ಭಾರತ-ಚೀನ ಸೈನಿಕರ ಮುಖಾಮುಖಿಯ ಹಳೆಯ ವೀಡಿಯೋ ತೋರಿಸಿ ಇತ್ತೀಚಿನದ್ದು ಎಂದು ಪ್ರಚಾರ

ಭಾರತ ಚೀನ ಸೈನಿಕರು, ಹಳೆ ವೀಡಿಯೋ, ಮುಖಾಮುಖಿ

ತವಾಂಗ್‌ನಲ್ಲಿ ಇತ್ತೀಚಿಗೆ, ಭಾರತ-ಚೀನ ಸೈನಿಕರ ಕಾದಾಟದ ಸುದ್ದಿ ಹಬ್ಬಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯ ಸೈನಿಕರ ಪರಾಕ್ರಮವನ್ನ ಅಭಿನಂದಿಸಿ ಅನೇಕ ವೀಡಿಯೋಗಳು ವೈರಲ್‌ ಆಗುತ್ತಿವೆ. ಹಲವು ಬಳಕೆದಾರರು ವೀಡಿಯೋಗಳನ್ನು ಶೇರ್‌ ಮಾಡಿದ್ದು, ಇದನ್ನು 9ರಂದು ಅರುಣಾಚಲದ ತವಾಂಗ್‌ನಲ್ಲಿ ನಡೆದ ಘಟನೆ ಎಂದು ಹೇಳಿದ್ದಾರೆ. 

ಅಂತಹ ವೀಡಿಯೋಗಳಲ್ಲಿ ಒಂದನೆಯದು ಸೈನಿಕರ ಗುಂಪು ದೈಹಿಕವಾಗಿ ಕಾದಾಟಕ್ಕೆ ಇಳಿದಿರುವುದು ಮತ್ತು ಇನ್ನೊಂದರಲ್ಲಿ ಸೇನಾ ವಾಹನವೊಂದನ್ನು ಪುಡಿಗಟ್ಟುತ್ತಿರುವ ವೀಡಿಯೋ ಇದೆ. ಈ ಎರಡೂ ವೀಡಿಯೋಗಳು ಹಳೆಯ ವೀಡಿಯೋಗಳಾಗಿದ್ದು ಮೊನ್ನೆ ವರದಿಯಾದ ತವಾಂಗ್‌ನದ್ದಲ್ಲ ಎನ್ನುವುದನ್ನು ನ್ಯೂಸ್‌ಚೆಕರ್‌ ಕಂಡುಕೊಂಡಿದೆ.

ಸೂಚನೆ: ಈ ವೀಡಿಯೋದಲ್ಲಿ ನಿಂದನೀಯ ಪದಗಳು ಮತ್ತು ಹಿಂಸಾಚಾರವಿದ್ದು, ಇದನ್ನು ನ್ಯೂಸ್‌ಚೆಕರ್‌ ಈ ವರದಿಯಲ್ಲಿ ಸೇರಿಸಿಲ್ಲ.

@rmahajan25 ಇದರ ಸ್ಕ್ರೀನ್‌ಶಾಟ್‌ ಟ್ವೀಟ್‌
@82off53GOAT ಇದರ ಸ್ಕ್ರೀನ್‌ಶಾಟ್‌ ಟ್ವೀಟ್‌




@Transctimes ಇದರ ಸ್ಕ್ರೀನ್‌ಶಾಟ್‌ ಟ್ವೀಟ್‌
@kapilkumaron ಸ್ಕ್ರೀನ್‌ಶಾಟ್‌ ಟ್ವೀಟ್‌

ರಕ್ಷಣಾ ಸಚಿವರು ಹೇಳುವುದೇನು?

