Fact Check: ರೈತರ ಅನ್ನದ ಪಾತ್ರೆಗೆ ಗುಂಡೇಟು ಬಿದ್ದಿದೆ ಎಂಬುದು ನಿಜವೇ?

ರೈತ ಅನ್ನದ ಪಾತ್ರೆ ಗುಂಡೇಟು

Authors

Claim
ರೈತರ ಅನ್ನದ ಪಾತ್ರೆಗೆ ಗುಂಡೇಟು ಬಿದ್ದಿದೆ

Fact
ಘಟನೆ ನಡೆದಿರುವುದು ಬಾಂಗ್ಲಾ-ಮ್ಯಾನ್ಮಾರ್ ಗಡಿಯಲ್ಲಾಗಿದೆ. ಇದು ರೈತರ ಪ್ರತಿಭಟನೆಗೆ ಸಂಬಂಧಿಸಿದ್ದಲ್ಲ

ರೈತ ಪ್ರತಿಭಟನೆ ತೀವ್ರವಾಗಿದ್ದು, ದೆಹಲಿ ಚಲೋ ನಡೆಸುತ್ತಿದ್ದಾರೆ. ಸದ್ಯ ಹರಿಯಾಣಾ ಗಡಿಯಲ್ಲಿರುವ ರೈತರಿಗೆ ಪೊಲೀಸರೊಂದಿಗೆ ಘರ್ಷಣೆ ನಡೆದಿದ್ದು ಈ ವರೆಗೆ ಐವರು ಮೃತಪಟ್ಟಿದ್ದಾರೆಂದು ವರದಿಯಾಗಿದೆ. ಈ ವರದಿಗಳ ಬೆನ್ನಲ್ಲೇ, ರೈತರ ಮೇಲೆ ಗುಂಡು ಹಾರಿಸಲಾಗಿದೆ ಎಂಬ ಗಾಳಿಸುದ್ದಿಗಳು ಹಬ್ಬಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಫೋಟೋವೊಂದನ್ನು ಶೇರ್ ಮಾಡಲಾಗುತ್ತಿದ್ದು ರೈತರ ಅನ್ನದ ಪಾತ್ರೆಗೂ ಗುಂಡುಬಿದ್ದಿದೆ ಎಂದು ಹೇಳಲಾಗಿದೆ.

ಫೇಸ್ಬುಕ್‌ ನಲ್ಲಿ ಕಂಡುಬಂದ ಈ ಹೇಳಿಕೆಯಲ್ಲಿಅನ್ನ ಮಾಡೋ ಪಾತ್ರಗೆ ಬಂದೂಕಿನ ಗುಂಡು, ಅನ್ನ ಬೆಳೆಯೋ ರೈತನ ತಲೆಗೆ ಗುಂಡು, ಅನ್ನ ಬೆಳೆಯೋ ರೈತ ಬರೋ ದಾರಿಗೆ ಕಬ್ಬಿಣದ ಮುಳ್ಳು… ಯಾವ ಎಕ್ಕುಟ್ಟಿರೋ ಬುದ್ದಿಯ ಸರ್ಕಾರ ಇದು?” ಎಂದಿದೆ.

Also Read: ರಾಷ್ಟ್ರಧ್ವಜ ಅವಮಾನಿಸಿದ ರೈತರು ಎಂದು ಕೆನಡಾ ವೀಡಿಯೋ ವೈರಲ್

Fact Check: ರೈತರ ಅನ್ನದ ಪಾತ್ರೆಗೆ ಗುಂಡೇಟು ಬಿದ್ದಿದೆ ಎಂಬುದು ನಿಜವೇ?
ಫೇಸ್‌ಬುಕ್‌ ನಲ್ಲಿ ಕಂಡುಬಂದ ಕ್ಲೇಮ್

ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನೆಡೆಸಿದ್ದು, ವೈರಲ್‌ ಆಗಿರುವ ಫೊಟೋ ರೈತರ ಪ್ರತಿಭಟನೆಯದ್ದಲ್ಲ. ಅದು ಬಾಂಗ್ಲಾದೇಶದ್ದು ಎಂದು ಕಂಡುಬಂದಿದೆ.

