Fact Check: ಅಯೋಧ್ಯೆ ರಾಮ ಮಂದಿರ ಮಸೀದಿ ಉರುಳಿಸಿದ ಜಾಗದ ಬದಲು ಬೇರೆ ಕಡೆ ನಿರ್ಮಾಣವಾಗುತ್ತಿದೆಯೇ?

ಅಯೋಧ್ಯೆ, ರಾಮ ಮಂದಿರ, ಮಸೀದಿ,

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಅಯೋಧ್ಯೆ ರಾಮ ಮಂದಿರ ಮಸೀದಿ ಉರುಳಿಸಿದ ಜಾಗದಲ್ಲಿ ಅಲ್ಲ, ಬೇರೆ ಕಡೆ ನಿರ್ಮಾಣವಾಗುತ್ತಿದೆ

Fact
ಮಸೀದಿ ಉರುಳಿಸಿದ ಜಾಗದಲ್ಲೇ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಗೂಗಲ್‌ ಮ್ಯಾಪ್‌ ನಲ್ಲಿ ಗುರುತಿಸಿದ ಜಾಗ ತಪ್ಪಾದ ಗುರುತಾಗಿದೆ.

ಅಯೋಧ್ಯೆಯಲ್ಲಿ ರಾಮ ಮಂದಿರ ಮಸೀದಿ ಉರುಳಿಸಿದ ಜಾಗದಲ್ಲಿ ಅಲ್ಲ, ಬೇರೆ ಕಡೆ ನಿರ್ಮಾಣವಾಗುತ್ತಿದೆ ಎಂದು ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ.

ಈ ಕುರಿತು ಎಕ್ಸ್ ನಲ್ಲಿ ಕಂಡುಬಂದ ಹೇಳಿಕೆ ಒಂದರಲ್ಲಿ “ನಿಮಗೆ_ಗೊತ್ತಾ ? ಈಗ ಮಂದಿರ ನಿರ್ಮಾಣ ಆಗುತ್ತಿರುವುದು ಮಸೀದಿ ಉರುಳಿಸಿದ ಜಾಗದಲ್ಲಿ ಅಲ್ಲ . ಮಂದಿರ ಕೆಡವಿ ಮಸೀದಿ ಕಟ್ಟಲಾಗಿದೆ ಎಂದು ಪ್ರಚಾರ ಮಾಡಿದರು . ಈಗಿನ ಮಂದಿರ ಸ್ಥಳಕ್ಕು ಮಸೀದಿ ಉರುಳಿಸಿದ ಸ್ಥಳಕ್ಕು ಮೂರು ಕಿಮೀ ಅಂತರವಿದೆ . ಮಸೀದಿ ಜಾಗದಲ್ಲಿ ಮಂದಿರ ಕಟ್ಟುವ ಉದ್ದೇಶ ಇರದಿದ್ದಾಗ ಮಸೀದಿ ಉರುಳಿಸಿದ್ದು ಏಕಾಗಿ ?” ಎಂದಿದೆ.

Also Read: ರಾಹುಲ್‌ ಗಾಂಧಿಯವರನ್ನು ಗಲ್ಫ್ ನ್ಯೂಸ್‌ ‘ಪಪ್ಪು’ ಎಂದು ಕರೆದಿದೆಯೇ?

Fact Check: ಅಯೋಧ್ಯೆ ರಾಮ ಮಂದಿರ ಮಸೀದಿ ಉರುಳಿಸಿದ ಜಾಗದ ಬದಲು ಬೇರೆ ಕಡೆ ನಿರ್ಮಾಣವಾಗುತ್ತಿದೆಯೇ?

ಇದೇ ರೀತಿಯ ಹೇಳಿಕೆಯನ್ನು ಶಿವಸೇನೆ ಮುಖಂಡ ಸಂಸದ ಸಂಜಯ್ ರಾವತ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸುವಾಗ ನೀಡಿದ್ದಾರೆ. ಈ ಹೇಳಿಕೆಯನ್ನು ವರದಿ ಮಾಡಲಾಗಿದೆ.

