಹಿಂದಿನ ಸತ್ಯ ಏನು?

Fact Check: ಸಂವಿಧಾನ ಬದಲಾವಣೆ ಮೌನವಾಗೇ ಮಾಡೋಣ ಎಂದು ಸರಸಂಘ ಚಾಲಕ ಮೋಹನ್‌ ಭಾಗವತ್ ಹೇಳಿದ್ದಾರೆಯೇ?

ಇದರ ಬಗ್ಗೆ ಸತ್ಯಶೋಧನೆ ನಡೆಸುವಂತೆ ನ್ಯೂಸ್‌ಚೆಕರ್ ಟಿಪ್‌ ಲೈನ್‌ (+91-9999499044) ಗೆ ಮನವಿಗಳು ಬಂದಿದ್ದು ತನಿಖೆಗೆ ಅಂಗೀಕರಿಸಲಾಗಿದೆ. ಇದೇ ರೀತಿಯ ಪೋಸ್ಟ್ ಗಳು ಇಲ್ಲಿ, ಇಲ್ಲಿ, ಕಂಡುಬಂದಿವೆ.

Fact Check/ Verification

ಸತ್ಯಶೋಧನೆಗಾಗಿ ನಾವು ಮೋಹನ್‌ ಭಾಗವತ್ ಅವರು “ಸಂವಿಧಾನದ ಬದಲಾವಣೆಯನ್ನು ಮೌನವಾಗೇ ಮಾಡೋಣ ಆ ಬಗ್ಗೆ ಬಹಿರಂಗ ಹೇಳಿಕೆ ಬೇಡ” ಎಂದು ಹೇಳಿಕೆ ನೀಡಿದ್ದಾರೆಯೇ ಎಂಬ ಬಗ್ಗೆ ಗೂಗಲ್‌ ನಲ್ಲಿ ಶೋಧ ನಡೆಸಿದ್ದೇವೆ. ಆದರೆ ಇತ್ತೀಚಿಗೆ ಅವರು ಆ ರೀತಿಯ ಯಾವುದೇ ಹೇಳಿಕೆಯನ್ನು ನೀಡಿರುವ ಬಗ್ಗೆ ಯಾವುದೇ ವರದಿಗಳು ಪ್ರಕಟವಾಗಿರುವುದು ನಮಗೆ ಲಭ್ಯವಾಗಿಲ್ಲ.

ಆ ಬಳಿಕ ನಾವು ಹೊಸದಿಗಂತದಲ್ಲಿ ಅಂತಹ ವರದಿ ಬಂದಿದೆಯೇ ಎಂಬುದನ್ನು ನೋಡಿದ್ದೇವೆ. ಈ ವೇಳೆ ವರದಿಯೊಂದು ಲಭ್ಯವಾಗಿದೆ. 

ಏಪ್ರಿಲ್‌ 25, 2024ರ ಹೊಸದಿಗಂತದ ವರದಿಯಲ್ಲಿ, ಸಂವಿಧಾನದ ಬದಲಾವಣೆಯನ್ನು ಮೌನವಾಗೇ ಮಾಡೋಣ ಆ ಬಗ್ಗೆ ಬಹಿರಂಗ ಹೇಳಿಕೆ ಬೇಡ ಎಂಬ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರ ಸಂಘಚಾಲಕ ಮೋಹನ್‌ ಭಾಗ್ವತ್ ಅವರು ಹೇಳಿದ್ದಾರೆಂದು ಸುಳ್ಳು ಸುದ್ದಿಯನ್ನು ಹೊಸದಿಗಂತ ಪತ್ರಿಕೆಯ ಹೆಸರಿನಲ್ಲಿ ಹರಿದಾಡಿಸುತ್ತಿರುವ ಕುರಿತು ಕಾನೂನು ಕ್ರಮ ಕೈಗೊಳ್ಳಲು ಪತ್ರಿಕೆ ಮುಂದಾಗಿದೆ. ಯಾರೋ ಕಿಡಿಗೇಡಿಗಳು ಹೊಸದಿಗಂತ ಪತ್ರಿಕೆಯ ಹೆಸರನ್ನು ದುರುಪಯೋಗ ಪಡಿಸಿಕೊಂಡು ಸಂವಿಧಾನ ಬದಲಾವಣೆಯ ಮಾತುಗಳನ್ನು ಆಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಈ ಸುದ್ದಿಯನ್ನು  ಹೊಸ ದಿಗಂತ ಪತ್ರಿಕೆಯು ಪ್ರಕಟಿಸಿರುವುದಿಲ್ಲ. ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಗೂ ಹಾಗೂ ಪತ್ರಿಕೆಗೂ ಯಾವುದೇ ಸಂಬಂಧವಿರುವುದಿಲ್ಲ. ಸಾರ್ವಜನಿಕರು ಆ ಸುಳ್ಳು ಸುದ್ದಿಯನ್ನು ನಂಬಬಾರದೆಂದು ಹೊಸದಿಗಂತ ಪತ್ರಿಕೆಯು ಸ್ಪಷ್ಟಪಡಿಸಿದೆ.” 

