Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ವಿಶ್ವದ ಅತ್ಯಂತ ಭ್ರಷ್ಟ 10 ಪಕ್ಷಗಳಲ್ಲಿ ಕಾಂಗ್ರೆಸ್ ಪ್ರಥಮ ಸ್ಥಾನದಲ್ಲಿದೆ ಎಂದು ಬಿಬಿಸಿ ಹೇಳಿದೆ ಎಂದು ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಈ ಹೇಳಿಕೆ ಕಂಡುಬಂದಿದ್ದು, ನ್ಯೂಸ್ಚೆಕರ್ ಈ ಬಗ್ಗೆ ಸತ್ಯಶೋಧನೆ ನಡೆಸಿದ್ದು ಇದು ಸುಳ್ಳು ಎಂದು ಕಂಡುಬಂದಿದೆ.
ಇದೇ ರೀತಿಯ ಹೇಳಿಕೆಯನ್ನು ಇಲ್ಲಿ ನೋಡಬಹುದು.


Also Read: ಸೇಡಂನಲ್ಲಿ ಆರೆಸ್ಸೆಸ್ ಪಥ ಸಂಚಲನ ಎಂದು ನಾಗ್ಪುರದ ವೀಡಿಯೋ ಹಂಚಿಕೆ
ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ಮಾಡಿದ್ದೇವೆ. ಈ ವೇಳೆ ಬಿಬಿಸಿ ವಿಶ್ವದ ಭ್ರಷ್ಟ ಪಕ್ಷಗಳ ಬಗ್ಗೆ ಸಮೀಕ್ಷೆ ನಡೆಸಿದೆ ಎಂಬ ಬಗ್ಗೆ ಯಾವುದೇ ಮಾಹಿತಿಗಳು- ವಿವರಗಳು ಕಂಡುಬಂದಿಲ್ಲ.
ಆದರೆ ಮಾರ್ಚ್ 21, 2017ರಂದು ಡಿಎನ್ಎ ಪ್ರಕಟಿಸಿದ ವರದಿಯೊಂದು ಈ ವೇಳೆ ಲಭ್ಯವಾಗಿದ್ದು ಇದರಲ್ಲಿ “ಬಿಬಿಸಿ ನ್ಯೂಸ್ ಪಾಯಿಂಟ್ ಎಂಬ ವೆಬ್ಸೈಟ್ನಲ್ಲಿ ಪ್ರಕಟವಾದ ಒಂದು ವರದಿಯ ಪ್ರಕಾರ, ಕಾಂಗ್ರೆಸ್ ವಿಶ್ವದಲ್ಲೇ ನಾಲ್ಕನೇ ಅತಿ ಹೆಚ್ಚು ಭ್ರಷ್ಟಾಚಾರ ನಡೆಸುತ್ತಿದೆ. ನಕಲಿ ಸುದ್ದಿಗಳನ್ನು ಹರಡುವುದರಿಂದಾಗುವ ಅಪಾಯಗಳ ಮತ್ತೊಂದು ಉದಾಹರಣೆಯೆಂದರೆ, ಬಿಬಿಸಿ ನಡೆಸಿದೆ ಎನ್ನಲಾದ ಸಮೀಕ್ಷೆಯೊಂದು, ಕಾಂಗ್ರೆಸ್ ವಿಶ್ವದ ನಾಲ್ಕನೇ ಅತ್ಯಂತ ಭ್ರಷ್ಟ ಪಕ್ಷ ಎಂದು ಹೇಳಿಕೊಂಡು ವ್ಯಾಪಕ ಪ್ರಚಾರ ಪಡೆಯಿತು. ಈ ಸಮೀಕ್ಷೆಯು ಕಳೆದ ಹಲವಾರು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಜನರು ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಆದಾಗ್ಯೂ, ಹಿನ್ನೆಲೆ ಪರಿಶೀಲನೆ ಮತ್ತು ಸೋಷಿಯಲ್ ಮೀಡಿಯಾ ಹೋಕ್ಸ್ ಸ್ಲೇಯರ್ ನಂತಹ ಗುಂಪುಗಳ ಸಹಾಯದಿಂದ , ಡಿಎನ್ಎ ಲೇಖನದ ಮೂಲ ಬಿಬಿಸಿ ಅಲ್ಲ, ಬದಲಿಗೆ ವಾಸ್ತವವಾಗಿ ಬಿಬಿಸಿ ನ್ಯೂಸ್ ಪಾಯಿಂಟ್ ಎಂದು ಕಂಡುಹಿಡಿದಿದೆ.” ಎಂದಿದೆ.

ಹೆಚ್ಚಿನ ಮಾಹಿತಿಗಾಗಿ ನಾವು ಬಿಬಿಸಿಯ ವರದಿಯ ಕುರಿತು ಸರ್ಚ್ ಮಾಡಿದಾಗ, ಏಪ್ರಿಲ್ 19, 2019ರಂದು ಬಿಬಿಸಿಯ ವರದಿ ಲಭ್ಯವಾಗಿದೆ. The surveys that weren’t ಎಂಬ ಉಪಶೀರ್ಷಿಕೆಯಲ್ಲಿ, “ಕಾಂಗ್ರೆಸ್ಸನ್ನು ವಿಶ್ವದ ನಾಲ್ಕನೇ ಅತಿ ಭ್ರಷ್ಟ ಪಕ್ಷ ಎಂದು ಹೆಸರಿಸಲು ಬಿಬಿಸಿಯ ಹೆಸರನ್ನು ತಪ್ಪಾಗಿ ಬಳಸಲಾಗಿದೆ” ಎಂದಿದೆ.

ಇದು ಹೊರತಾಗಿ ಬಿಬಿಸಿಯ ಸಮೀಕ್ಷೆಯ ಬಗ್ಗೆ ಯಾವುದೇ ಮಾಹಿತಿಗಳು ಕಂಡುಬಂದಿಲ್ಲ.
ಆದ್ದರಿಂದ ಬಿಬಿಸಿ ಪ್ರಕಾರ ವಿಶ್ವದ ಅತ್ಯಂತ ಭ್ರಷ್ಟ 10 ಪಕ್ಷಗಳಲ್ಲಿ ಕಾಂಗ್ರೆಸ್ ಪ್ರಥಮ ಸ್ಥಾನದಲ್ಲಿದೆ ಎಂಬ ಹೇಳಿಕೆ ತಪ್ಪು ಎಂದು ಕಂಡುಬಂದಿದೆ.
Also Read: ತರಗತಿಯಲ್ಲಿ ಬಾಲಕಿಯರು, ಬಾಲಕ ವಿದ್ಯಾರ್ಥಿಗಳ ಮಧ್ಯೆ ಗೋಡೆ, ವೈರಲ್ ವೀಡಿಯೋ ಮಹಾರಾಷ್ಟ್ರದ್ದು!
Our Sources
Report by DNA, Dated: March 21, 2017
Report by BBC, Dated: April 19, 2019
Ishwarachandra B G
November 1, 2025
Vasudha Beri
April 28, 2023
Ishwarachandra B G
February 3, 2023