Authors
Claim
ರಾಷ್ಟ್ರಧ್ವಜ ಅವಮಾನಿಸಿದ ರೈತರು
Fact
ರೈತರ ಪ್ರತಿಭಟನೆಯ ಸಮಯದಲ್ಲಿ ಭಾರತೀಯ ಧ್ವಜಕ್ಕೆ ಅಗೌರವ ತೋರಿದ್ದಾರೆ ಎನ್ನುವುದು ನಿಜವಲ್ಲ, ಇದು ಕೆನಡಾದಲ್ಲಿ ನಡೆದ ಘಟನೆಯಾಗಿದೆ
ರಾಷ್ಟ್ರಧ್ವಜವನ್ನು ರೈತರು ಅವಮಾನಿಸಿದ್ದಾರೆ ಎಂದು ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಫುಟ್ಬಾಲ್ ನಲ್ಲಿ ಸುತ್ತಿದ ತ್ರಿವರ್ಣಧ್ವಜವನ್ನು ಸಿಖ್ಖರ ರೀತಿ ಪೇಟ ಧರಿಸಿದವರು ಒದೆಯುವ ಈ ವೀಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್‌ಬುಕ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ ನೀಡಿದ ಹೇಳಿಕೆಯಲ್ಲಿ “ದೇಶದ ಧ್ವಜವನ್ನು ಅವಮಾನಿಸುವ ರೈತರು… ಇವರು ಖಂಡಿತಾ ರೈತರಲ್ಲ. ರಾಕ್ಷಸರು” ಎಂದಿದೆ.
Also Read: ಡಿಎಂಕೆ ಶಾಸಕ ಮನ್ಸೂರ್ ಮೊಹಮ್ಮದ್ ದಿಮಿರ್ ಅವರಿಂದ ಪೊಲೀಸ್ ಮೇಲೆ ಹಲ್ಲೆ ಎನ್ನುವುದು ನಿಜವೇ?
ಇದರ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ತಪ್ಪಾದ ಸಂದರ್ಭ, ಈ ವೀಡಿಯೋ ಇತ್ತೀಚಿನ ರೈತರ ಪ್ರತಿಭಟನೆಗೆ ಸಂಬಂಧಿಸಿದ್ದಲ್ಲ ಎಂದು ಕಂಡುಕೊಂಡಿದೆ.
Fact Check/ Verification
ರೈತರ ಪ್ರತಿಭಟನೆಯ ಸಂದರ್ಭದಲ್ಲೇ ಭಾರತದ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಲಾಗಿದೆಯೇ ಎಂಬುದನ್ನು ತನಿಖೆ ನಡೆಸಲು ಮುಂದಾಗಿದ್ದೇವೆ. ಅದಕ್ಕಾಗಿ ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಸರ್ಚ್ ಮಾಡಿದ್ದು, ಈ ವೀಡಿಯೊ 2023 ರಿಂದ ಸಾಮಾಜಿಕ ಮಾಧ್ಯಮದಲ್ಲಿ ಹರಡಿದೆ ಎಂದು ದೃಢಪಟ್ಟಿದೆ. ಈ ವೀಡಿಯೋದ ಬಗ್ಗೆ ನಾವು ಈಗಾಗಲೇ ನ್ಯೂಸ್ಚೆಕರ್ ಇಂಗ್ಲಿಷ್ನಲ್ಲಿ ಸತ್ಯಶೋಧನೆಯನ್ನು ಪ್ರಕಟಿಸಿದ್ದೇವೆ.
ಸತ್ಯಶೋಧನೆಯಲ್ಲಿ ಕಂಡುಬಂದ ಅಂಶಗಳ ಪ್ರಕಾರ, ಈ ವೈರಲ್ ವೀಡಿಯೋ ಕೆನಡಾದಲ್ಲಿ ಚಿತ್ರೀಕರಣಗೊಂಡಿದೆ. ಕೆನಡಾದಲ್ಲಿ ಖಲಿಸ್ಥಾನಿ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭಾಗಿಯಾಗಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಆರೋಪಿಸಿದ್ದಾರೆ. ಅದಾದ ನಂತರ, ಕೆಲವು ಖಲಿಸ್ಥಾನ್ ಪರ ಜನರು ಭಾರತೀಯ ಧ್ವಜವನ್ನು ಅವಮಾನಿಸುವ ವೀಡಿಯೋವನ್ನು ತೆಗೆದಿದ್ದಾರೆ. ಈ ಘಟನೆ ಬಗ್ಗೆ 2023 ರಲ್ಲಿ ಹಿಂದೂಸ್ತಾನ್ ಟೈಮ್ಸ್ ಮತ್ತು ಡೆಕ್ಕನ್ ಹೆರಾಲ್ಡ್ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ವರದಿ ಮಾಡಲಾಗಿದೆ.
ಈ ಕುರಿತ ಸುದ್ದಿಗಳನ್ನು ಇಲ್ಲಿ ಮತ್ತು ಇಲ್ಲಿ ಪರಿಶೀಲಿಸಬಹುದು. ಸುದ್ದಿಗಳ ಪ್ರಕಾರ, ಖಲಿಸ್ಥಾನಿ ಬೆಂಬಲಿಗರು ಕೆನಡಾದಲ್ಲಿ ಭಾರತದ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ವೈರಲ್ ವೀಡಿಯೋವನ್ನು ರೆಕಾರ್ಡ್ ಮಾಡಲಾಗಿದೆ ಎಂಬುದು ಖಚಿತವಾಗಿದೆ.
Conclusion
ರೈತರ ಪ್ರತಿಭಟನೆಯ ಸಮಯದಲ್ಲಿ ಭಾರತೀಯ ಧ್ವಜಕ್ಕೆ ಅಗೌರವ ತೋರಿದ್ದಾರೆ ಎನ್ನುವುದು ನಿಜವಲ್ಲ ಎಂಬುದು ಪುರಾವೆಗಳು ಸಾಬೀತು ಮಾಡಿವೆ. ಬದಲಾಗಿ ಇದು ಕೆನಡಾದಲ್ಲಿ ನಡೆದ ಘಟನೆಯಾಗಿದೆ.
Also Read: ರೈತರ ಪ್ರತಿಭಟನೆಗೆ ಮಾರ್ಪಡಿಸಲಾದ ಟ್ರಾಕ್ಟರ್ ತಯಾರಿಸಲಾಗಿದೆ ಎಂದ ವೀಡಿಯೋ ಟರ್ಕಿಯದ್ದು!
Result: Missing Context
Our Sources:
Report from Hindustan Times, Dated: July 09, 2023
Report from Deccan Herald, Dated: September 27, 2023
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ತಮಿಳಿನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.