Fact Check: ಬಿಯರ್ ಬಾಟಲಿ ಮೇಲೆ ಡಿ.ಕೆ. ಸುರೇಶ್ ಫೋಟೋ ಹಾಕಿ ಮತದಾರರಿಗೆ ಹಂಚಲಾಗುತ್ತಿದೆಯೇ?

ಬಿಯರ್ ಬಾಟಲಿ ಕಾಂಗ್ರೆಸ್‌ ಡಿಕೆ ಸುರೇಶ್‌ ಕುಮಾರ್

Authors

Claim
ಬಿಯರ್ ಬಾಟಲಿ ಮೇಲೆ ಡಿ.ಕೆ.ಸುರೇಶ್ ಫೋಟೋ ಹಾಕಿ ಮತದಾರರಿಗೆ ಹಂಚಲಾಗುತ್ತಿದೆ

Fact
2023ರಲ್ಲಿ ತೆಲಂಗಾಣ ಚುನಾವಣೆ ಸಂದರ್ಭದಲ್ಲಿ ನಕಿರೇಕಲ್‌ ಕಾಂಗ್ರೆಸ್‌ ಅಭ್ಯರ್ಥಿ ವೇಮುಲ ವೀರೇಶ ಅವರ ಫೋಟೋ ಹಾಕಿ ಬಾಟಲಿಗಳನ್ನು ವಿತರಿಸಲಾಗಿದ್ದು, ಆ ಫೋಟೊವನ್ನು ತಿರುಚಲಾಗಿದೆ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಆಮಿಷ ಒಡ್ಡಲಾಗುತ್ತಿದೆ ಎಂದು ಕೇಳಿಬರುತ್ತಿದೆ. ಇದೇ ವೇಳೆ ಬೆಂಗಳೂರು ಗ್ರಾಮಾಂತರದಲ್ಲಿ ಸಂಸದ ಡಿ.ಕೆ.ಸುರೇಶ್‌ ಅವರ ಫೋಟೋದೊಂದಿಗೆ ಬಿಯರ್ ಹಂಚಲಾಗುತ್ತಿದೆ ಎಂದೂ ಹೇಳಲಾಗುತ್ತಿದೆ. ಇದನ್ನು ಹೇಳುವಂತೆ ಬಿಯರ್ ಬಾಟಲಿ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

Also Read: ಪ್ರಿಯಾಂಕಾ ವಾದ್ರಾ ಕಾಲ ಕೆಳಗೆ ಭಾರತದ ಧ್ವಜವಿರುವ ಬ್ಯಾನರ್ ಗಳನ್ನು ಬೆಂಗಳೂರಲ್ಲಿ ಅಳವಡಿಸಲಾಗಿದೆ ಎನ್ನುವುದು ನಿಜವೇ?

Fact Check: ಬಿಯರ್ ಬಾಟಲಿ ಮೇಲೆ ಡಿ.ಕೆ. ಸುರೇಶ್ ಫೋಟೋ ಹಾಕಿ ಹಂಚಲಾಗುತ್ತಿದೆಯೇ?
ಫೇಸ್‌ಬುಕ್‌ ನಲ್ಲಿ ಕಂಡುಬಂದ ಕ್ಲೇಮ್

ಫೇಸ್‌ಬುಕ್‌ ನಲ್ಲಿ ಬಿಜೆಪಿ ಶಿವಮೊಗ್ಗ ಖಾತೆಯಿಂದ ಮಾಡಲಾದ ಈ ಪೋಸ್ಟ್ ಕಂಡುಬಂದಿದೆ. ಇದರ ಬಗ್ಗೆ ಸತ್ಯಶೋಧನೆಯನ್ನು ನ್ಯೂಸ್‌ಚೆಕರ್ ನಡೆಸಿದ್ದು, ಇದು ತಿರುಚಲಾದ ಚಿತ್ರ ಎಂದು ಕಂಡುಬಂದಿದೆ.

Fact Check/ Verification

ಸತ್ಯಶೋಧನೆಗಾಗಿ ನಾವು ವೈರಲ್ ಫೋಟೋದ ರಿವರ್ಸ್ ಇಮೇಜ್‌ ಸರ್ಚ್ ನಡೆಸಿದ್ದೇವೆ.  ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.