Fact Check: ಸಂವಿಧಾನ ಬದಲಾವಣೆ ಮೌನವಾಗೇ ಮಾಡೋಣ ಎಂದು ಸರಸಂಘ ಚಾಲಕ ಮೋಹನ್‌ ಭಾಗವತ್ ಹೇಳಿದ್ದಾರೆಯೇ?
ಹೊಸದಿಗಂತ ವರದಿ

ಆ ಬಳಿಕ ನಾವು ಹೊಸದಿಂಗತದ ಸಂಪಾದಕರಾದ ಪ್ರಕಾಶ್ ಪಿ.ಎಸ್‌. ಅವರನ್ನು ಸಂಪರ್ಕಿಸಿದ್ದೇವೆ. ಅವರು ನ್ಯೂಸ್‌ ಚೆಕರ್ ನೊಂದಿಗೆ ಮಾತನಾಡಿ, “ಸಂವಿಧಾನ ಬದಲಾವಣೆಯನ್ನು ಮೌನವಾಗೇ ಮಾಡೋಣ ಎಂದು ಸರಸಂಘ ಚಾಲಕ ಮೋಹನ್‌ ಭಾಗವತ್ ಹೇಳಿದ್ದಾರೆ ಎಂದು ಹೊಸದಿಗಂತ ಹೆಸರಿನಲ್ಲಿ ನಕಲಿ ಸುದ್ದಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಡಲಾಗಿದೆ. ಮೋಹನ್‌ ಭಾಗವತ್ ಅವರು ಇಂತಹ ಹೇಳಿಕೆಯನ್ನು ಎಲ್ಲೂ ನೀಡಿಲ್ಲ ಮತ್ತು ಅಂತಹ ವರದಿಯೂ ಪತ್ರಿಕೆಯಲ್ಲಿ ಬಂದಿಲ್ಲ. ಈ ಬಗ್ಗೆ ಪೊಲೀಸ್‌ ದೂರು ದಾಖಲಿಸಲಾಗಿದ್ದು, ಪತ್ರಿಕಾ ಸಂಸ್ಥೆ ಕಠಿಣ ಕ್ರಮಕ್ಕೆ ಆಗ್ರಹಿಸಿದೆ.”  ಎಂದಿದ್ದಾರೆ. 

ಇದರೊಂದಿಗೆ ನಮಗೆ ಹೊಸದಿಂಗತ ಪತ್ರಿಕೆ ಮಲ್ಲೇಶ್ವರ ಪೊಲೀಸ್‌ ಠಾಣೆಯಲ್ಲಿ ಸಲ್ಲಿಸಲಾದ ದೂರಿನ ಪ್ರತಿ ಲಭ್ಯವಾಗಿದ್ದು, ಅದನ್ನು ಇಲ್ಲಿ ನೋಡಬಹುದು. 

Fact Check: ಸಂವಿಧಾನ ಬದಲಾವಣೆ ಮೌನವಾಗೇ ಮಾಡೋಣ ಎಂದು ಸರಸಂಘ ಚಾಲಕ ಮೋಹನ್‌ ಭಾಗವತ್ ಹೇಳಿದ್ದಾರೆಯೇ?
ಹೊಸದಿಗಂತ ಪೊಲೀಸ್‌ ದೂರಿನ ಪ್ರತಿ

ಇನ್ನು ನಾವು ಆರೆಸ್ಸೆಸ್‌ನ ಸರಸಂಘ ಚಾಲಕರಾದ ಮೋಹನ್‌ ಭಾಗವತ್ ಅವರನ್ನು ಸಂಪರ್ಕಿಸಲೂ ಯತ್ನಿಸಿದ್ದೇವೆ. ಅವರ ಅಭಿಪ್ರಾಯವನ್ನು ಪಡೆದ ಬಳಿಕ ಈ ಲೇಖನವನ್ನು ಪರಿಷ್ಕರಿಸಲಾಗುವುದು. 

Conclusion

ಈ ಲಭ್ಯ ಪುರಾವೆಗಳ ಪ್ರಕಾರ, ಸಂವಿಧಾನ ಬದಲಾವಣೆಯನ್ನು ಮೌನವಾಗೇ ಮಾಡೋಣ ಎಂದು ಸರಸಂಘ ಚಾಲಕ ಮೋಹನ್‌ ಭಾಗವತ್ ಹೇಳಿದ್ದಾರೆ ಎಂಬ ಹೊಸದಿಂಗತದ ವರದಿ ನಕಲಿಯಾಗಿದೆ. 

Also Read: ಬಿಯರ್ ಬಾಟಲಿ ಮೇಲೆ ಡಿ.ಕೆ. ಸುರೇಶ್ ಫೋಟೋ ಹಾಕಿ ಮತದಾರರಿಗೆ ಹಂಚಲಾಗುತ್ತಿದೆಯೇ?

Result: False

Our Sources
Report By Hosadigantha, Dated: April 25, 2024

Conversation with P.S. Prakash, Editor, Hosadigantha

Copy of Police Complaint from Malleshwaram Police Station Bangalore


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.