Saturday, April 5, 2025

Election Watch

Fact Check: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಬಿಬಿಸಿ ‘ಸುಳ್ಳು’ ಸಮೀಕ್ಷೆ ವೈರಲ್!

Written By Vasudha Beri, Translated By Ishwarachandra B G, Edited By Pankaj Menon
Apr 28, 2023
banner_image

Claim
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಿಬಿಸಿ ಸಮೀಕ್ಷೆ

Fact
ಬಿಬಿಸಿಗೆ ಸಂಬಂಧಿಸಿದ ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ಗಳ ಮೂಲಕ ಪರಿಶೀಲನೆ ನಡೆಸಿದಾಗ, ಅಲ್ಲಿ ಅಂತಹ ಯಾವುದೇ ಸಮೀಕ್ಷೆಗಳು ಲಭ್ಯವಾಗಿಲ್ಲ. 2018ರಲ್ಲೂ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಬಿಬಿಸಿ ಹೆಸರಿನಲ್ಲಿ ಇಂತಹುದೇ ಸಮೀಕ್ಷೆ ವೈರಲ್‌ ಆಗಿತ್ತು.

ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಬಿಬಿಸಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕರ್ನಾಟಕದಲ್ಲಿ ಬಿಜೆಪಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಲಿದೆ ಎಂದು ಈ ಸಮೀಕ್ಷೆ ಭವಿಷ್ಯ ನುಡಿದಿದೆ. ಬಿಜೆಪಿಗೆ 140, ಕಾಂಗ್ರೆಸ್ ಗೆ 58 ರಿಂದ 66 ಮತ್ತು ಜೆಡಿಎಸ್ ಗೆ 22 ರಿಂದ 29 ಸ್ಥಾನಗಳು ಸಿಗಲಿವೆ ಎಂದು ಹೇಳಿದೆ.

ಫೇಸ್ಬುಕ್‌ನಲ್ಲಿ ಹರಿದಾಡುತ್ತಿರುವ ಈ ಪೋಸ್ಟ್‌ನಲ್ಲಿ ರಾಜ್ಯದ ಪ್ರದೇಶದವಾರು ಗಳಿಕೆಯನ್ನು ವಿವರಿಸುತ್ತದೆ. ಮತ್ತು ರಾಜ್ಯದಲ್ಲಿ ಬಿಜೆಪಿ ಗೆಲುವಿಗೆ ಕಾರಣವಾದ ಅಂಶಗಳು ಕಾಂಗ್ರೆಸ್‌ ಹಾಳುಮಾಡುವಲ್ಲಿ ಅದರ ಒಳಜಗಳಗಳು ಹೇಗೆ ಕಾರಣವಾಗಿವೆ ಎಂಬ ಅವಲೋಕನಗಳು ಇದರಲ್ಲಿವೆ.

ಈ ಪೋಸ್ಟ್‌ಗಳನ್ನು ಅನ್ನು ಇಲ್ಲಿ ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಟ್ವಿಟರ್ನಲ್ಲಿ ಕೂಡ ಇಂತಹುದೇ ಪೋಸ್ಟ್‌ಗಳು ಕಂಡುಬಂದಿವೆ. “ಬಿಬಿಸಿ ಸಮೀಕ್ಷೆ: ಕರ್ನಾಟಕದಲ್ಲಿ ಬಿಜೆಪಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಲಿದೆ, ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ 140+ ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಹೇಳುತ್ತಿದೆ. ಬಿಜೆಪಿಯೊಂದಿಗಿನ ಯುದ್ಧಕ್ಕೂ ಮೊದಲು ಕಾಂಗ್ರೆಸ್‌ ನಾಯಕರು ತಮ್ಮೊಳಗೇ ಹೋರಾಟ ಮಾಡಬೇಕಾಗಿದೆ” ಎಂದು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ. 

ಈ ಕುರಿತ ಆರ್ಕೈವ್‌ ಮಾಡಲಾದಪೋಸ್ಟ್‌ಗಳು ಇಲ್ಲಿ ಇಲ್ಲಿ ಮತ್ತು ಇಲ್ಲಿವೆ.

