Authors
Claim
ವಯನಾಡಿನಲ್ಲಿ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಲಾಗಿದೆ
Fact
ಇದು ಹಳೆಯ ವೀಡಿಯೋ ಆಗಿದ್ದು, ಪಾಕಿಸ್ಥಾನದ ಕರಾಚಿಯಿಂದ ಬಂದಿದೆ
ವಯನಾಡ್ ನಲ್ಲಿ ಭಾರತದ ತ್ರಿವರ್ಣ ಧ್ವಜದ ಬಗ್ಗೆ ಅವಮಾನ ಮಾಡಲಾಗಿದೆ, ಜನ ನಿಬಿಡ ರಸ್ತೆಯಲ್ಲಿ ವಾಹನಗಳನ್ನು ತ್ರಿವರ್ಣ ಧ್ವಜದ ಮೇಲೆಯೇ ಚಲಾಯಿಸಲಾಗಿದೆ ಎಂಬಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಗಳನ್ನು ಹಂಚಿಕೊಳ್ಳಲಾಗುತ್ತಿದೆ.
ವಾಟ್ಸ್ ಆಪ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ವಾಹನ ಸಂಖ್ಯೆ. KL-12 ವಯನಾಡ್ ಕೇರಳದಿಂದ ಈ ವೀಡಿಯೊವನ್ನು ವೀಕ್ಷಿಸಿ ಮತ್ತು ಈಗ ವಿಶ್ವಾದ್ಯಂತ ಫಾರ್ವರ್ಡ್ ಮಾಡಿ – 6 ತಿಂಗಳ ನಂತರ ಫಾರ್ವರ್ಡ್ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ…” ಎಂದಿದೆ.
Also Read: ರಾಹುಲ್ ಗಾಂಧಿ ತಮ್ಮ ಕಾರ್ಯಕ್ರಮಕ್ಕೆ ಚೀನಾದ ಸಂವಿಧಾನ ಕೊಂಡೊಯ್ಯುತ್ತಾರೆಯೇ?
ಇದೇ ರೀತಿಯ ವೀಡಿಯೋಗಳು ಫೇಸ್‌ಬುಕ್ ನಲ್ಲಿಯೂ ಕಂಡುಬಂದಿದ್ದು ಅವುಗಳು ಇಲ್ಲಿ, ಇಲ್ಲಿದೆ.
ಅದೇ ರೀತಿ ಎಕ್ಸ್ ನಲ್ಲೂ ಇಂತಹ ಪೋಸ್ಟ್ ಗಳು ಕಂಡುಬಂದಿದ್ದು, ಅವು ಇಲ್ಲಿ, ಇಲ್ಲಿದೆ
ಈ ವೀಡಿಯೋ ಬಗ್ಗೆ ನಾವು ಸತ್ಯಶೋಧನೆಗೆ ಮುಂದಾಗಿದ್ದು, ಇದು ವಯನಾಡಿನ ವೀಡಿಯೋ ಅಲ್ಲ, ಪಾಕಿಸ್ಥಾನದ್ದು ಎಂದು ಕಂಡುಕೊಂಡಿದ್ದೇವೆ.
Fact Check/Verification
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋವನ್ನು ಸೂಕ್ಷ್ಮವಾಗಿ ನೋಡಿದಾಗ, ವೀಡಿಯೋದಲ್ಲಿ ಪಾಕಿಸ್ಥಾನದ ಧ್ವಜಗಳನ್ನು ಬೀಸುತ್ತಿರುವುದನ್ನು ಕಂಡಿದ್ದೇವೆ. ಅದೇ ರೀತಿ ರಸ್ತೆಯಲ್ಲಿ ಚಲಿಸುತ್ತಿರುವ ರಿಕ್ಷಾಗಳು ಭಾರತದಲ್ಲಿ ಸಂಚರಿಸುವ ರಿಕ್ಷಾಗಳಂತೆ ಇಲ್ಲ ಎಂಬುದನ್ನು ನಾವು ಗಮನಿಸಿದ್ದೇವೆ. ಇದು ಘಟನೆಯ ಸ್ಥಳದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ.