ಸಂಸತ್ತಿನಲ್ಲಿ ಭಾಷಣ ಮಾಡುವವೇಳೆ, ರಾಜನಾಥ್‌ ಸಿಂಗ್‌ ಅವರು ಮಾತನಾಡಿ, “ಡಿಸೆಂಬರ್ 9ರಂದು ತವಾಂಗ್‌ನ ಯಾಂಗ್ಟ್ಸೆ ಪ್ರದೇಶದಲ್ಲಿ ಪಿಎಲ್‌ಎ ಸೈನಿಕರು ಯಥಾಸ್ಥಿತಿಯನ್ನು ಉಲ್ಲಂಘಿಸಲು ಯತ್ನಿಸಿದ್ದರು. ಇದನ್ನು ನಮ್ಮ ಸೈನಿಕರು ಸೂಕ್ತ ಕ್ರಮದ ಮೂಲಕ ನಿರ್ವಹಣೆ ಮಾಡಿದ್ದಾರೆ. ನಮ್ಮ ಸೈನಿಕರು ವೀರೋಚಿತವಾಗಿ ಪಿಎಲ್‌ಎ ಸೈನಿಕರು ನಮ್ಮ ಗಡಿಯನ್ನು ಕಬಳಿಸುವುದನ್ನು ತಡೆದಿದ್ದು ಅವರನ್ನು ಅವರ ಪ್ರದೇಶಕ್ಕೆ ಬಲವಂತವಾಗಿ ಹೋಗುವಂತೆ ಮಾಡುವಲ್ಲಿ ಸಫಲವಾಗಿದ್ದಾರೆ” ಎಂದು ಹೇಳಿದ್ದಾರೆ. ಇದರೊಂದಿಗೆ “ಈ ಕಾಳಗದಲ್ಲಿ ಎರಡೂ ಕಡೆಯ ಸೈನಿಕರಿಗೆ ಗಾಯಗಳಾಗಿವೆ. ಈ ಸದನಕ್ಕೆ ನಾನು ಖಚಿತಪಡಿಸುವುದೇನೆಂದರೆ, ಯಾವುದೇ ಭಾರತದ ಸೈನಿಕ ಹತನಾಗಿಲ್ಲ ಮತ್ತು ತೀವ್ರವಾಗಿ ಗಾಯಗೊಂಡಿಲ್ಲ” ಎಂದು ಹೇಳಿದ್ದಾರೆ. ರಾಜನಾಥ್‌ ಸಿಂಗ್‌ ಅವರ ಈ ಹೇಳಿಕೆಯ ಪೂರ್ಣ  ವಿವರ ಇಲ್ಲಿದೆ.

ಇದೇ ವಿಚಾರದಲ್ಲಿ ರಾಜನಾಥ್ ಅವರ ಟ್ವೀಟ್ ಇಲ್ಲಿದೆ.

Fact Check

ಈ ಎರಡೂ ವೀಡಿಯೋಗಳ ಸತ್ಯಾಸತ್ಯತೆಯನ್ನು ನೋಡಲು ನ್ಯೂಸ್‌ಚೆಕರ್ ಮುಂದಾಗಿದೆ.

ವೀಡಿಯೋ 1

ವೈರಲ್‌ ವೀಡಿಯೋದ ಸ್ಕ್ರೀನ್ ಗ್ರ್ಯಾಬ್‌ ಕೃಪೆ:@rmahajan25

ವೈರಲ್‌ ವೀಡಿಯೋದ ಕೀಫ್ರೇಂಗಳನ್ನು ತೆಗೆದು ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್ ನಡೆಸಲಾಗಿದೆ. ಈ ವೇಳೆ ನವನೀತ್‌ ಕುಮಾರ್‌ ರೈ ಎಂಬ ಯೂಟ್ಯೂಬ್‌ ವೀಡಿಯೋ ಚಾನೆಲ್‌ ಲಭ್ಯವಾಗಿದೆ. ಇದರಲ್ಲಿ 2020 ಜೂ.20ರಂದು ಅಪ್ಲೋಡ್‌ ಮಾಡಲಾದ ವೀಡಿಯೋ “ ‘Indian Troopers beating Chinese PLA Chicoms in a  Fight on LAC | Part-1.’ ಎಂಬ ಶೀರ್ಷಿಕೆಯನ್ನು ಹೊಂದಿದ್ದು, 2.20 ನಿಮಿಷದ ವೀಡಿಯೋವನ್ನು ಹೊಂದಿದೆ. ಇದರಲ್ಲಿ ಚೀನ ಸೈನಿಕರೊಂದಿಗೆ ಭಾರತೀಯ ಸೈನಿಕರು ಕಾದಾಟ ನಡೆಸುತ್ತಿರುವ ದೃಶ್ಯ ಇದೆ.

