ತವಾಂಗ್‌ ಕಾದಾಟದ ಬಳಿಕ 2021ರ ವರದಿಯ ವೀಡಿಯೋ ವೈರಲ್‌ ಆಯಿತೇ? ಇಲ್ಲಅದು ಎಡಿಟ್‌ ಮಾಡಲಾದ ವೈರಲ್‌ ಸ್ಕ್ರೀನ್‌ಗ್ರ್ಯಾಬ್‌

ತವಾಂಗ್‌, ಕಾದಾಟ, ವೈರಲ್‌ ವೀಡಿಯೋ

ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಚೀನಿ ಸೇನೆ ಭಾರತೀಯ ಸೇನೆಯೊಂದಿಗೆ ಕಾದಾಟ ನಡೆದ ವಿಚಾರ ಎಲ್ಲೆಡೆ ಸುದ್ದಿಯಾಗಿದೆ. ಇಲ್ಲೊಂದು ಕಡೆ 2021ರ ವರದಿಯ ವೀಡಿಯೋಕ್ಕೆ ವೈರಲ್‌ ಸ್ಕ್ರೀನ್‌ ಗ್ರ್ಯಾಬ್‌ ಬಳಸಿ ಎಡಿಟ್‌ ಮಾಡಿರುವುದು ಗೊತ್ತಾಗಿದೆ.

Fact Check

ವೀಡಿಯೋದ ಸ್ಕ್ರೀನ್‌ಗ್ರ್ಯಾಬ್‌ ಪರಿಶೀಲಿಸಿದಾಗ, ಎನ್ ಬಿಸಿ ನ್ಯೂಸ್‌ನ ಲೋಗೋ ಎಡಬದಿ ಮೇಲ್ಭಾಗದಲ್ಲಿದೆ. ಮತ್ತು ಈ ವರದಿಯು 2021 ಫೆಬ್ರವರಿ 19ರಂದು ಅಪ್ಡೇಟ್‌ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದರ ಶೀರ್ಷಿಕೆಯಲ್ಲಿ “ಚೀನ ಸರ್ಕಾರಿ ಸ್ವಾಮ್ಯದ ಚಾನೆಲ್‌ ಭೀಕರ ವೀಡಿಯೋ…”ಎಂದಿದೆ. 

ಈ ಕುರಿತು “NBC News, Chinese broadcaster, deadly clash ಮತ್ತು February 19” ಎಂದು ಗೂಗಲ್‌ ಕೀವರ್ಡ್‌ ಸರ್ಚ್ ನಡೆಸಿದಾಗ,  ಇದೇ ಹೆಡ್ಲೈನ್‌ ಅನ್ನು ನೀಡಲಾಗಿದೆ. ಆದರೆ ಈ ಸುದ್ದಿಯಲ್ಲಿನ ಥಂಬ್‌ನೈಲ್‌ ಫೋಟೋ ಮಾತ್ರ ಭಿನ್ನವಾಗಿದೆ. ವೈರಲ್‌ ಚಿತ್ರ ಮತ್ತು ಎನ್‌ಬಿಸಿ ಸುದ್ದಿವಾಹಿನಿಯ ಸ್ಕ್ರೀನ್‌ಗ್ರ್ಯಾಬ್‌ ನಡುವಿನ ವ್ಯತ್ಯಾಸವನ್ನು ಇಲ್ಲಿ ನೋಡಬಹುದು. 

ಎನ್‌ಬಿಸಿ ತನ್ನ ವರದಿಯಲ್ಲಿ ಭಾರತ ಮತ್ತು ಚೀನಾ ನಡುವಿನ ಗಡಿ ಬಿಕ್ಕಟ್ಟಿನ ಕುರಿತು 1.35 ನಿಮಿಷಗಳ ವೀಡಿಯೋವನ್ನು ಪೋಸ್ಟ್‌ ಮಾಡಿದೆ. ಇದರಲ್ಲಿ “ಚೀನಾದ ಸರ್ಕಾರಿ ಸ್ವಾಮ್ಯದ ಟಿವಿಯು ಮೊದಲ ಬಾರಿಗೆ ಚೀನ ಮತ್ತು ಭಾರತೀಯ ಸೈನಿಕರ ನಡುವೆ ಗಡಿಯಲ್ಲಿ ನಡೆದ ಮಾರಣಾಂತಿಕ ಕಾದಾಟದ ವೀಡಿಯೋವನ್ನು ಬಿಡುಗಡೆ ಮಾಡಿದೆ. ಹಿಮಾಲಯದ ಗಾಲ್ವಾನ್‌ ಕಣಿವೆಯಲ್ಲಿ ಜೂನ್‌ 2020ರಂದು ಈ ಕಾದಾಟ ನಡೆದಿತ್ತು. ಆ ಹೊತ್ತಿಗೆ ಭಾರತದ 20 ಮಂದಿ ಸೈನಿಕರು ಸಾವನ್ನಪ್ಪಿದ್ದರೆ, ಚೀನ ತನ್ನ ನಾಲ್ವರು ಸೈನಿಕರು ಮಾತ್ರ ಮೃತಪಟ್ಟಿದ್ದಾಗಿ ಹೇಳಿತ್ತು” 

