Authors
Claim
ಕೈಲಾಸ ಪರ್ವತದ ಸನಿಹ ನರಕ ಗುಹೆ ಎಂದಿದ್ದು, ಯಮರಾಜನ ವಾಸಸ್ಥಾನವಾಗಿದೆ. ಅನಾದಿ ಕಾಲದಿಂದಲೂ ಪಾಪಿಗೆ ಇಲ್ಲಿ ಶಿಕ್ಷೆ ನೀಡಲಾಗುತ್ತಿದೆ ಹಿಂದೂ ಧರ್ಮದ ಪ್ರಕಾರ ಎಂಬ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಇನ್‌ಸ್ಟಾಗ್ರಾಂನಲ್ಲಿ ಕಂಡುಬಂದ ಈ ಹೇಳಿಕೆಯೊಂದಿಗೆ ವೀಡಿಯೋ ಶೇರ್ ಮಾಡಲಾಗಿದೆ.
ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು ಇದು ತಪ್ಪಾದ ಮಾಹಿತಿ ಎಂದು ಕಂಡುಬಂದಿದೆ.
Fact
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಇದರೊಂದಿಗೆ ವಿವಿಧೆಡೆ, ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗಿರುವುದನ್ನು ನೋಡಿದ್ದೇವೆ. ಅವುಗಳನ್ನು ಇಲ್ಲಿ, ಇಲ್ಲಿ ನೋಡಬಹುದು. ಇದರೊಂದಿಗೆ ಅನಿಮಾ ಜರ್ನಿ ಹೆಸರಿನಲ್ಲಿ ವಿವಿಧೆಡೆಗಳಲ್ಲಿ ಇದೇ ರೀತಿಯ ವೀಡಿಯೋವನ್ನು ಶೇರ್ ಮಾಡಿರುವುದನ್ನು ನೋಡಿದ್ದೇವೆ.
ಆ ಪ್ರಕಾರ ನಾವು ಗೂಗಲ್ ನಲ್ಲಿ ಸರ್ಚ್ ನಡೆಸಿದ್ದು, ಈ ವೇಳೆ ಆಗಸ್ಟ್ 9, 2024ರಂದು ಅನಿಮಾ ಜರ್ನಿಸ್ ಹೆಸರಿನ ಯೂಟ್ಯೂಬ್ ಚಾನೆಲ್ ನಲ್ಲಿ ವೀಡಿಯೋ ಲಭ್ಯವಾಗಿದೆ. “The Forbidden Depths of the Hollow Earth – Part 1” ಶೀರ್ಷಿಕೆಯಲ್ಲಿ ಈ ವೀಡಿಯೋವನ್ನು ಹಾಕಲಾಗಿದ್ದು, ಇದರ ವಿವರಣೆಯಲ್ಲಿ “ಐರ್ಲೆಂಡ್‌ನ ಪುರಾತನ ರಾಥ್‌ಕ್ರೋಘನ್ ಪ್ರದೇಶದ ಹೃದಯಭಾಗದಲ್ಲಿ, ಡಾ. ಆರ್ಥರ್ ಕೊನ್ನೆಲ್ಲಿ ನೇತೃತ್ವದ ಅನುಭವಿ ಪುರಾತತ್ತ್ವಜ್ಞರ ತಂಡವು ಓವೆನಾಗಾಟ್‌ನ ಪೌರಾಣಿಕ ಗುಹೆಯೊಳಗೆ ಒಂದು ಅದ್ಭುತವಾದ ದಂಡಯಾತ್ರೆಯನ್ನು ಪ್ರಾರಂಭಿಸಿದೆ. ಇದು ಪಾರಮಾರ್ಥಿಕ ಜಗತ್ತಿಗೆ ಗೇಟ್‌ವೇ ಎಂದು ನಂಬಲಾಗಿದೆ. ಅವರು ಗುಹೆಗಳಲ್ಲಿ ಆಳವಾಗಿ ಅಧ್ಯಯನ ಮಾಡುವಾಗ, ಎಂದೂ ದಾಖಲಾಗದ ಬೃಹತ್ ಕೋಣೆಗಳ ಸುರಂಗ ಜಾಲವನ್ನುಬಹಿರಂಗ ಪಡಿಸಿದ್ದಾರೆ. ಇದರಲ್ಲಿ ವಿಚಿತ್ರ ಜೀವಿಗಳ ಪ್ರತಿಮೆಗಳು