Fact Check/ Verification

ಸತ್ಯಶೋಧನೆಗಾಗಿ ನಾವು ವೈರಲ್‌ ಆಗಿರುವ ಫೋಟೋದ ರಿವರ್ಸ್ ಇಮೇಜ್‌ ಸರ್ಚ್ ಮಾಡಿದ್ದೇವೆ. ಈ ಸಂದರ್ಭ ಹಲವು ಫಲಿತಾಂಶಗಳು ಲಭ್ಯವಾಗಿವೆ.

ಫೆಬ್ರವರಿ 16, 2024ರ ಡೈಲಿನಯಾ ದಿಗಂತ್ ವರದಿ ಪ್ರಕಾರ, “ಟೆಕ್ನಾಫ್ನ ಶಹಪರಿರ್ ದ್ವೀಪ್ ಮತ್ತು ಸೇಂಟ್ ಮಾರ್ಟಿನ್ ಗಡಿಯಲ್ಲಿ ಮತ್ತೆ ಭಾರಿ ಗುಂಡಿನ ಸದ್ದು ಕೇಳಿಸಿತು. ದೊಡ್ಡ ಶಬ್ದದಿಂದ ಪ್ರದೇಶವು ನಡುಗಿದ್ದರಿಂದ ಸ್ಥಳೀಯರಲ್ಲಿ ಭೀತಿ ಹರಡಿತು. 3 ರಿಂದ 4 ಗಂಟೆಗಳ ವಿರಾಮದ ನಂತರ, ಗುಂಡಿನ ದಾಳಿ ಮತ್ತೆ ಪ್ರಾರಂಭವಾಯಿತು.  ಶುಕ್ರವಾರ ಬೆಳಿಗ್ಗೆ ಮ್ಯಾನ್ಮಾರ್ ನಿಂದ ಭಾರಿ ಮೋರ್ಟಾರ್ ಶೆಲ್ ಗಳು ಮತ್ತು ಗುಂಡಿನ ಸದ್ದು ಕೇಳಿದ್ದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ. ಗಡಿಯ ಈ ಪರಿಸ್ಥಿತಿಯಲ್ಲಿ, ನದಿ ಮಾರ್ಗದಲ್ಲಿ ಪ್ರವಾಸಿ ಹಡಗುಗಳು ಮತ್ತು ಸ್ಥಳೀಯರ ಚಲನೆಯನ್ನು ಮುಚ್ಚಲಾಗಿದೆ ಎಂದಿದೆ. ಇದೇ ವರದಿಯಲ್ಲಿ, “ಮ್ಯಾನ್ಮಾರ್ ನ ಗುಂಡುಗಳು ಬಾಂಗ್ಲಾದೇಶದ ಗಡಿ ಪ್ರದೇಶಗಳಲ್ಲಿ ವಾಸಿಸುವ ಸ್ಥಳೀಯರ ಅಡುಗೆಮನೆಯ ಮುಚ್ಚಳದ ಮೇಲೆ ಬಿದ್ದವು.” ಎಂದಿದೆ.  (ಬಾಂಗ್ಲಾದಿಂದ ಭಾಷಾಂತರಿಸಲಾಗಿದೆ)

Fact Check: ರೈತರ ಅನ್ನದ ಪಾತ್ರೆಗೆ ಗುಂಡೇಟು ಬಿದ್ದಿದೆ ಎಂಬುದು ನಿಜವೇ?
ಡೈಲಿ ನಯಾದಿಗಂತ್ ವರದಿ

ಫೆಬ್ರವರಿ 16, 2024ರ ಬಿಡಿ ನ್ಯೂಸ್‌ ವರದಿ ಪ್ರಕಾರ, “ಮ್ಯಾನ್ಮಾರ್ ನಲ್ಲಿನ ಸಂಘರ್ಷದಿಂದಾಗಿ ಶಾ ಪೊರಿರ್ ದ್ವೀಪ ಮತ್ತು ಸೇಂಟ್ ಮಾರ್ಟಿನ್ಸ್ ದ್ವೀಪದ ನಾಫ್‌ ನದಿಯುದ್ಧಕ್ಕೂ ಸ್ಫೋಟದಿಂದ ನಡುಗಿದೆ. ಬಂದರ್ಬನ್‌ ನ  ನಾಯ್ಕೊಂಗ್ಚಾರಿ ಮತ್ತು ಕಾಕ್ಸ್ ಬಜಾರ್ ನ ಉಖಿಯಾದಲ್ಲಿನ ಪ್ರಕ್ಷುಬ್ಧ ಗಡಿ ಪ್ರದೇಶಗಳಲ್ಲಿ ಶಾಂತಿ ನೆಲೆಸಿದ್ದರೂ, ಮ್ಯಾನ್ಮಾರ್ ನಿಂದ ಭಾರಿ ಗುಂಡಿನ ದಾಳಿ ಮತ್ತು ಶೆಲ್ ದಾಳಿಗಳು ಟೆಕ್ನಾಫ್ ಕರಾವಳಿಯ ಎರಡು ದ್ವೀಪಗಳಲ್ಲಿ ಪ್ರತಿಧ್ವನಿಸಿವೆ” ಎಂದಿದೆ.