ಇದರ ನಂತರ, ಅನೇಕ ಬಳಕೆದಾರರು ಸಂಜಯ್ ರೌತ್ ಅವರ ವೀಡಿಯೊವನ್ನು ಪೋಸ್ಟ್ ಮಾಡಿದರು ಮತ್ತು ಈ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಡಿದರು. ಸಂಜಯ್ ರೌತ್ ಸ್ವತಃ ಈ ಹೇಳಿಕೆಯನ್ನು ಮರು ಪೋಸ್ಟ್ ಮಾಡಿದ್ದಾರೆ.

ಈ ಕುರಿತು ನ್ಯೂಸ್ ಚೆಕರ್‌ ಸತ್ಯಶೋಧನೆ ನಡೆಸಿದ್ದು, ಮಂದಿರವನ್ನು ಬೇರೆಲ್ಲೋ ನಿರ್ಮಿಸಲಾಗುತ್ತಿಲ್ಲ ನಿರ್ದಿಷ್ಟ ಜಾಗದಲ್ಲೇ ಮತ್ತೆ ಮಂದಿರ ಕಟ್ಟಲಾಗುತ್ತಿದೆ ಎಂದು ಗೊತ್ತಾಗಿದೆ.

Fact Check/ Verification

ಸತ್ಯಶೋಧನೆಗಾಗಿ ನಾವು ಹೇಳಿಕೆಯೊಂದಿಗೆ ಪೋಸ್ಟ್ ಮಾಡಲಾದ ವೈರಲ್ ಚಿತ್ರವೊಂದನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ಇದರಲ್ಲಿ ಈಗ ಮಂದಿರ ನಿರ್ಮಾಣವಾಗುತ್ತಿರುವ ಜಾಗ ಮತ್ತು ಮಸೀದಿ ಉರುಳಿಸಿದ ಜಾಗಕ್ಕೆ ಮೂರು ಕಿಲೋಮೀಟರ್ ಗಳ ಅಂತರವಿದೆ ಎಂದು ತೋರಿಸಲಾಗಿದೆ. ಜೊತೆಗೆ, ಒಂದು ಸ್ಥಳವನ್ನು ರಾಮ ಜನ್ಮ ಭೂಮಿ ಎಂದು ಇನ್ನೊಂದು ಸ್ಥಳವನ್ನು “ಬಾಬರ್ ಮಸ್ಜಿದ್” ಎಂದೂ ತೋರಿಸಿರುವುದನ್ನು ಗಮನಿಸಿದ್ದೇವೆ.

Fact Check: ಅಯೋಧ್ಯೆ ರಾಮ ಮಂದಿರ ಮಸೀದಿ ಉರುಳಿಸಿದ ಜಾಗದ ಬದಲು ಬೇರೆ ಕಡೆ ನಿರ್ಮಾಣವಾಗುತ್ತಿದೆಯೇ?

ಆದರೆ ಶೋಧದ ವೇಳೆ ಕಂಡುಬಂದ ಪ್ರಕಾರ ಮೊದಲನೆಯ ಸ್ಥಳ ಗೂಗಲ್‌ ಮ್ಯಾಪ್‌ ಪ್ರಕಾರ ರಾಮ ಜನ್ಮ ಭೂಮಿ ಎನ್ನುವುದು ನಿಜವಾದ್ದಾಗಿದೆ.

Also Read: ಸೀತಾದೇವಿಯ ಜನಕಪುರಿಯಿಂದ ಅಯೋಧ್ಯೆಗೆ ಯಾತ್ರೆ ನಡೆದಿದೆಯೇ, ಸತ್ಯ ಏನು?

Fact Check: ಅಯೋಧ್ಯೆ ರಾಮ ಮಂದಿರ ಮಸೀದಿ ಉರುಳಿಸಿದ ಜಾಗದ ಬದಲು ಬೇರೆ ಕಡೆ ನಿರ್ಮಾಣವಾಗುತ್ತಿದೆಯೇ?

ಗೂಗಲ್ ಮ್ಯಾಪ್ ನಲ್ಲಿ ತೋರಿಸುತ್ತಿರುವ ಎರಡನೇ ಸ್ಥಳವು ಅಯೋಧ್ಯೆಯ ಬಿರ್ಲಾ ಸೀತಾರಾಮ ದೇಗುಲವಾಗಿದೆ.

