Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ರೈಲಿನಲ್ಲಿ ಶ್ರೀರಾಮನ ಫೋಟೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಓಡಾಡುತ್ತಿದೆ.
“ಭಾರತ ತನ್ನ ಶ್ರೇಷ್ಠ ಪರಂಪರೆಯತ್ತ ಸಾಗುತ್ತಿದೆ ಎಂದು ಫೋಟೋ ಜೊತೆಗಿನ ಹೇಳಿಕೆಯಲ್ಲಿದೆ”. ಇದರ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ನಿಜವಾದ್ದಲ್ಲ ಎಐ (ಕೃತಕ ಬುದ್ಧಿಮತ್ತೆ)ಯಿಂದ ರಚಿಸಿದ ಫೋಟೋ ಎಂದು ತಿಳಿದುಬಂದಿದೆ.
ಸತ್ಯಶೋಧನೆಗಾಗಿ ನಾವು ವೈರಲ್ ಫೋಟೋದ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಯಾವುದೇ ಸೂಕ್ತ ಫಲಿತಾಂಶಗಳು ಕಂಡುಬಂದಿಲ್ಲ.
ಆ ಬಳಿಕ ನಾವು ಫೋಟೋವನ್ನು ಕೂಲಂಕಷವಾಗಿ ಪರಿಶೀಲಿಸಿದ್ದು, ಫೊಟೋ ಸಹಜವಾಗಿಲ್ಲ ಎಂಬುದನ್ನು ಕಂಡುಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿಫೋಟೋವನ್ನು ಎಐ ಪತ್ತೆ ಸಾಧನದ ಮೂಲಕ ಪರಿಶೀಲನೆಗೆ ಉದ್ದೇಶಿಸಿದ್ದೇವೆ.
ಹೈವ್ ಮಾಡರೇಷನ್ ಮೂಲಕ ಫೋಟೋ ಪರಿಶೀಲಿಸಿದಾಗ, ಈ ಫೋಟೋ ಎಐ ಆಗಿರುವ ಸಾಧ್ಯತೆಯನ್ನು 97.9% ಆಗಿದೆ ಎಂದು ಹೇಳಿದೆ.
ವಾಸ್ ಇಟ್ ಎಐ ಮೂಲಕ ಫೋಟೋ ಪರಿಶೀಲಿಸಿದಾಗ, ಇಲ್ಲೂ ಫೋಟೋ ಎಐನಿಂದ ತಯಾರಿಸಲಾಗಿದೆ ಎಂದು ಹೇಳಿದೆ.
ವೈರಲ್ ಆಗಿರುವ ಫೊಟೋದಲ್ಲಿ @ The Rail Pilot ಎಂದು ವಾಟರ್ ಮಾರ್ಕ್ ಇರುವುದನ್ನು ನಾವು ಗಮನಿಸಿದ್ದು, ಇದನ್ನು ಇನ್ಸ್ಟಾಗ್ರಾಂ ನಲ್ಲಿ ಸರ್ಚ್ ಮಾಡಿದ್ದೇವೆ. ಈ ವೇಳೆ ಲಭ್ಯವಾದ the_rail_pilot_ ಖಾತೆಯಲ್ಲಿ ವೈರಲ್ ಆಗಿರುವ ಫೊಟೋ ಇರುವ ಪೋಸ್ಟ್ ಇರುವುದನ್ನೂ ನಾವು ಗಮನಿಸಿದ್ದೇವೆ. ಈ ಪೋಸ್ಟ್ ನಲ್ಲಿ ಬಳಕೆದಾರರು, “ಶ್ರೀ ರಾಮ” ಜೀವನ, ರಾಮನಿಗೆ ಸಮರ್ಪಿತವಾದ ಜೀವನವು ಆಶೀರ್ವಾದಗಳಿಂದ ತುಂಬಿದ ಜೀವನ! “ಜೈ ಶ್ರೀ ರಾಮ್” ಸದಾಚಾರದ ಬೆಳಕು ನಿಮ್ಮ ಹಾದಿಗೆ ಮಾರ್ಗದರ್ಶನ ನೀಡಲಿ! ಭಾರತೀಯ ರೈಲ್ವೆಗಳು ಅಂತಹ ಜೀವನ ಸಂಸ್ಕಾರವನ್ನು ಮಾಡಿದರೆ ಹೇಗಿರುತ್ತದೆ! ಈ ಚಿತ್ರಗಳನ್ನು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (ಎಐ) ಬಳಸಿ ರಚಿಸಲಾಗಿದೆ.” ಎಂದು ಬರೆದಿರುವುದನ್ನು ನೋಡಿದ್ದೇವೆ. ಅದೇ ರೀತಿ ಎಐನಿಂದದ ಮಾಡಿದ ಹಲವು ಇತರ ಫೋಟೋಗಳನ್ನೂ ಇಲ್ಲಿ ನಾವು ನೋಡಿದ್ದೇವೆ.
ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ ರೈಲಿನ ಎಂಜಿನ್ ಮೇಲೆ ಶ್ರೀರಾಮನ ಚಿತ್ರ ಎಐ ರಚಿತ ಫೋಟೋ ಆಗಿದ್ದು, ನಿಜವಲ್ಲ ಎಂದು ತಿಳಿದುಬಂದಿದೆ.
Our Sources
Hive Moderation
Was it AI
Instagram Post By the_rail_pilot, Dated: May 28, 2025
Vasudha Beri
February 18, 2025
Ishwarachandra B G
February 15, 2025
Ishwarachandra B G
November 5, 2024