ಬಾಗಿಲಲ್ಲಿದ್ದು, ಅದು ಪಾರಮಾರ್ಥಿಕ ಶಕ್ತಿಯೊಂದಿಗೆ ಇರುವಂತೆ ಇದೆ. ತಂಡ ಮುಂದೆ ಹೋಗುತ್ತಿದ್ದಂತೆ ವಿಚಿತ್ರ ವಿದ್ಯಮಾನಗಳು ಅವರನ್ನು ಕಾಡಿವೆ. ಹೆಚ್ಚಿನ ಶಾಖ, ವಿಚಿತ್ರ ಕಾಂತೀಯ ಆವರ್ತನಗಳು, ಭೂಮಿಯ ಆಳದಿಂದ ಹೊಮ್ಮಿದ ಭಯಾನಕ ಕೂಗು ಅವರನ್ನು ಕಾಡಿದೆ. ಆದರೆ ಅವರ ಮಣಿಯದ ಆತ್ಮವು ಸತ್ಯವನ್ನು ಬಹಿರಂಗಪಡಿಸಲು ಅವರನ್ನು ಪ್ರೇರೇಪಿಸಿದೆ. ಅವರು ಕಂಡುಕೊಂಡದ್ದು ಮಾನವೀಯತೆಯ ಇತಿಹಾಸವನ್ನ ಮರುರೂಪಿಸುವ ಒಂದು ಆದಿಸ್ವರೂಪದ ಶಕ್ತಿ, ಅದನ್ನು ದೀರ್ಘಕಾಲ ಸಮಾಧಿ ಮಾಡಲಾಗಿದ್ದು ಅದೀಗ ಭೂಮಿಯ ಮೇಲ್ಮೈನಿಂದಲೇ ಕೆಳಭಾಗದಲ್ಲಿದೆ ಎಂದಿದೆ.”
ಅನಿಮಾ ಜರ್ನೀಸ್ ಯೂಟ್ಯೂಬ್ ವೀಡಿಯೋದ ಕಮೆಂಟ್ ವಿಭಾಗವನ್ನು ನಾವು ಪರಿಶೀಲಿಸಿದ್ದು, ಇದರಲ್ಲಿ ಬಳಕೆದಾರರು ಇದೊಂದು ಎಐ ಮೂಲಕ ಮಾಡಲಾದ ವೀಡಿಯೋ ಎಂಬುದನ್ನು ಹೇಳಿಕೊಂಡಿದ್ದಾರೆ. ಅದನ್ನು ಇಲ್ಲಿ ನೋಡಬಹುದು.
ಓವೆನಾಗಾಟ್ ಗುಹೆಯ ಬಗ್ಗೆ ಹಲವು ಯೂಟ್ಯೂಬ್ ಬಳಕೆದಾರರು ವೀಡಿಯೋಗಳನ್ನು ಹಂಚಿಕೊಂಡಿದ್ದು, ಆ ವೀಡಿಯೋಗಳನ್ನು ಇಲ್ಲಿ, ಇಲ್ಲಿ ನೋಡಬಹುದು. ಇದರೊಂದಿಗೆ, ಓವೆನಾಗಾಟ್ ಗುಹೆ ಹಲೋವೀನ್ ಆಚರಣೆಯೊಂದಿಗೆ ಸಂಬಂಧ ಹೊಂದಿರುವ ಕುರಿತ ಲೇಖನಗಳನ್ನು ನೋಡಿದ್ದೇವೆ. ಅವುಗಳನ್ನು ಇಲ್ಲಿ ಇಲ್ಲಿ ಇಲ್ಲಿ, ನೋಡಬಹುದು.
ಈ ತನಿಖೆಯ ಪ್ರಕಾರ, ಹಿಂದೂ ಪುರಾಣಗಳಲ್ಲಿ ಹೇಳುವಂತೆ ನರಕ ಗುಹೆ ಕೈಲಾಸ ಪರ್ವತದ ಸನಿಹ ಇದೆ, ಇಲ್ಲಿ ಪಾಪಿಗಳಿಗೆ ಶಿಕ್ಷೆ ನೀಡಲಾಗುತ್ತಿದೆ ಎಂದಿರುವ ವೀಡಿಯೋ ತಪ್ಪಾಗಿದೆ. ಇದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ರಚಿಸಲಾದ ವೀಡಿಯೋ ಆಗಿದೆ.
Result: False
Our Sources
YouTube Video By Anima Journeys, Dated August 9, 2024
YouTube Video By Diary of a Ditch Witch Dated October 3, 2021
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.