ನಂತರ ನಾವು ಕೀಫ್ರೇಮ್ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ, ಇದು ಜೂನ್ 6, 2022 ರ ಯೂಟ್ಯೂಬ್ ಅಲ್ಲಿ ವೀಡಿಯೋದ ಸ್ವಲ್ಪ ಸ್ಪಷ್ಟವಾದ ಆವೃತ್ತಿ ಲಭ್ಯವಾಗಿದೆ. ಅದು ಪಾಕಿಸ್ತಾನದಿಂದ ಬಂದಿದೆ ಎಂದು ಆ ಮೂಲಕ ತಿಳಿದುಬಂದಿದೆ.
Also Read: ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದಿಂದ ರಸ್ತೆಯಲ್ಲೇ ಗೋಹತ್ಯೆ ಎನ್ನುವುದು ನಿಜವೇ?
ದೃಶ್ಯದ ಹಿನ್ನೆಲೆಯಲ್ಲಿರುವ ಅಂಗಡಿಯ ಬೋರ್ಡ್ ಗಳಲ್ಲಿ ಒಂದು “ಸನಮ್ ಬೊಟಿಕ್” ಎಂದು ಬರೆದಿರುವುದನ್ನು ನಾವು ಗಮನಿಸಿದ್ದೇವೆ, ಆದರೆ ಒಂದು ಕಾರು “ಬಿಎಫ್ ಕೆ 625” ಎಂದು ಬರೆದ ಪರವಾನಗಿ ಫಲಕವನ್ನು ಹೊಂದಿತ್ತು. ಕರಾಚಿಯಲ್ಲಿ ಅಂತಹ ವಾಹನ ನಂಬರ್ ಪ್ಲೇಟ್ ಗಳನ್ನು ನೀಡಲಾಗಿದೆ ಎಂದು ನಾವು ತಿಳಿದುಕೊಂಡಿದ್ದೇವೆ, ಅದರ ನಂತರ ನಾವು “ಸನಮ್ ಬೊಟಿಕ್ ಕರಾಚಿ” ಗಾಗಿ ಹುಡುಕಾಟ ನಡೆಸಿದ್ದೇವೆ.
ವೈರಲ್ ವೀಡಿಯೋದ ಸ್ಕ್ರೀನ್ ಶಾಟ್ಗಳನ್ನು (ಎಡ) ಗೂಗಲ್ ನಕ್ಷೆಗಳಲ್ಲಿ (ಬಲ) ಸನಮ್ ಬೂಟಿಕ್ ಮತ್ತು ಹತ್ತಿರದ ಕಟ್ಟಡದ ಚಿತ್ರಗಳೊಂದಿಗೆ ಹೋಲಿಕೆ ಮಾಡಿದರೆ, ವೀಡಿಯೋ ಕರಾಚಿಯ ತಾರಿಕ್ ರಸ್ತೆಯಿಂದ ಬಂದಿದೆ ಎಂಬುದನ್ನು ಇದು ಮತ್ತಷ್ಟು ದೃಢಪಡಿಸುತ್ತದೆ.
ಜುಲೈ 12, 2023 ರ ಪಿಐಬಿ ಫ್ಯಾಕ್ಟ್ ಚೆಕ್ ಟ್ವೀಟ್ ಅನ್ನು ನಾವು ಗಮನಿಸಿದ್ದು, ಆ ಪ್ರಕಾರ ವೀಡಿಯೋ ಹಳೆಯದು ಮತ್ತು ಕೇರಳದ್ದಲ್ಲ ಎಂದು ದೃಢಪಡಿಸಿದೆ.
Conclusion
ಈ ಸಾಕ್ಷ್ಯಾಧಾರಗಳ ಪ್ರಕಾರ, ಕರಾಚಿಯ ಹಳೆಯ ವೀಡಿಯೋವನ್ನು ಕೇರಳದ ವಯನಾಡಿನಲ್ಲಿ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿದ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
Also Read: ದಾವಣಗೆರೆಯಲ್ಲಿ ಬಾಲಕ ತಿನಿಸೊಂದನ್ನು ತಿಂದು ಮೃಪಟ್ಟಿದ್ದಾನೆಯೇ, ನಿಜಾಂಶವೇನು?
Result: False
Our Sources
Image analysis
Google Maps
Tweet By, PIB Fact Check, July 12, 2023
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.