Also Read: ಪೆಟ್ರೋಲ್‌ ಪಂಪ್‌ನಲ್ಲಿ ಕೊಟ್ಟ ಕೀಚೈನಿಂದ ದರೋಡೆ? ವೈರಲ್‌ ಮೆಸೇಜ್‌ ಸತ್ಯವೇ

ಎನ್‌ಬಿಸಿ ವರದಿ ಮತ್ತು ವೈರಲ್‌ ಚಿತ್ರದ ಬಗ್ಗೆ ಪರಿಶೀಲಿಸಿದಾಗ, ಯಾವುದೇ ಹೋಲಿಕೆಗಳು ಕಂಡು ಬಂದಿಲ್ಲ. ವೀಡಿಯೋದಲ್ಲಿನ ಗುಡ್ಡಗಾಡು ಪ್ರದೇಶ, ಯೋಧರ ಸಮವಸ್ತ್ರ ಇತ್ಯಾದಿಗಳು ಸಂಪೂರ್ಣ ಭಿನ್ನವಾಗಿ ಇವೆ. ಅಲ್ಲದೇ ವೀಡಿಯೋದ ಫ್ರೇಂ ಕೂಡ ಇದಕ್ಕೆ ಹೋಲಿಕೆಯಾಗುತ್ತಿಲ್ಲ. 

ಇದಲ್ಲದೆ ನಾವು 2021 ಫೆಬ್ರವರಿ 19ರಂದು ಆರ್ಕೈವ್‌ ಮಾಡಿದ ಎನ್‌ಬಿಸಿ ವರದಿಯನ್ನು ಪರಿಶೀಲಿಸಿದ್ದು, ಇದು ಲೈವ್‌ ಪುಟದಲ್ಲಿ ಇರುವಂತೆ, ಭಾರತ-ಚೀನ ಘರ್ಷಣೆಯ ಅದೇ ವೀಡಿಯೋವನ್ನು ಅದು ಹೊಂದಿದೆ. ಆದರೆ ಲೈವ್‌ ವೆಬ್‌ಸೈಟ್‌ನಲ್ಲಿ ಆ ವೀಡಿಯೋವನ್ನು ಬದಲಾಯಿಸಿಲ್ಲ ಎನ್ನುವುದು ಸಾಬೀತಾಗಿದೆ. 

ಇದರೊಂದಿಗೆ ಗಾಲ್ವಾನ್‌ ಕಣಿವೆಯಲ್ಲಿ ನಡೆದ ಕಾದಾಟದ ವೀಡಿಯೋವನ್ನು ಹಲವು ಸುದ್ದಿವಾಹಿನಿಗಳು ಪ್ರಕಟ ಮಾಡಿವೆ. ಅದು ಎನ್‌ಬಿಸಿ ನ್ಯೂಸ್‌ (2021 ಫೆಬ್ರವರಿಯಲ್ಲಿ) ಪ್ರಕಟಿಸಿದ ವೀಡಿಯೋದಂತೆಯೇ ಇದೆ.  

ಆದ್ದರಿಂದ  2021ರ ಫೆಬ್ರವರಿಯ ಎನ್‌ಬಿಸಿ ನ್ಯೂಸ್‌ ರಿಪೋರ್ಟ್ ಮತ್ತು ಭಾರತ-ಚೀನ ಸೇನೆಯ ನಡುವಿನ ಇತ್ತೀಚಿನ ಕಾದಾಟವನ್ನು ತೋರಿಸುವ ವೈರಲ್‌ ವೀಡಿಯೋವನ್ನು ಡಿಜಿಟಲ್‌ ಎಡಿಟಿಂಗ್‌ ಮಾಡಲಾಗಿದೆ ಎಂದು ನಾವು ತೀರ್ಮಾನಿಸಬಹುದಾಗಿದೆ. 

ಈ ಕುರಿತಾಗಿ ಸ್ಪಷ್ಟೀಕರಣಕ್ಕೆ ಎನ್‌ಬಿಸಿ ನ್ಯೂಸ್‌ ಅನ್ನು ನ್ಯೂಸ್‌ಚೆಕರ್‌ ಕೇಳಿಕೊಂಡಿದ್ದು, ಅವರ ಪ್ರತಿಕ್ರಿಯೆಯನ್ನು ಎದುರು ನೋಡಲಾಗುತ್ತಿದೆ. 

Result: Altered Photo 

Our Sources 
Report By NBC News, Dated February 19 2021
Self Analysis 

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.