Authors
ಕೈಲಾಸ ಪರ್ವತ ಸನಿಹ ನರಕ ಗುಹೆ, ಬಾಂಗ್ಲಾದಲ್ಲಿ ಹಿಂದೂಗಳ ಬಲವಂತದ ಮತಾಂತರ, ಸೆ.30ರಂದು ಎಲ್ಲ ಪ್ಲ್ಯಾನ್ ಸ್ಥಗಿತಗೊಳಿಸುವುದಾಗಿ ಎಲ್‌ಐಸಿ ಹೇಳಿಕೆ, ಕುತುಬ್ ಮಿನಾರ್ ನಲ್ಲಿರುವ ಕಬ್ಬಿಣದ ಸ್ತಂಭದಲ್ಲಿ ಹಿಂದೂಗಳ ಹೆಸರು ಎಂಬ ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿವೆ. ಈ ಕುರಿತು ಸತ್ಯಶೋಧನೆಯನ್ನು ನ್ಯೂಸ್‌ಚೆಕರ್ ಮಾಡಿದ್ದು, ಇವುಗಳು ತಪ್ಪು ಹೇಳಿಕೆಗಳು ಎಂದು ನಿರೂಪಿಸಿದೆ.
ಕೈಲಾಸ ಪರ್ವತದ ಸನಿಹ ನರಕ ಗುಹೆ, ಪಾಪಿಗೆ ಇಲ್ಲಿ ಶಿಕ್ಷೆ ನೀಡಲಾಗುತ್ತಿದೆ ಎನ್ನುವುದು ನಿಜವೇ?
ಕೈಲಾಸ ಪರ್ವತದ ಸನಿಹ ನರಕ ಗುಹೆ ಎಂದಿದ್ದು, ಯಮರಾಜನ ವಾಸಸ್ಥಾನವಾಗಿದೆ. ಅನಾದಿ ಕಾಲದಿಂದಲೂ ಪಾಪಿಗೆ ಇಲ್ಲಿ ಶಿಕ್ಷೆ ನೀಡಲಾಗುತ್ತಿದೆ ಎಂಬ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆಯನ್ನು ನಡೆಸಿದ್ದು, ಇದು ನಿಜವಾದ್ದಲ್ಲ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಮಾಡಿದ ವೀಡಿಯೋ ಇದಾಗಿದೆ ಎಂದು ಗೊತ್ತಾಗಿದೆ. ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಸೆ.30ರಂದು ಎಲ್ಲ ಪ್ಲ್ಯಾನ್ ಹಿಂತೆಗೆದುಕೊಳ್ಳುವುದಾಗಿ ಹೇಳಿದ ಎಲ್‌ಐಸಿ ಸುತ್ತೋಲೆ ನಕಲಿ
ಸೆಪ್ಟೆಂಬರ್ 30, 2024 ರಂದು ಪರಿಷ್ಕರಣೆಗಾಗಿ ಎಲ್ಲಾ ವಿಮಾ ಯೋಜನೆಗಳು (ಪ್ಲ್ಯಾನ್) /ಉತ್ಪನ್ನಗಳನ್ನು ಹಿಂತೆಗೆದುಕೊಳ್ಳುವುದಾಗಿ LIC ಸುತ್ತೋಲೆ ಪ್ರಕಟಿಸಿದೆ. ಪರಿಷ್ಕೃತ ಯೋಜನೆಗಳು/ನೀತಿಗಳನ್ನು ಅಕ್ಟೋಬರ್ 1, 2024 ರ ನಂತರ ಕೆಲವು ಷರತ್ತುಗಳೊಂದಿಗೆ ಪರಿಚಯಿಸಲಾಗುವುದು ಎಂದು ಸುತ್ತೋಲೆಯಲ್ಲಿದೆ ಎಂಬ ಹೇಳಿಕೆ ಹರಿದಾಡಿದೆ. ಈ ಬಗ್ಗೆ ತನಿಖೆಯನ್ನು ನಡೆಸಿದಾಗ ಇದು ನಕಲಿ ಸುತ್ತೋಲೆ ಎಂದು ತಿಳಿದುಬಂದಿದೆ. ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಕುತುಬ್ ಮಿನಾರ್ ನಲ್ಲಿರುವ ಕಬ್ಬಿಣ ಸ್ತಂಭದಲ್ಲಿ ಹಿಂದೂ ಹೆಸರುಗಳಿವೆಯೇ, ವೈರಲ್ ಫೊಟೋ ಹಿಂದಿನ ಸತ್ಯವೇನು?
ಕುತುಬ್ ಮಿನಾರ್ ಪ್ರದೇಶದಲ್ಲಿ ಇರುವ ಕಬ್ಬಿಣದ ಸ್ತಂಭದಲ್ಲಿ ಹಿಂದೂ ಹೆಸರುಗಳಿವೆ ಇದರಿಂದ ಸತ್ಯ ತಿಳಿಯುತ್ತದೆ ಎಂಬಂತೆ ಕಂಬವೊಂದರ ಫೋಟೋವನ್ನುಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾದ ಫೊಟೋ ರಾಜಸ್ಥಾನದ ಭರತ್ ಪುರದ ಜವಾಹರ್ ಭುರ್ಜ್ ಎಂಬ ಲೋಹಸ್ತಂಭದ್ದಾಗಿದೆ. ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಬಾಂಗ್ಲಾದೇಶದಲ್ಲಿ ಹಿಂದೂಗಳ ಬಲವಂತದ ಮತಾಂತರ? ಈ ವೀಡಿಯೋ ಹಿಂದಿನ ಸತ್ಯ ಇಲ್ಲಿದೆ
ಬಾಂಗ್ಲಾದೇಶದಲ್ಲಿ ಹಿಂದೂಗಳ ಬಲವಂತದ ಮತಾಂತರ? ಈ ವೀಡಿಯೋ ಹಿಂದಿನ ಸತ್ಯ ಇಲ್ಲಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಬಲವಂತವಾಗಿ ಮತಾಂತರಿಸಲಾಗುತ್ತಿದೆ ಎಂದು ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ವೈರಲ್ ವೀಡಿಯೋ ಹಿಂದೂಗಳ ಬಲವಂತದ ಮತಾಂತರ ಕುರಿತಾಗಿರುವುದಲ್ಲ, ಬದಲಾಗಿ ಝುಹರ್ ಪ್ರಾರ್ಥನೆಗಳನ್ನು ಸಲ್ಲಿಸುತ್ತಿರುವುದನ್ನು ತೋರಿಸುತ್ತದೆ ಎಂಬುದು ಸತ್ಯಶೋಧನೆಯಲ್ಲಿ ದೃಢಪಟ್ಟಿದೆ. ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.