ಈ ವೈರಲ್‌ ಸರ್ವೇ ಕುರಿತು ನ್ಯೂಸ್‌ಚೆಕರ್‌ ಟಿಪ್‌ಲೈನ್ (+91-9999499044) ಗೆ ದೂರುಗಳು ಬಂದಿದ್ದು, ಅದರಂತೆ ಈ ಬಗ್ಗೆ ಸತ್ಯ ಪರಿಶೀಲನೆ ನಡೆಸಲಾಗಿದೆ.

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಬಿಬಿಸಿ 'ಸುಳ್ಳು' ಸಮೀಕ್ಷೆ ವೈರಲ್!

Fact Check/ Verification

ಈ ವೈರಲ್ ಪೋಸ್ಟ್ ಅನ್ನು ಎಚ್ಚರಿಕೆಯಿಂದ ವಿಶ್ಲೇಷಿಸಿದಾಗ, ಬರವಣಿಗೆಯಲ್ಲಿ ಹಲವಾರು ವ್ಯಾಕರಣ ಮತ್ತು ವಿರಾಮ ಚಿಹ್ನೆಗಳ ದೋಷಗಳನ್ನು ನಾವು ಕಂಡುಕೊಂಡಿದ್ದೇವೆ. “Ruling” ಪಾರ್ಟಿ ಎನ್ನುವುದನ್ನು “Rulling” ಪಾರ್ಟಿ ಎಂದು ಬರೆಯಲಾಗಿದೆ. ಕರ್ನಾಟಕವನ್ನು ಪ್ರದೇಶವಾರು ವಿಭಾಗವಾಗಿ ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಮತ್ತು ಹೈದ್ರಾಬಾದ್‌ ಕರ್ನಾಟಕ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣವಾಗಿದ್ದು, ಇದರಲ್ಲಿ ಹಳೆಯ ಹೆಸರೇ ಇದೆ. ಜೊತೆಗೆ ಪೋಸ್ಟ್‌ನಲ್ಲಿ ಬಳಸಲಾದ ಭಾಷೆ, ಮತ್ತು ಬರವಣಿಗೆ ಶೈಲಿಗಳು ಅನುಮಾನಗಳನ್ನು ಹುಟ್ಟು ಹಾಕಿವೆ.

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಬಿಬಿಸಿ 'ಸುಳ್ಳು' ಸಮೀಕ್ಷೆ ವೈರಲ್!
ವೈರಲ್ ಪೋಸ್ಟ್ ಸ್ಕ್ರೀನ್ ಗ್ರಾಬ್

ವೈರಲ್ ಪೋಸ್ಟ್ನಲ್ಲಿ ಹಂಚಿಕೊಳ್ಳಲಾದ ಲಿಂಕ್ ಅನ್ನು ನಾವು ಪರಿಶೀಲಿಸಿದ್ದು, ಅದು ಬಿಬಿಸಿ ನ್ಯೂಸ್ ಹಿಂದಿಯ ಅಧಿಕೃತ ವೆಬ್ಸೈಟ್ನಲ್ಲಿ “ಕರ್ನಾಟಕ” ಗೆ ಸಂಬಂಧಿಸಿದ ಪುಟಕ್ಕೆ ಕರೆದೊಯ್ದಿದೆ. ವೆಬ್ನಲ್ಲಿ ನಾವು 2023ರ ಕರ್ನಾಟಕದ  ಚುನಾವಣೆ ಸಮೀಕ್ಷೆಯ ಬಗ್ಗೆ ಪರಿಶೀಲನೆ ನಡೆಸಿದ್ದು, ಯಾವುದೇ ಸಮೀಕ್ಷೆಗಳು ಕಂಡುಬಂದಿಲ್ಲ. 

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಬಿಬಿಸಿ 'ಸುಳ್ಳು' ಸಮೀಕ್ಷೆ ವೈರಲ್!
ಬಿಬಿಸಿ ಹಿಂದಿಯ ಸ್ಕ್ರೀನ್‌ ಗ್ರ್ಯಾಬ್‌


ಬಿಬಿಸಿಯ ಇಂಗ್ಲಿಷ್ ಭಾಷೆಯ ವೆಬ್ಸೈಟ್ ಕೂಡ ಅಂತಹ ಯಾವುದೇ ಸಮೀಕ್ಷೆಯನ್ನು ಒಳಗೊಂಡಿಲ್ಲ. ಬಿಬಿಸಿ ವೆಬ್ಸೈಟ್ನಲ್ಲಿ “ಕರ್ನಾಟಕ” ಮತ್ತು “ಸಮೀಕ್ಷೆ” ಎಂಬ ಕೀವರ್ಡ್ ಮೂಲಕವೂ ಹುಡುಕಾಟ ನಡೆಸಲಾಗಿದ್ದು, ಯಾವುದೇ ಫಲಿತಾಂಶ ಲಭ್ಯವಾಗಿಲ್ಲ.

