Authors
Claim
ಕಲ್ಲಿಕೋಟೆಯ ಪೇರಂಬ್ರದಲ್ಲಿ ವೃದ್ಧರೊಬ್ಬರನ್ನು ಮಗನೇ ಥಳಿಸುತ್ತಿರುವ ವೀಡಿಯೋ ಎಂದು ದೃಶ್ಯವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
ಫೇಸ್‌ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಕಲ್ಲಿಕೋಟೆಯ ಪೇರಾಂಬ್ರ ಎಂಬಲ್ಲಿನ ದೃಶ್ಯ. ತಂದೆಯ ನಿಧನ ತರುವಾಯ ಮನೆಯಲ್ಲಿನ CCTV ಪರಿಶೀಲಿಸಿದಾಗ ಕಂಡಿರುವ ಮಗನ ಪರಾಕ್ರಮದ ಕೆಲವೊಂದು ತುಣುಕುಗಳು. ಆಸ್ತಿಯ ಪಾಲಿಗಾಗಿ ತಾನು ಕಲಿತ ಕರಾಟೆಯನ್ನು ಅಪ್ಪನ ಮೇಲೆ ಮಗ ಪ್ರಯೋಗಿಸುತ್ತಿರುವುದು” ಎಂದು ವೈರಲ್ ಆಗಿದೆ.
Fact
ಸತ್ಯಶೋಧನೆಯ ಭಾಗವಾಗಿ ನಾವು ಮೊದಲು ವೈರಲ್ ವೀಡಿಯೊವನ್ನು ಇನ್ವಿಡ್ ಉಪಕರಣದ ಸಹಾಯದಿಂದ ಕೀಫ್ರೇಮ್‌ಗಳನ್ನಾಗಿ ಮಾಡಿದ್ದೇವೆ. ಬಳಿಕ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಏಪ್ರಿಲ್ 28, 2024ರ ನ್ಯೂಸ್ 18 ವರದಿಯಲ್ಲಿ ಇದೇ ಫೋಟೋವನ್ನು ಬಳಸಿರುವುದನ್ನು ನಾವು ಕಂಡುಕೊಂಡಿದ್ದೇವೆ.
“ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ 63 ವರ್ಷದ ತಂದೆಯನ್ನು ಕ್ರೂರವಾಗಿ ಥಳಿಸಿದ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದ ನಂತರ ತಮಿಳುನಾಡು ಪೊಲೀಸರು ಇತ್ತೀಚೆಗೆ ವ್ಯಕ್ತಿಯನ್ನು ಬಂಧಿಸಿದ್ದಾರೆ. ತಂದೆ ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದರು ಮತ್ತು ಅವರ ಸಾವಿನಲ್ಲಿ ಮಗನ ಪಾತ್ರದ ಬಗ್ಗೆ ಅನುಮಾನಗಳು ಎದ್ದವು” ಎಂದು ವೀಡಿಯೋದಲ್ಲಿ ಹೇಳಲಾಗಿದೆ. ಫೆಬ್ರವರಿ 16 ರಂದು ಪೆರಂಬಲೂರು ಜಿಲ್ಲೆಯ ಕೃಷ್ಣಪುರಂನಲ್ಲಿ 40 ವರ್ಷದ ಕೆ ಸಂತೋಷ್ ತನ್ನ ತಂದೆ ಎ ಕುಲಂತವೇಲು ಎಂಬವರ ಮೇಲೆ ನಡೆಸಿದ ಹಲ್ಲೆ ಇದು ಎಂದು ವರದಿ ತಿಳಿಸಿದೆ.
ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಏಪ್ರಿಲ್ 26, 2024 ರ ವೀಡಿಯೋದಲ್ಲಿಯೂ ವೈರಲ್ ವೀಡಿಯೋದ ಕೀಫ್ರೇಮ್ ಗಳನ್ನು ಹೋಲುವ ದೃಶ್ಯಗಳಿದ್ದು ಅದು ತಮಿಳುನಾಡಿನ ಪೆರಂಬಲೂರು ಜಿಲ್ಲೆಯದ್ದಾಗಿದೆ ಎಂದು ಹೇಳುತ್ತದೆ.
ಈ ಸಾಕ್ಷ್ಯಗಳ ಪ್ರಕಾರ, ವೃದ್ಧನನ್ನು ಮಗ ಥಳಿಸುತ್ತಿರುವ ವಿಡಿಯೋ ಕಲ್ಲಿಕೋಟೆಯ ಪೇರಂಬ್ರದ್ದಲ್ಲ ತಮಿಳುನಾಡಿನ ಪೆರಂಬಲೂರು ಜಿಲ್ಲೆಯದ್ದು ಎಂದು ತಿಳಿದುಬಂದಿದೆ.
Also Read: ಗುಜರಾತ್ ಅದಾನಿ ಬಂದರಿನಲ್ಲಿ ಟ್ರಕ್ ಗಳಲ್ಲಿ ಹಸುಗಳನ್ನು ಅರಬ್ ದೇಶಕ್ಕೆ ಕಳಿಸಲಾಗುತ್ತಿದೆ ಎನ್ನುವುದು ನಿಜವೇ?
Result: Partly False
Our Sources:
Report t by News 18 Dated: April 28,2024
Report by New Indian Express Dated: April 26,2024
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಮಲಯಾಳದಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.