ನವೆಂಬರ್ 11, 2023ರಂದು mnt__news ಇನ್‌ಸ್ಟಾಗ್ರಾಂ ಪೋಸ್ಟ್ ನಿಂದ ಫೋಟೋ ಒಂದನ್ನು ಶೇರ್ ಮಾಡಲಾಗಿದ್ದು ಅದರಲ್ಲಿ ಎರಡು ಬಿಯರ್ ಬಾಟಲಿಗಳ ಚಿತ್ರ ಇರುವುದನ್ನು ಕಂಡುಕೊಂಡಿದ್ದೇವೆ. ಈ ಪೋಸ್ಟ್ ನ ಕ್ಯಾಪ್ಷನ್‌ ನಲ್ಲಿ “ನಕಿರೇಕಲ್ ಕಾಂಗ್ರೆಸ್ ಅಭ್ಯರ್ಥಿ ವೇಮುಲ ವೀರೇಶಂ ಬಿಯರ್ ಬಾಟಲ್ ಗಳ ಮೇಲೆ ಸ್ಟಿಕ್ಕರ್ ಹಾಕುವ ಮೂಲಕ ವಿಚಿತ್ರ ಪ್ರಚಾರ ನಡೆಸಿದರು” ಎಂದಿದೆ.

Also Read: ರಾಮನವಮಿ ದಿನವೇ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಮಾಂಸಾಹಾರ ಊಟ ಮಾಡಿದ್ದಾರೆಯೇ?

Fact Check: ಬಿಯರ್ ಬಾಟಲಿ ಮೇಲೆ ಡಿ.ಕೆ. ಸುರೇಶ್ ಫೋಟೋ ಹಾಕಿ ಹಂಚಲಾಗುತ್ತಿದೆಯೇ?

ನವೆಂಬರ್ 12, 2023ರ ನ್ಯೂಸ್‌ ಲೈನ್ ತೆಲುಗು ಪ್ರಕಾರ, ನಕಿರೇಕಲ್ ಕ್ಷೇತ್ರದಲ್ಲಿ ನಾನಾ ರೀತಿಯ ಪ್ರಚಾರ ನಡೆಯುತ್ತಿದೆ. ಎಲ್ಲಾ ಪ್ರಮುಖ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ತೊಡಗಿವೆ. ಆದರೆ, ಕಾಂಗ್ರೆಸ್ ಅಭ್ಯರ್ಥಿ ವೇಮುಲ ವೀರೇಶ ನಾನಾ ರೀತಿಯ ಪ್ರಚಾರ ಆರಂಭಿಸಿದಂತಿದೆ. ಅದೇ ಬಿಯರ್ ಮೇಲೆ ಸ್ಟಿಕ್ಕರ್ ಗಳನ್ನು ಹಾಕಿ ಪ್ರಚಾರ ಮಾಡಲಾಗುತ್ತಿದೆ ಎಂದಿದೆ. (ಅನುವಾದಿಸಲಾಗಿದೆ)

Fact Check: ಬಿಯರ್ ಬಾಟಲಿ ಮೇಲೆ ಡಿ.ಕೆ. ಸುರೇಶ್ ಫೋಟೋ ಹಾಕಿ ಹಂಚಲಾಗುತ್ತಿದೆಯೇ?