ಇದರ ನಂತರ, ನಾವು ಬಿಬಿಸಿ ನ್ಯೂಸ್ ಹಿಂದಿ ಮತ್ತು ಬಿಬಿಸಿ ನ್ಯೂಸ್ ಇಂಡಿಯಾದ ಟ್ವಿಟರ್ ಹ್ಯಾಂಡಲ್ಗಳ ಮೂಲಕ ಪರಿಶೀಲನೆ ನಡೆಸಿದ್ದು, ಅವುಗಳಲ್ಲಿ ಕರ್ನಾಟಕದಲ್ಲಿ ಚುನಾವಣಾ ಪೂರ್ವ ಸಮೀಕ್ಷೆಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

2018ರಲ್ಲೂ ಇದೇ ರೀತಿಯ ನಕಲಿ ಸಮೀಕ್ಷೆ ವೈರಲ್‌

ನಂತರ ನಾವು ಟ್ವಿಟ್ಟರ್ನಲ್ಲಿ “ಬಿಬಿಸಿ”, “ಕರ್ನಾಟಕ” ಮತ್ತು “ಸಮೀಕ್ಷೆ” ಅನ್ನು ಹುಡುಕಿದ್ದು, ಅದು ಮೇ 7, 2018 ರಂದು @BBCNewsPR ಅವರ ಪೋಸ್ಟ್ ಅನ್ನು ತೋರಿಸಿದೆ. ಈ ಟ್ವೀಟ್ನಲ್ಲಿ ಕರ್ನಾಟಕ ಚುನಾವಣೆಯ ಸಮೀಕ್ಷೆಯನ್ನು ಬಿಬಿಸಿ ಮಾಡಿದ್ದೆಂದು ಹೇಳಿರುವ ಮೆಸೇಜ್‌ನ ಸ್ಕ್ರೀನ್‌ ಶಾಟ್‌ ಇದರಲ್ಲಿದೆ ಮತ್ತು ಇದನ್ನು ಬಿಬಿಸಿ ನಕಲಿ ಎಂದು ಹೇಳಿದೆ. “ಬಿಬಿಸಿ ಭಾರತದಲ್ಲಿ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಡೆಸುವುದಿಲ್ಲ” ಎಂದು ಟ್ವೀಟ್ ಮಾಡಿದ್ದು, 2018ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಇಂತಹ ಕಪೋಲ ಕಲ್ಪಿತ ಸರ್ವೇ ವೈರಲ್ ಆಗಿದ್ದನ್ನು ಇದು ಹೇಳಿದೆ.

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಬಿಬಿಸಿ 'ಸುಳ್ಳು' ಸಮೀಕ್ಷೆ ವೈರಲ್!
2018ರಲ್ಲಿ ಬಿಬಿಸಿ ನೀಡಿದ ಸ್ಪಷ್ಟನೆ

ಮೇ 2018 ರಲ್ಲಿ, ಬಿಬಿಸಿ ನ್ಯೂಸ್ ಇಂಡಿಯಾ ಈ ಬಗ್ಗೆ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದು,, ಅದು ಇಲ್ಲಿದೆ.