Fact Check: ಅಯೋಧ್ಯೆ ರಾಮ ಮಂದಿರ ಮಸೀದಿ ಉರುಳಿಸಿದ ಜಾಗದ ಬದಲು ಬೇರೆ ಕಡೆ ನಿರ್ಮಾಣವಾಗುತ್ತಿದೆಯೇ?

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಗೂಗಲ್‌ ಮ್ಯಾಪ್‌ನ ಸ್ಕ್ರೀನ್‌ ಶಾಟ್ ನಲ್ಲಿ ಬಾಬ್ರಿ ಮಸೀದಿ ಎಂದು ಬರೆದಿಲ್ಲ. ಬದಲಾಗಿ ಬಾಬರ್ ಮಸೀದಿ ಎಂದಿದೆ. ಇದಕ್ಕೆ ಪೂರಕವಾಗಿ ಮಾಹಿತಿ ಕಲೆ ಹಾಕಲು ನಾವು ಗೂಗಲ್ ಮ್ಯಾಪ್ ನಲ್ಲಿ ಸರ್ಚ್ ಮಾಡಿದಾಗ, ಸೀತಾರಾಮ ಬಿರ್ಲಾ ದೇಗುಲಕ್ಕೆ ಬಾಬರ್ ಮಸೀದಿ ಎಂದು ಮಾರ್ಕಿಂಗ್‌ ಮಾಡಲಾಗಿದೆ. ಜೊತೆಗೆ ಮಸೀದಿಯ ರಿವ್ಯೂ ನಲ್ಲಿ ಬಾಬ್ರಿ ಮಸೀದಿಯ ಫೊಟೋ ಹಾಕಿರುವುದನ್ನು ನಾವು ಕಂಡಿದ್ದೇವೆ.

Fact Check: ಅಯೋಧ್ಯೆ ರಾಮ ಮಂದಿರ ಮಸೀದಿ ಉರುಳಿಸಿದ ಜಾಗದ ಬದಲು ಬೇರೆ ಕಡೆ ನಿರ್ಮಾಣವಾಗುತ್ತಿದೆಯೇ?

ಆ ಬಳಿಕ ನಾವು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಾಮ ಜನ್ಮ ಭೂಮಿಯ ದೇಗುಲವನ್ನು ಗೂಗಲ್ ಅರ್ಥ್ ಪ್ರೋ ನಲ್ಲಿ ನೋಡಿದ್ದೇವೆ. ಇದರಲ್ಲಿ ಕಾಣುತ್ತಿರುವುದು ಇತ್ತೀಚಿನ ಅಂದರೆ 2023ರ ಚಿತ್ರವಾಗಿದೆ. ಇದರಲ್ಲಿ ದೇಗುಲ ರೀತಿಯ ಸಂರಚನೆ ಕಾಣಬಹುದು.

Fact Check: ಅಯೋಧ್ಯೆ ರಾಮ ಮಂದಿರ ಮಸೀದಿ ಉರುಳಿಸಿದ ಜಾಗದ ಬದಲು ಬೇರೆ ಕಡೆ ನಿರ್ಮಾಣವಾಗುತ್ತಿದೆಯೇ?

ಜೊತೆಗೆ ರಾಮ ಜನ್ಮ ಭೂಮಿಯ ಪ್ರದೇಶ ಮತ್ತು ಗೂಗಲ್‌ ಅರ್ಥ್ ಪ್ರೊ ನಲ್ಲಿ ಕಾಣಿಸಿರುವ ಪ್ರದೇಶವು ಒಂದೇ ಆಗಿದೆ ಎಂಬುದನ್ನು ನಾವು ಮನಗಂಡಿದ್ದೇವೆ.

