Fact Check: ಮಣಿಪುರದಲ್ಲಿ ಪ್ರಪಾತಕ್ಕೆ ಬಸ್‌ ಬಿದ್ದ ಬಸ್‌, ವೈರಲ್‌ ವೀಡಿಯೋ ನಿಜವೇ?

ಮಣಿಪುರದಲ್ಲಿ ಪ್ರಪಾತಕ್ಕೆ ಬಿದ್ದ ಬಸ್‌

Claim
ಮಣಿಪುರದಲ್ಲಿ ಪ್ರಪಾತಕ್ಕೆ ಬಿದ್ದ ಬಸ್‌

Fact
ಬಸ್‌ ಪ್ರಪಾತಕ್ಕೆ ಬಿದ್ದ ಈ ಘಟನೆ ನಡೆದಿದ್ದು ಇಂಡೋನೇಷ್ಯಾದಲ್ಲಿ, ಮಣಿಪುರದಲ್ಲಿ ಅಲ್ಲ.

ಮಣಿಪುರದಲ್ಲಿ ಪ್ರಪಾತಕ್ಕೆ ಬಿದ್ದ ಬಸ್‌ ಎಂದು ವೀಡಿಯೋ ಒಂದು ವೈರಲ್‌ ಆಗಿದೆ. ಫೇಸ್‌ಬುಕ್‌, ವಾಟ್ಸಾಪ್‌ಗಳಲ್ಲಿ ಈ ಮೆಸೇಜ್‌ ಹರಿದಾಡುತ್ತಿದೆ. “ಪ್ರಪಾತಕ್ಕೆ ಬಿದ್ದ ಬಸ್ ಮಣಿಪುರದಲ್ಲಿ ನಡೆದಿದೆ ಎಂದು ವರದಿ” ಎಂದು ಕ್ಲೇಮಿನಲ್ಲಿ ಹೇಳಲಾಗಿದೆ.

ಮಣಿಪುರದಲ್ಲಿ ಪ್ರಪಾತಕ್ಕೆ ಬಸ್‌ ಬಿದ್ದ ಬಸ್‌, ವೈರಲ್‌ ವೀಡಿಯೋ ನಿಜವೇ?
ಫೇಸ್‌ಬುಕ್‌ನಲ್ಲಿ ಕಂಡುಬಂದ ಕ್ಲೇಮ್‌

Fact Check/ Verification

ಈ ಕುರಿತು ಸತ್ಯಶೋಧನೆಗೆ ನ್ಯೂಸ್‌ಚೆಕರ್‌ ಮುಂದಾಗಿದ್ದು ಇದೊಂದು ಸುಳ್ಳು ಕ್ಲೇಮ್‌ ಎಂದು ಕಂಡುಬಂದಿದೆ.

ಸತ್ಯಶೋಧನೆಗಾಗಿ ನ್ಯೂಸ್‌ಚೆಕರ್‌ ವೈರಲ್‌ ವೀಡಿಯೋದ ರಿವರ್ಸ್ ಇಮೇಜ್‌ ಸರ್ಚ್‌ ಸರ್ಚ್‌ ನಡೆಸಿದೆ. ಈ ವೇಳೆ ಮೇ 9 2023ರಂದು ಹೆಡ್‌ ಟಾಪಿಕ್ಸ್‌ ವರದಿ ಲಭ್ಯವಾಗಿದೆ. “Bus Plunges Into Ravine After Driver Left It Unattended In Indonesia“ ಎಂಬ ವರದಿಯಲ್ಲಿ ಇಂಡೋನೇಷ್ಯಾದ ಸೆಂಟ್ರಲ್‌ ಜಾವಾದ ಗುಸಿ ತೆಗಾಲ್‌ನಲ್ಲಿ ಮೇ 7ರಂದು ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

Also Read: ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆಲುವಿಗೆ ಬಿಜೆಪಿ ಧ್ವಜದ ಮೇಲೆ ಗೋಹತ್ಯೆಗೈದು ಸಂಭ್ರಮ, ಸತ್ಯ ಏನು?