Navneet Kumar Rai ಯೂಟ್ಯೂಬ್‌ ವೀಡಿಯೋದ ಸ್ಕ್ರೀನ್‌ಗ್ರ್ಯಾಬ್‌

ವೈರಲ್‌ ವೀಡಿಯೋ ಮತ್ತು ಯೂಟ್ಯೂಬ್‌ ವೀಡಿಯೋವನ್ನು ನೋಡಿದಾಗ, ಎರಡೂ ವೀಡಿಯೋಗಳು ಒಂದೇ ಘಟನೆಗೆ ಸಂಬಂಧಿಸಿದ್ದು ಎಂದು ಹೇಳಬಹುದು. ನವನೀತ್‌ ಕುಮಾರ್‌ ರೈ ಯೂಟ್ಯೂಬ್‌ ವೀಡಿಯೋ ಹೆಚ್ಚಿನ ಅವಧಿಯದ್ದಾಗಿದೆ. ಈ ವೀಡಿಯೋವನ್ನೂ ಇತ್ತೀಚೆಗೆ ಅರುಣಾಚಲ ಪ್ರದೇಶದ ತವಾಂಗ್ ನಲ್ಲಿ ನಡೆದ ಭಾರತ-ಚೀನ ಸೈನಿಕರ ಕಾದಾಟದ್ದು ಎಂದೂ ಬಳಸಲಾಗುತ್ತಿದೆ.

Also Read: ತವಾಂಗ್‌ ಕಾದಾಟದ ಬಳಿಕ 2021ರ ವರದಿಯ ವೀಡಿಯೋ ವೈರಲ್‌ ಆಯಿತೇ? ಇಲ್ಲಅದು ಎಡಿಟ್‌ ಮಾಡಲಾದ ವೈರಲ್‌ ಸ್ಕ್ರೀನ್‌ಗ್ರ್ಯಾಬ್‌

(ಎಡ-ಬಲ) Navneet Kumar Rai ಯೂಟ್ಯೂಬ್‌ ಚಾನೆಲ್‌ ಸ್ಕ್ರೀನ್‌ಗ್ರ್ಯಾಬ್‌ ಮತ್ತು ವೈರಲ್‌ ವೀಡಿಯೋದ ಸ್ಕ್ರೀನ್‌ ಗ್ರ್ಯಾಬ್‌

ಇದರೊಂದಿಗೆ ನಾವು “Indian”, “China” ಮತ್ತು “Soldiers clash” ಎಂಬ ಪದಗಳನ್ನು ಗೂಗಲ್‌ನಲ್ಲಿ  2020 ಜೂನ್‌ 1ರಿಂದ 2022 ಜೂನ್‌ 30ರವರೆಗಿನ ಅವಧಿಯಲ್ಲಿ ಸರ್ಚ್ ಮಾಡಿ ನೋಡಿದ್ದು ಈ ವೇಳೆ ಎನ್‌ಡಿಟಿವಿ ವರದಿ ಮಾಡಿದ ವೀಡಿಯೋ ಲಭ್ಯವಾಗಿದೆ. ಇದನ್ನು 2020 ಜೂನ್‌ 22ರಂದು ಪೋಸ್ಟ್‌ ಮಾಡಲಾಗಿದ್ದು “Vidide shows High Altitude clash between Indian, China soldiers in Sikkim” ಎಂದಿದೆ.

NDTV ಯೂಟ್ಯೂಬ್‌ ವೀಡಿಯೋದ ಸ್ಕ್ರೀನ್‌ಗ್ರ್ಯಾಬ್‌

ಈ ವೀಡಿಯೋದ ವಿವರಣೆಯಲ್ಲಿ “ಲಡಾಖ್‌ನಲ್ಲಿ ಮುಖಾಮುಖಿಯಾದ ಬಳಿಕ ಭಾರತ ಮತ್ತು ಚೀನಾದ ಅಧಿಕಾರಿಗಳು ಸಿಕ್ಕಿಂನ ಪ್ರದೇಶವೊಂದರಲ್ಲಿ ಕಾದಾಟ ನಡೆಸಿದ್ದಾರೆ. ಚೀನ ಅಧಿಕಾರಿಯೊಬ್ಬನನ್ನು ಭಾರತೀಯ ಅಧಿಕಾರಿ ಮತ್ತು ಜವಾನರು ಜಗಳ ನಡೆಸುತ್ತಿರುವುದು ಕಂಡು ಬಂದಿದೆ. ಈ ಮೊಬೈಲ್‌ ವೀಡಿಯೋ ಐದು ನಿಮಿಷಗಳ ಕಾಲ ಇದೆ” ಎಂದು ಬರೆಯಲಾಗಿದೆ.