ಇದಲ್ಲದೆ, ಪ್ರಸ್ತುತ ವೈರಲ್ ಪೋಸ್ಟ್ನಲ್ಲಿ ಸ್ಥಾನಗಳ ಹಂಚಿಕೆಯನ್ನು ಪಟ್ಟಿ ಮಾಡುವ ವೇಳೆ ಸ್ಟಾರ್‌ ಚಿಹ್ನೆಯ ಬಳಕೆ ಮಾಡಿರುವುದು ಕಂಡುಬಂದಿದೆ. 2018ರ ಸಮದೇಶದಲ್ಲಿ ಸ್ಟಾರ್‌, ರೋಂಬಸ್‌, ಸರ್ಕಲ್ ಇತ್ಯಾದಿಗಳ ಬಳಕೆಗಳನ್ನು ಗಮನಿಸಲಾಗಿದೆ. ವೈರಲ್‌ ಪೋಸ್ಟ್‌ನ ಹಲವು ವಾಕ್ಯಗಳ ಆರಂಭದಲ್ಲಿ ಮತ್ತು ಕೊನೆಯಲ್ಲಿ ಆಸ್ಟೆರಿಸ್ಕ್‌ ಮಾರ್ಕ್‌ (*) ಇದ್ದು ಇದು ವಾಟ್ಸಾಪ್‌ ಸಂದೇಶವಾಗಿ ಹುಟ್ಟಿರಬಹುದು ಎಂಬುದನ್ನು ಸೂಚಿಸುತ್ತದೆ.  


ಈ ವಿಷಯದ ಬಗ್ಗೆ ಸ್ಪಷ್ಟೀಕರಣ ಕೋರಿ ನ್ಯೂಸ್‌ಚೆಕರ್ ಬಿಬಿಸಿಯನ್ನು ಸಂಪರ್ಕಿಸಿದ್ದು, ಅವರಿಂದ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗಿದೆ.

Conclusion

ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ವಿಜಯವನ್ನು ಊಹಿಸುವ ಬಿಬಿಸಿ ಸಮೀಕ್ಷೆಯನ್ನು ಹೊಂದಿರುವ ವೈರಲ್ ಪೋಸ್ಟ್ ಕಪೋಲಕಲ್ಪಿತ ಮತ್ತು ತಪ್ಪು ಎಂದು ತೀರ್ಮಾನಿಸಬಹುದು.

Results: False

Our Sources

Official Website Of BBC News Hindi

Official Website Of BBC

Tweet By @BBCNewsPR, Dated: May 7, 2018

Self Analysis


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

image
ನೀವು ಯಾವುದೇ ದಾವೆಯ ಸತ್ಯಾಸತ್ಯತೆ ಪರಿಶೀಲಿಸ ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಲು ಅಥವಾ ದೂರು ಸಲ್ಲಿಸಲು ಬಯಸಿದರೆ, ನಮಗೆ ವಾಟ್ಸಾಪ್ ಮಾಡಿರಿ +91-9999499044 ಅಥವಾ ನಮಗೆ ಇಮೇಲ್ ಮಾಡಿರಿ checkthis@newschecker.in​. ನೀವು ನಮ್ಮನೊಂದಿಗೆ ಸಂಪರ್ಕ ಮಾಡಬಹುದು ಮತ್ತು ಫಾರ್ಮ್ ಅನ್ನು ನೀಡಬಹುದು.
Newchecker footer logo
Newchecker footer logo
Newchecker footer logo
Newchecker footer logo
About Us

Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check

Contact Us: checkthis@newschecker.in

17,672

Fact checks done

FOLLOW US
imageimageimageimageimageimageimage
cookie

ನಮ್ಮ ವೆಬ್‌ಸೈಟ್ ಕುಕೀಗಳನ್ನು ಬಳಸುತ್ತದೆ

ನಾವು ಕುಕೀಗಳನ್ನು ಮತ್ತು ಸಮಾನ ತಂತ್ರಗಳನ್ನು ವ್ಯಕ್ತಿಗೆ ತಕ್ಕಂತೆ ಮಾಡಿಕೊಳ್ಳಲು, ವಿಜ್ಞಾಪನಗಳನ್ನು ರೂಪಿಸಲು ಮತ್ತು ಅಳತೆಗೆ ಸಹಾಯ ಮಾಡಲು, ಹೆಚ್ಚು ಉತ್ತಮ ಅನುಭವ ಒದಗಿಸಲು ಸಹಾಯ ಮಾಡುತ್ತದೆ. 'ಸರಿ' ಅಥವಾ ಕುಕೀ ಆದರಿದ ಆಯ್ಕೆಯಲ್ಲಿ ಒಂದು ಆಯ್ಕೆಯನ್ನು ಮಾಡಿ, ನೀವು ಇದನ್ನು ಒಪ್ಪಿಕೊಳ್ಳುತ್ತೀರಿ, ನಮ್ಮ ಕುಕೀ ನಿಯಮಗಳಲ್ಲಿ ವಿವರಿಸಿದ ಪ್ರಕಾರ.