Authors
Claim
ಜೂನ್ 21ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಭ್ಯಾಸ ಬಳಿಕ, ಇಟಲಿಯ ಟ್ಯುರಿನ್ ನಗರದಲ್ಲಿ ಆರೆಸ್ಸೆಸ್ ಗೀತೆ “ನಮಸ್ತೇ ಸದಾ ವತ್ಸಲೆ”ಯನ್ನು ಹಾಡಲಾಗಿದೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
Also Read: ಇಂದೋರ್ ನಲ್ಲಿ ಈದ್ ದಿನ ಹಿಂದೂ ಮನೆಗಳ ಮೇಲೆ ಮುಸ್ಲಿಂ ಗುಂಪು ಕಲ್ಲೆಸೆದಿದೆ ಎಂದ ವೈರಲ್ ವೀಡಿಯೋ ಸತ್ಯವೇ?
ಇದೇ ರೀತಿಯ ಹೇಳಿಕೆಗಳನ್ನು ಇಲ್ಲಿ ಇಲ್ಲಿ ನೋಡಬಹುದು.
ಈ ಕ್ಲೇಮಿನ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಇತ್ತೀಚಿನದ್ದಲ್ಲ ಎರಡು ವರ್ಷಗಳ ಹಿಂದಿನ ಸಂದರ್ಭವಾಗಿದೆ ಎಂದು ಕಂಡುಕೊಂಡಿದೆ.
Fact
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.
ಜೂನ್ 21, 2022ರ ಸನಾತನಿ ಹೆಸರಿನ ಫೇಸ್ಬುಕ್ ಚಾನೆಲ್ಲ್ಲಿ “RSS sanskrit prayer, “namaste sada vatsale…”, being sung in Italy during Yoga Day rehearsal” ಶೀರ್ಷಿಕೆಯಲ್ಲಿ ವೀಡಿಯೋ ಕಂಡುಬಂದಿದ್ದು, ವೈರಲ್ ವೀಡಿಯೋಕ್ಕೆ ಸಾಮ್ಯತೆಯನ್ನು ಕಂಡುಕೊಂಡಿದ್ದೇವೆ.
ಆ ಬಳಿಕ ನಾವು ವೀಡಿಯೋ ಬಗ್ಗೆ ಇನ್ನಷ್ಟು ಶೋಧ ನಡೆಸಿದ್ದು ಯೂಟ್ಯೂಬ್ನಲ್ಲಿ ಮಹಿ ಕೃಷ್ಣ ಲೈಲಾ ಹೆಸರಿನ ಚಾನೆಲ್ ನಲ್ಲಿ ಜೂನ್ 20, 2022ರಂದು ಅಪ್ ಲೋಡ್ ಮಾಡಲಾದ ವೀಡಿಯೋವನ್ನು ಗುರುತಿಸಿದ್ದೇವೆ. “ಇಟಲಿಯಲ್ಲಿ ನಮಸ್ತೇ ಸದಾ ವತ್ಸಲೇ ಸಂಘ ಪ್ರಾರ್ಥನೆ” ಶೀರ್ಷಿಕೆಯಡಿ ಇದನ್ನು ಪೋಸ್ಟ್ ಮಾಡಲಾಗಿದೆ.
ಯೋಗ ದಿನಾಚರಣೆಯಲ್ಲಿ ಸಂಘ ಪ್ರಾರ್ಥನೆ ಹಾಡಿದ ಬಗ್ಗೆ ಮಾಧ್ಯಮಗಳೂ ವರದಿ ಮಾಡಿದ್ದು, ಅದು ಇಲ್ಲಿ, ಇಲ್ಲಿ ಇದೆ. ಈ ಸತ್ಯಶೋಧನೆಯ ಪ್ರಕಾರ, ಸಂಘದ ಗೀತೆಯನ್ನು ಇಟಲಿಯಲ್ಲಿ ಹಾಡಿರುವ ವೀಡಿಯೋ ಇತ್ತೀಚಿನದ್ದಲ್ಲ, ಅದು ಎರಡು ವರ್ಷಗಳ ಹಿಂದಿನದ್ದು ಮತ್ತು ಯೋಗ ದಿನಾಚರಣೆಗೆ ಮುನ್ನ ನಡೆಸಿದ ಅಭ್ಯಾಸದ ಸಂದರ್ಭದ್ದು ಎಂದು ಗೊತ್ತಾಗಿದೆ.
Also Read: ಶ್ರೀಲಂಕಾದ ಮುಸ್ಲಿಂ ವೈದ್ಯ 4 ಸಾವಿರ ಹಿಂದೂ-ಬೌದ್ಧ ಮಹಿಳೆಯರಿಗೆ ಮೋಸದ ಸಂತಾನಹರಣ ಮಾಡಿದ್ದು ನಿಜವೇ?
Result: Missing Context
Our Sources
Facebook Post By Sanatani, Dated: June 21 2022
YouTube Video By Mahi Krishna Lila, Dated June 20, 2022
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.