Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
AI/Deepfake
ಮುಸ್ಲಿಂ ವ್ಯಕ್ತಿಯೊಬ್ಬ ಚರಂಡಿ ನೀರು ತೆಗೆದು ಬಿರಿಯಾನಿಗೆ ಹಾಕುತ್ತಿರುವ ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಶಾಂತಿದೂತರು ಮಾಡಿದ ಬಿರಿಯಾನಿ ಎಂಬ ಹೇಳಿಕೆಯೊಂದಿಗೆ ಇದನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ನಿಜವಲ್ಲ ಎಐ ನಿಂದ ಮಾಡಿದ್ದು ಎಂದು ಕಂಡುಬಂದಿದೆ.
Also Read: ಮೂರು ತಲೆಯ ಆನೆ ಮರಿ ಎಂದು ವೈರಲ್ ಆಗಿರುವ ವೀಡಿಯೋ ಎಐ ಕರಾಮತ್ತು!
ಸತ್ಯಶೋಧನೆಗಾಗಿ ನಾವು ಮೊದಲು ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ಈ ವೇಳೆ ವೀಡಿಯೋ ಸಹಜವಾಗಿಲ್ಲದೇ ಇರುವುದು ಕಂಡುಬಂದಿದೆ. ವೀಡಿಯೋ ಪ್ಲೇ ಆಗುವ ವೇಳೆ ಅಡುಗೆ ಮಾಡುವ ವ್ಯಕ್ತಿಯೊಬ್ಬರನ್ನು ಬಿಟ್ಟು ಉಳಿದವರು ನಿಂತಲ್ಲೇ, ಯಾವುದೇ ಚಲನೆ ಇಲ್ಲದಂತೆ ಇರುವುದು, ಕೈಗಳು ಅದೃಶ್ಯವಾದಂತೆ, ಸೌಟನ್ನು ಸರಿಯಾಗಿ ಹಿಡಿದುಕೊಳಳ್ಳದೇ ಇರುವಂತೆ ಕಂಡುಬಂದಿದೆ. ಇದು ಸಂಶಯಕ್ಕೆ ಕಾರಣವಾಗಿದೆ.


ಈ ಹಿನ್ನೆಲೆಯಲ್ಲಿ ನಾವು ವೀಡಿಯೋ-ಕೀಫ್ರೇಮ್ ಗಳನ್ನು ತೆಗೆದು ಎಐ ಪತ್ತೆ ವೇದಿಕೆಗಳ ಮೂಲಕ ಪರಿಶೀಲಿಸಿದ್ದೇವೆ. ಸೈಟ್ ಎಂಜಿನ್ ಮೂಲಕ ಪರಿಶೀಲಿಸಿದಾಗ, ಕೀಫ್ರೇಮ್ ಎಐ ಮೂಲಕ ಮಾಡಿದ ಚಿತ್ರಗಳಿವೆ ಎಂದು 76%ರಷ್ಟರ ಸಾಧ್ಯತೆಯನ್ನು ಹೇಳಿದೆ.

ಹೈವ್ ಮಾಡರೇಶನ್ ಮೂಲಕ ವೀಡಿಯೋವನ್ನು ಪರಿಶೀಲಿಸಿದ್ದು, ಅದು 99% ರಷ್ಟು ಎಐ ನಿಂದ ಮಾಡಲಾಗಿದೆ ಎಂದು ಹೇಳಿದೆ.

For further investigation, we sent the video to the Deepfakes Analysis Unit (DAU), a part of Newschecker , for review, who said that the Hive AI image and deepfake detection platform identified the video as being created by AI.
ಇದರೊಂದಿಗೆ ಡೀಪ್ ಫೇಕ್ ಕ್ಲಾಸಿಫೈಯರ್ (ಎಐ ಆರ್ ನಾಟ್) ಮೂಲಕ ಪರಿಶೀಲಿಸಿದಾಗ, ಡೀಪ್ ಫೇಕ್ ಮೂಲಕ ರಚಿಸಿದ ಸಾಧ್ಯತೆ ಕಂಡುಬಂದಿದೆ. ಈ ವೀಡಿಯೊ ಬಳಕೆಯ ಹಿಂದಿನ ಅತ್ಯಂತ ಸಂಭಾವ್ಯ ವೇದಿಕೆಯಾಗಿ ಸೋರಾ ಬಳಸಲಾಗಿದೆ ಎಂದು ಕಂಡುಬಂದಿದೆ ಎಂದು ತಿಳಿಸಿದೆ.



ಆದ್ದರಿಂದ ಸತ್ಯಶೋಧನೆ ಪ್ರಕಾರ ಮುಸ್ಲಿಂ ವ್ಯಕ್ತಿಯೊಬ್ಬ ಚರಂಡಿ ನೀರು ತೆಗೆದು ಬಿರಿಯಾನಿಗೆ ಹಾಕುತ್ತಿರುವ ವೀಡಿಯೋ ಎಐ ಮೂಲಕ ಮಾಡಲಾಗಿದೆ ಎಂದು ಕಂಡುಬಂದಿದೆ.
Also Read: ಮದುವೆಗೂ ಮುನ್ನ ವಧು ಮಾಜಿ ಗೆಳೆಯನನ್ನು ಭೇಟಿಯಾಗುವ ವೈರಲ್ ವಿಡಿಯೋ ನಿಜವಾದ್ದಲ್ಲ!
Our Sources
Sight Engine
AI or Not
Analysis by Deepafake Analysis Unit (DAU)