Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
AI/Deepfake
ಭಾರತದ ಹಳ್ಳಿಯೊಂದರಲ್ಲಿ ಮೂರು ತಲೆಯ ಮರಿ ಆನೆಯಿದೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಈ ವೀಡಿಯೋವನ್ನು ಪರಿಶೀಲಿಸುವಂತೆ ಬಳಕೆದಾರರೊಬ್ಬರು ನ್ಯೂಸ್ ಚೆಕರ್ ವಾಟ್ಸಾಪ್ ಸಹಾಯವಾಣಿ (+91-9999499044) ಗೆ ಕಳಿಸಿದ್ದು, ಸತ್ಯಾಸತ್ಯತೆ ಪರಿಶೀಲಿಸಲು ವಿನಂತಿಸಿದ್ದಾರೆ, ಅದರಂತೆ ಸತ್ಯಶೋಧನೆಗೆ ಅಂಗೀಕರಿಸಲಾಗಿತ್ತು.
ವೈರಲ್ ವೀಡಿಯೋದಲ್ಲಿ, ಎಐನಿಂದ ಮಾಡಿದ ವೀಡಿಯೋಗಳಲ್ಲಿರುವಂತಹ ಅಸಹಜ ದೃಶ್ಯಗಳನ್ನು ನ್ಯೂಸ್ ಚೆಕರ್ ಗುರುತಿಸಿದೆ. ಉದಾಹರಣೆಗೆ ಮೊಬೈಲ್ ಫೋನ್ಗಳಲ್ಲಿ ಸೆರೆಹಿಡಿಯಲಾದ ದೃಶ್ಯಗಳು ದೃಶ್ಯಕ್ಕೆ ಹೊಂದಿಕೆಯಾಗದಿರುವುದು, ಜೊತೆಗೆ 20 ಸೆಕೆಂಡುಗಳ ವೀಡಿಯೋದಲ್ಲಿ ಕೆಲವು ಗ್ರಾಮಸ್ಥರ ಅಸ್ವಾಭಾವಿಕ ನಿಶ್ಚಲತೆ ಮತ್ತು ವಿರೂಪಗೊಂಡ ಮುಖಗಳು, ಇದಲ್ಲದೆ, ಹಲವಾರು ಬಳಕೆದಾರರು #aiart, #aiillusion, #soraai ಎಂಬ ಹ್ಯಾಶ್ಟ್ಯಾಗ್ಗಳನ್ನು ಬಳಸಿಕೊಂಡು ವೀಡಿಯೋವನ್ನು ಹಂಚಿಕೊಂಡಿರುವುದು ನಮ್ಮ ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿದೆ.

ವಾಸ್ ಇಟ್ ಎಐ ಮೂಲಕ ವೀಡಿಯೋದ ಕೀಫ್ರೇಮ್ ಗಳನ್ನು ಪರಿಶೀಲಿಸಿದಾಗ, “ಈ ಚಿತ್ರ ಅಥವಾ ಅದರ ಭಾಗಗಳನ್ನು ಎಐ ಮೂಲಕ ರಚಿಸಿರುವ ಸಾಧ್ಯತೆ ಇದೆ” ಎಂದು ಹೇಳಿದೆ. ಅನಂತರ ನಾವು ವೀಡಿಯೋ ಕೀಫ್ರೇಮ್ ಗಳನ್ನು ಹೈವ್ ಮಾಡರೇಶನ್ ಮೂಲಕ ಪರಿಶೀಲಿಸಿದ್ದೇವೆ. ಇದು 99.9% ರಷ್ಟು ಎಐ ರಚಿತ ಅಥವಾ ಡೀಪ್ಫೇಕ್ ವಿಷಯವನ್ನು ಹೊಂದಿರುವ ಸಾಧ್ಯತೆ ಇದೆ ಎಂದು ಕಂಡುಹಿಡಿದಿದೆ. ಅದೇ ರೀತಿ, ನಾವು ವೀಡಿಯೋವನ್ನು ಸೈಟ್ ಎಂಜಿನ್ ನಲ್ಲೂ ಪರಿಶೀಲಿಸಿದ್ದೇವೆ. ಇದು 99% ರಷ್ಟು ಎಐ ರಚಿತವಾಗಿರುವ ಸಾಧ್ಯತೆ ಇದೆ ಎಂದು ಕಂಡುಹಿಡಿದಿದೆ, ಇದು ವೀಡಿಯೋ ನಿಜವಲ್ಲ ಎಂದು ಮತ್ತಷ್ಟು ದೃಢಪಡಿಸುತ್ತದೆ.



ಆದ್ದರಿಂದ ಈ ಸತ್ಯಶೋಧನೆ ಪ್ರಕಾರ, ಮೂರು ತಲೆಯ ಆನೆ ಮರಿ ಎಂದು ಹಂಚಿಕೊಳ್ಳಲಾಗುತ್ತಿರುವ ವೀಡಿಯೋ ಎಐ ಸೃಷ್ಟಿ ಎಂದು ಕಂಡುಬಂದಿದೆ.
Our Sources
WasitAI tool
Hive Moderation tool
SightEngine tool
(ಈ ವರದಿಯನ್ನು ಮೊದಲು ನ್ಯೂಸ್ ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Mohammed Zakariya
December 11, 2025
Salman
December 5, 2025
Ishwarachandra B G
November 24, 2025