Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಬೆಳಗಾವಿ ಮತ್ತು ಮಹಾರಾಷ್ಟ್ರದ ಗಡಿಭಾಗದಲ್ಲಿ ಇದೀಗ ವಾಟ್ಸಾಪ್ ಮೆಸೇಜ್ ಒಂದು ವೈರಲ್ ಆಗಿದೆ. ಈ ಮೆಸೇಜ್ ಪ್ರಕಾರ “ಎಚ್ಚರಿಕೆ, ಈ ಕೀ ಚೈನ್ ಅನ್ನು ನಿಮಗೆ ಪೆಟ್ರೋಲ್ ಬಂಕ್‌ಗಳಲ್ಲಿ ಮತ್ತು ಶಾಪಿಂಗ್ ಮಾಲ್‌ಗಳಲ್ಲಿ ಉಚಿತವಾಗಿ ಕೊಡಲಾಗುತ್ತದೆ. ಆದರೆ ಇದನ್ನು ತೆಗೆದುಕೊಳ್ಳಬೇಡಿ. ಇದನ್ನು ಟ್ರ್ಯಾಕ್ ಮಾಡಲು ಬಳಸಲಾಗುತ್ತಿದ್ದು, ನಿಮ್ಮ ಮನೆಗಳಲ್ಲಿ ನಿಮ್ಮನ್ನು ದರೋಡೆ ಮಾಡಬಹುದುದು. ಸಂದೇಶವನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ” ಎಂದಿದೆ.
ಈ ಸಂದೇಶವನ್ನು ಬಳಕೆದಾರರೊಬ್ಬರು ನ್ಯೂಸ್‌ಚೆಕರ್ ಜೊತೆ ಹಂಚಿಕೊಂಡಿದ್ದು ಸತ್ಯಶೋಧನೆಗೆ ಮನವಿ ಮಾಡಿದ್ದಾರೆ.

ಈ ಮೆಸೇಜ್‌ನ ಸತ್ಯಾಸತ್ಯದ ಪರಿಶೀಲನೆಗೆ ಗೂಗಲ್ ಕೀವರ್ಡ್ ಸರ್ಚ್ ನಡೆಸಲಾಯಿತು. ಆದರೆ ಯಾವುದೇ ಅಧಿಕೃತ ಮಾಹಿತಿಗಳು ಕಂಡುಬಂದಿಲ್ಲ. ಜೊತೆಗೆ ಇಂತಹ ಕೀ ಚೈನ್‌ಗಳನ್ನು ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದಲ್ಲಿ ನೀಡಲಾಗುತ್ತಿದೆ ಎನ್ನುವ ಕುರಿತೂ ಯಾವುದೇ ಮಾಹಿತಿಗಳು ತಿಳಿದು ಬಂದಿಲ್ಲ.
ಇನ್ನಷ್ಟು ಪರಿಶೀಲನೆಗಾಗಿ ಕರ್ನಾಟಕ ಪೆಟ್ರೋಲ್ ಪಂಪ್ ಮಾಲಕರ ಅಸೋಸಿಯೇಷನ್ಸ್‌ನ ನಿರ್ದೇಶಕರಾದ ಪ್ರಶಾಂತ್ ಮೇಲ್ಗೆ ಅವರನ್ನು ಸಂಪರ್ಕಿಸಿದಾಗ, “ಅಂತಹ ಯಾವುದೇ ರೀತಿಯ ಉತ್ಪನ್ನವನ್ನು ಗ್ರಾಹಕರಿಗೆ ನೀಡಲಾಗುತ್ತಿಲ್ಲ ಮತ್ತು ಯಾವುದೇ ರೀತಿಯ ಉತ್ಪನ್ನವನ್ನು ಗ್ರಾಹಕರಿಗೆ ಪೆಟ್ರೋಲ್ ಪಂಪ್‌ನಲ್ಲಿ ನೀಡುವುದು ಪೆಟ್ರೋಲಿಯಂ ಕಂಪೆನಿಗಳ ನಿಯಮಗಳಿಗೆ ವಿರುದ್ಧವಾದದ್ದು. ಆದ್ದರಿಂದ ಗ್ರಾಹಕರಿಗೆ ಅಂತಹ ವಸ್ತುಗಳನ್ನು ನೀಡಲಾಗುತ್ತಿದೆಯೇ ಎನ್ನುವ ಪ್ರಶ್ನೆಯೇ ಬಾರದು” ಎಂದವರು ತಿಳಿಸಿದ್ದಾರೆ.
ಇದೇ ವೈರಲ್ ಮೆಸೇಜ್‌ಗೆ ಸಂಬಂಧಿಸಿದಂತೆ ಕೊಲ್ಹಾಪುರ ಪೆಟ್ರೋಲ್ ಪಂಪ್ ಮಾಲೀಕರ ಅಸೋಸಿಯೇಷನ್‌ನ ನಿರ್ದೇಶಕರಾದ ರಾಜೀವ್ ಜಲಾಲ್ ಅವರನ್ನು ಸಂಪರ್ಕಿಸಲಾಗಿದ್ದು, “ವೈರಲ್ ಮೆಸೇಜ್‌ನಲ್ಲಿ ಬಂದ ಸುದ್ದಿ ಸಂಪೂರ್ಣ ಸುಳ್ಳು” ಎಂದು ಹೇಳಿದ್ದಾರೆ. “ಒಟ್ಟಾರೆಯಾಗಿ ಈ ವೈರಲ್ ಮೆಸೇಜ್ ಗ್ರಾಹರಲ್ಲಿ ಒಂದು ಬಗೆಯ ಹೆದರಿಕೆಯನ್ನು ಹುಟ್ಟಿಸುವಂತೆ ಇದ್ದು, ಇಂತಹ ಮೆಸೇಜ್ ಹರಡುವವರ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿದೆ” ಎಂದು ಹೇಳಿದ್ದಾರೆ.
Also Read: ಕಾಂತಾರ ಸಿನೆಮಾ ನೋಡಲು ಹೋದ ಜೋಡಿಗೆ ಹಲ್ಲೆ ನಡೆಸಿದ್ದಕ್ಕೆ ಇಸ್ಲಾಮೋಫೋಬಿಯಾ ಕಾರಣ?
ಈ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸೈಬರ್ ಸೆಲ್‌ನ ಉಪ ಮಹಾನಿರ್ದೇಶಕರಾದ ಸಂಜಯ್ ಶಿಂತ್ರೆ ಅವರನ್ನು ಸಂಪರ್ಕಿಸಿದ್ದು, “ಕೀ ಚೈನ್ ರೀತಿಯ ವಸ್ತುವನ್ನು ಪೆಟ್ರೋಲ್ ಪಂಪ್‌ನಲ್ಲಿ ಅಥವಾ ಶಾಪಿಂಗ್ ಮಾಲ್ ನೀಡಲಾಗುತ್ತಿದೆ ಎಂಬ ಬಗ್ಗೆ ಯಾವುದೇ ಮಾಹಿತಿಗಳು ಬಂದಿಲ್ಲ. ಜೊತೆಗೆ ಇದರ ನಂತರ ಲೂಟಿ, ಕಳ್ಳತನದ ಪ್ರಕರಣಗಳೂ ವರದಿಯಾಗಿಲ್ಲ. ಇತ್ತೀಚಿಗೆ ಸೈಬರ್ ಸೆಲ್ ವ್ಯವಸ್ಥೆ, ಆನ್‌ಲೈನ್ ಪೋರ್ಟಲ್‌ಗಳಿಂದಲೂ ದೂರು ತೆಗೆದುಕೊಳ್ಳುವ ವ್ಯವಸ್ಥೆಯನ್ನು ಆರಂಭಿಸಿದೆ. ಆದರೆ ಕೀಚೈನ್ ರೀತಿಯ ಯಾವುದೇ ದೂರುಗಳನ್ನು ಈವರೆಗೆ ಪಡೆದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ಮೆಸೇಜ್ ವೈರಲ್ ಆಗಿದೆ ಅಂದರೆ, ನಾವು ಅದರ ಬಗ್ಗೆ ತನಿಖೆ ನಡೆಸುತ್ತೇವೆ” ಎಂದು ಹೇಳಿದ್ದಾರೆ.
ಕೀಚೈನ್ ಕುರಿತ ವೈರಲ್ ಮೆಸೇಜ್‌ನಲ್ಲಿ ಇರುವ ಚಿತ್ರವು ಸ್ಮಾರ್ಟ್ ಕೀ ಫೈಂಡರ್ ಎನ್ನುವ ಪುಟಾಣಿ ಉಪಕರಣವಾಗಿದೆ. ಇದರ ಮೂಲಕ ಮೊಬೈಲ್‌ಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಇದರಿಂದ ಕೀ ಕಳೆದುಹೋದಲ್ಲಿ ಜಿಪಿಎಸ್, ಬ್ಲೂಟೂತ್ ಮೂಲಕ ಹುಡುಕಬಹುದು. ಇದನ್ನು ಇಲ್ಲಿ ನೋಡಬಹುದು.
ನ್ಯೂಸ್‌ಚೆಕರ್ ಸತ್ಯಾನ್ವೇಷಣೆ ಪ್ರಕಾರ, ಕ್ಲೇಮಿನಲ್ಲಿ ಹೇಳಿದಂತೆ ಪೆಟ್ರೋಲ್ ಪಂಪ್‌ಗಳಲ್ಲಿ ಮತ್ತು ಮಾಲ್‌ಗಳಲ್ಲಿ ಕೀಚೈನುಗಳನ್ನು ವಿತರಿಸುತ್ತಿರುವುದು ಸಂಪೂರ್ಣ ಸುಳ್ಳಾಗಿದೆ. ಇದು ಸಮಾಜದಲ್ಲಿ ಭೀತಿ ಮತ್ತು ಸುಳ್ಳು ಮಾಹಿತಿಯನ್ನು ಹರಡಲು ಕಾರಣವಾಗಿದೆ.
Our sources
Telephonic conversation with Directors of Karnataka and Maharashtra Petrol Pump owners’ association
Telephonic conversation with Maharashtra Cyber Cell DGP
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.