ಈ ವೈರಲ್‌ ವೀಡಿಯೋದ ವಿವಿಧ ಕೀ ಫ್ರೇಮ್‌ಗಳು ಒಂದೇ ರೀತಿ ಇದೆ. ಅದರ ಒಂದು ತುಲನೆ ಇಲ್ಲಿದೆ.

NDTV ಯೂಟ್ಯೂಬ್‌ ಚಾನೆಲ್‌ ಸ್ಕ್ರೀನ್‌ಗ್ರ್ಯಾಬ್‌ ಮತ್ತು ವೈರಲ್‌ ವೀಡಿಯೋದ ಸ್ಕ್ರೀನ್‌ ಗ್ರ್ಯಾಬ್‌

2020 ಜೂನ್‌ 22ರ ಇಂಡಿಯಾ ಟುಡೇಯ ಇನ್ನೊಂದು ವೀಡಿಯೋ ವೈರಲ್‌ ಕ್ಲಿಪ್‌ನ ತುಣುಕುಗಳನ್ನು ಹೊಂದಿದೆ. ಇದರ ವಿವರಣೆಯಲ್ಲಿ “ಈ ಹೊಸ ವೀಡಿಯೋದಲ್ಲಿ ಭಾರತೀಯ ಸೈನಿಕರು ನಾಲ್ಕೈದು ಚೀನ ಸೈನಿಕರನ್ನು ಹಿಂದಕ್ಕೆ ತಳ್ಳುತ್ತಿದ್ದಾರೆ. ಪೂರ್ವ ಲಡಾಖ್‌ನ ಗಲ್ವಾನ್‌ ಕಣಿವೆಯ ಜಟಾಪಟಿ ನಂತರ ಎರಡೂ ದೇಶಗಳು ಮಾತುಕತೆಗೆ ಕೂತ ಬೆನ್ನಲ್ಲೇ ಈ ವೀಡಿಯೋ ಸುದ್ದಿಮಾಡಿದೆ” ಎಂದು ಬರೆಯಲಾಗಿದೆ.

India Today ಯೂಟ್ಯೂಬ್‌ ಚಾನೆಲ್‌ನ ಸ್ಕ್ರೀನ್‌ ಗ್ರ್ಯಾಬ್‌

ಈ ವೀಡಿಯೋದಲ್ಲಿ ಆಂಕರ್‌ ಅವರು ಈ “ದಿನಾಂಕ”ವಿಲ್ಲದ ವೀಡಿಯೋ ಸಿಕ್ಕಿಂನದ್ದು “ಆಗಿರುವ” ಸಾಧ್ಯತೆ ಇದೆ, ಆದರೂ ಕೊರೊನಾ ಮಾಸ್ಕ್ಗಳನ್ನು ಸೈನಿಕರು ಧರಿಸಿದ್ದಿರುವ ಕಾರಣ, (ಸೈನಿಕರು ಮಾಸ್ಕ್‌ ಧರಿಸಿರುವುದು ವೀಡಿಯೋದಲ್ಲಿ ಕಂಡುಬರುತ್ತಿದೆ) ಇದು ಇತ್ತೀಚಿನದ್ದು ಎಂದು ಹೇಳಬಹುದು ಎಂದು ಹೇಳುತ್ತಾರೆ.

ಆದ್ದರಿಂದ ಮಾಧ್ಯಮಗಳ ವರದಿ ಪ್ರಕಾರ, ತವಾಂಗ್‌ನಲ್ಲಿ ಭಾರತ-ಚೀನ ಸೈನಿಕರ ಕಾದಾಟ ಎಂದು ತೋರಿಸಲಾದ ವೈರಲ್‌ ವೀಡಿಯೋ ಸುಮಾರು  2 ವರ್ಷ ಹಳೆಯದಾಗಿದೆ.

ವೀಡಿಯೋ 2

ಭಾರತ-ಚೀನ, ಮುಖಾಮುಖಿ, ಹಳೆಯ ವೀಡಿಯೋ
ವೈರಲ್‌ ವೀಡಿಯೋದ ಸ್ಕ್ರೀನ್‌ ಗ್ರ್ಯಾಬ್‌ ಕೃಪೆ ಟ್ವಿಟರ್: @Transctimes

ವೈರಲ್‌ ವೀಡಿಯೋದ ಕೀಫ್ರೇಮ್‌ಗಳನ್ನು ತೆಗೆದು ಯಾಂಡೆಕ್ಸ್‌ ರಿವರ್ಸ್ ಇಮೇಜ್‌ ಸರ್ಚ್ ಮೂಲಕ ಪರಿಶೀಲನೆ ನಡೆಸಲಾಗಿದ್ದು, ಆಗ 2020 ಜೂನ್‌ 17 ರಂದು @inosmi ಅಕೌಂಟ್‌ನಿಂದ ಟ್ವೀಟ್‌ ನಡೆದಿರುವುದು ಪತ್ತೆಯಾಗಿದೆ. ಆ ಟ್ವೀಟ್‌ನಲ್ಲಿ ರಷ್ಯನ್‌ ಭಾಷೆಯಲ್ಲಿ ಬರೆದ ಕ್ಯಾಪ್ಷನ್‌ ಇದ್ದು”ಡೈಲಿ ಮೈಲ್‌ (ಯುಕೆ): ಭಾರತೀಯ ಮತ್ತು ಚೀನ ಸೈನಿಕರ ನಡುವೆ ಸಾವಿಗಾಗಿ ಹೋರಾಟ” ಎಂದು ಬರೆಯಲಾಗಿದೆ. ಇದರೊಂದಿಗೆ ಲಿಂಕ್‌ ಶೇರ್‌ ಮಾಡಲಾಗಿದೆ. ಇದನ್ನು ಪರಿಶೀಲನೆ ನಡೆಸಲಾಗಿದ್ದು ಇದರ ಮೂಲಕ 2020 ಮೇ 31ರಂದು ಯೂಟ್ಯೂಬ್‌ನಲ್ಲಿ ಚಾನೆಲ್‌ Indfoನಲ್ಲಿ ಪೋಸ್ಟ್‌ ಮಾಡಲಾಗಿದೆ.

INDfo ಯೂಟ್ಯೂಬ್‌ ಚಾನೆಲ್‌ನ ಸ್ಕ್ರೀನ್‌ ಗ್ರ್ಯಾಬ್‌

ವ್ಯಾಪಕವಾಗಿ ಹರಡಿದ ಈ ವೀಡಿಯೋದ ಕೀಫ್ರೇಮ್‌ಗಳನ್ನು ತುಲನೆ ಮಾಡೊದಾಗ, ಈ ದೃಶ್ಯ ಒಂದೇ ಆಗಿರುವುದು ನಮಗೆ ತಿಳಿದುಬಂದಿದೆ. ಇದರಿಂದ ಈ ವೀಡಿಯೋ 2 ವರ್ಷ ಹಳೆಯದಾಗಿದ್ದು, ಡಿಸೆಂಬರ್‌ 9ರಂದು ಚೀನ-ಭಾರತೀಯ ಸೈನಿಕರ ನಡುವಿನ ಕಾದಾಟದ್ದಲ್ಲ ಎಂದು ಗೊತ್ತಾಗಿದೆ.

(ಎಡ-ಬಲ) INDfo ಯೂಟ್ಯೂಬ್‌ ಚಾನೆಲ್‌ ಸ್ಕ್ರೀನ್‌ಗ್ರ್ಯಾಬ್‌ ಮತ್ತು ವೈರಲ್‌ ವೀಡಿಯೋದ ಸ್ಕ್ರೀನ್‌ ಗ್ರ್ಯಾಬ್‌

ಈ ವೀಡಿಯೋವನ್ನು Prince Kr.Upadhyay ಚಾನೆಲ್‌ನಲ್ಲಿ 2020 ಮೇ 31ರಂದು ಪ್ರಕಟವಾಗಿದೆ. ಇದರ ಶೀರ್ಷಿಕೆಯಲ್ಲಿ “ಭಾರತೀಯ ಸೈಬಿಕರು ಎಲ್‌ಎಸಿ 2020ಯಲ್ಲಿ ಚೀನ ಸೈನಿಕರಿಗೆ ಹೊಡೆಯುತ್ತಿರುವುದು” ಎಂದಿದೆ. ಇನ್ನೊಂದು ಯೂಟ್ಯೂಬ್‌ ಚಾನೆಲ್‌ J.D.Skylark Ladakh T.V ಕೂಡ ಅದೇ ದಿನ ವೀಡಿಯೋ ಶೇರ್‌ ಮಾಡಿದೆ.

ಪತ್ರಕರ್ತ ಶಿವ್ ಆರೂರು ಕೂಡ ವೈರಲ್ ವೀಡಿಯೋದ ದೀರ್ಘ ಆವೃತ್ತಿಯನ್ನು 2020 ಜೂನ್‌ 17ರಂದು ಟ್ವೀಟ್‌ ಮೂಲಕ ಶೇರ್‌ ಮಾಡಿದ್ದಾರೆ. ಇದರ ಕ್ಯಾಪ್ಷನ್‌ನಲ್ಲಿ “ಗಾಲ್ವಾನ್‌ನಲ್ಲಿ ಜೂನ್‌ 15ರಂದು ನಡೆದ  ರಕ್ತದೋಕುಳಿ ಆಕಸ್ಮಿಕವಲ್ಲ, ಅದು ಶೇ.100ರಷ್ಟು ಪೂರ್ವ ನಿಯೋಜಿತ. ಭಾರತ-ಚೀನಾ ಪಡೆಗಳ ನಡುವಿನ ಸ್ವಯಂಪ್ರೇರಿತ ಘರ್ಷಣೆಗಳು ಎಂದಿಗೂ ಸಾವು ಅಥವಾ ಗಂಭೀರ ಗಾಯಕ್ಕೆ ಕಾರಣವಾಗಿಲ್ಲ. ಉದಾಹರಣೆಗೆ ಪ್ಯಾಗಾಂಗ್‌ನಲ್ಲಿ ಇತ್ತೀಚೆಗೆ ಮೇ ಅಂತ್ಯದಲ್ಲಿ ನಡೆದ ಘರ್ಷಣೆ ಇತ್ತೀಚಿನದು” ಎಂದಿದೆ.

ಶಿವ್‌ ಆರೂರು ಟ್ವೀಟ್‌ನ ಸ್ಕ್ರೀನ್‌ ಗ್ರ್ಯಾಬ್‌

ಇದನ್ನೇ ಆಧರಿಸಿ 2022 ಜೂ.24ರಂದು Lallantop ವೀಡಿಯೋ ವರದಿ ಮಾಡಿದೆ. ಅದನ್ನುಇಲ್ಲಿ ನೋಡಬಹುದು.

Conclusion

ತವಾಂಗ್‌ನಲ್ಲಿ ಡಿಸೆಂಬರ್ 9ರಂದು ನಡೆದ ಚೀನ-ಭಾರತೀಯ ಸೈನಿಕರ ನಡುವಿನ ಘರ್ಷಣೆ ಕುರಿತ ವೈರಲ್‌ ಪೋಸ್ಟ್‌ ತಪ್ಪಾಗಿದೆ. ಎರಡೂ ವೈರಲ್‌ ವೀಡಿಯೋಗಳು 2 ವರ್ಷ ಹಳೆಯದಾಗಿವೆ. ಮತ್ತು ಇದನ್ನು ತಪ್ಪಾದ ಸಂದರ್ಭದಲ್ಲಿ ಹಂಚಿಕೊಳ್ಳಲಾಗುತ್ತಿದೆ.

Results: Partly False

Our Sources
YouTube Video By Navneet Kumar Rai, Dated June 20, 2020
YouTube Video By NDTV, Dated June 22, 2020
YouTube Video By INDfo, Dated May 31, 2020
Tweet By Shiv Aroor, Dated June 17, 2020