ಬಸ್‌ ನಿಲ್ಲಿಸಿ ಚಾಲಕ ಸೇರಿದಂತೆ ಕೆಲವು ಪ್ರಯಾಣಿಕರು ಕೆಳಗೆ ಇಳಿದಿದ್ದರು. ಈ ವೇಳೆ ಬಸ್‌ ಎಂಜಿನ್‌ ಚಾಲನೆಯಲ್ಲೇ ಇತ್ತು. ಈ ವೇಳೆ ಏಕಾಏಕಿ ಬಸ್‌ ಚಲಿಸಿ  ಕಮರಿಗೆ ಬಿದ್ದಿದೆ. ಇದು ಜನರ ಮೊಬೈಲ್‌ ಕೆಮರಾ ಕಣ್ಣಿಗೆ ಬಿದ್ದಿದೆ” ಎಂದು ಹೇಳಲಾಗಿದೆ.
ಈ ಸುದ್ದಿಯನ್ನು ಆಧಾರವಾಗಿರಿಸಿ ನಾವು ಕೀವರ್ಡ್ ಸರ್ಚ್‌ ನಡೆಸಿದ್ದು, ಹಲವು ವರದಿಗಳು ಲಭ್ಯವಾಗಿವೆ.
ಮೇ 9. 2023ರಂದು ಟಿಆರ್ ಪಿ ಪ್ರಕಟಿಸಿದ ವರದಿಯಲ್ಲಿ “ಗುಸಿ ತೆಗಾಲ್‌ನಲ್ಲಿ ಡ್ರೈವರ್‌ ಬಿಟ್ಟುಹೋಗಿದ್ದ ಬಸ್ಸೊಂದು ಏಕಾಏಕಿ ಚಲಿಸಿ ಕಮರಿಗೆ ಬಿದ್ದಿದೆ ಎಂದು ಹೇಳಿದೆ. ಮೇ 7ರಂದು ಈ ಘಟನೆ ನಡೆದಿದೆ. ಪ್ರಯಾಣದ ಮಧ್ಯೆ ಇಳಿಜಾರಿನಲ್ಲಿ ಬಸ್ಸು ನಿಲ್ಲಿಸಿ ಚಾಲಕ ಇಳಿದಿದ್ದು ಕೆಲವು ಪ್ರಯಾಣಿಕರೂ ಇಳಿದಿದ್ದರು. ಈ ವೇಳೆ ಬಸ್‌ ಏಕಾಏಕಿ ಚಲಿಸಿದ್ದು ಕಮರಿಗೆ ಬಿದ್ದಿದೆ. ಈ ವೇಳೆ ಬಸ್ಸಿನಲ್ಲಿ 37 ಮಂದಿ ಇದ್ದರು” ಎಂದು ಹೇಳಿದೆ. 
ಮಣಿಪುರದಲ್ಲಿ ಪ್ರಪಾತಕ್ಕೆ ಬಸ್‌ ಬಿದ್ದ ಬಸ್‌, ವೈರಲ್‌ ವೀಡಿಯೋ ನಿಜವೇ?
ಟಿಆರ್‌ಪಿ ಪ್ರಕಟಿಸಿದ ವರದಿ
ಇದೇ ರೀತಿಯ ವರದಿಯನ್ನು ಸಿಎನ್‌ಎನ್‌ ಇಂಡೋನೇಷ್ಯಾ ಕೂಡ ಮಾಡಿದ್ದು, ಯೂಟ್ಯೂಬ್‌ನಲ್ಲಿ ಮೇ 8ರಂದು ವರದಿ ಮಾಡಿದೆ. ಈ ವೀಡಿಯೋದ ವಿವರಣೆಯಲ್ಲಿ “ಬಸ್ ನಿಯಂತ್ರಣ ತಪ್ಪಿದ ಘಟನೆಯು ಕೇಂದ್ರ ಜಾವಾದ ಗುಸಿ ತೆಗಾಲ್‌ ಪ್ರವಾಸಿ ಪ್ರದೇಶದಲ್ಲಿ ನಡೆದು, ಅದು ಕಂದರಕ್ಕೆ ಜಾರಿದ್ದು, 2 ಸಾವುಗಳು ಮತ್ತು 36 ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯ ಕಾರಣವನ್ನು ಪೊಲೀಸರು ಇನ್ನೂ ಶೋಧಿಸುತ್ತಿದ್ದಾರೆ ಎಂದು ಹೇಳಿದೆ. ಈ ಕುರಿತ ವೀಡಿಯೋ ಇಲ್ಲಿದೆ.
 ಇಂಡೋನೇಷ್ಯಾದ ನ್ಯೂಸ್‌ಹಬ್‌ ಮೇ 8ರಂದು ಮಾಡಿದ ಟ್ವೀಟ್‌ನಲ್ಲಿ, “ಬಸ್‌ನಿಂದ ಚಾಲಕ ಇಳಿದು ಹೋಗುವ ವೇಳೆ ಹ್ಯಾಂಡ್‌ ಬ್ರೇಕ್‌ ಹಾಕುವುದನ್ನು ಮರೆತಿದ್ದು ಇದರಿಂದ ಬಸ್‌ ಚಲಿಸಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ” ಎಂದಿದೆ. ಈ ಟ್ವೀಟ್‌ನಲ್ಲಿರು ವೀಡಿಯೋಕ್ಕೆ ಮತ್ತು ವೈರಲ್‌ ಆಗಿರುವ ವೀಡಿಯೋಕ್ಕೆ ಸಾಮ್ಯತೆ ಇರುವುದು ಗೊತ್ತಾಗಿದೆ. ಈ ಟ್ವೀಟ್‌ ಇಲ್ಲಿದೆ.

Also Read: ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ “ಹೇಳಿದಂತೆ ಕೇಳಬೇಕು” ಎಂದು ಶಾಸಕರು ಪೊಲೀಸರಿಗೆ ತಾಕೀತು ಮಾಡಿದ್ದಾರೆಯೇ?

Conclusion

 ಈ ಸತ್ಯಶೋಧನೆ ಪ್ರಕಾರ, ಮಣಿಪುರದಲ್ಲಿ ಪ್ರಪಾತಕ್ಕೆ ಬಸ್‌ ಎನ್ನುವುದು ನಿಜವಲ್ಲ. ಇದು ಇಂಡೋನೇಷ್ಯಾದಲ್ಲಿ ನಡೆದ ಘಟನೆಯಾಗಿದೆ.

Result: False

Our Sources
Report By, TRP Dated: May 9, 2023

Report By, HeadTopics, Dated: May 9, 2023

YouTube Video By, CNN Indonesia, Dated: May 8, 2023

Tweet By Mynewshub, Dated May 8, 2023 


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.