ನವೆಂಬರ್ 12, 2023ರ ತೆಲುಗು ಪೋಸ್ಟ್ ಪ್ರಕಾರ, ತೆಲಂಗಾಣ ಚುನಾವಣೆ: ಬಿಯರ್ ಬಾಟಲ್ ಮೇಲೆ ಅಭ್ಯರ್ಥಿಗಳ ಪ್ರಚಾರ? ಇದರಲ್ಲಿ ಸತ್ಯ ಏನು? ಎಂದಿದೆ. ಈ ಸುದ್ದಿಯಡಿಯಲ್ಲಿ, ನಕಿರೇಕಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೇಮುಲ ವೀರೇಶ ಅವರ ಪ್ರತಿಸ್ಪರ್ಧಿ ಬಣ ಛಾಯಾಚಿತ್ರವಿರುವ ಬಿಯರ್ ಬಾಟಲಿಗಳನ್ನು ಹಂಚಿ ಪ್ರಚಾರ ಆರಂಭಿಸಿದ್ದಾರೆ. ವೇಮುಲ ವೀರೇಶಂ ಬಿಯರ್ ಬಾಟಲಿಗಳ ಮೇಲೆ ಸ್ಟಿಕ್ಕರ್‌ಗಳನ್ನು ಅಂಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಪಕ್ಷದ ಮುಖಂಡರು ಹೇಳುತ್ತಾರೆ. ಯಾವುದೇ ರಾಜಕೀಯ ಪಕ್ಷದ ಅಭ್ಯರ್ಥಿಗಳು ಸ್ಟಿಕ್ಕರ್‌ಗಳನ್ನು ಹಾಕಿ ಸಾರ್ವಜನಿಕರಿಗೆ ಬಿಯರ್ ಬಾಟಲಿಗಳನ್ನು ವಿತರಿಸುವುದಿಲ್ಲ. ನಕಿರೇಕಲ್ ಕಾಂಗ್ರೆಸ್ ಮುಖಂಡರ ಪ್ರಕಾರ, ಕೆಲವರು ಈ ಸ್ಟಿಕ್ಕರ್ ಗಳನ್ನು ಬಿಯರ್ ಬಾಟಲಿಗಳಿಗೆ ಅಂಟಿಸಿ ಪೊಲೀಸರಿಗೆ ದೂರು ನೀಡುತ್ತಿದ್ದಾರೆ (ಅನುವಾದಿಸಲಾಗಿದೆ) ಎಂದಿದೆ.

Fact Check: ಬಿಯರ್ ಬಾಟಲಿ ಮೇಲೆ ಡಿ.ಕೆ. ಸುರೇಶ್ ಫೋಟೋ ಹಾಕಿ ಹಂಚಲಾಗುತ್ತಿದೆಯೇ?

ಈ ವರದಿಗಳಲ್ಲಿ ತೋರಿಸಿರುವ ಚಿತ್ರ ಮತ್ತು ವೈರಲ್‌ ಆಗಿರುವ ಚಿತ್ರಕ್ಕೆ ಸಾಮ್ಯತೆಯನ್ನು ಕಂಡುಕೊಂಡಿದ್ದೇವೆ. ಇದರಲ್ಲಿ ಡಿ.ಕೆ.ಸುರೇಶ್‌ ಅವರ ಚಿತ್ರವನ್ನು ಬಿಯರ್ ಬಾಟಲಿ ಮೇಲೆ ಹಾಕಿರುವುದನ್ನು ಗಮನಿಸಿದ್ದೇವೆ.

Conclusion

ಈ ಪುರಾವೆಗಳ ಪ್ರಕಾರ, ಬಿಯರ್ ಬಾಟಲಿಗಳ ಮೇಲೆ ಡಿ.ಕೆ.ಸುರೇಶ್‌ ಅವರ ಫೋಟೋ ಅಂಟಿಸಿ ಹಂಚಲಾಗುತ್ತಿದೆ ಎನ್ನುವುದು ಸುಳ್ಳಾಗಿದೆ. ಮೂಲತಃ ಇದು 2023ರ ಸಮಯದ್ದಾಗಿದ್ದು, ತೆಲಂಗಾಣದ ನಕಿರೇಕಲ್ ನ ಮೂಲದ್ದಾಗಿದೆ.

Also Read: ಚಿತ್ರದುರ್ಗದಲ್ಲಿ ಪ್ರಧಾನಿ ಹೆಲಿಕಾಪ್ಟರ್ ನಿಂದ ನಿಗೂಢ ಪೆಟ್ಟಿಗೆ ಇಳಿಸಲಾಯಿತು ಎನ್ನುವ ಪೋಸ್ಟ್ ನಿಜವೇ?

Result: Altered Photo/Video

Our Sources
Instagram Post By mnt__news, Dated: November 11, 2023

Report By Newsline Telugu, Dated: November 12, 2023

Report By Telugu post, Dated: November 12, 2023


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors