Fact Chek: ಗುಜರಾತ್ ಅದಾನಿ ಬಂದರಿನಲ್ಲಿ ಟ್ರಕ್‌ ಗಳಲ್ಲಿ ಹಸುಗಳನ್ನು ಅರಬ್‌ ದೇಶಕ್ಕೆ ಕಳಿಸಲಾಗುತ್ತಿದೆ ಎನ್ನುವುದು ನಿಜವೇ?

ಗುಜರಾತ್ ಅದಾನಿ ಬಂದರು ಹಸು, ಅರಬ್‌ ದೇಶ

Claim
ಗುಜರಾತ್ ಅದಾನಿ ಬಂದರಿನಲ್ಲಿ ಟ್ರಕ್‌ ಗಳಲ್ಲಿ ಹಸುಗಳನ್ನು ಅರಬ್‌ ದೇಶಕ್ಕೆ ಕಳಿಸಲಾಗುತ್ತಿದೆ

Fact
ಅದಾನಿ ಬಂದರಿನಲ್ಲಿ ಟ್ರಕ್ ಗಳಲ್ಲಿ ಹಸುಗಳನ್ನು ಅರಬ್‌ ದೇಶಕ್ಕೆ ಕಳಿಸಲಾಗುತ್ತಿದೆ ಎಂದ ವೈರಲ್‌ ವೀಡಿಯೋ ಭಾರತದ್ದಲ್ಲ

ಗುಜರಾತ್ ನ ಅದಾನಿ ಬಂದರಿನಲ್ಲಿ ಸಾವಿರಾರು ಟ್ರಕ್‌ ಗಳಲ್ಲಿ ಹಸುಗಳನ್ನು ತುಂಬಿ ವಧೆಗಾಗಿ ಅರಬ್‌ ದೇಶಗಳಿಗೆ ಕಳಿಸಲಾಗುತ್ತಿದೆ ಎಂಬ ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಈ ಹೇಳಿಕೆಯಲ್ಲಿ “ಗುಜರಾತ್ ಅದಾನಿ ಪೋರ್ಟ್ ನಲ್ಲಿ ಹಸುಗಳಿಂದ ತುಂಬಿದ ಸಾವಿರಾರು ಟ್ರಕ್‌ ಗಳು ನಿಂತಿವೆ. ಈ ಎಲ್ಲ ಹಸುಗಳನ್ನು ಅರಬ್‌ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಅರಬ್‌ ದೇಶಗಳಲ್ಲಿ ಈ ಹಸುಗಳನ್ನು ಏನು ಮಾಡುತ್ತಾರೆ ಎಂದು ಹರಾಮಿ ಅಂಧ ಭಕ್ತರು ಎಲ್ಲಿ ಗೋಮಾತೆ ಎಂದು ಕೂಗಾಡುತ್ತಾರೆ” ಎಂದಿದೆ.

Also Read: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪತ್ನಿ ಮತದಾನ ಮಾಡುವ ವೇಳೆ ಜೊತೆಗೆ ಇದ್ದು ನಿಯಮ ಉಲ್ಲಂಘಿಸಿದ್ದಾರೆಯೇ?

Fact Chek: ಗುಜರಾತ್ ಅದಾನಿ ಬಂದರಿನಲ್ಲಿ ಟ್ರಕ್‌ ಗಳಲ್ಲಿ ಹಸುಗಳನ್ನು ಅರಬ್‌ ದೇಶಕ್ಕೆ ಕಳಿಸಲಾಗುತ್ತಿದೆ ಎನ್ನುವುದು ನಿಜವೇ?

Fact Check/ Verification

ತನಿಖೆಯ ಆರಂಭದಲ್ಲಿ, ನಾವು ವೀಡಿಯೋವನ್ನು ಎಚ್ಚರಿಕೆಯಿಂದ ನೋಡಿದ್ದೇವೆ. ಬಂದರಿನಲ್ಲಿ ಕಂಡುಬರುವ ಎಲ್ಲಾ ಜನರು ಭಾರತದಲ್ಲಿ ಸಾಮಾನ್ಯವಾಗಿ ಧರಿಸದೇ ಇರುವ ರೀತಿಯ ಉದ್ದನೆಯ ಬಿಳಿ ಬಟ್ಟೆಗಳನ್ನು ಧರಿಸಿರುವುದನ್ನು ನಾವು ಕಂಡುಕೊಂಡಿದ್ದೇವೆ.  

Fact Chek: ಗುಜರಾತ್ ಅದಾನಿ ಬಂದರಿನಲ್ಲಿ ಟ್ರಕ್‌ ಗಳಲ್ಲಿ ಹಸುಗಳನ್ನು ಅರಬ್‌ ದೇಶಕ್ಕೆ ಕಳಿಸಲಾಗುತ್ತಿದೆ ಎನ್ನುವುದು ನಿಜವೇ?

ತನಿಖೆಯ ನಂತರ, ವೀಡಿಯೋದಲ್ಲಿ ಕಂಡುಬರುವ ಟ್ರಕ್ ಗಳು ಮರ್ಸಿಡಿಸ್ ಬೆಂಝ್ ನ ಲೋಗೋವನ್ನು ಹೊಂದಿವೆ ಎಂಬುದನ್ನು ನಾವು ಗಮನಿಸಿದ್ದೇವೆ. ಮರ್ಸಿಡಿಸ್ ಬೆಂಝ್ ಲೋಗೋದಲ್ಲಿ ಟ್ರಕ್ ಗಳನ್ನು ಭಾರತದಲ್ಲಿ ಮಾರಾಟ ಮಾಡಲಾಗುವುದಿಲ್ಲ, ಅದರ ಬದಲಾಗಿ ಭಾರತಕ್ಕಾಗಿ ಮರ್ಸಿಡಿಸ್ ಬೆಂಝ್ ಗ್ರೂಪ್ ನ ಡೈಮ್ಲೆರ್ ಕಂಪನಿಯು ‘ಭಾರತ್ ಬೆಂಜ್‘ ಬ್ರ್ಯಾಂಡ್ ಅಡಿ ಟ್ರಕ್ ಗಳನ್ನು ಮಾರಾಟ ಮಾಡುತ್ತದೆ. ‘ಭಾರತ್ ಬೆಂಜ್’ ಮತ್ತು ಮರ್ಸಿಡಿಸ್ ಬೆಂಝ್ ನ ಲೋಗೋಗಳು ಸಹ ವಿಭಿನ್ನವಾಗಿವೆ

Fact Chek: ಗುಜರಾತ್ ಅದಾನಿ ಬಂದರಿನಲ್ಲಿ ಟ್ರಕ್‌ ಗಳಲ್ಲಿ ಹಸುಗಳನ್ನು ಅರಬ್‌ ದೇಶಕ್ಕೆ ಕಳಿಸಲಾಗುತ್ತಿದೆ ಎನ್ನುವುದು ನಿಜವೇ?
Fact Chek: ಗುಜರಾತ್ ಅದಾನಿ ಬಂದರಿನಲ್ಲಿ ಟ್ರಕ್‌ ಗಳಲ್ಲಿ ಹಸುಗಳನ್ನು ಅರಬ್‌ ದೇಶಕ್ಕೆ ಕಳಿಸಲಾಗುತ್ತಿದೆ ಎನ್ನುವುದು ನಿಜವೇ?

ತನಿಖೆಯ ಭಾಗವಾಗಿ, ನಾವು ವೀಡಿಯೋದ ಕೀಫ್ರೇಮ್ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ಮಾಡಿದ್ದೇವೆ. ಇದರ ಪರಿಣಾಮವಾಗಿ, ‘ಹಮೀದ್ ಅಲ್ ಹೆಗ್ರಿ’ ಎಂಬ ವ್ಯಕ್ತಿ ಹಂಚಿಕೊಂಡ ಫೇಸ್ಬುಕ್ ರೀಲ್ನಲ್ಲಿ ನಾವು ಈ ವೀಡಿಯೋವನ್ನು ಕಂಡುಕೊಂಡಿದ್ದೇವೆ. ಏಪ್ರಿಲ್ 19, 2024 ರಂದು ಅಲ್ ಹೆಗ್ರಿ ಹಂಚಿಕೊಂಡ ಪೋಸ್ಟ್ಗೆ ಅರೇಬಿಕ್ ಭಾಷೆಯಲ್ಲಿ ಶೀರ್ಷಿಕೆ ನೀಡಲಾಗಿದೆ.

Fact Chek: ಗುಜರಾತ್ ಅದಾನಿ ಬಂದರಿನಲ್ಲಿ ಟ್ರಕ್‌ ಗಳಲ್ಲಿ ಹಸುಗಳನ್ನು ಅರಬ್‌ ದೇಶಕ್ಕೆ ಕಳಿಸಲಾಗುತ್ತಿದೆ ಎನ್ನುವುದು ನಿಜವೇ?

ಏಪ್ರಿಲ್ 19, 2024 ರಂದು ‘ಮೀಟ್ ಬಜಾರ್’ ಎಂಬ ಫೇಸ್ಬುಕ್ ಪುಟದಿಂದ ಹಂಚಿಕೊಳ್ಳಲಾದ ಈ ವೀಡಿಯೋದ ಶೀರ್ಷಿಕೆಯು ಅರೇಬಿಕ್ ಭಾಷೆಯಲ್ಲಿ “ಈದ್ ಅಲ್-ಅಧಾ ಸಿದ್ಧತೆಗಳು” (ಅನುವಾದಿಸಲಾಗಿದೆ) ಎಂದು ಬರೆಯಲಾಗಿದೆ.

Fact Chek: ಗುಜರಾತ್ ಅದಾನಿ ಬಂದರಿನಲ್ಲಿ ಟ್ರಕ್‌ ಗಳಲ್ಲಿ ಹಸುಗಳನ್ನು ಅರಬ್‌ ದೇಶಕ್ಕೆ ಕಳಿಸಲಾಗುತ್ತಿದೆ ಎನ್ನುವುದು ನಿಜವೇ?

ತನಿಖೆಯಲ್ಲಿ ಕಂಡುಬಂದಂತೆ, ಇರಾಕ್‌ ನ ಉಮ್ ಖಾಸ್ರ್ ಬಂದರಿನ ವೀಡಿಯೋವನ್ನು ಮಾಯಾದೀನ್ ಎಂಬ ಯೂಟ್ಯೂಬ್ ಚಾನೆಲ್ ಅಪ್ಲೋಡ್ ಮಾಡಿದೆ. ಈ ವೀಡಿಯೋ ವೈರಲ್ ವೀಡಿಯೋದಂತೆಯೇ ಪೋರ್ಟ್ ದೃಶ್ಯಗಳನ್ನು ತೋರಿಸುತ್ತದೆ. ಹೋಲಿಕೆ ಮಾಡಿದಾಗ, ಅಲ್ಲಿ ಕಂಡುಬರುವ ಟ್ರ್ಯಾಕ್ನ ವಿನ್ಯಾಸ ಮತ್ತು ಅಗಲ, ನೀಲಿ ಗೋದಾಮು ಮತ್ತು ನೀರಿನ ಸ್ಥಳವು ವೈರಲ್ ಕ್ಲಿಪ್‌ ಗೆ ಹೋಲಿಕೆಯಾಗುವುದನ್ನು ನಾವು ಗಮನಿಸಿದ್ದೇವೆ.  

Fact Chek: ಗುಜರಾತ್ ಅದಾನಿ ಬಂದರಿನಲ್ಲಿ ಟ್ರಕ್‌ ಗಳಲ್ಲಿ ಹಸುಗಳನ್ನು ಅರಬ್‌ ದೇಶಕ್ಕೆ ಕಳಿಸಲಾಗುತ್ತಿದೆ ಎನ್ನುವುದು ನಿಜವೇ?

ಇರಾಕ್ನ ಉಮ್ ಖಾಸ್ರ್ ಬಂದರಿನಲ್ಲೂ, ವೈರಲ್ ವೀಡಿಯೋವನ್ನು ಹೋಲುವ ಉಡುಪನ್ನು ಧರಿಸಿದ ಜನರನ್ನೂ ನಾವು ನೋಡಿದ್ದೇವೆ.

Fact Chek: ಗುಜರಾತ್ ಅದಾನಿ ಬಂದರಿನಲ್ಲಿ ಟ್ರಕ್‌ ಗಳಲ್ಲಿ ಹಸುಗಳನ್ನು ಅರಬ್‌ ದೇಶಕ್ಕೆ ಕಳಿಸಲಾಗುತ್ತಿದೆ ಎನ್ನುವುದು ನಿಜವೇ?

Conclusion

ತನಿಖೆಯಲ್ಲಿ ಕಂಡುಬಂದಂತೆ ವೈರಲ್ ಹೇಳಿಕೆ ಸುಳ್ಳು ಎಂದು ನಾವು ಕಂಡುಕೊಂಡಿದ್ದೇವೆ. ಈ ವೀಡಿಯೋ ಭಾರತದ್ದಲ್ಲ.

Also Read: ಸಂವಿಧಾನ ಬದಲಾವಣೆ ಮೌನವಾಗೇ ಮಾಡೋಣ ಎಂದು ಸರಸಂಘ ಚಾಲಕ ಮೋಹನ್‌ ಭಾಗವತ್ ಹೇಳಿದ್ದಾರೆಯೇ?

Result: False

Our Sources
Social Media Posts
Video posted by Al Mayadeen Channel Dated: 12th January, 2024.
Reoprt by Jagran on 29th April 2020

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್‌ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.