ಮಸೀದಿ ಉರುಳಿಸಿದ ಜಾಗದಲ್ಲೇ ರಾಮ ಮಂದಿರ ಕಟ್ಟಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಶ್ರೀ ರಾಮ ಮಂದಿರ ಟ್ರಸ್ಟ್ ನ ಸದಸ್ಯರಾದ ಕಾಮೇಶ್ವರ ಚೌಪಾಲ್‌ ಅವರನ್ನು ಸಂಪರ್ಕಿಸಿದ್ದೇವೆ. ಅವರು “ಭಗವಾನ್ ಶ್ರೀ ರಾಮನ ಜನ್ಮಸ್ಥಳವು ಅನೇಕ ವರ್ಷಗಳಿಂದ ಸಂಘರ್ಷದ ಬಿಂದುವಾಗಿತ್ತು. ಬಾಬರ್ 1528 ರಲ್ಲಿ ಈ ಜನ್ಮಸ್ಥಳವನ್ನು ನೆಲಸಮ ಮಾಡಿದನು. ಅಂದಿನಿಂದ ಹಿಂದೂ ಸಮುದಾಯ ಹೋರಾಟ ಮಾಡುತ್ತ ಬಂದಿದೆ. ಈ ಸ್ಥಳವನ್ನು ದೇವಾಲಯವಾಗಿ ಬದಲಾಯಿಸುವ ವಿಷಯವಾಗಿದ್ದರೆ, ಈ ಸಂಘರ್ಷ ಮತ್ತು ವಿವಾದ ಸೃಷ್ಟಿಯಾಗುತ್ತಿರಲಿಲ್ಲ, ಸಂಘರ್ಷವು ಸುಪ್ರೀಂ ಕೋರ್ಟ್ ಗೆ ಹೋದಾಗ, ನ್ಯಾಯಾಲಯವು ಈ ಸ್ಥಳವು ರಾಮ ಜನ್ಮಭೂಮಿ ಎಂದು ತೀರ್ಪು ನೀಡಿತು. ಈ ಫಲಿತಾಂಶದ ಆಧಾರದ ಮೇಲೆಯೇ ಟ್ರಸ್ಟ್ ಅನ್ನು ರಚಿಸಲಾಯಿತು ಮತ್ತು ಟ್ರಸ್ಟ್ ಅದೇ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸುತ್ತಿದೆ. ಏತನ್ಮಧ್ಯೆ, ಕೆಲವರು ಅಜ್ಞಾನದಲ್ಲಿ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಕುರಿತ ವೈರಲ್ ಹೇಳಿಕೆಗಳು ಸುಳ್ಳು” ಎಂದು ಅವರು ಹೇಳಿದ್ದಾರೆ

ಒಟ್ಟಾರೆಯಾಗಿ, ಶಿವಸೇನೆ ಮುಖಂಡ ಸಂಜಯ್ ರಾವತ್ ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಸೀತಾ-ರಾಮ್ ಬಿರ್ಲಾ ದೇವಾಲಯದ ಬಗ್ಗೆ ಅದು ಬಾಬರಿ ಮಸೀದಿ ಮತ್ತು ರಾಮ ಮಂದಿರವನ್ನು 3 ಕಿ.ಮೀ ದೂರದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಹೇಳಿರುವುದು ಸುಳ್ಳಾಗಿದೆ.  ವಾಸ್ತವವಾಗಿ, ಬಾಬರಿ ಮಸೀದಿ ನೆಲಸಮವಾದ ಸ್ಥಳದಲ್ಲಿಯೇ ರಾಮ ಮಂದಿರವನ್ನು ನಿರ್ಮಿಸಲಾಗುತ್ತಿದೆ.

Also Read: ಕರಡಿಗಳ ಹಿಂಡು ಅಯೋಧ್ಯೆ ತಲುಪಿದೆ ಎಂದ ವೈರಲ್‌ ವೀಡಿಯೋ ಮಧ್ಯಪ್ರದೇಶದ್ದು!

Conclusion

ಬಾಬರಿ ಮಸೀದಿ ನೆಲಸಮವಾದ ಸ್ಥಳವು ರಾಮನ ಜನ್ಮಸ್ಥಳವಾಗಿದ್ದು, ಅದೇ ಸ್ಥಳದಲ್ಲಿ ರಾಮ ಮಂದಿರವನ್ನು ನಿರ್ಮಿಸುವ ಕೆಲಸ ನಡೆಯುತ್ತಿದೆ ಎಂದು ಸತ್ಯಶೋಧನೆಯಲ್ಲಿ ತಿಳಿದುಬಂದಿದೆ.

Result: False

Our Sources
Google Search
Google Map
Google Earth Pro
Conversation with Shri Kameshwar Choupal, Member, Ram Mandir Trust

(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಮರಾಠಿಯಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.