Also Read: ಡಿಎಂಕೆ ಶಾಸಕ ಮನ್ಸೂರ್ ಮೊಹಮ್ಮದ್‌ ದಿಮಿರ್ ಅವರಿಂದ ಪೊಲೀಸ್ ಮೇಲೆ ಹಲ್ಲೆ ಎನ್ನುವುದು ನಿಜವೇ?

Fact Check: ರೈತರ ಅನ್ನದ ಪಾತ್ರೆಗೆ ಗುಂಡೇಟು ಬಿದ್ದಿದೆ ಎಂಬುದು ನಿಜವೇ?
ಬಿಡಿನ್ಯೂಸ್‌24 ವರದಿ

ಮ್ಯಾನ್ಮಾರ್ ನಲ್ಲಿ ಬಂಡುಕೋರರು ಮತ್ತು ರಕ್ಷಣಾ ಪಡೆಗಳ ಮಧ್ಯೆ ಗುಂಡಿನ ಕಾಳಗ ನಡೆದಿದ್ದು, ಇದರ ಪರಿಣಾಮ ಬಾಂಗ್ಲಾದೇಶದ ಗಡಿ ಪ್ರದೇಶಗಳಲ್ಲಾಗುತ್ತಿದೆ. ಬಾಂಗ್ಲಾ ಗಡಿಗಳಲ್ಲಿಯೂ ವಾತಾವರಣ ಪ್ರಕ್ಷುಬದ್ಧವಾಗಿದೆ ಎಂದು ವರದಿಗಳು ಹೇಳಿವೆ. ಈ ಕುರಿತ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು.

ಈ ಬಗ್ಗೆ ನಾವು ಇನ್ನೂ ಹೆಚ್ಚಿನ ಹುಡುಕಾಟ ನಡೆಸಿದ್ದು, ಫೇಸ್‌ಬುಕ್‌ ಬಳಕೆದಾರರೊಬ್ಬರು “ಬಾಂಗ್ಲಾದೇಶದ ಕುಟುಂಬವೊಂದರ ಮೇಲೆ ಮ್ಯಾನ್ಮಾರ್ ನಿಂದ ಬಂದ ಬುಲೆಟ್ ಕೂತಿದೆ” ಎಂದು ಬರೆದುಕೊಂಡಿದ್ದಾರೆ.

Conclusion

ಈ ಸತ್ಯಶೋಧನೆಯ ಪ್ರಕಾರ, ಅನ್ನದ ಪಾತ್ರೆಯ ಮೇಲೆ ಗುಂಡು ಬಿದ್ದಿದೆ ಎಂದ ಹೇಳಿಕೆಗೆ ಸಂಬಂಧಿಸಿದಂತೆ ಘಟನೆ ನಡೆದಿರುವುದು ಬಾಂಗ್ಲಾ-ಮ್ಯಾನ್ಮಾರ್ ಗಡಿಯಲ್ಲಾಗಿದೆ. ಇದು ರೈತರ ಪ್ರತಿಭಟನೆಗೆ ಸಂಬಂಧಿಸಿದ್ದಲ್ಲ ಎಂದು ನಾವು ಕಂಡುಕೊಂಡಿದ್ದೇವೆ.

Also Read: ರೈತರ ಪ್ರತಿಭಟನೆಗೆ ಮಾರ್ಪಡಿಸಲಾದ ಟ್ರಾಕ್ಟರ್ ತಯಾರಿಸಲಾಗಿದೆ ಎಂದ ವೀಡಿಯೋ ಟರ್ಕಿಯದ್ದು!

Result: False

Our Sources
Report By DailyNayadigant, Dated February 16, 2024

Report By bdnews24, Dated: February 16, 2024

Facebook post by ATNbd24News, February 10, 2024


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors