Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
AI/Deepfake
ಅಯೋಧ್ಯೆಯಲ್ಲಿ ಧರ್ಮ ಧ್ವಜಾರೋಹಣದ ಬಳಿಕ ಕಪಿಯೊಂದು ಅಲ್ಲಿಗೆ ಬಂದಿದೆ ಎಂಬಂತೆ ಪೋಸ್ಟ್ ಒಂದು ವೈರಲ್ ಆಗುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ ಧರ್ಮಧ್ವಜಾರೋಹಣ ಬಳಿಕ ಅಯೋಧ್ಯೆಗೆ ಹನುಮಂತನ ಆಗಮನ ಎಂಬಂತೆ ಹೇಳಿಕೆಗಳಿವೆ. ಈ ಕುರಿತು ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಎಐ ನಿಂದ ಮಾಡಿರುವ ವೀಡಿಯೋ/ಫೋಟೊ ಎಂದು ಕಂಡುಕೊಂಡಿದೆ.

ಇದೇ ರೀತಿಯ ಹೇಳಿಕೆಯಿರುವ ಪೋಸ್ಟ್ ಇಲ್ಲಿ ನೋಡಬಹುದು.

ಸತ್ಯಶೋಧನೆಗಾಗಿ ನಾವು ಫೋಟೋ ವನ್ನು ಕೂಲಂಕಷವಾಗಿ ಪರಿಶೀಲಿಸಿದ್ದು, ಇದರಲ್ಲಿ ಕಪಿಯ ಆಕೃತಿ, ಫೋಟೋ ಬಣ್ಣವು ಸಹಜವಾಗಿಲ್ಲದ ರೀತಿ ಇರುವುದನ್ನು ಗುರುತಿಸಿದ್ದೇವೆ. ಇದು ಎಐನಿಂದ ಮಾಡಿದ್ದಿರಬಹುದು ಎಂಬ ಸಂಶಯಕ್ಕೆ ಕಾರಣವಾಗಿದೆ.
ಸತ್ಯಶೋಧನೆಯ ಮೊದಲಿಗೆ ನಾವು ಹಗ್ಗಿಂಗ್ ಸ್ಪೇಸ್ ನಲ್ಲಿ ಫೋಟೋವನ್ನು ಪರಿಶೀಲಿಸಿದ್ದು, ಇದು ಎಐ ನಿಂದ ಮಾಡಿದ್ದಾಗಿದೆ ಎಂದು ಹೇಳಿದೆ.


ಆ ನಂತರ ನಾವು ತನಿಖೆಯ ಭಾಗವಾಗಿ ನಾವು ನ್ಯೂಸ್ಚೆಕರ್ ಒಂದು ಭಾಗವಾಗಿರುವ ಡೀಪ್ ಫೇಕ್ ಅನಾಲಿಸಿಸ್ ಯುನಿಟ್ (ಡಿಎಯು) ಪರಿಶೀಲನೆಗೆ ಕಳುಹಿಸಿದ್ದು, ಅದು ವಿವಿಧ ಎಐ ಪತ್ತೆ ಪರಿಕರಗಳ ಮೂಲಕ ವೈರಲ್ ಫೋಟೋಗಳನ್ನು ಪರಿಶೀಲಿಸಿದೆ.
ವಾಸ್ ಇಟ್ ಎಐ ಮೂಲಕ ಪರಿಶೀಲಿಸಿದಾಗ, ಕಪಿ ಧ್ವಜ ಕಂಬದ ಮೇಲಿರುವ ಫೋಟೋಗಳು ಎಐ ಮೂಲಕ ರಚಿಸಲಾಗಿದೆ ಎಂಬುದನ್ನು ಪ್ರತಿಪಾದಿಸಿದೆ.


ಹೈವ್ ಮಾಡರೇಶನ್ ಮೂಲಕ ಫೋಟೊಗಳನ್ನು ಪರಿಶೀಲಿಸಿದಾಗ, 0.96%ನಷ್ಟು 0.89%ರಷ್ಟು ಎಐನಿಂದ ಮಾಡಿದ್ದು ಎಂಬುದನ್ನು ಖಚಿತಪಡಿಸಿದೆ.


ಇಮೇಜ್ ವಿಸ್ಪರರ್ ಮೂಲಕ ಪರಿಶೀಲಿಸಿದಾಗ, ಅದು “ಕೆಲವು ಕೀಫ್ರೇಮ್ಗಳನ್ನು “ಕುಶಲತೆಯಿಂದ” ಮಾಡಲಾಗಿದೆ ಎಂದು ಪರಿಗಣಿಸಿದೆ. ಕೆಲವು ನೈಜವಾಗಿರಬಹುದು ಎಂದು ಹೇಳಿದೆ.”

ಈಸ್ ಇಟ್ ಎಐ ಮೂಲಕ ಪರಿಶೀಲಿಸಿದಾಗ, ಕೆಲವು ಕೀಫ್ರೇಮ್ಗಳನ್ನು ನಿಜವಾದವು ಮತ್ತು ಕೆಲವುಗಳನ್ನು ಅದು”ಎಐ- ರಚಿತ” ಎಂದು ವರ್ಗೀಕರಿಸಿದೆ.

ಈ ಆಧಾರದಲ್ಲಿ ಇದು ಎಐ ನಿಂದ ಮಾಡಿದ ಫೋಟೋ/ವೀಡಿಯೋ ಆಗಿದ್ದು, ಅಯೋಧ್ಯೆಯಲ್ಲಿ ಧ್ವಜಾರೋಹಣದ ಬಳಿಕ ಕಪಿ ಬಂದಿದೆ ಎನ್ನುವುದು ಕಟ್ಟುಕಥೆ ಎಂದು ಗೊತ್ತಾಗಿದೆ.
Our Sources
Huggingspaces
HIVE Moderation
WasitAI
Isitai
Imagewhisperer
Analysis from Deepfake analysis Unit
Ishwarachandra B G
May 30, 2025
Kushel Madhusoodan
May 13, 2024
Ishwarachandra B G
January 23, 2024